»   » 'ಟಗರು' ಚಿತ್ರದಲ್ಲಿ ನನ್ನ ಪಾತ್ರ ತುಂಬ ಚಿಕ್ಕದು ಅನಿಸಿತು ಎಂದ ವಸಿಷ್ಟ!

'ಟಗರು' ಚಿತ್ರದಲ್ಲಿ ನನ್ನ ಪಾತ್ರ ತುಂಬ ಚಿಕ್ಕದು ಅನಿಸಿತು ಎಂದ ವಸಿಷ್ಟ!

Posted By:
Subscribe to Filmibeat Kannada
'ಟಗರು' ಚಿತ್ರದಲ್ಲಿ ನನ್ನ ಪಾತ್ರ ತುಂಬ ಚಿಕ್ಕದು ಅನಿಸಿತು ಎಂದ ವಸಿಷ್ಟ! | Filmibeat Kannada

'ಟಗರು' ಸಿನಿಮಾದ ದೊಡ್ಡ ಹೈಲೈಟ್ ಅಂದರೆ ಆ ಸಿನಿಮಾದ ಪಾತ್ರಗಳು. ಟಗರು ಶಿವ, ಡಾಲಿ, ಚಿಟ್ಟೆ, ಕಾನ್ಸ್ ಟೇಬಲ್ ಸರೋಜ, ಅಂಕಲ್, ಕಾಕ್ರೋಚ್, ಪುನರ್ವಸು, ಪಂಚಮಿ ಹೀಗೆ ಪ್ರತಿ ಪಾತ್ರಗಳಿಗೆ ಒಂದು ವಿಭಿನ್ನತೆ ಇದೆ. ಅದೇ ಕಾರಣದಿಂದ ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಆ ಪಾತ್ರಗಳು ಕಾಡುತ್ತಿರುತ್ತದೆ.

'ಟಗರು' ಚಿತ್ರದಲ್ಲಿ ಚಿಟ್ಟೆ ಅಲಿಯಾಸ್ ಚಿತ್ತರಂಜನ್ ಪಾತ್ರ ಮಾಡಿದ್ದು ನಟ ವಸಿಷ್ಟ. ವಸಿಷ್ಟ ಎಂದಿನಂತೆ ಈ ಪಾತ್ರದಲ್ಲಿ ಆವರಿಸಿಕೊಂಡಿದ್ದರು. ಡಾಲಿಯ ಜೊತೆಗೆ ಚಿಟ್ಟೆ ಪಾತ್ರ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಆದರೆ ಈ ಪಾತ್ರ ವಸಿಷ್ಟ ಅವರಿಗೆ ಚಿಕ್ಕ ಪಾತ್ರ ಅಂತ ಅನಿಸಿತಂತೆ. ಈ ವಿಷಯವನ್ನು ಸ್ವತಃ ಅವರೇ ಶಿವಣ್ಣನ ಜೊತೆಗೆ ಹಂಚಿಕೊಂಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ 1 ಯಾರ ವಿತ್ ಶಿವಣ್ಣ' ಕಾರ್ಯಕ್ರಮದ ಕಳೆದ ವಾರದ ಸಂಚಿಕೆಗೆ ನಟ ವಸಿಷ್ಟ, ಧನಂಜಯ್ ಮತ್ತು ನಟಿ ಮಾನ್ವಿತಾ ಆಗಮಿಸಿದ್ದರು. ಈ ವೇಳೆ ಶಿವಣ್ಣ ಹೇಳಿದ ಪ್ರಶ್ನೆಗೆ ವಸಿಷ್ಟ ಉತ್ತರಿಸುತ್ತಾ ಹೋದರು. ಅದರಲ್ಲಿ ಚಿಟ್ಟೆ ಪಾತ್ರದ ಬಗ್ಗೆಯ ಪ್ರಶ್ನೆ ಕೂಡ ಇತ್ತು.

'ಡಾಲಿ' ಧನಂಜಯ್ ಬಗ್ಗೆ ಕೇಳಿದ್ರೆ ಗುರುಪ್ರಸಾದ್ ಹೀಗೆ ಹೇಳಿದ್ದಾರೆ !

ಅಂದಹಾಗೆ, 'ನಂ 1 ಯಾರ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶಿವಣ್ಣ ಕೇಳಿದ ಪ್ರಶ್ನೆಗಳಿಗೆ ವಸಿಷ್ಟ ಕೊಟ್ಟ ಉತ್ತರ ಈ ರೀತಿ ಇವೆ. ಮುಂದೆ ಓದಿ..

'ಟಗರು' ಸಿನಿಮಾದಲ್ಲಿ ನಿಮ್ಮ ಚಿಟ್ಟೆ ಪಾತ್ರ ತುಂಬ ಚಿಕ್ಕದು ಅನಿಸಿದೆಯಾ?

ವಸಿಷ್ಟ ಉತ್ತರ : ''ಹೌದು. 'ಟಗರು' ಸಿನಿಮಾದಲ್ಲಿ ನಾನು ನಟನೆ ಮಾಡಿದ್ದ ಚಿಟ್ಟೆ ಪಾತ್ರ ಚಿಕ್ಕದು ಅನಿಸಿತು.''

ನೀವು ವಿಲನ್ ಆಗಿರುವ ಸಿನಿಮಾದಲ್ಲಿ ಯಾವ ನಟಿಯ ಐಟಂ ಸಾಂಗ್ ಇರಬೇಕು?

ವಸಿಷ್ಟ ಉತ್ತರ : ''ಕನ್ನಡ ನಟಿ ಆದರೆ ರಚಿತಾ ರಾಮ್, ಬಾಲಿವುಡ್ ನಟಿ ಆದರೆ ನನ್ನ ಫೇವರೇಟ್ ನಟಿ ಬಿಪಾಶ ಬಸು ಅವರ ಐಟಂ ಸಾಂಗ್ ಇರಬೇಕು. ರಚಿತಾ ರಾಮ್ ಐಟಂ ಸಾಂಗ್ ಮಾಡಲು ಆಕಸ್ಮಾತ್ ಒಪ್ಪದಿದ್ದರೆ ನಾನು ಒಪ್ಪಿಸುತ್ತೇನೆ.''

ನೀವು ಈ ಹಂತಕ್ಕೆ ಬರುವುದಕ್ಕೆ ಮೂರು ಕಾರಣ ಏನು ?

ವಸಿಷ್ಟ ಉತ್ತರ : ''ಮೊದಲನೆದು ನನ್ನ ವಾಯ್ಸ್. ಎರಡನೇದಾಗಿ ನನ್ನ ಆತ್ಮವಿಶ್ವಾಸ. ನನ್ನ ಬಗ್ಗೆ ನನಗೆ ಹೆಚ್ಚು ನಂಬಿಕೆ ಇದೆ. ಮೂರನೇದು ನನ್ನ ಸ್ನೇಹಿತರ ಸಹಾಯ, ನಾನು ಕೆಲಸ ಬಿಟ್ಟು ಸಿನಿಮಾ ಪ್ರಯಾಣ ಶುರು ಮಾಡಿದಾಗ ನನ್ನ ಸ್ನೇಹಿತರು ತುಂಬ ಸಹಾಯ ಮಾಡಿದರು. ಅವರ ಸಹಾಯ ಇಲ್ಲ ಅಂದಿದ್ದರೆ ಇವತ್ತು ನಾನು ಇಲ್ಲಿ ಇರುತ್ತಿರಲಿಲ್ಲ''

ಇನ್ನೂ ಐದು ವರ್ಷ ಆದ ಮೇಲೆ ನಿಮ್ಮ ಕೆರಿಯರ್ ಗ್ರಾಫ್ ಹೇಗಿರುತ್ತದೆ?

ವಸಿಷ್ಟ ಉತ್ತರ : ''ಐದು ವರ್ಷ ಆದ ಮೇಲೆ ನಾನು ಒಬ್ಬ ನಟನಾಗಿ ಆಲ್ ಓವರ್ ಇಂಡಿಯಾ ಗುರುತಿಸಿಕೊಂಡಿರುತ್ತೇನೆ.''

ನಿಮ್ಮ ಹೆಂಡತಿಯಾಗಿ ಬರುವವರಿಗೆ ಇರಬೇಕಾದ ಮೂರು ಅರ್ಹತೆಗು ಏನು ?

ವಸಿಷ್ಟ ಉತ್ತರ : ''ಆಕೆಯ ಕಣ್ಣು, ಮೂಗು, ಬಾಯಿ ಜೊತೆಗೆ ಮುಖ್ಯವಾಗಿ ನಗು ತುಂಬ ಚೆನ್ನಾಗಿ ಇರಬೇಕು. ಮನೆಯಲ್ಲಿ ಒಳ್ಳೆಯ ವೆಜ್ ಅಡುಗೆ ಮಾಡಿ ಕೊಡಬೇಕು. ನನಗೆ ಚಿಕ್ಕವಯಸ್ಸಿನಿಂದ ಹಾಡು ಕೇಳುವ ಆಸೆ ಇದೆ. ಅದಕ್ಕೆ ಅವಳಿಗೆ ಸಹ ಹಾಡು ಕೇಳುವುದಕ್ಕೆ ಬರಬೇಕು.

'ಟಗರು' ಸಿನಿಮಾದ ಡಾನ್ 'ಅಂಕಲ್' ಯಾರು ಗೊತ್ತಾ?

English summary
Vasishta Simha spoke about Tagaru movie Chitte role in Star Suvarna's new show 'No1 yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada