»   » ಪರಮೇಶ್ವರ್ ಗುಂಡ್ಕಲ್ ಗೆ ಬ್ಲಾಕ್ ಮೇಲ್ ಮಾಡಲಾಗಿತ್ತಾ.? ಶತ್ರುಗಳು ಒಳಗೆ ಇದ್ದಾರೆ.!?

ಪರಮೇಶ್ವರ್ ಗುಂಡ್ಕಲ್ ಗೆ ಬ್ಲಾಕ್ ಮೇಲ್ ಮಾಡಲಾಗಿತ್ತಾ.? ಶತ್ರುಗಳು ಒಳಗೆ ಇದ್ದಾರೆ.!?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರುವಾಗುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಕಾರ್ಯಕ್ರಮ ಸದ್ದು ಮಾಡುತ್ತಿರುವಾಗಲೇ, 'ಬಿಗ್ ಬಾಸ್' ಆಯೋಜಕರು ಬೇಡದ ವಿಷಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಆದರು.

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ನಟಿ ಮಾಳವಿಕಾ ಅವಿನಾಶ್ ರವರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸುವ ಸಂದರ್ಭದ ವಿಡಿಯೋ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಾಳವಿಕಾ ಜೊತೆಗಿನ ವಿಡಿಯೋ: 'ಬಿಗ್ ಬಾಸ್' ಡೈರೆಕ್ಟರ್ ಕೊಟ್ಟ ಸ್ಪಷ್ಟನೆ

ಇದೇ ವಿಷಯವಾಗಿ ನಿನ್ನೆ ಸಂಜೆ ನಡೆದ ಪತ್ರಿಕಾಗೋಷ್ಟಿಯಲ್ಲಿ 'ಬಿಗ್ ಬಾಸ್' ನಿರ್ದೇಶಕ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸ್ಪಷ್ಟನೆ ನೀಡಿದರು.

ಮಾಳವಿಕಾ-ಪರಮೇಶ್ವರ್ ಗುಂಡ್ಕಲ್ ವಿಡಿಯೋ ಲೀಕ್ : ಸುದೀಪ್ ಪ್ರತಿಕ್ರಿಯೆ ಹೇಗಿತ್ತು.?

ಪರಮೇಶ್ವರ್ ಗುಂಡ್ಕಲ್ ಪರವಾಗಿ 'ಬಿಗ್ ಬಾಸ್' ಹೋಸ್ಟ್ ಕಿಚ್ಚ ಸುದೀಪ್ ಕೂಡ ಮಾತಿಗಿಳಿದು, ''ಶತ್ರುಗಳು ಹೊರಗೆ ಎಲ್ಲೂ ಇಲ್ಲ, ಪರಮೇಶ್ವರ್ ಗುಂಡ್ಕಲ್ ಹತ್ತಿರವೇ ಇದ್ದಾರೆ. ದುಡ್ಡು ಕೊಟ್ಟರೆ ವಿಡಿಯೋ ಲೀಕ್ ಮಾಡಲ್ಲ'' ಎಂಬ ಫೋನ್ ಕಾಲ್ ಕೂಡ ಬಂದಿದೆ ಎಂಬ ಸಂಗತಿಯನ್ನ ಹೊರಹಾಕಿದರು.

ಹಾಗಾದ್ರೆ, ಪರಮೇಶ್ವರ್ ಗುಂಡ್ಕಲ್ ರವರಿಗೆ ಬ್ಲಾಕ್ ಮೇಲ್ ಮಾಡಲಾಗಿತ್ತಾ.? ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಆಡಿದ ಮಾತುಗಳೇನು.? ಮುಂದೆ ಓದಿರಿ...

ಶತ್ರುಗಳು ಹೊರಗೆ ಇಲ್ಲ

'ಆ ವಿಡಿಯೋ ಹೇಗೆ ಲೀಕ್ ಆಯ್ತು' ಎಂಬ ಪ್ರಶ್ನೆಯನ್ನ ಪತ್ರಕರ್ತರು ಮುಂದಿಟ್ಟಾಗ, ''ಶತ್ರುಗಳು ಹೊರಗೆ ಇಲ್ಲ. ಒಳಗಡೆಯೇ ಇದ್ದಾರೆ. ಪರಮೇಶ್ವರ್ ಗುಂಡ್ಕಲ್ ಅವರಿಗೆ ಶತ್ರುಗಳು ತುಂಬಾ ಹತ್ತಿರ ಇದ್ದಾರೆ'' ಎಂದು ಪತ್ರಿಕಾಗೋಷ್ಟಿಯಲ್ಲಿ ಕಿಚ್ಚ ಸುದೀಪ್ ಹೇಳಿದರು.

ಬುದ್ಧಿವಂತರ ಕೆಲಸ ಇದು

''ಬುದ್ದಿವಂತರು ಎಷ್ಟು ಬೇಕೋ, ಅಷ್ಟನ್ನ ಮಾತ್ರ ಲೀಕ್ ಮಾಡಿದ್ದಾರೆ. ಫುಟೇಜ್ ಬಿಡಬಹುದು ಅಂದ್ರೆ ಫುಲ್ ಬಿಡಬಹುದಿತ್ತು. ಆದ್ರೆ, ಅದರಲ್ಲಿ ಏನೂ ಇಲ್ಲ. ಹೀಗಾಗಿ ಎಷ್ಟು ಬಿಡಬೇಕೋ, ಅಷ್ಟನ್ನ ಮಾತ್ರ ಬಹಳ ಬುದ್ಧಿವಂತಿಕೆಯಿಂದ ಬಿಟ್ಟಿದ್ದಾರೆ'' - ಕಿಚ್ಚ ಸುದೀಪ್

ಬ್ಲಾಕ್ ಮೇಲ್ ಮಾಡಿದ್ದಾರೆ

''ಈ ವಿಡಿಯೋ ಬರ್ತಿದೆ'' ಅಂತ ಪರಮೇಶ್ವರ್ ಗುಂಡ್ಕಲ್ ರವರಿಗೂ ಫೋನ್ ಕಾಲ್ ಬಂದಿದೆ. ''ಇಷ್ಟು ದುಡ್ಡು ಕೊಟ್ಟರೆ ನಾವು ಲೀಕ್ ಮಾಡಲ್ಲ'' ಅಂತ ಹೇಳಿದ್ದರು. ಆದ್ರೆ, ಇವರು ಕೇರ್ ಮಾಡಲಿಲ್ಲ'' - ಕಿಚ್ಚ ಸುದೀಪ್

ಇದು ಒಂದು ಪಾಠ

''ಇದು ಒಂದು ಪಾಠ. ಇದರಿಂದ ಎಲ್ಲರೂ ಕಲಿತಿದ್ದಾರೆ. ಸುಮಾರು 2000 ಜನ 'ಬಿಗ್ ಬಾಸ್'ಗಾಗಿ ಕೆಲಸ ಮಾಡುತ್ತಾರೆ. ಅದರಲ್ಲಿ ಕಂಟ್ರೋಲ್ ರೂಮ್ ಒಳಗೆ ಬಹಳ ಕಮ್ಮಿ ಜನ ಇರ್ತಾರೆ'' - ಕಿಚ್ಚ ಸುದೀಪ್

ಇದು ಒರಿಜಿನಲ್ ಫುಟೇಜ್

''ಈ ಫುಟೇಜ್ ನೋಡಿದರೆ, ಕ್ಯಾಮರಾ ಸ್ಟೆಡಿ ಆಗಿದೆ. ಹೀಗಾಗಿ ಇದು ಒರಿಜಿನಲ್ ಫುಟೇಜ್. ಕೆಲಸ ಮಾಡುವ ಒಳಗಿನವರಿಗಲ್ಲದೆ, ಬೇರೆಯವರಿಗೆ ಒರಿಜಿನಲ್ ಫುಟೇಜ್ ಸಿಗುವುದಿಲ್ಲ'' - ಕಿಚ್ಚ ಸುದೀಪ್

ಲೀಕ್ ಮಾಡಿದವರಾರು ಎಂದು ಸದ್ಯದಲ್ಲೇ ಗೊತ್ತಾಗುತ್ತೆ

''ಖಂಡಿತ ಒಳಗಿನವರೇ ಈ ಕೆಲಸ ಮಾಡಿರುವುದು. ಅದು ಯಾರು ಅಂತ ಒಂದು ದಿನ ಗೊತ್ತಾಗುತ್ತೆ. ಹೆಸರು ಹೊರಗೆ ಬರುತ್ತದೆ'' - ಕಿಚ್ಚ ಸುದೀಪ್

English summary
Was Parameshwar Gundkal blackmailed for his video with Malavika Avinash.? Read Kiccha Sudeep's reaction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X