»   » ಜೀ ಕನ್ನಡದಲ್ಲಿ 'ವೆಂಕಟ'ನ ಹುಚ್ಚಾವತಾರ

ಜೀ ಕನ್ನಡದಲ್ಲಿ 'ವೆಂಕಟ'ನ ಹುಚ್ಚಾವತಾರ

Posted By:
Subscribe to Filmibeat Kannada

ಬರೀ 'ಹುಚ್ಚು'ತನದಿಂದಲೇ ಆಗಾಗ ಸುದ್ದಿ ಮಾಡುತ್ತಿದ್ದ 'ಹುಚ್ಚ ವೆಂಕಟ್' ಜೀ ಕನ್ನಡ ವಾಹಿನಿಯ ಜನಪ್ರಿಯ ಗೇಮ್ ಶೋ 'ಡಿವೈಡೆಡ್'ನಲ್ಲಿ ಪಾಲ್ಗೊಂಡಿದ್ದರು. 'ವೆಂಕಟ್' ತಲೆಯಲ್ಲಿ 'ರಮ್ಯಾ' ಬಿಟ್ಟರೆ ಬೇರೇನಿಲ್ಲ ಅನ್ನುತ್ತಿದ್ದ ಮಂದಿಗೆ, ವೆಂಕಟ್ ಕೊಟ್ಟ ಕೆಲ ಸರಿಯಾದ ಉತ್ತರಗಳು ಕಣ್ಣರಳಿಸಿತು.

ಹಾಗೆ ನೋಡಿದರೆ, ನಟಿ ಹರ್ಷಿಕಾ ಪೂಣಚ್ಚ ಮತ್ತು ರಿಷಿಕಾ (ರೋಹಿಣಿ) ಸಿಂಗ್ ಗಿಂತ ಹೆಚ್ಚು ಸರಿಯಾದ ಉತ್ತರಗಳನ್ನ ನೀಡಿದ್ದು ಇದೇ 'ಹುಚ್ಚ ವೆಂಕಟ್'. ಅಲ್ಲಿಗೆ ವೆಂಕಟ್ 'ಬುದ್ದಿವಂತ' ಅಂತ ಅಂದುಕೊಂಡವರು ನಿಟ್ಟುಸಿರು ಬಿಡುವಂತಿರಲಿಲ್ಲ. ಯಾಕಂದ್ರೆ, ಇಡೀ ಕಾರ್ಯಕ್ರಮದಲ್ಲಿ ಮುಖವನ್ನ ಗಂಟು ಹಾಕಿಕೊಂಡೇ ಇದ್ದ 'ಹುಚ್ಚ ವೆಂಕಟ್' ಆಗೊಮ್ಮೆ ಈಗೊಮ್ಮೆ ರೌದ್ರಾವತಾರ ಮೆರೆದರು.

Watch Divided Reality show: Venkat's mad act

ಸೆಂಟ್ರಲ್ಲಿ ಆಗಾಗ 'ಹುಚ್ಚ ವೆಂಕಟ್' ನೀಡ್ತಿದ್ದ ಶಾಕ್ ಟ್ರೀಟ್ ಮೆಂಟ್ ಗೆ ಹರ್ಷಿಕಾ ಮತ್ತು ರಿಷಿಕಾ ಬೆಚ್ಚಿ ಬಿದ್ದುಬಿಟ್ಟರು. ಕಾರ್ಯಕ್ರಮದ ಆರಂಭದಲ್ಲೇ ಪ್ರೀತಿ ಬಗ್ಗೆ ವ್ಯಾಖ್ಯಾನ ಶುರುಮಾಡಿದ 'ಹುಚ್ಚ ವೆಂಕಟ್' ಭಗ್ನ ಪ್ರೇಮಿಯಂತೆ ನುಡಿಮುತ್ತುಗಳನ್ನ ಉದುರಿಸಿದ್ದು ಹೀಗೆ...

''ಕಾಲೇಜ್ ನಲ್ಲಿ ಓದುವಾಗ ನಂದಕುಮಾರ್ ಸರ್ ಅಂತ ಲೆಕ್ಚರರ್ ಒಬ್ಬರು ಇದ್ರು. ಹಾರ್ಟ್ ನಲ್ಲಿ ರೈಟ್ ಏಟ್ರಿಯಂ, ಲೆಫ್ಟ್ ಏಟ್ರಿಯಂ, ರೈಟ್ ವೆಂಟ್ರಿಕಲ್, ಲೆಫ್ಟ್ ವೆಂಟ್ರಿಕಲ್ ಇರುತ್ತೆ ಅಂತ ಹೇಳಿಕೊಟ್ಟಿದ್ದರು. ಆದರೆ ಹೃದಯ ಅಳುತ್ತೆ, ನಗುತ್ತೆ ಅಂತ ಹೇಳುವುದನ್ನೇ ಮರೆತುಬಿಟ್ಟಿದ್ದರು.''

