»   » ಪ್ರಥಮ್, ಸೃಜನ್ ಮತ್ತು ಪ್ರೇಕ್ಷಕರು: ಮುಗಿಯದ ಕಾಮೆಂಟ್ಸ್ ಕದನ

ಪ್ರಥಮ್, ಸೃಜನ್ ಮತ್ತು ಪ್ರೇಕ್ಷಕರು: ಮುಗಿಯದ ಕಾಮೆಂಟ್ಸ್ ಕದನ

Posted By:
Subscribe to Filmibeat Kannada
ಸೃಜನ್ ಲೋಕೇಶ್ ನಡೆಸಿಕೊಡುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿಜೇತ ಪ್ರಥಮ್ ಭಾಗವಹಿಸಿದ್ದರು. ಆ ಸಂಚಿಕೆಯಲ್ಲಿ ಪ್ರಥಮ್ ರವರನ್ನ ಹೀಯಾಳಿಸಲಾಗಿತ್ತು ಎಂಬ ಕಾರಣಕ್ಕೆ ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದರು.

ಸೃಜನ್ ಲೋಕೇಶ್ ವಿರುದ್ಧ ಸಿಟ್ಟಿಗೆದ್ದ ಕನ್ನಡ ವೀಕ್ಷಕರು 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿಯೇ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು. ಬಹುತೇಕ ವೀಕ್ಷಕರು ಸೃಜನ್ ಲೋಕೇಶ್ ರವರ ಬಗ್ಗೆ ಬೇಸರ ವ್ಯಕ್ತಪಡಿಸಿರಬಹುದು. ಸೃಜನ್ ಗೆ ಬಾಯಿಗೆ ಬಂದ ಹಾಗೆ ಬೈದಿರಬಹುದು. ಆದ್ರೆ, ಕೆಲವರು ಮಾತ್ರ ಸೃಜನ್ ಗೆ ಬೆನ್ನೆಲುಬಾಗಿ ನಿಂತಿದ್ದಾರೆ.!

ಸೃಜನ್ ಮಾಡಿದ್ದು ಸರಿಯಾಗಿಯೇ ಇತ್ತು ಅಂತ ಕೆಲವರು ಬ್ಯಾಟಿಂಗ್ ಆರಂಭಿಸಿದ್ದಾರೆ. 'ಕಲರ್ಸ್ ಕನ್ನಡ' ಅಫೀಶಿಯಲ್ ಫೇಸ್ ಬುಕ್ ಪೇಜ್ ಹಾಗೂ 'ಒನ್ಇಂಡಿಯಾ ಫಿಲ್ಮಿಬೀಟ್ ಕನ್ನಡ' ಕಾಮೆಂಟ್ ಬಾಕ್ಸ್ ನಲ್ಲಿ ಸೃಜನ್ ಲೋಕೇಶ್ ಪರ ಕೆಲ ವೀಕ್ಷಕರು ದನಿ ಎತ್ತಿದ್ದಾರೆ.

ಸೃಜನ್ ಲೋಕೇಶ್ ಬಗ್ಗೆ ಹೀಗೂ ಹೇಳೋರು ಇದ್ದಾರೆ ಸ್ವಾಮಿ.!

'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಸೃಜನ್ ಲೋಕೇಶ್ ಬಗ್ಗೆ ವೀಕ್ಷಕರು ಕೋಪಗೊಂಡಿರುವ ಬಗ್ಗೆ 'ಪ್ರಥಮ್ ಕಾಲೆಳೆದ ಸೃಜನ್ ವಿರುದ್ಧ ಸಿಟ್ಟಿಗೆದ್ದ ಕನ್ನಡ ವೀಕ್ಷಕರು.!' ಎಂಬ ಶೀರ್ಷಿಕೆ ಅಡಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಒಂದು ವರದಿ ಪ್ರಕಟ ಮಾಡಿತ್ತು. ಅದಕ್ಕೆ ನಿರೀಕ್ಷೆಗೂ ಮೀರಿದ ಅಭಿಪ್ರಾಯ ವ್ಯಕ್ತವಾಗಿದ್ದು, ಸೃಜನ್ ಬಗ್ಗೆ ಕೆಲವರು ಹಾಡಿ ಹೊಗಳಿದ್ದಾರೆ. ಸಾಲದಕ್ಕೆ 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿಯೂ ಸೃಜನ್ ಲೋಕೇಶ್ ಗೆ ಜನ 'ಜೈ' ಎನ್ನೋಕೆ ಶುರು ಮಾಡಿದ್ದಾರೆ. ಅಂತಹ ಕೆಲವು ಕಾಮೆಂಟ್ಸ್ ಇಲ್ಲಿದೆ ನೋಡಿ...

ಸೃಜನ್... ನೀವು ತಲೆ ಕೆಡಿಸಿಕೊಳ್ಳಬೇಡಿ...

''ಸೃಜನ್ ಯಾರು ಏನೇ ಹೇಳಿದ್ರೂ, ತಲೆ ಕೆಡಿಸಿಕೊಳ್ಳಬೇಡಿ.. ಪ್ರಥಮ್ ಏನು ದೊಡ್ಡ ಸ್ಟಾರ್ ಅಲ್ಲ'' ಅಂತ ಕೆಲವರು ಸೃಜನ್ ಲೋಕೇಶ್ ಗೆ ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ.['ಮಜಾ ಟಾಕೀಸ್'ನಲ್ಲಿ ಲಾರ್ಡ್ ಪ್ರಥಮ್ ರವರ 13 ಲವ್ ಸ್ಟೋರಿ ಬಹಿರಂಗ.!]

ಸೃಜನ್ ಈಸ್ ರಾಕಿಂಗ್

ಸೃಜನ್ ಲೋಕೇಶ್ ಪರ ಜನರ ಪ್ರೀತಿ ಎಷ್ಟಿದೆ ಎನ್ನುವುದಕ್ಕೆ ಈ ಕಾಮೆಂಟ್ ಸಾಕ್ಷಿ.['ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳ ಮಸ್ತ್ ಮಜಾ]

ಸೃಜನ್ ಶೋ ಸೂಪರ್

''ಪ್ರಥಮ್ ಗೆ ಹಾಸ್ಯ ಪ್ರಜ್ಞೆ ಇಲ್ಲ. ಸೃಜನ್ ಶೋ ಸೂಪರ್'' ಅಂತ ಹೇಳುವವರೂ ಇದ್ದಾರೆ.

ಪ್ರಥಮ್ ಗೆದ್ದದ್ದು ಹೇಗೆ.?

''ಬೇರೆಯವರನ್ನು ಇನ್ಸಲ್ಟ್ ಮಾಡಿ ಪ್ರಥಮ್ ಗೆದ್ದದ್ದು. ಅವಮಾನ ಮಾಡುವವರಿಗೆ ಅದರ ಅನುಭವ ಆಗಲಿ ಬಿಡಿ'' ಅಂತ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಓದುಗರು ಅಭಿಪ್ರಾಯ ಪಟ್ಟಿದ್ದಾರೆ.

ಸೃಜನ್ ತಪ್ಪಿಲ್ಲ.!

''ಹೇಳಿ ಕೇಳಿ 'ಮಜಾ ಟಾಕೀಸ್' ಕಾಮಿಡಿ ಶೋ. ಅದನ್ನ ಪಾಸಿಟೀವ್ ಆಗಿ ತೆಗೆದುಕೊಳ್ಳಬೇಕು. ಸೃಜನ್ ತಪ್ಪು ಮಾಡಿಲ್ಲ. 'ಸಾರಿ' ಕೇಳುವ ಅವಶ್ಯಕತೆ ಇಲ್ಲ'' ಎನ್ನುವುದು ಕೆಲವರ ವಾದ.

ಸೀರಿಯಸ್ ಆಗಬಾರದು.!

''ಕಾಮಿಡಿ ಶೋ'ನ ಸೀರಿಯಸ್ ಆಗಿ ತೆಗೆದುಕೊಳ್ಳಬಾರದು'' ಎಂದು 'ಫಿಲ್ಮಿಬೀಟ್ ಕನ್ನಡ' ಓದುಗರು ಕಾಮೆಂಟ್ ಮಾಡಿದ್ದಾರೆ.

ಸೃಜನ್ ಹೇಗೆ ಅಂತ ಎಲ್ಲರಿಗೂ ಗೊತ್ತು

''ಸೃಜನ್ ಲೋಕೇಶ್ ಎಂತಹ ಒಳ್ಳೆ ಮನುಷ್ಯ ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಅವರ ಬಗ್ಗೆ ಮಾತಾಡೋರು ಅವರ ಮನಸ್ಸು ನೋಡಿ ಮಾತಾಡಿ'' ಅಂತ ವೆಂಕಟೇಶ್ ಮೂರ್ತಿ ಎಂಬುವರು ಸಲಹೆ ನೀಡಿದ್ದಾರೆ.

ಪ್ರಥಮ್ ಅವರೇ ಸುಮ್ನೆ ಇದ್ದಾರೆ

''ಪ್ರಥಮ್ ಅವರೇ ಸುಮ್ನೆ ಇರುವಾಗ ಜನ ಯಾಕೆ ಹೀಗೆ'' ಎಂಬ ಪ್ರಶ್ನೆ ಕೂಡ ಉದ್ಭವ ಆಗಿದೆ.

ನೋಡದೇ ಇರುವವರಿಗೆ ನಷ್ಟ

''ಸೃಜನ್ ಡಿಡ್ ಎ ಗ್ರೇಟ್ ಜಾಬ್. ಯಾರು 'ಮಜಾ ಟಾಕೀಸ್' ನೋಡಲ್ವೋ, ಅವರಿಗೆ ನಷ್ಟ'' ಎಂಬ ಕಾಮೆಂಟ್ ಗಳೂ ಇವೆ.

English summary
'Maja Talkies' Viewers have taken Colors Kannada Official Facebook Page and 'Oneindia Kannada/Filmibeat Kannada' Comment Box to support Srujan Lokesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada