»   » ಶ್ರುತಿ ಅವರಿಂದ ಕೆಂಡವಾಗಿದ್ದ ವೀಕ್ಷಕರು, ಕಣ್ಣನ್ ಅವರಿಂದ ಕೂಲ್ ಆದರು

ಶ್ರುತಿ ಅವರಿಂದ ಕೆಂಡವಾಗಿದ್ದ ವೀಕ್ಷಕರು, ಕಣ್ಣನ್ ಅವರಿಂದ ಕೂಲ್ ಆದರು

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಈ ವಾರ ಇಬ್ಬರು ಅತಿಥಿಗಳು ಆಗಮಿಸಲಿದ್ದಾರೆ. ಶನಿವಾರ ನಟಿ ಶ್ರುತಿ ಮತ್ತು ಭಾನುವಾರ 'ಹರಟೆ' ಖ್ಯಾತಿಯ ಹಿರೇಮಗಳೂರು ಕಣ್ಣನ್ ಸಾಧಕರ ಸೀಟ್ ಮೇಲೆ ಕುಳಿತುಕೊಳ್ಳಲಿದ್ದಾರೆ.

ಸಾಧಕರ ಸೀಟ್ ಮೇಲೆ ಕೂತ ನಟಿ ಶ್ರುತಿ: ಮತ್ತೆ ಭುಗಿಲೆದ್ದ ವೀಕ್ಷಕರ ಆಕ್ರೋಶ.!

ಶೃತಿ ಅವರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕರೆಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೆ ಈಗ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ಬರುವಿಕೆಯಿಂದ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಮುಂದೆ ಓದಿ....

ಕಣ್ಣನ್ ಉತ್ತಮ ಆಯ್ಕೆ

ಹಿರೇಮಗಳೂರು ಕಣ್ಣನ್ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಉತ್ತಮ ಆಯ್ಕೆ ಎಂಬುದು ಅನೇಕರ ಅಭಿಪ್ರಾಯ.

ಖುಷಿಯಾದ ಪ್ರೇಕ್ಷಕರು

''ಸಾಧಕರ ಸೀಟಿನಲ್ಲಿ ಯಾರೂ ಊಹೆ ಮಾಡಿರದ ಸಾಧಕರು ಇವರು. ಕನ್ನಡ ಪೂಜಾರಿಗೆ ಜೈ, ಇವರನ್ನು ಕರೆಸಿ ಜೀ ಕನ್ನಡಕ್ಕೆ ಮೆರುಗು ಬಂತು'' ಎಂದು ವೀಕ್ಷಕರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಮಿಸ್ ಮಾಡದೇ ನೋಡುತ್ತೇವೆ

''ಕಣ್ಣನ್ ಅವರ ಅಕ್ಷರ ಸಾಹಿತ್ಯಕ್ಕಾಗಿ ಕಾತರರಾಗಿದ್ದೇವೆ. ಆ ದಿನ ಮಿಸ್ ಮಾಡದೇ ನೋಡುತ್ತೇವೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇಂತಹ ವ್ಯಕ್ತಿ ಲಕ್ಷಕ್ಕೊಬ್ಬರು

''ನಿಜಕ್ಕೂ ಇದು ಹೆಮ್ಮೆಯ ವಿಷಯ. ಇವರೆಲ್ಲ ಸಾವಿರಕ್ಕೊಬ್ಬರು ಅಲ್ಲ.. ಲಕ್ಷಕ್ಕೊಬ್ಬರು. ಬಹಳ ಖುಷಿ ಆಯ್ತು ಇವರನ್ನು ನೋಡಿ'' ಎಂದು ವೀಕ್ಷಕ ಪ್ರಭುಗಳು ಮನತುಂಬಿ ಬರೆದುಕೊಂಡಿದ್ದಾರೆ.

ಕನ್ನಡಿಗರು ನೋಡಬೇಕು

''ಪ್ರತಿಯೊಬ್ಬ ಕನ್ನಡಿಗರು ನೋಡಬೇಕಾದ ಸಂಚಿಕೆ ಇದು. ನಿಜವಾದ ಕನ್ನಡಿಗರು ಕಣ್ಣನ್ ಅವರ ಕನ್ನಡ ಜ್ಞಾನಕ್ಕೆ ಸೆಲ್ಯೂಟ್ ಹೊಡೆಯಬೇಕು'' ಎಂದು ಕೆಲ ವೀಕ್ಷಕರು ಹೇಳಿದ್ದಾರೆ.

ನಿಟ್ಟುಸಿರು ಬಿಟ್ಟ ವೀಕ್ಷಕರು

ನಟಿ ಶೃತಿ ಅವರ 'ವೀಕೆಂಡ್ ವಿತ್ ರಮೇಶ್' ಸಂಚಿಕೆ ಬಗ್ಗೆ ಭುಗಿಲೆದ್ದಿದ್ದ ವೀಕ್ಷಕರ ಆಕ್ರೋಶವನ್ನು ಕಣ್ಣನ್ ಅವರ ಸಂಚಿಕೆ ಒಂದು ಮಟ್ಟಕ್ಕೆ ತಣ್ಣಗೆ ಮಾಡಿದೆ ಎನ್ನಬಹುದು.

English summary
Viewers has taken There Facebook Account to Express Thire Opinion About Zee Kannada Channel and Weekend with Ramesh-3 for Inviting 'Hiremagalur Kannan'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada