Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಶ್ಲೀಲತೆಯ ಅನಾಡಿಗಳಾದ 'ಕಾಮಿಡಿ ಕಿಲಾಡಿಗಳು': ಬೇಸರಗೊಂಡ ವೀಕ್ಷಕರು.!

ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಕಾರ್ಯಕ್ರಮಗಳ ಪೈಕಿ 'ಕಾಮಿಡಿ ಕಿಲಾಡಿಗಳು' ಕೂಡ ಒಂದು.
ಶನಿವಾರ ಹಾಗೂ ಭಾನುವಾರ ಆಯ್ತು ಅಂದ್ರೆ ಸಾಕು.. ಕಿಲ ಕಿಲ ಅಂತ ನಕ್ಕು ನಲಿಯಲು ಕಿರುತೆರೆ ವೀಕ್ಷಕರು ತಪ್ಪದೇ ಜೀ ಕನ್ನಡ ವಾಹಿನಿ ಟ್ಯೂನ್ ಮಾಡುತ್ತಿದ್ದರು. ಅಷ್ಟರಮಟ್ಟಿಗೆ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೊದಲನೇ ಆವೃತ್ತಿ ವೀಕ್ಷಕರ ಮನ ಗೆದ್ದಿತ್ತು.
ಒಂದ್ಕಾಲದಲ್ಲಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ವೀಕ್ಷಕರು ಇಂದು ಅದೇ ಶೋ ಬಗ್ಗೆ ಟೀಕೆ ಮಾಡುತ್ತಿದ್ದಾರೆ. 'ಅತಿಯಾದರೆ ಅಮೃತವೂ ವಿಷ' ಎಂಬಂತೆ, ವೀಕ್ಷಕರನ್ನು ನಗಿಸುವ ಭರದಲ್ಲಿ ಗಂಡಸರಿಗೆ ಪದೇ ಪದೇ ಹೆಂಗಸರ ವೇಷ ಹಾಕಿಸಿ, ನೋಡುಗರಿಗೆ ವಾಕರಿಕೆ ಬರುವ ಹಾಗಾಗಿದೆ.
'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಇತ್ತೀಚಿನ ಸ್ಕಿಟ್ ಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್ಸ್, ಗಂಡಸರಿಗೆ ಗಂಡಸರೇ ಮುತ್ತು ಕೊಡುವುದು, ಹೊಡೆಯುವುದು ಬಿಟ್ಟರೆ ಸೃಜನಶೀಲತೆ ಇಲ್ಲದಿರುವುದನ್ನು ಗಮನಿಸಿರುವ ವೀಕ್ಷಕರು ಜೀ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿಯೇ ತಮ್ಮ ಬೇಸರ ಹೊರಹಾಕಿದ್ದಾರೆ.
ಅಶ್ಲೀಲತೆ ಹೆಚ್ಚಾಗುತ್ತಿರುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಬಗ್ಗೆ ಅಸಮಾಧಾನ ಹೊರ ಹಾಕಿರುವ ವೀಕ್ಷಕರ ಕೆಲ ಕಾಮೆಂಟ್ ಗಳು ಇಲ್ಲಿವೆ ನೋಡಿ...

'ಕಾಮಿಡಿ ಕಿಲಾಡಿಗಳು' ಶೀರ್ಷಿಕೆಯನ್ನು ಬದಲಾಯಿಸಿ.!
'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮವನ್ನ ತಪ್ಪದೆ ನೋಡುವ ವೀಕ್ಷಕರೊಬ್ಬರು ಮಾಡಿರುವ ಕಾಮೆಂಟ್ ಇದು. ಶೋನಲ್ಲಿ ಅಶ್ಲೀಲತೆ ಹೆಚ್ಚಾಗಿರುವುದರಿಂದ ''ಕಾರ್ಯಕ್ರಮಕ್ಕೆ 'ಅಶ್ಲೀಲತೆಯ ಅನಾಡಿಗಳು' ಶೀರ್ಷಿಕೆ ಸೂಕ್ತ ಅನ್ಸುತ್ತೆ'' ಎಂದು ವೀಕ್ಷಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಬ್ರಾಹ್ಮಣರ ಬಗ್ಗೆ ಅವಹೇಳನ: ಕ್ಷಮೆ ಕೇಳುತ್ತಾರಾ ರಾಘವೇಂದ್ರ ಹುಣಸೂರು.?