Watch Divided Reality show: Venkat's mad act2

''ಪ್ರೀತಿಯಿಂದ ಹೃದಯ ಭಾರವಾಗುತ್ತೆ ಅಂತ ಅವರು ನನಗೆ ಹೇಳಿಕೊಟ್ಟಿದ್ದರೆ, ನನ್ನ ತಂದೆ ಮೇಲಾಣೆ ನಾನು ಪ್ರೀತಿಸುತ್ತಲೇ ಇರುತ್ತಿರಲಿಲ್ಲ. ಎಲ್ಲರಿಗೂ ತಮಗೆ ಹೃದಯ ಇದೆ ಅಂತ ಗೊತ್ತಾಗುವುದೇ ಪ್ರೀತಿ ಮಾಡಿದ ಮೇಲೆ'' ಅಂತ ಲಕ್ಕಿ ಸ್ಟಾರ್ ರಮ್ಯಾ ಮೇಲಿನ ಪ್ರೀತಿ ಬಗ್ಗೆ ವೆಂಕಟ್ ಆಡಿದ ಮಾತುಗಳು ಇವು. [ರಿಯಾಲಿಟಿ ಶೋ ನಿರೂಪಕರಾಗಿ ಆರ್ ಜೆ ರೋಹಿತ್]

ಹಾಗಂತ ಅವರನ್ನ ನೀವು ಇನ್ಮೇಲೆ ಭಗ್ನ ಪ್ರೇಮಿ ಅಂತ ಕರೆದರೆ ಜೋಕೆ. ಯಾಕಂದ್ರೆ, ಹೊಸ ವರ್ಷ (ಜನವರಿ 1) ರಿಂದ 'ಹುಚ್ಚ ವೆಂಕಟ್' ಬ್ಯಾಚುಲರ್! ''ಬಿಟ್ಟುಕೊಟ್ಬಿಟ್ಟೆ ಕಣ್ರೀ...''ಅಂತ ತ್ಯಾಗಮಯಿ ರೇಂಜಲ್ಲಿ ಡೈಲಾಗ್ ಹೊಡೆದ 'ಹುಚ್ಚ ವೆಂಕಟ್', ''ಪ್ರೀತಿ ಮಾಡೋಕೆ ಶುರುಮಾಡಿದಾಗಿನಿಂದ, ನಾನು ನೆಮ್ಮದಿಯಿಂದ ಮಲಗುತ್ತಿರುವುದು ಎಣ್ಣೆ ಹಾಕಿದ ಮೇಲೆ''.

Watch Divided Reality show: Venkat's mad act3

''ನನ್ನ ತಂದೆ ಹಾಗೂ ರಮ್ಯಾ ಗೋಸ್ಕರ ನಾನು ಚಿತ್ರವನ್ನ ಮಾಡಿದ್ದು. ರಮ್ಯಾ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ 'ಹುಚ್ಚ ವೆಂಕಟ್' ಚಿತ್ರವನ್ನ ರಿಲೀಸ್ ಮಾಡ್ದೆ. ಜಾಸ್ತಿ ಕುಡಿಯುತ್ತಿರುವುದರಿಂದ ನನ್ನ ಲಿವರ್ ಡ್ಯಾಮೇಜ್ ಆಗ್ತಿದೆ. ಇನ್ಮೇಲೆ ನಾನು ಬ್ಯಾಚುಲರ್. ನಾನ್ನಿನ್ನು ಮುಂದೆ ಸಂತೋಷವಾಗಿರುತ್ತೀನಿ'' ಅಂತ ಹೇಳಿದರು.

''ರಮ್ಯಾ ನನ್ನ ಹೆಂಡತಿ. ಇದನ್ನ ರಮ್ಯಾ ಒಪ್ಪಿಕೊಳ್ಳುವವರೆಗೂ ನಾನು ಬಿಡುವುದಿಲ್ಲ'' ಅಂತ ಹೇಳುತ್ತಿದ್ದ ಹುಚ್ಚ ವೆಂಕಟ್, ಇದೀಗ ಏಕ್ದಂ ರಿವರ್ಸ್ ಗೇರ್ ಗೆ ಹೋಗಿರುವುದಕ್ಕೆ ಕಾರಣವೇನು ಅನ್ನುವುದು ಆ ವೆಂಕಟೇಶ್ವರನೇ ಬಲ್ಲ.

Watch Divided Reality show: Venkat's mad act6

ಗೋಲ್ಡನ್ ಕ್ವೀನ್ ರಮ್ಯಾ ಟಾಪಿಕ್ ಬಿಟ್ಟಾಯ್ತು. ಆದ್ರೆ, 'ಹುಚ್ಚ ವೆಂಕಟ್' ತನ್ನ ಸೋಲನ್ನ ಒಪ್ಪಿಕೊಳ್ಳುತ್ತಾನಾ? ಖಂಡಿತ ಇಲ್ಲ! ಐಟಂ ಸಾಂಗ್ ಬ್ಯಾನ್ ಆಗ್ಬೇಕು ಅಂತ ಹುಚ್ಚ ವೆಂಕಟ್ ಗುಡುಗುವುದಕ್ಕೆ ಶುರುಮಾಡಿದ್ದೇ ತಡ, 'ಡಿವೈಡೆಡ್' ವೇದಿಕೆ ಅಲ್ಲಾಡಿ ಹೋಯ್ತು. [ವೆಂಕಟನ 'ಹುಚ್ಚಾ'ಟಕ್ಕೆ ದಿಗಿಲು ಬಿದ್ದ ಹರ್ಷಿಕಾ-ರಿಷಿಕಾ]

ಒಂದು ಸಿನಿಮಾ ಸೋತರೂ ವಾಸ್ತವವನ್ನ ಅರಿಯದ ಈ ವೆಂಕಟ್, ಸದ್ಯದಲ್ಲೇ ಮತ್ತೊಂದು ಚಿತ್ರವನ್ನ ಮಾಡ್ತಾರಂತೆ. ತಂದೆಗಾಗಿ ಚಿತ್ರವನ್ನ ನಿರ್ದೇಶಿಸಿ, ನಟಿಸುವ ವೆಂಕಟ್, ಬೆಳ್ಳಿಪರದೆ ಮೇಲೆ ರಿಲೀಸ್ ಮಾಡದಿದ್ದರೂ, ಸ್ಯಾಟೆಲೈಟ್ ಮುಖಾಂತರ ಟಿವಿಯಲ್ಲಿ ಬಿಡುಗಡೆ ಮಾಡುತ್ತಾರಂತೆ.

Watch Divided Reality show: Venkat's mad act

ಒಂದು ವೇಳೆ ಯಾರೂ ಕೊಂಡುಕೊಳ್ಳದೇ ಇದ್ದರೆ, ಯೂಟ್ಯೂಬ್ ನಲ್ಲಿ ಹಾಕ್ತಾರಂತೆ. ಇಷ್ಟೇ ಅಲ್ಲ. ವೆಂಕಟ್ ಗೆ ಯಾರ್ಯಾರು ತೊಂದರೆ ಕೊಟ್ಟಿದ್ದಾರೋ, ಅವರಿಗೆಲ್ಲಾ, ''ಕೌಂಟ್ ಯುವರ್ ಡೇಸ್'' ಅಂತ ಥೇಟ್ ಸೂಪರ್ ಸ್ಟಾರ್ ಥರ ಎಚ್ಚರಿಕೆ ಗಂಟೆ ನೀಡಿದ್ದಾರೆ. [ಹೊಸ ಹುಚ್ಚು ವೆಂಕ್ಟನ ವಿಡಿಯೋ ಸಖತ್ ಬೊಂಬಾಟ್!]

ಇದರಿಂದ ಅದೆಷ್ಟು ಜನ ಬೆವತು ನೀರಾದರೋ ಗೊತ್ತಿಲ್ಲ. ಆದ್ರೆ ಪಕ್ಕದಲ್ಲೇ ಇದ್ದ ಹರ್ಷಿಕಾ ಪೂಣಚ್ಚ ಮತ್ತು ರಿಷಿಕಾ ಮಾತ್ರ 'ವೆಂಕಟನ ಹುಚ್ಚಾಟ ಎಲ್ಲಿ ಜಾಸ್ತಿ ಆಗುತ್ತೋ' ಅಂತ ಜೀವವನ್ನ ಕೈಯಲ್ಲೇ ಹಿಡಿದುಕೊಂಡಿದ್ದರು.

ಆಟದ ಟೆನ್ಷನ್ ಮಧ್ಯೆ ಪ್ರೇಕ್ಷಕರು ರಿಲ್ಯಾಕ್ಸ್ ಆಗುವಂತಿದ್ದ ವೆಂಕಟನ 'ಹುಚ್ಚಾಟ'ದ ಜೊತೆ ಇಡೀ ಕಾರ್ಯಕ್ರಮ ಅಷ್ಟೇ ಮನರಂಜನೆ ನೀಡಿತು. ಸಣ್ಣ-ಪುಟ್ಟ ಕನ್ಫ್ಯೂಷನ್ ನಿಂದ ಕೈಲಿದ್ದ ಲಕ್ಷ ಲಕ್ಷ ಹಣವನ್ನ ಕೊನೆಯ ಪ್ರಶ್ನೆಯಲ್ಲಿ 'ವೆಂಕಟ'ನ ಹುಂಡಿಗೆ ಮೂವರು ಸ್ಪರ್ಧಿಗಳು ಅರ್ಪಿಸಿದರು. ಅಲ್ಲಿಗೆ ಚಾನೆಲ್ ಗೆ ಒಳ್ಳೆ ಟಿ.ಆರ್.ಪಿ ಬಂತು. ಆದ್ರೆ ಮೂವರಿಗೆ ಸಿಕ್ಕಿದ್ದೇನು..? ಬರೀ ಖಾಲಿ ಚೊಂಬು..!

English summary
Huccha Venkat along with Harshika Poonacha and Rishika Singh took part in Zee Kannada's Divided Reality show, where Harshika and Rishika got frightened looking at Venkat's mad act. Here, Venkat spoke about his love life again. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada