»   » ಹುಚ್ಚಾಸ್ಪತ್ರೆಯಿಂದ ವಿನಾಯಕ ಜೋಶಿ ಡಿಸ್ ಚಾರ್ಜ್

ಹುಚ್ಚಾಸ್ಪತ್ರೆಯಿಂದ ವಿನಾಯಕ ಜೋಶಿ ಡಿಸ್ ಚಾರ್ಜ್

Posted By:
Subscribe to Filmibeat Kannada

ಇಷ್ಟು ದಿನ ಹುಚ್ಚಾಸ್ಪತ್ರೆಯಾಗಿ ಬದಲಾಗಿದ್ದ 'ಬಿಗ್ ಬಾಸ್' ಮನೆಯಿಂದ ಇನ್ನೊಬ್ಬ ಸದಸ್ಯರು ಹೊರಬಿದ್ದಿದ್ದಾರೆ. ಈ ಶುಕ್ರವಾರ (ಏ.26) ವಿನಾಯಕ ಜೋಶಿ ಪಾಲಿಗೆ ಶುಕ್ರದೆಸೆ ನೀಡಲಿಲ್ಲ. ಅವರಿಗೆ ಮನೆಯಲ್ಲೇ ಉಳಿದುಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ ಅವರು ಬಿಗ್ ಬಾಸ್ ಆಟದಿಂದ ಔಟ್ ಆಗಿದ್ದಾರೆ.

ಈಟಿವಿ ಕನ್ನಡ ವಾಹಿನಿಯಲ್ಲಿ ಶುಕ್ರವಾರ ವಾರ ಮೂಡಿಬಂದ 'ವಾರದ ಕಥೆ ಕಿಚ್ಚನ ಜೊತೆ' ವಿಶೇಷವಾಗಿತ್ತು. ಸುದೀಪ್ ಕೇವಲ ತಮಾಷೆ ಮಾಡದೆ ಮನೆಯ ಎಲ್ಲ ಸದಸ್ಯರ ದುಃಖ ದುಮ್ಮಾನ, ಆರೋಪ ಪ್ರತ್ಯಾರೋಪ, ಜಗಳ ಒಳಜಗಳ, ಕೋಪ ತಾಪ, ಹತಾಶೆಗಳನ್ನು ಕೂಲಾಗಿ ಹತ್ತಿಕ್ಕುವ ಪ್ರಯತ್ನ ಮಾಡಿದರು.

ಈ ವಾರ ನಾಮಿನೇಷನ್ ಗ್ರಹಣ ಯಾರಿಗೆ ಬಿಡುತ್ತದೆ ಇನ್ಯಾರಿಗೆ ಹಿಡಿಯುತ್ತದೆ. ಹುಚ್ಚಾಸ್ಪತ್ರೆಯಿಂದ ಯಾರು ಡಿಸ್ ಚಾರ್ಜ್ ಆಗುತ್ತಾರೆ ಎಂದೇ ಮಾತಿಗೆ ಇಳಿದ ಸುದೀಪ್ ತಮ್ಮದೇ ಆದ ಶೈಲಿಯ ಮೂಲಕ ಎಲ್ಲರ ಗಮನಸೆಳೆದರು.

ಬಿಗ್ ಬಾಸ್ ಮನೆಯ ಸದಸ್ಯರೂ ಅಷ್ಟೇ ಕಿಚ್ಚನಿಗಾಗಿ ವಾರದಿಂದ ಎದುರುನೋಡುತ್ತಿದ್ದಂತಿತ್ತು. ಅವರು ಸಿಕ್ಕಿದ ಕೂಡಲೆ ತಮ್ಮ ಸಮಸ್ಯೆ, ದುಃಖ, ಕೋಪ ಹತಾಶೆಗಳನ್ನು ಹೊರಹಾಕುವ ಪ್ರಯತ್ನ ಮಾಡಿದರು. ಎಲ್ಲರಿಗೂ ಸುದೀಪ್ ಪ್ರಾಮಾಣಿಕವಾಗಿ, ಸಮಾಧಾನಚಿತ್ತದಿಂದ ಉತ್ತರಿಸುತ್ತಾ ಮನಗೆಲ್ಲುವ ಪ್ರಯತ್ನ ಮಾಡಿದರು.

ಮನೆಯ ವಾತಾವರಣ ತಿಳಿಗೊಳಿಸಿದ ರಾಜೇಶ್

ಮೊದಲೇ ಹುಚ್ಚಾಸ್ಪತ್ರೆ ಟಾಸ್ಕ್ ನಿಂದ ಮನೆಯ ಸದಸ್ಯರು ಅರೆಹುಚ್ಚರಂತಾಗಿದ್ದರು. ಹಳ್ಳಿಹೈದ ರಾಜೇಶ್ ಆಗಮನದಿಂದ ಮನೆಯ ವಾತಾವರಣ ಕೊಂಚ ತಿಳಿಯಾಗಿತ್ತು. ಇದೇ ಸಂದರ್ಭದಲ್ಲಿ ರಾಜೇಶ್ ಅವರನ್ನು ರಾಜನಂತೆ ನೋಡಿಕೊಳ್ಳಬೇಕು ಎಂದು ಬಿಗ್ ಬಾಸ್ ಆದೇಶಿದರು.

