»   » 'ಬಿಗ್ ಬಾಸ್' ಶೋಗೆ ಖಳನಟ ರವಿಶಂಕರ್ ಎಂಟ್ರಿ

'ಬಿಗ್ ಬಾಸ್' ಶೋಗೆ ಖಳನಟ ರವಿಶಂಕರ್ ಎಂಟ್ರಿ

Posted By:
Subscribe to Filmibeat Kannada

ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 2 ಎರಡನೇ ವಾರಕ್ಕೆ ಅಡಿಯಿಟ್ಟಿದೆ. ಮೊದಲ ವಾರದ ವಿಶೇಷ ಅತಿಥಿಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿದ್ದರು. ಅವರು ಸುದೀಪ್ ಜೊತೆ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಸ್ಮರಿಸಿಕೊಂಡಿದ್ದನ್ನು ಓದಿರುತ್ತೀರಾ, ನೋಡಿರುತ್ತೀರಾ.

ಈ ವಾರ 'ಸಖತ್ ಸಂಡೇ ವಿತ್ ಕಿಚ್ಚ ಸುದೀಪ್' ಜೊತೆ ಯಾರಿರುತ್ತಾರೆ? ಈ ವಾರ ಒಬ್ಬರಲ್ಲ ಇಬ್ಬರು ಸೆಲೆಬ್ರಿಟಿಗಳು ಕಿಚ್ಚನ ಜೊತೆಗಿರುತ್ತಾರೆ. ಅವರು ಬೇರಾರು ಅಲ್ಲ ಕನ್ನಡದ ಖಳನಟ ರವಿಶಂಕರ್ ಹಾಗೂ ಗಾಯಕ, ಸಂಗೀತ ನಿರ್ದೇಶಕ ವಿಜಯ ಪ್ರಕಾಶ್. [ಹೆಚ್ಚಾಗಿ ನೋವನ್ನೇ ಉಂಡ 'ನೀಲಕಂಠ' ರವಿಚಂದ್ರನ್]

ಸುದೀಪ್ ಜೊತೆಗಿನ 'ಕೆಂಪೇಗೌಡ' ಚಿತ್ರದ 'ಆರ್ಮುಗಂ' ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರವಿಶಂಕರ್ ಬಳಿಕ 'ಕೋಟೆ' ಕಠಾರಿಯಾಗಿ, 'ದಂಡಂ ದಶಗುಣಂ'ನ ತಮಟೆ ಶಿವನಾಗಿ 'ಡಂಡುಪಾಳ್ಯ'ದ ಇನ್ಸ್ ಪೆಕ್ಟರ್ ಚಲಪತಿಯಾಗಿ ಹೀಗೆ ಹಲವಾರು ವಿಭಿನ್ನ ಪಾತ್ರಗಳನ್ನು ಪೋಷಿಸುತ್ತಾ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಇನ್ನು ವಿಜಯ ಪ್ರಕಾಶ್ ಅವರು 'ಸ್ಲಂಡಾಗ್ ಮಿಲಿಯನೇರ್' ಚಿತ್ರದ 'ಜೈ ಹೋ' ಹಾಡಿನ ಮೂಲಕ ಕನ್ನಡಿಗರ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿ ಖ್ಯಾತರಾದವರು. ಕನ್ನಡದಲ್ಲಿ ತಮ್ಮದೇ ಆದಂತಹ ಕಂಠಸಿರಿಯನ್ನು ಹೊಂದಿರುವ ವಿಜಯ್, "ಖಾಲಿ ಕ್ವಾಟ್ರು ಬಾಟ್ಲಿಯಂತೆ ಲೈಫು" ಹಾಡನ್ನು ಮರೆತಿರಲ್ಲ.

Vijay Prakash in Bigg Boss Kannada

ಕನ್ನಡ, ಹಿಂದಿ, ತೆಲುಗು, ತಮಿಳನಲ್ಲಿ ಅಸಂಖ್ಯಾತ ಹಾಡುಗಳು ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿವೆ. ಇವರಿಬ್ಬರು ಈ ವಾರ 'ಸಖತ್ ಸಂಡೇ ವಿತ್ ಸುದೀಪ್' ಜೊತೆ ಏನೆಲ್ಲಾ ಹಂಚಿಕೊಳ್ಳುತ್ತಾರೆ ಎಂಬ ಕುತೂಹಲ ಇದ್ದೇ ಇದೆ. (ಒನ್ಇಂಡಿಯಾ ಕನ್ನಡ ಎಕ್ಸ್ ಕ್ಲೂಸೀವ್)

English summary
Sandalwood villain Ravi Shankar and playback singer Vijay Prakash will be seen in Bigg Boss Kannada 2 on Sunday (13th July), both are the celebrity guest of second week. sources says, the celebrities share the stage with host Sudeep on 'Sakkat Sunday with Sudeep'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada