»   » ಚಿತ್ರರಂಗಕ್ಕೆ ಬರುವ ಮುನ್ನವೇ ರಮ್ಯಾ-ವಿಜಯ್ ರಾಘವೇಂದ್ರಗೆ ಪರಿಚಯವಿತ್ತು!

ಚಿತ್ರರಂಗಕ್ಕೆ ಬರುವ ಮುನ್ನವೇ ರಮ್ಯಾ-ವಿಜಯ್ ರಾಘವೇಂದ್ರಗೆ ಪರಿಚಯವಿತ್ತು!

Posted By:
Subscribe to Filmibeat Kannada

ಪೂರ್ಣ ಪ್ರಮಾಣದ ನಾಯಕನಾಗಿ ನಟ ವಿಜಯ್ ರಾಘವೇಂದ್ರ ಕನ್ನಡ ಚಿತ್ರರಂಗಕ್ಕೆ ಪರಿಚಯ ಆಗಿದ್ದು 'ನಿನಗಾಗಿ' ಚಿತ್ರದ ಮೂಲಕ. ಅದು 2002 ರಲ್ಲಿ. ಇನ್ನೂ ನಟಿ ರಮ್ಯಾ ನಾಯಕಿ ಆಗಿ ಬಣ್ಣದ ಬದುಕಿಗೆ ಕಾಲಿಟ್ಟಿದ್ದು 2003 ರಲ್ಲಿ ಬಿಡುಗಡೆ ಆದ 'ಅಭಿ' ಚಿತ್ರದಿಂದ.

ಚಿತ್ರರಂಗಕ್ಕೆ ಪರಿಚಯ ಆಗುವ ಮುನ್ನವೇ ರಮ್ಯಾ-ವಿಜಯ್ ರಾಘವೇಂದ್ರ ಕ್ಲೋಸ್ ಫ್ರೆಂಡ್ಸ್ ಆಗಿದ್ದರು ಅನ್ನೋದು ನಿಮಗೆ ಗೊತ್ತಾ.?

Vijay Raghavendra speaks about Ramya in Super Talk Time

ವಿಜಯ್ ರಾಘವೇಂದ್ರ ಜೊತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಅಪ್ಪು, ಶಿವಣ್ಣ

ಹೌದು, ಬಾಲಕನಾಗಿದ್ದಾಗ 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ ವಿಜಯ್ ರಾಘವೇಂದ್ರ ನಂತರ ಪೂರ್ಣ ಪ್ರಮಾಣದ ನಾಯಕನಾಗಲು ಆಕ್ಟಿಂಗ್ ಕೋರ್ಸ್ ಸೇರಿದರು.

ಇತ್ತ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ವಿದ್ಯಾಭ್ಯಾಸ ಮಾಡುತ್ತಿದ್ದರು. ಇವರಿಬ್ಬರು ಪರಿಚಯ ಆಗಿದ್ದು ರೈಲಿನಲ್ಲಿ.

ಗಣೇಶ್ ಗೆ ಸಿಕ್ಕ ಗೋಲ್ಡನ್ ಅವಕಾಶ ವಿಜಯ್ ರಾಘವೇಂದ್ರ ಪಾಲಾಗಿದಿದ್ರೆ.?!

ರೈಲಿನಲ್ಲಿ ಪ್ರಯಾಣ ಮಾಡುವಾಗ ಪರಿಚಿತರಾದ ವಿಜಯ್ ರಾಘವೇಂದ್ರ ಹಾಗೂ ದಿವ್ಯ ಸ್ಪಂದನ ನಂತರ ಕ್ಲೋಸ್ ಫ್ರೆಂಡ್ಸ್ ಆದರಂತೆ. ಅಂದಿನ ದಿವ್ಯ ಸ್ಪಂದನ ಇಂದು ನಟಿ, ರಾಜಕಾರಣಿ ರಮ್ಯಾ ಆಗಿದ್ದಾರೆ.

ಅಷ್ಟಕ್ಕೂ, ಈ ವಿಚಾರವನ್ನ ನಟ ವಿಜಯ್ ರಾಘವೇಂದ್ರ ಬಹಿರಂಗ ಪಡಿಸಿದ್ದು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ.

ನಟ ವಿಜಯ್ ರಾಘವೇಂದ್ರಗಿದ್ದ ಒಂದು ಆಸೆ ಈಡೇರಲೇ ಇಲ್ಲ.!

ಹೀರೋ-ಹೀರೋಯಿನ್ ಆಗುವ ಮುನ್ನ ಫ್ರೆಂಡ್ಸ್ ಆಗಿದ್ದ ವಿಜಯ್ ರಾಘವೇಂದ್ರ-ರಮ್ಯಾ ನಂತರ 'ಸೇವಂತಿ ಸೇವಂತಿ' ಚಿತ್ರದ ಮೂಲಕ ತೆರೆಹಂಚಿಕೊಂಡರು.

English summary
Kannada Actor Vijay Raghavendra speaks about Kannada Actress, EX MP Ramya in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada