»   » ಪ್ರಥಮ್ ಕಾಲೆಳೆದ ಸೃಜನ್ ವಿರುದ್ಧ ಸಿಟ್ಟಿಗೆದ್ದ ಕನ್ನಡ ವೀಕ್ಷಕರು.!

ಪ್ರಥಮ್ ಕಾಲೆಳೆದ ಸೃಜನ್ ವಿರುದ್ಧ ಸಿಟ್ಟಿಗೆದ್ದ ಕನ್ನಡ ವೀಕ್ಷಕರು.!

Posted By:
Subscribe to Filmibeat Kannada
ಇಷ್ಟು ದಿನ 'ಮಜಾ ಟಾಕೀಸ್' ನೋಡಿ.. ಮಜಾ ಮಾಡಿ.. 'ಮಜಾ ಸ್ಟಾರ್' ಸೃಜನ್ ಲೋಕೇಶ್ ಗೆ ಭಲೇ ಭಲೇ ಎನ್ನುತ್ತಿದ್ದ ಕನ್ನಡ ಜನತೆ ಇದೀಗ ಅದೇ ಸೃಜನ್ ವಿರುದ್ಧ ತಿರುಗಿಬಿದ್ದಿದ್ದಾರೆ. ಕಾರಣ 'ಲಾರ್ಡ್ ಪ್ರಥಮ್ ಸರ್'.!

ಹೌದು, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಮುಗಿದ ಮೇಲೆ ವಿನ್ನರ್ ಪ್ರಥಮ್ ಸೇರಿದಂತೆ ಎಲ್ಲ ಸ್ಪರ್ಧಿಗಳು 'ಮಜಾ ಟಾಕೀಸ್'ನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಅದರಲ್ಲಿ ಪ್ರಥಮ್ ಗೆ ಅವಮಾನ ಮಾಡಲಾಗಿದೆ ಅಂತ ವೀಕ್ಷಕರು ಫುಲ್ ಗರಂ ಆಗಿದ್ದಾರೆ.

'ಲಾರ್ಡ್ ಪ್ರಥಮ್ ಸರ್'ಗೆ 'ಲಾರ್ಡ್ ಲಬಕ್ ದಾಸ್' ಅಂತ ಹೀಯಾಳಿಸಿದ್ದು, ''ನನಗೆ ಒಳ್ಳೆ ಡಾಕ್ಟರ್ ಗೊತ್ತಿದ್ದಾರೆ'' ಎಂದು ಪ್ರಥಮ್ ಗೆ ಸೃಜನ್ ಹೇಳಿದ್ದನ್ನ ನೋಡಿದ್ಮೇಲೆ ವೀಕ್ಷಕರ ಕಣ್ಣು ಕೆಂಪಗೆ ಆಗಿದೆ.

ಫೇಸ್ ಬುಕ್ ನಲ್ಲಿ ಉರಿದು ಬಿದ್ದ ವೀಕ್ಷಕರು.!

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಪ್ರಥಮ್ ರವರನ್ನ ಹೀಯಾಳಿಸಿರುವುದಕ್ಕೆ ವೀಕ್ಷಕರು ಫೇಸ್ ಬುಕ್ ನಲ್ಲಿ ಸಿಟ್ಟಿಗೆದ್ದಿದ್ದಾರೆ. ಕಲರ್ಸ್ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿಯೇ 'ಮಜಾ ಟಾಕೀಸ್' ಮತ್ತು ಸೃಜನ್ ಲೋಕೇಶ್ ವಿರುದ್ಧ ವೀಕ್ಷಕರು ಉರಿದು ಬೀಳ್ತಿದ್ದಾರೆ.['ಮಜಾ ಟಾಕೀಸ್'ನಲ್ಲಿ ಲಾರ್ಡ್ ಪ್ರಥಮ್ ರವರ 13 ಲವ್ ಸ್ಟೋರಿ ಬಹಿರಂಗ.!]

ಪ್ರಥಮ್ ಗೆ ಕ್ಷಮೆ ಕೇಳಬೇಕು.!

ಪ್ರಥಮ್ ರವರಿಗೆ ಕ್ಷಮೆ ಕೇಳುವವರೆಗೂ 'ಮಜಾ ಟಾಕೀಸ್' ಕಾರ್ಯಕ್ರಮ ನೋಡಲ್ಲ ಅಂತ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.['ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳ ಮಸ್ತ್ ಮಜಾ]

ಪ್ರಥಮ್ ಗೆದ್ದ ಹಣದ ಬಗ್ಗೆ ಮಾತನಾಡಲಿಲ್ಲ ಯಾಕೆ.?

ಪ್ರಥಮ್ ಗೆದ್ದ ಹಣದ ಬಗ್ಗೆ ಸೃಜನ್ ಲೋಕೇಶ್ ಪ್ರಶ್ನೆ ಮಾಡದೇ ಇರುವುದಕ್ಕೂ ವೀಕ್ಷಕರು ಕೋಪಗೊಂಡಿದ್ದಾರೆ.

ಹೀಯಾಳಿಸುವುದು ಕಾಮಿಡಿ ಅಲ್ಲ.!

ಒಬ್ಬರನ್ನ ಹೀಯಾಳಿಸುವುದು ಕಾಮಿಡಿ ಅಲ್ಲ. 'ಮಜಾ ಟಾಕೀಸ್' ತಂಡ ಪ್ರಥಮ್ ಗೆ ಕ್ಷಮೆ ಕೇಳಬೇಕು ಎನ್ನುವುದು ವೀಕ್ಷಕರ ಅಭಿಪ್ರಾಯ.

