»   »  ರಚಿತಾ ರಾಮ್ 'ಕಾಮಿಡಿ ಟಾಕೀಸ್' ಡಬ್ಬಾ, ಡುಬಾಕ್ ಪ್ರೋಗ್ರಾಂ ಅಂತೆ.!

ರಚಿತಾ ರಾಮ್ 'ಕಾಮಿಡಿ ಟಾಕೀಸ್' ಡಬ್ಬಾ, ಡುಬಾಕ್ ಪ್ರೋಗ್ರಾಂ ಅಂತೆ.!

Posted By:
Subscribe to Filmibeat Kannada
ರಚಿತಾ ರಾಮ್ ಸೃಜನ್ ಲೋಕೇಶ್ ಕಾಮಿಡಿ ಟಾಕೀಸ್ ಡಬ್ಬಾ ಪ್ರೋಗ್ರಾಮ್ ಅಂದ್ರು ವೀಕ್ಷಕರು | Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ಹೊಸ ಕಾರ್ಯಕ್ರಮ ಶುರುವಾಗಿದೆ. 'ಮಜಾ ಟಾಕೀಸ್' ಬಳಿಕ ಜನರನ್ನು ನಗಿಸುವುದಕ್ಕೆ 'ಕಾಮಿಡಿ ಟಾಕೀಸ್' ಬಂದಿದೆ.

ರಚಿತಾ ರಾಮ್ ಮತ್ತು ಸೃಜನ್ ಲೋಕೇಶ್ ಕಾರ್ಯಕ್ರಮದಲ್ಲಿದ್ದು, 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಮೊದಲ ಸಂಚಿಕೆ ಕಳೆದ ವಾರ ಪ್ರಸಾರ ಆಗಿದೆ. ಆದರೆ ಅದೇನೋ ಗೊತ್ತಿಲ್ಲ, ಈ ಕಾರ್ಯಕ್ರಮಕ್ಕೆ ಈಗ ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ಸ್ ಗಳೇ ಹೆಚ್ಚಾಗಿವೆ.

ಕಾರ್ಯಕ್ರಮ ನೋಡುವವರು ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಅವರ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಮುಂದೆ ಓದಿ...

'ಮಜಾ ಭಾರತ 2'

''ಕಾಮಿಡಿ ಟಾಕೀಸ್' ಕಾರ್ಯಕ್ರಮ 'ಮಜಾ ಭಾರತ' ಕಾರ್ಯಕ್ರಮದ ರೀತಿಯೇ ಇದೆ. ಅದು ಅದರ ರೀಮೇಕ್'' ಎನ್ನುವುದು ಸಾಕಷ್ಟು ವೀಕ್ಷಕರ ಅಭಿಪ್ರಾಯ.

ನಗು ಬರುತ್ತಿಲ್ಲ

''ನಮಗೆ ನಗುವೇ ಬರುತ್ತಿಲ್ಲ.. ಇದು ಯಾವ ರೀತಿಯಾದ ಕಾಮಿಡಿ ಶೋ.. ಅವರಿಗೆ ಮೊದಲು ಒಳ್ಳೆಯ ಸ್ಕ್ರಿಪ್ಟ್ ಕೊಡಿ'' ಅಂತ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.

'ಮಜಾ ಟಾಕೀಸ್' ಚೆನ್ನಾಗಿತ್ತು

''ಮಜಾ ಟಾಕೀಸ್ ಚೆನ್ನಾಗಿತ್ತು ಆದರೆ 'ಕಾಮಿಡಿ ಟಾಕೀಸ್' ಚೆನ್ನಾಗಿಲ್ಲ. 'ಮಜಾ ಟಾಕೀಸ್ 2' ಶುರು ಮಾಡಿ'' ಅಂತ ಹಲವರು ಒತ್ತಾಯಿಸಿದ್ದಾರೆ.

ಹೊಸತನ ಇಲ್ಲ

''ಕಾರ್ಯಕ್ರಮ ನಿರೀಕ್ಷೆಯ ಮಟ್ಟಿಗೆ ಇಲ್ಲ.. ಹೊಸ ರೀತಿ ಇರುತ್ತದೆ ಎಂದುಕೊಂಡಿದೆವು. ಆದರೆ 'ಮಜಾ ಭಾರತ' ತರ ಇದೆ'' ಅಂತ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೃಜನ್, ಕುರಿ ಪ್ರತಾಪ್ ಓಕೆ

''ಸೃಜನ್ ಮತ್ತು ಕುರಿ ಪ್ರತಾಪ್ ಓಕೆ... ಅವರನ್ನ ಬಿಟ್ಟು ಬೇರೆ ಏನು ಚೆನ್ನಾಗಿಲ್ಲ'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.

ತಪ್ಪು ನಿರ್ಧಾರ

''ಸೃಜನ್ ತಪ್ಪು ನಿರ್ಧಾರ ಮಾಡಿದ್ದಾರೆ. ಅವರು 'ಮಜಾ ಟಾಕೀಸ್' ತಂಡವನ್ನು ಇಟ್ಟುಕೊಂಡು ಹೊಸ ಕಾರ್ಯಕ್ರಮ ಮಾಡಬೇಕಿತ್ತು.'' ಅಂತ ಹಲವರು ಹೇಳಿದ್ದಾರೆ.

'ಕಲರ್ಸ್ ಕನ್ನಡ'ದಲ್ಲಿ ವಾರಾಂತ್ಯಕ್ಕೆ ಹಾಸ್ಯದ ರಸದೌತಣ ನೀಡುವ 'ಕಾಮಿಡಿ ಟಾಕೀಸ್'

ಡಬ್ಬ ಶೋ

ಅನೇಕರು ''ಇದು ಡಬ್ಬಾ ಶೋ.. ವಸ್ಟ್ ಶೋ..'' ಅಂತ ಕಾಮೆಂಟ್ ಮಾಡಿದ್ದಾರೆ.

''ಕಾಲು ಎಳೆಯುವುದು ಬೇಡ'' ಸೃಜನ್ ಬಗ್ಗೆ ರಚಿತಾ ಹೀಗೆ ಹೇಳಿದ್ದು ಯಾಕೆ?

ಕೆಲವರಿಗೆ ಇಷ್ಟ ಆಗಿದೆ

ಇದರೊಂದಿಗೆ ಕೆಲವು ಜನರು ''ಕಾರ್ಯಕ್ರಮ ಚೆನ್ನಾಗಿದೆ.. ಸೃಜನ್ ಮತ್ತು ರಚಿತಾ ಜೋಡಿ ಸೂಪರ್'' ಅಂತ ಕೂಡ ಹೇಳಿದ್ದಾರೆ.

English summary
Viewers have taken their Facebook account to express there opinion about Colors Kannada channel's 'Comedy Talkies' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X