ಬಿಗ್ ಬಾಸ್ ಮನೆಯ ಸುಲ್ತಾನ್ ಆಗಿದ್ದ ರಾಜೇಶ್

ರಾಜೇಶ್ ಅವರಿಗೆ ಯಾರೂ ಬೆನ್ನು ತೋರುವಂತಿಲ್ಲ. ಅವರು ಕೇಳಿದ್ದನ್ನು ತಂದುಕೊಡಬೇಕು. ಅವರು ಹೇಳಿದ್ದನ್ನು ಮನೆಯ ಸದಸ್ಯರು ಮಾಡಬೇಕಾಗಿತ್ತು. ಒಂದು ದಿನದ ಮಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ರಾಜೇಶ್ ಸುಲ್ತಾನ್ ಆಗಿದ್ದ.

ಏಕ್ ದಿನ್ ಕಾ ಸುಲ್ತಾನ್ ರಾಜೇಶ್

ಬಿಗ್ ಬಾಸ್ ಮನೆಗೆ ರಾಜೇಶ್ ಸ್ಪರ್ಧಿಯಾಗಿ ಬಂದಿರಲಿಲ್ಲ. ಅವರು ಅತಿಥಿಯಾಗಿ ಬಂದಿದ್ದರು ಎಂದು ಸುದೀಪ್ ಸ್ಪಷ್ಟಪಡಿಸುವವರೆಗೆ ಯಾರಿಗೂ ಗೊತ್ತಾಗಿರಲಿಲ್ಲ. ಏಕ್ ದಿನ್ ಕಾ ಸುಲ್ತಾನ್ ರಾಜೇಶ್ ಅವರನ್ನು ಮನೆಯಿಂದ ಬೀಳ್ಕೊಡಲಾಯಿತು.

ಸದಸ್ಯರಿಗೆ ರಾಜೇಶ್ ಮುಗ್ಧತೆಯ ದರ್ಶನ

ಹಳ್ಳಿಯ ಹೈದನ ಶುದ್ಧ, ಮುಗ್ಧ ಮನಸ್ಸು ಎಲ್ಲರಿಗೂ ಅರ್ಥವಾಗಲಿ ಎಂಬ ಉದ್ದೇಶದಿಂದ ರಾಜೇಶ್ ಅವರನ್ನು ಬಿಗ್ ಬಾಸ್ ಮನೆಯ ಅತಿಥಿಯಾಗಿ ಕಳುಹಿಸಲಾಗಿತ್ತು. ನಿಮ್ಮಲ್ಲೂ ಇನ್ನೂ ಆ ಮುಗ್ಧತೆ ಇದೆಯೇ ಎಂದು ಸುದೀಪ್ ಪ್ರಶ್ನಿಸಿದಕ್ಕೆ ಮನೆಯಲ್ಲಿ ಬಿಸಿಬಿಸಿ ಚರ್ಚೆ ಶುರುವಾಯಿತು.

ಚಂದ್ರಿಕಾ ಮಾತಿಗೆ ಸಿಟ್ಟಾದ ಅಪರ್ಣಾ

ತಮ್ಮಲ್ಲಿ ಇನ್ನೂ ಮಗುವಿನಂತಹ ಮುಗ್ಧತೆ ಇದೆ ಎಂದು ವಾದಿಸಿದರು ಅಪರ್ಣಾ ಅವರು. ಆದರೆ ಇದಕ್ಕೆ ಮನೆಯ ಸದಸ್ಯರು ಧ್ವನಿಗೂಡಿಸಲಿಲ್ಲ. ಇದರಿಂದ ಅವರು ಕ್ಷಣಕಾಲ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಚಂದ್ರಿಕಾ ಮತ್ತು ಅಪರ್ಣಾ ನಡುವೆ ಮಾತಿನ ಚಕಮಕಿ ನಡೆದು ಅಪರ್ಣಾ ಸಿಟ್ಟಿಗೆದ್ದು ಹೊರನಡೆದ ಪ್ರಸಂಗವೂ ಆಯಿತು.

ಗಿಟಾರ್ ನುಡಿಸಿ ಚಕಿತಗೊಳಿಸಿದ ಸುದೀಪ್

ಸುದೀಪ್ ಅವರು ಗಿಟಾರ್ ನುಡಿಸುತ್ತಾ ಚಂದ್ರಿಕಾ ಅವರಿಗೆ ಶುಭಾಶಯ ಹೇಳಿದ್ದು, ಬಳಿಕ ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ಗಿಟಾರ್ ನುಡಿಸುತ್ತಲೇ ಹಾಡಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡುತು. ಈ ಬಾರಿ ನಾಮಿನೇಟ್ ಆಗಿದ್ದ ಇಬ್ಬರು ಸದಸ್ಯರಲ್ಲಿ ವಿನಾಯಕ ಜೋಶಿ ಔಟ್ ಆಗಿದ್ದಾರೆ.

ಜೋಶಿ ವಿರುದ್ಧ ಮನೆಯಲ್ಲಿ ಸಹಮತವಿರಲಿಲ್ಲ

ಬಿಗ್ ಬಾಸ್ ಮನೆಯಿಂದ ಯಾರನ್ನು ಹೊರಗೆ ಕಳುಹಿಸಬೇಕು ಎಂದು ಸುದೀಪ್ ಕೇಳಿದಾಗ. ಬಹುತೇಕರು ವಿನಾಯಕ ಜೋಶಿ ಹೆಸರು ಸೂಚಿಸಿದರು. ಎಸ್ಎಂಎಸ್ ಓಟಿಂಗ್ ನಲ್ಲೂ ಅವರಿಗೆ ಅಧಿಕ ಮತಗಳು ಬಿದ್ದಿದ್ದವು. ಹಾಗಾಗಿ ಜೋಶಿ ಅವರು ಮನೆಯಿಂದ ಹೊರ ಹೋಗದೆ ವಿಧಿ ಇರಲಿಲ್ಲ.

ಭಾವೋದ್ವೇಗಕ್ಕೆ ಒಳಗಾಗಿದ್ದ ವಿನಾಯಕ ಜೋಶಿ

ವಿನಾಯಕ ಜೋಶಿ ಅವರು ಎಲಿಮಿನೇಟ್ ಆಗಿದ್ದಕ್ಕೆ ತೀವ್ರ ಹತಾಶರಾಗಿದ್ದರು. ಅವರ ಮಾನಸಿಕ ಸ್ಥಿತಿ ಅದನ್ನು ಒಪ್ಪುವಂತಿರಲಿಲ್ಲ. ಆದರೂ ಒಲ್ಲದ ಮನಸ್ಸಿನಿಂದಲೇ ಮನೆಯಿಂದ ಹೊರಬಂದರು. ಅವರು ತೀರಾ ಭಾವೋದ್ವೇಗಕ್ಕೆ ಒಳಗಾಗಿದ್ದರು. ಅವರನ್ನು ಸಮಾಧಾನಪಡಿಸುವಲ್ಲಿ ಸುದೀಪ್ ಸುಸ್ತಾಗಿ ಹೋದರು.

ಅರುಣ್ ಸಾಗರ್ ಗೆ ಅಭಿನಂದನೆಯ ಸುರಿಮಳೆ

ಈ ವಾರದ ಕಾಲರ್ ಆಫ್ ದ ವೀಕ್ ಜಯನಗರದ ಮೂರ್ತಿ ಎಂಬುವವರು. ಅವರು ಅರುಣ್ ಸಾಗರ್ ಅವರೊಂದಿಗೆ ಮಾತನಾಡಿದರು. ಹುಚ್ಚನಾಗಿ ಅದ್ಭುತವಾಗಿ ಅಭಿನಯ ನೀಡಿದಿರಿ. ಆದರೆ ಸುದೀಪ್ ಅವರೊಂದಿಗೆ ಮಾತನಾಡುವಾಗ ಹೋಗೋ, ಬಾರೋ ಎಂದು ಏಕವಚನದಲ್ಲಿ ಕರೆಯುವುದು ಅಷ್ಟು ಸರಿ ಅಲ್ಲ ಎಂದರು. ಇದಕ್ಕೆ ಅರುಣ್ ಮುಂದೆ ಆ ರೀತಿ ಕರೆಯಲ್ಲ ಎಂದು ಹೇಳಿದರು.

ನಾನು ನನಗಾಗಿ ಜೀವನ ಮಾಡುತ್ತಿದ್ದೇನೆ

ಬ್ರಹ್ಮಾಂಡ ಶರ್ಮಾ ಅವರಿಗೆ ಸುದೀಪ್ ಈ ಬಾರಿ ಒಂದು ಪ್ರಶ್ನೆ ಕೇಳಿದರು. ಗುರುಗಳೇ ನೀವು ಸ್ವಾಮೀಜಿಗಳಾಗಿದ್ದುಕೊಂಡು ಹಾಡಿ ಕುಣಿದದ್ದರ ಬಗ್ಗೆ ಯಾರಾದರೂ ಕೇಳಿದರೆ ಏನು ಉತ್ತರ ಕೊಡ್ತೀರಾ? ಇದಕ್ಕೆ ಶರ್ಮಾ ಅವರ ಉತ್ತರ ಹೀಗಿತ್ತು, ನಾನೂ ಇನ್ನೊಬ್ಬರಿಗಾಗಿ ಬದುಕುತ್ತಿಲ್ಲ. ನನಗಾಗಿ ಜೀವನ ಮಾಡ್ತಿದ್ದೀನಿ ಎಂದರು.

English summary
Etv Kannada's big reality show 'Bigg Boss' week end Vaarada Kathe Kichchana Jothe highlights. Vinayak Joshi evicted from the house. The boss made the show more entertaining by organising a special program and by asking inmates to do hilarious acts.
Please Wait while comments are loading...