ಸ್ವಂತಿಕೆ ಕಳೆದುಕೊಳ್ಳುತ್ತಿರುವ ಕಾರ್ಯಕ್ರಮ.!
ತೆಲುಗು ಚಾನೆಲ್ ನಲ್ಲಿ ಬರುವ ಜಬರ್ದಸ್ತ್ ಹಾಗೂ ಎಕ್ಸ್ಟ್ರಾ ಜಬರ್ದಸ್ತ್ ಕಾರ್ಯಕ್ರಮದ ನಕಲು ಅಂತೆ ಈ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ. ಹಾಗಂತ ವೀಕ್ಷಕರೊಬ್ಬರು ಕಾಮೆಂಟ್ ಮಾಡಿ, ಸ್ವಂತಿಕೆ ರೂಪಿಸಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.
'ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?

ತಗಡು ಕಾನ್ಸೆಪ್ಟ್ ಅಂತೆ.!
'''ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಬರುವ ತಗಡು ಕಾನ್ಸೆಪ್ಟ್ ಗಳನ್ನ ತುಂಬು ಕುಟುಂಬದ ಸದಸ್ಯರು ನೋಡೋಕೆ ಮುಜುಗರ ಆಗುತ್ತೆ'' ಅಂತ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.
Exclusive: 'ಕಾಮಿಡಿ ಕಿಲಾಡಿಗಳು' ಗೆದ್ದು ಕಿಲಕಿಲ ಎಂದ ಕಿಲಾಡಿ ಯಾರು.?

ಮೊದಮೊದಲು ಚೆನ್ನಾಗಿತ್ತು.!
''ಮೊದಮೊದಲು ಚೆನ್ನಾಗಿತ್ತು. ಆದ್ರೆ, ಈ ನಡುವೆ ಸ್ಕಿಟ್ ಗಳಲ್ಲಿ ಡಬಲ್ ಮೀನಿಂಗ್, ತಬ್ಬಿಕೊಳ್ಳುವುದು, ಗಂಡಸರು ಗಂಡಸರಿಗೆ ಮುತ್ತು ಕೊಡುವುದು ಹೆಚ್ಚಾಗಿದೆ'' ಎಂಬುದು ವೀಕ್ಷಕರ ಅಭಿಪ್ರಾಯ.

ಅಶ್ಲೀಲತೆ ಬೇಡ
''ಗಂಡಸರಿಗೆ ಹೆಂಗಸರ ವೇಷ ಹಾಕಿಸಬೇಡಿ. ಅಶ್ಲೀಲತೆ ಬೇಡ. ಇದು ಹೀಗೆ ಮುಂದುವರೆದರೆ, ಕಾರ್ಯಕ್ರಮಕ್ಕೆ ಕೆಟ್ಟ ಹೆಸರು'' ಅಂತಿದ್ದಾರೆ ವೀಕ್ಷಕರು.

ಈಗಲಾದರೂ ಎಚ್ಚರ ವಹಿಸಿದರೆ..
ಕಳೆದ ವರ್ಷ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಭೇಷ್ ಎಂದ ಜನತೆ ಈಗ ಅದೇ ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವೀಕ್ಷಕರ ಅಭಿಪ್ರಾಯವನ್ನ ಪರಿಗಣಿಸಿ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಕ್ವಾಲಿಟಿ ಬಗ್ಗೆ ಜೀ ಕನ್ನಡ ವಾಹಿನಿ ಎಚ್ಚರ ವಹಿಸಿದರೆ, ಶೋಗೆ ಒಳ್ಳೆಯ ಹೆಸರು.!