For Quick Alerts
  ALLOW NOTIFICATIONS  
  For Daily Alerts

  'ವಾಯ್ಸ್ ಇಂಡಿಯಾ ಕಿಡ್ಸ್' ಫೈನಲ್ ಗೆ 'ಬೆಳಗಾವಿ ಬಾಲಕ ವಿಶ್ವ ಪ್ರಸಾದ್'

  |

  ಹಿಂದಿಯ '&-TV' ವಾಹಿನಿ ನಡೆಸಿಕೊಡುವ ಖ್ಯಾತ ಸಿಂಗಿಂಗ್ ರಿಯಾಲಿಟಿ ಶೋ 'ದಿ ವಾಯ್ಸ್ ಇಂಡಿಯಾ ಕಿಡ್ಸ್' ಈಗ ಫೈನಲ್ ಹಂತ ತಲುಪಿದೆ. ದೇಶದ ಸುಮಾರು 54ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಗ 8 ಜನ ಫೈನಲ್ ಗೆ ಲಗ್ಗೆಯಿಟ್ಟಿದ್ದು, ವಿನ್ನರ್ ಯಾರು ಆಗ್ತಾರೆ ಎಂಬ ಕುತೂಹಲ ಹುಟ್ಟಿಕೊಂಡಿದೆ.

  'ದಿ ವಾಯ್ಸ್ ಇಂಡಿಯಾ ಕಿಡ್ಸ್' ಕಾರ್ಯಕ್ರಮ ಕರ್ನಾಟಕದ ಪಾಲಿಗೆ ವಿಶೇಷ ಅಂದ್ರೆ ನಂಬಲೇಬೇಕು. ಅದಕ್ಕೆ ಕಾರಣ ಬೆಳಗಾವಿ ಜಿಲ್ಲೆಯ ಪ್ರತಿಭಾನ್ವಿತ ಬಾಲಕ 'ವಿಶ್ವ ಪ್ರಸಾದ್ ಗಣಗಿ'.

  ಹೌದು, ರಾಷ್ಟ್ರ ಮಟ್ಟದ ಈ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಬೆಳಗಾವಿ ಮೂಲದ ವಿಶ್ವ ಪ್ರಸಾದ್ ಗಣಗಿ ಸ್ವರ್ಧಿಯಾಗಿದ್ದು, ಈಗ ಫೈನಲ್ ತಲುಪಿದ್ದಾನೆ. ತನ್ನ ಅದ್ಬುತ ಕಂಠದ ಮೂಲಕ ತೀರ್ಪುಗಾರರನ್ನ ಮೋಡಿ ಮಾಡಿರುವ ಈ ಬಾಲಕನ ಸಾಧನೆ ಈಗ ದೇಶದ ಮನೆಮಾತಾಗಿದೆ. ಅಷ್ಟಕ್ಕೂ, ಈ ವಿಶ್ವ ಪ್ರಸಾದ್ ಗಣಗಿ ಯಾರು ? 'ದಿ ವಾಯ್ಸ್ ಇಂಡಿಯಾ ಕಿಡ್ಸ್' ಕಾರ್ಯಕ್ರಮದಲ್ಲಿ ಫೈನಲ್ ಪ್ರವೇಶಿಸಿದ್ದು ಹೇಗೆ ಅಂತ ಇಲ್ಲಿದೆ ನೋಡಿ....

  'ದಿ ವಾಯ್ಸ್ ಇಂಡಿಯಾ ಕಿಡ್ಸ್' ನ ಫೈನಲ್ ಸ್ವರ್ಧಿ

  'ದಿ ವಾಯ್ಸ್ ಇಂಡಿಯಾ ಕಿಡ್ಸ್' ನ ಫೈನಲ್ ಸ್ವರ್ಧಿ

  'ದಿ ವಾಯ್ಸ್ ಇಂಡಿಯಾ ಕಿಡ್ಸ್' ನ ರಿಯಾಲಿಟಿ ಶೋ ಫೈನಲ್ ಗೆ ಬೆಳಗಾವಿಯ ವಿಶ್ವ ಪ್ರಸಾದ್ ಗಣಗಿ ಲಗ್ಗೆಯಿಟ್ಟಿದ್ದಾನೆ. ತನ್ನ ವಿಶಿಷ್ಟ ಗಾಯನದ ಮೂಲಕ ಇಡೀ ಕಾರ್ಯಕ್ರಮವನ್ನೆ ಬೆರಗುಗೊಳಿಸಿರುವ ಈ ಬಾಲಕ, ಈಗ ಫೈನಲ್ ಗೆಲ್ಲುವ ಫೆವರೆಟ್.

  ಯಾರು ಈ 'ವಿಶ್ವ ಪ್ರಸಾದ್ ಗಣಗಿ'

  ಯಾರು ಈ 'ವಿಶ್ವ ಪ್ರಸಾದ್ ಗಣಗಿ'

  11 ವರ್ಷ ವಯಸ್ಸಿನ 'ವಿಶ್ವ ಪ್ರಸಾದ್ ಗಣಗಿ' ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಪ್ರತಿಭೆ.

  ಮೂರ್ತಿ ಚಿಕ್ಕದು, ಪ್ರತಿಭೆ ದೊಡ್ಡದು

  ಮೂರ್ತಿ ಚಿಕ್ಕದು, ಪ್ರತಿಭೆ ದೊಡ್ಡದು

  ಹಾಡುವುದೆಂದರೆ 'ವಿಶ್ವ ಪ್ರಸಾದ್ ಗಣಗಿ'ಗೆ ತುಂಬಾ ಇಷ್ಟವಂತೆ. ಗಾಯನ ಈ ಬಾಲಕನ ಹವ್ಯಾಸ. ಹಾಗೆಯೇ ಓದುವುದರಲ್ಲೂ ಈತ ರ್ಯಾಂಕ್ ವಿದ್ಯಾರ್ಥಿ. ವಿಜ್ಞಾನ ವಿಷಯ ಈ ಹುಡುಗನಿಗೆ ಫೆವರೆಟ್ ಅಂತೆ.

  ಹಾಡುವುದು ಇಷ್ಟ, ಆಟವಾಡುವುದು ಇಷ್ಟ

  ಹಾಡುವುದು ಇಷ್ಟ, ಆಟವಾಡುವುದು ಇಷ್ಟ

  ವಿಶ್ವ ಪ್ರಸಾದ್ ಹಾಡುವುದರ ಜೊತೆಗೆ ಕಬ್ಬಡಿ, ಕೋಕೋ, ಆಟಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದಾನೆ. ಪುಸ್ತಕಗಳನ್ನ ಓದುವುದು, ಡ್ರಾಯಿಂಗ್ ಬಿಡಿಸುವುದು, ಹಾಗೂ ಮ್ಯಾಜಿಕ್ ಮಾಡುವ ಕಲೆ ಕೂಡ ವಿಶ್ವ ಪ್ರಸಾದ್ ಗಿದೆ.

  ತಂದೆಯ ಪರಿಶ್ರಮ

  ತಂದೆಯ ಪರಿಶ್ರಮ

  'ವಿಶ್ವ ಪ್ರಸಾದ್ ಗಣಗಿ' ಕಳೆದ ಮೂರು ವರ್ಷಗಳಿಂದ ಕ್ಲಾಸಿಕ್ ಸಂಗೀತ ಕಲಿಯುತ್ತಿದ್ದಾರೆ. ತಮ್ಮ ಮನೆಯಿಂದ ಸುಮಾರು 40 ಕಿಮೀ ದೂರದಲ್ಲಿ ಸಂಗೀತ ತರಗತಿಯಿದ್ದು, ಪ್ರತಿಸಲವೂ ಅವರ ತಂದೆ ಕರೆದುಕೊಂಡು ಹೋಗುತ್ತಿದ್ದರಂತೆ.

  'ಬೆಳಗಾವಿ ಬಾಲಕ'ನ ಸೂಪರ್ ಸಾಧನೆ

  'ಬೆಳಗಾವಿ ಬಾಲಕ'ನ ಸೂಪರ್ ಸಾಧನೆ

  ಹಿನ್ನೆಲೆ ಗಾಯಕಿ ನೀತಿ ಮೋಹನ್ ಅವರ ಟೀಮ್ ನಲ್ಲಿ ಸ್ಥಾನ ಪಡೆದಿದ್ದ ವಿಶ್ವ ಪ್ರಸಾದ್ ಅಂತಿಮ ಘಟ್ಟಕ್ಕೆ ತಲುಪಿದ್ದಾನೆ. ನೀತಿ ಮೋಹನ್ ಟೀಮ್ ನಲ್ಲಿರುವ ನಾಲ್ಕು ಜನ ಮಕ್ಕಳು ಫೈನಲ್ ಗೆ ಪ್ರವೇಶ ಪಡೆದಿದ್ದು, ಅದರಲ್ಲಿ 'ವಿಶ್ವ ಪ್ರಸಾದ್ ಗಣಗಿ' ಕೂಡ ಒಬ್ಬರು.

  ಏಕೈಕ ಹುಡುಗ

  ಏಕೈಕ ಹುಡುಗ

  ಮೆಂಟರ್ ಗಳಾದ ನೀತಿ ಮೋಹನ್, ಶಾನ್ ಹಾಗೂ ಶೇಖರ್ ಅವರ ಮೂರು ಟೀಮ್ ನಿಂದ ಒಟ್ಟು 8 ಮಕ್ಕಳು ಫೈನಲ್ ಗೆ ಎಂಟ್ರಿ ಕೊಟ್ಟಿದ್ದು, ಇವರಲ್ಲಿ 'ವಿಶ್ವ ಪ್ರಸಾದ್ ಗಣಗಿ' ಒಬ್ಬನೆ ಬಾಲಕ ಎನ್ನುವುದು ವಿಶೇಷ.

  ಫೈನಲ್ ವಿನ್ನರ್ ಯಾರು,?

  ಫೈನಲ್ ವಿನ್ನರ್ ಯಾರು,?

  ಅಕ್ಟೋಬರ್ 23ರಂದು 'ದಿ ವಾಯ್ಸ್ ಇಂಡಿಯಾ ಕಿಡ್ಸ್' ನ ಕಾರ್ಯಕ್ರಮದ 'ದಿ ಗ್ರ್ಯಾಂಡ್ ಫಿನಾಲೆ' ನಡೆಯಲಿದ್ದು, ಇದರಲ್ಲಿ ಬೆಳಗಾವಿಯ ಹಮ್ಮೆಯ ಪುತ್ರ 'ವಿಶ್ವ ಪ್ರಸಾದ್ ಗಣಗಿ' ಗೆದ್ದು, ಕರ್ನಾಟಕದ ಕೀರ್ತಿ ಹೆಚ್ಚಿಸಲಿ ಎಂದು ನಾವು ಹಾರೈಸೋಣ.

  English summary
  Vishwaprasad Ganagi is a well known child singer basically belongs from Karnataka. He is best known for his performances in The Voice India Kids, and enter to The Grand Finale of voice india kids'. The Finale is scheduled for 23rd Oct. dont miss to watch it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X