ಹಣ್ಮಕ್ಕಳಿಗೂ ಗೌರವ ಕೊಡಲ್ಲ.!

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಅಪರ್ಣ ಮತ್ತು 'ಬಿಗ್ ಬಾಸ್' ಸಂಜನಾ ರವರನ್ನು ನಡೆಸಿಕೊಂಡ ರೀತಿ ಬಗ್ಗೆ ಕೂಡ ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಮತ್ತೊಂದು ಯಾಕೆ.?

ಕೀರ್ತಿಗೆ ಮರ್ಯಾದೆ ಕೊಟ್ಟ ಸೃಜನ್ ಗೆ ಪ್ರಥಮ್ ಗೆ ಮರ್ಯಾದೆ ಕೊಡೋದು ಬರ್ಲಿಲ್ವಾ ಎಂಬುದು ವೀಕ್ಷಕರ ಪ್ರಶ್ನೆ.

ಎಲ್ಲ ಓಕೆ ಮದುವೆ ಯಾಕೆ.?

''ಫನ್ ಗೋಸ್ಕರ ಮಾಂಗಲ್ಯ ಬಳಸಿಕೊಳ್ಳಬೇಡಿ. ಫನ್ ಗೋಸ್ಕರ ಸಂಸ್ಕೃತಿ, ಸಂಪ್ರದಾಯವನ್ನ ಹಾಳು ಮಾಡಬೇಡಿ'' ಅಂತ ಕೆಲವರು ಕೇಳಿಕೊಂಡಿದ್ದಾರೆ.

ಪ್ರಥಮ್ ಟಾರ್ಗೆಟ್

'ಮಜಾ ಟಾಕೀಸ್' ಕಾರ್ಯಕ್ರಮದಲ್ಲೂ ಪ್ರಥಮ್ ರವರನ್ನೇ ಟಾರ್ಗೆಟ್ ಮಾಡಿದಂತಿತ್ತು ಅಂತಾವ್ರೆ ವೀಕ್ಷಕರು.

ಅಪಹಾಸ್ಯ ಬೇಡ

''ಹಾಸ್ಯ ಇರಲಿ... ಅಪಹಾಸ್ಯ ಬೇಡ. ಡಾಕ್ಟರ್ ಕರೆಸಿ ಯಾರನ್ನ ತೋರಿಸಬೇಕು ಅಂತ ಕನ್ನಡಿಗರು ತೀರ್ಮಾನಿಸುತ್ತಾರೆ'' - ಇದು ವೀಕ್ಷಕರೊಬ್ಬರ ಕಾಮೆಂಟ್.

ಎರಡು ವರ್ಷದಲ್ಲಿ ಗಳಿಸಿದ್ದು ಎರಡು ಗಂಟೆಯಲ್ಲಿ ಕಳ್ಕೊಂಡ್ರಾ.?!

ಎರಡು ವರ್ಷದಲ್ಲಿ ಗಳಸಿದ್ದನ್ನ ಸೃಜನ್ ಎರಡೇ ಗಂಟೆಗಳಲ್ಲಿ ಕಳ್ಕೊಂಡ್ರಂತೆ. ಪ್ರಥಮ್
ರವರ ಇಮೇಜ್ ನ ಕೀರ್ತಿ ಮತ್ತು ಸೃಜನ್ ಡ್ಯಾಮೇಜ್ ಮಾಡಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯ.

ಕಲರ್ಸ್ ಕನ್ನಡಗೆ ಸಲಹೆ...

ಪ್ರಥಮ್ ರವರ ಪ್ರತಿಭೆಯನ್ನು ಹೊರಹಾಕಲು ಕಲರ್ಸ್ ಕನ್ನಡ ವಾಹಿನಿ ಒಂದು ಒಳ್ಳೆ ಪ್ರೋಗ್ರಾಂ ಮಾಡಬೇಕು ಅಂತ ವೀಕ್ಷಕರು ಸಲಹೆ ಕೂಡ ಕೊಟ್ಟಿದ್ದಾರೆ.

ಸಾಲು ಸಾಲು ಕಾಮೆಂಟ್ಸ್

ನಟ ಸೃಜನ್ ಲೋಕೇಶ್ ವಿರುದ್ಧ ವೀಕ್ಷಕರು ಗರಂ ಆಗಿರುವ ಕಾಮೆಂಟ್ಸ್ ಗಳು ಸಾಕಷ್ಟಿವೆ.

ಸೃಜನ್ ಗೆ ಜೈ ಅನ್ನೋರೂ ಇದ್ದಾರೆ.!

ಪ್ರಥಮ್ ಗೆ ಹಾಸ್ಯ ಪ್ರಜ್ಞೆ ಇಲ್ಲ. ಸೃಜನ್ ಮಾಡಿದ್ದೇ ಸರಿ. ಮಜಾ ಟಾಕೀಸ್ ಸೂಪರ್ ಅಂತ ಜೈಕಾರ ಹಾಕುವವರೂ ಇದ್ದಾರೆ.

ನಿಮ್ಮ ಅಭಿಪ್ರಾಯ ಏನು.?

ಕಳೆದ ವಾರ 'ಮಜಾ ಟಾಕೀಸ್' ಕಾರ್ಯಕ್ರಮವನ್ನು ನೀವು ನೋಡಿದ್ದೀರಾ.? ನೋಡಿದ್ರೆ... ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
'Maja Talkies' Viewers have taken Colors Kannada Official Facebook page to express their anger over Srujan Lokesh for insulting Pratham.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada