»   » 'ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರಲ್ಲಿ ಭುಗಿಲೆದ್ದ ಅಸಮಾಧಾನ.!

'ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರಲ್ಲಿ ಭುಗಿಲೆದ್ದ ಅಸಮಾಧಾನ.!

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಳಿಸಿರುವುದು 100% ಸುಳ್ಳಲ್ಲ.

  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಜೀವನ ಚರಿತ್ರೆಯನ್ನ ಸಾಧಕರ ಎದುರಿಗೆ ತಿರುವಿ ಹಾಕುವ ಪ್ರಯತ್ನ ಮಾಡುವ ಈ ಕಾರ್ಯಕ್ರಮ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವುದರಲ್ಲಿ ಎರಡು ಮಾತಿಲ್ಲ ನಿಜ. [ಗಾಯಕ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ?]

  ಆದ್ರೀಗ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಬಗ್ಗೆ ವೀಕ್ಷಕರ ವಲಯದಲ್ಲಿ ಅಸಮಾಧಾನ ಮೂಡಿದೆ.

  ಯಾಕೆ ಅಂದ್ರೆ, ಮೊದಲ ಸೀಸನ್ ನಲ್ಲಿ ಕ್ಯಾಪ್ಟನ್ ಗೋಪಿನಾಥ್, ವಿಶಿಷ್ಟ ಪ್ರತಿಭೆ ಅಶ್ವಿನಿ ಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನ ಪರಿಚಯ ಮಾಡಿಕೊಟ್ಟ 'ವೀಕೆಂಡ್ ವಿತ್ ಕಾರ್ಯಕ್ರಮ', ಎರಡನೇ ಸೀಸನ್ ನಲ್ಲಿ ಕೇವಲ 'ಚಿತ್ರರಂಗ'ದವರಿಗೆ ಮಾತ್ರ ಸೀಮಿತವಾಗಿದೆ. ಮುಂದೆ ಓದಿ....

  ವೀಕ್ಷಕರ ಅಸಮಾಧಾನ!

  'ವೀಕೆಂಡ್ ವಿತ್ ರಮೇಶ್' ಸೀಸನ್ 2 'ಚಿತ್ರರಂಗ'ದ ಸಾಧಕರಿಗೆ ಮಾತ್ರ ಸೀಮಿತವಾಗಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ಆರಂಭವಾಗಿದೆ. ದಿನಕರ್ ರಾವ್ ಎಂಬುವವರು ನಟ ರಮೇಶ್ ಅರವಿಂದ್ ಗೆ ಬಹಿರಂಗವಾಗಿ ಒಂದು ಪತ್ರ ಕೂಡ ಬರೆದಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಪತ್ರದ ಸಾರಾಂಶ

  ಒಂದೇ ಹಾದಿಯಲ್ಲಿ ಸಾಗುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಖಾಯಂ ವೀಕ್ಷಕ ದಿನಕರ್ ರಾವ್ ರವರು ಬರೆದಿರುವ ಬಹಿರಂಗ ಪತ್ರದ ಸಾರಾಂಶ ಇಲ್ಲಿದೆ. ಒಂದೊಂದೇ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  ರೂಪುರೇಷೆ ಇಷ್ಟವಾಗಿದೆ!

  ರಮೇಶ್ ಅರವಿಂದ್ ಗೆ ಒಂದು ಪತ್ರ.....

  ''ನಿಮ್ಮ 'ವೀಕೆಂಡ್ ವಿತ್ ರಮೇಶ್ ' ನಾನು ತಪ್ಪದೇ ನೋಡುವ ಕಾರ್ಯಕ್ರಮಗಳಲ್ಲಿ ಒಂದು....ಇದುವರೆಗಿನ ಎಲ್ಲಾ ಕಂತುಗಳನ್ನು ನೋಡಿದ್ದೇನೆ....ಸಾಧಕರನ್ನು ಕರೆತರಿಸಿ, ಅವರೊಂದಿಗೆ ಹರಟೆ ಹೊಡೆಯುತ್ತಾ, ಅವರ ಜೀವನದ ಏರುಪೇರುಗಳ ಜೊತೆ ಸಾಧನೆಯ ಮೇಲೆ ಬೆಳಕು ಚೆಲ್ಲುವ ನಿಮ್ಮ ಕಾರ್ಯಕ್ರಮದ ರೂಪುರೇಷೆ ಇಷ್ಟವಾಯ್ತು''

  ಬೇರೆ ಸಾಧಕರು ಇಲ್ಲವೇ?

  ''ಸೀಜನ್ 2 ರಲ್ಲಿ ಕನ್ನಡ ಚತ್ರರಂಗಕ್ಕೆ ಸಂಬಂಧಪಟ್ಟವರನ್ನು ಮಾತ್ರ ಸಾಧಕರ ಕುರ್ಚಿಯಲ್ಲಿ ಕುಳ್ಳಿರಿಸಿದ್ದೀರಿ....ನಿಮ್ಮ ಪ್ರಕಾರ ಸಾಧನೆಗೆ ಸಿನಿಮಾ ಮತ್ತು ಸಂಗೀತ ಕ್ಷೇತ್ರ ಮಾತ್ರವೋ...ಯಾಕೆ ಬೇರೆ ಕ್ಷೇತ್ರದಲ್ಲಿಯ ಮಹಾನ್ ಸಾಧಕರನ್ನು ಆರಿಸಿಕೊಂಡಿಲ್ಲ ?''

  ಸೀಜನ್ 1 ನಲ್ಲಿ ಎಲ್ಲರೂ ಇದ್ದರಲ್ಲ?

  ''ಸೀಜನ್ 1 ರಲ್ಲಿ ಕ್ಯಾಪ್ಟನ್ ಗೋಪಿನಾಥ್, ವಿಶೇಷ ಪ್ರತಿಭೆ ಅಶ್ವಿನಿಕುಮಾರ್, ಪಬ್ಲಿಕ್ ಟಿವಿ ರಂಗನಾಥ್ ಇವರನ್ನು ಸಂದರ್ಶಿಸಿದ್ದೀರಿ....ನಾವೆಲ್ಲ ಅದನ್ನು ಮನಸಾರೆ ಮೆಚ್ಚಿಕೊಂಡಿದ್ದೆವು....ಆದರೆ ಈ ತರದ ಪ್ರಯತ್ನ ಸೀಜನ್ 2 ರಲ್ಲಿ ಇದುವರೆಗೂ ಆಗಿಲ್ಲ''

  ಅಸಮಾಧಾನಕ್ಕೆ ಕಾರಣ?

  ''ನನ್ನ ಪ್ರಕಾರ...ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ....ಶತಾವಧಾನಿ ಗಣೇಶ್....ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ...ಭಕ್ತಿ-ಸುಗಮ ಸಂಗೀತದ ವಿದ್ಯಾಭೂಷಣ, ನರಸಿಂಹ ನಾಯಕ್, ಎಂ.ಡಿ. ಪಲ್ಲವಿ....ಕವಿ ಹೆಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಸಿದ್ದಲಿಂಗಯ್ಯ..... ನಗುಲೋಕದ ಪ್ರಾಣೇಶ್, ಕೃಷ್ಣೇಗೌಡ, ರಿಚರ್ಡ್ ಲೂಯಿಸ್....ವಿಶೇಷ ಕ್ರೀಡಾಪಟು ಮಾಲತಿಹೊಳ್ಳ...ಕ್ರಿಕೆಟಿಗ ಅನಿಲ್ ಕುಂಬ್ಳೆ....ಕನ್ನಡದ ಮಂತ್ರ ಪಠಿಸುವ ಹಿರೇಮಗಳೂರು ಕಣ್ಣನ್....ಹಾಗೆಯೇ ಯಕ್ಷಗಾನ ರಂಗದ, ಜಾನಪದ ಲೋಕದ, ಇನ್ನಿತರ ಹಲವು ರಂಗಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಹಲವು ಸಾಧಕರೂ ನಮ್ಮೊಂದಿಗಿದ್ದಾರೆ...ಇವರ ಸಾಧನೆ ನಮ್ಮಲ್ಲಿ ಹಲವರಿಗೆ ಪ್ರೇರೇಪಣೆಯೂ ಆಗಬಹುದು...ಅವರನ್ನೂ ಪರಿಚಯಿಸುವ ಪ್ರಯತ್ನ ಆಗಿಲ್ಲ ಎಂಬುದೇ ಅಸಮಾಧಾನ''

  ಟಿ.ಆರ್.ಪಿ?

  ''ಬಹುಶಃ ನಿಮ್ಮ ಚಾನೆಲ್ ಕೊಡುವ ಉತ್ತರ ಟಿ.ಆರ್.ಪಿ.....

  ಕಾರ್ಯಕ್ರಮವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ, ವಾರದ ಒಂದು ದಿನ ಸಿನಿಮಾರಂಗಕ್ಕೆ ಮೀಸಲಿಟ್ಟು, ಇನ್ನೊಂದು ದಿನ ಬೇರೆ ಕ್ಷೇತ್ರದ ಸಾಧಕರನ್ನು ಪರಿಚಯಿಸಿ''

  ಆಂಗ್ಲ ಭಾಷೆ ಯಾಕೆ?

  ''ಮರೆತ ಮಾತು.... ಈ ಕಾರ್ಯಕ್ರಮಕ್ಕೆ ಆಂಗ್ಲ ಭಾಷೆಯಲ್ಲಿಯೇ Weekend with Ramesh ಅಂತ ಯಾಕೆ? ಕನ್ನಡ ಹೆಸರು ಯಾಕಿಲ್ಲ....ಸೂಕ್ತ ಪದಗಳಿಗೆ ಬರವೇ ನಮ್ಮ ಕನ್ನಡಭಾಷೆಯಲ್ಲಿ? 'ವಾರಾಂತ್ಯದಲ್ಲಿ ನಿಮ್ಮೊಂದಿಗೆ ರಮೇಶ್' ಅಥವಾ 'ಸಾಧಕರೊಂದಿಗೆ ನಿಮ್ಮ ರಮೇಶ್' ಇನ್ಯಾವುದೋ ಸೂಕ್ತ ಹೆಸರು ಇಡಬಹುದಿತ್ತು......ಸೀಜನ್ 3 ರಲ್ಲಾದರೂ ನಮ್ಮ ಸಲಹೆಗಳನ್ನು ಗಮನಿಸುತ್ತೀರೆಂದು ಆಶಿಸಬಹುದೇ.!'' ಅಂತ ದಿನಕರ್ ರಾವ್ 'ಫೇಸ್ ಬುಕ್' ನಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ

  ವ್ಯಾಪಕ ಪ್ರತಿಕ್ರಿಯೆ

  ದಿನಕರ್ ರಾವ್ ರವರು ಬರೆದಿರುವ ಪತ್ರಕ್ಕೆ ವ್ಯಾಪಕ ಪ್ರತಿಕ್ರಿಯೆ ಕೂಡ ಲಭ್ಯವಾಗಿದೆ.

  ಯಾರು ಬೇಕು ಬೇಡ ಎಂಬ ಬಗ್ಗೆ ಚರ್ಚೆ

  ಇನ್ನೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ ಯಾರು ಕೂರಬೇಕು ಎಂಬ ಬಗ್ಗೆ ಚರ್ಚೆ ಕೂಡ ಶುರುವಾಗಿದೆ.

  ಹಿರಿಯ ನಟರನ್ನ ಪರಿಗಣಿಸಿಲ್ಲ!

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಿರಿಯ ನಟರನ್ನ ಪರಿಗಣಿಸಿಲ್ಲ ಎಂಬುದನ್ನೂ ವೀಕ್ಷಕರು ಗಮನಿಸಿದ್ದಾರೆ.

  ಎಲ್ಲಾ ಟಿ.ಆರ್.ಪಿ

  ಕಾರ್ಯಕ್ರಮ ಕೇವಲ ಟಿ.ಆರ್.ಪಿಗಾಗಿ ಮಾತ್ರ ಸೀಮಿತವಾಗಬಾರದು ಎಂಬುದು ವೀಕ್ಷಕರ ಅಭಿಪ್ರಾಯ.

  ಸಾಧನೆಗೆ ಸಿನಿಮಾ ಕ್ಷೇತ್ರವೊಂದೇ?

  ಸಾಹಿತ್ಯ, ನಾಟಕ, ಕೃಷಿ ಕ್ಷೇತ್ರದ ಸಾಧಕರನ್ನ ಪರಿಚಯ ಮಾಡದೆ ಇರುವುದು ವೀಕ್ಷಕರ ಬೇಸರಕ್ಕೆ ಕಾರಣ.

  English summary
  Kannada Small Screen Viewers are disappointed with Weekend with Ramesh season 2. Dinakar Rao, A regular Viewer of Weekend With Ramesh has written letter for Actor Ramesh Aravind expressing his dissatisfaction over the show.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more