For Quick Alerts
  ALLOW NOTIFICATIONS  
  For Daily Alerts

  'ಸರಿಗಮಪ 14' ಗ್ರಾಂಡ್ ಫಿನಾಲೆಯ ವಿನ್ನರ್ ಆದ ಬೆಳಗಾವಿಯ ವಿಶ್ವ ಪ್ರಸಾದ್

  By Naveen
  |

  ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಸರಿಗಮಪ ಸೀಸನ್ 14' ಕಾರ್ಯಕ್ರಮದ ಗ್ರಾಂಡ್ ಫಿನಾಲೆ ನಿನ್ನೆ ನಡೆಯಿತು. ಇದರಲ್ಲಿ ಬೆಳಗಾವಿಯ ಹುಡುಗ ವಿಶ್ವ ಪ್ರಸಾದ್ ಮೊದಲ ಸ್ಥಾನವನ್ನು ಪಡೆದಿದ್ದಾರೆ.

  ಸರಿಗಪಮ ಕಾರ್ಯಕ್ರಮದ ಫೈನಲ್ ಗೆ ಐದು ಮಕ್ಕಳು ಆಯ್ಕೆ ಆಗಿದ್ದರು. ಕೀರ್ತನ, ಜ್ಞಾನೇಶ್, ಅಭಿಜಾತ್, ವಿಶ್ವಪ್ರಸಾದ್ ಹಾಗೂ ತೇಜಸ್ ಶಾಸ್ತ್ರಿ ಫೈನಲ್ ನಲ್ಲಿ ಹಾಡು ಹಾಡಿದರು. ಆದರೆ ಈ ಪೈಕಿ ವಿಶ್ವ ಪ್ರಸಾದ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪ್ರತಿ ಸಂಚಿಕೆಯಲ್ಲಿ ಅಮೋಘವಾಗಿ ಹಾಡುತ್ತಿದ್ದ ವಿಶ್ವ ಪ್ರಸಾದ್ ಗ್ರಾಂಡ್ ಫಿನಾಲೆಯಲ್ಲಿಯೂ ತಮ್ಮ ಹಾಡಿನ ಮೂಲಕ ಸಿಕ್ಸರ್ ಬಾರಿಸಿದರು. ಫೈನಲ್ ನಲ್ಲಿ 'ಹಠವಾದಿ' ಚಿತ್ರದ ಒಂದು ಹಾಡು ಹಾಗೂ 'ನಾದಮಯ...' ಹಾಡನ್ನು ವಿಶ್ವ ಪ್ರಸಾದ್ ಹಾಡಿದ್ದರು.

  ವಿಶ್ವಪ್ರಸಾದ್ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನವನ್ನು ಕೀರ್ತನ ಹಾಗೂ ಜ್ಞಾನೇಶ್ ಹಂಚಿಕೊಂಡಿದ್ದಾರೆ. ವಿನ್ನರ್ ಟ್ರೋಫಿಯ ಜೊತೆಗೆ ವಿಶ್ವಪ್ರಸಾದ್ ಐದು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದಿದ್ದಾರೆ.

  ಅಂದಹಾಗೆ, ಸರಿಗಮಪ ಕಾರ್ಯಕ್ರಮದ ಈ ತೀರ್ಪು ಹಂಸಲೇಖ, ವಿಜಯಪ್ರಕಾಶ್, ಅರ್ಜುನ್ ಜನ್ಯ ಈ ಮೂರು ಜನರ ನಿರ್ಧಾರ ಹಾಗೂ ವೀಕ್ಷಕರು ಮಾಡಿದ ವೋಟ್ ಈ ಎರಡರ ಮೇಲೆ ನೀಡಲಾಗಿದೆ.

  English summary
  Vishwaprasad ganagi bags the Zee Kannada channel's popular show 'Sarigamapa Season 14' trophy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X