»   » ಇದೇ ಭಾನುವಾರ ಉದಯ ಟಿವಿಯಲ್ಲಿ ಮೊಟ್ಟಮೊದಲ ಬಾರಿಗೆ 'ಅಪೂರ್ವ'

ಇದೇ ಭಾನುವಾರ ಉದಯ ಟಿವಿಯಲ್ಲಿ ಮೊಟ್ಟಮೊದಲ ಬಾರಿಗೆ 'ಅಪೂರ್ವ'

Posted By:
Subscribe to Filmibeat Kannada

ಕನ್ನಡದ ಹೆಮ್ಮೆಯ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಪ್ರಯೋಗಾತ್ಮಕ ಚಲನಚಿತ್ರ 'ಅಪೂರ್ವ' ಇದೇ ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಸ್ಯಾಂಡಲ್ ವುಡ್ ಮಟ್ಟಿಗೆ 'ಅಪೂರ್ವ' ಪ್ರಯೋಗಾತ್ಮಕ ಹಾಗೂ ಭಾವನಾತ್ಮಕ ಚಲನಚಿತ್ರ. ವಿಭಿನ್ನ ವಯಸ್ಕರ ಪ್ರೀತಿ-ಪ್ರೇಮ ಹಾಗೂ ಮನಃಸ್ಥಿತಿಯನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ.

Watch Kannada Movie 'Apoorva' in Udaya TV on Sunday at 6 pm

ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ

'ಅಪೂರ್ವ' ಚಿತ್ರದಲ್ಲಿ ನಾಯಕ ರವಿಚಂದ್ರನ್ 61 ವರ್ಷದ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಾಯಕಿ ಅಪೂರ್ವ 19 ವರ್ಷದ ಯುವತಿಯ ಪಾತ್ರದಲ್ಲಿ ಮಿಂಚಿದ್ದಾರೆ. ಒಂದು ಮಾಲ್ ನ ಲಿಫ್ಟ್ ನಲ್ಲಿ ಸಿಕ್ಕಿಬೀಳುವ ಇವರಿಬ್ಬರ ನಡುವೆ ವಯಸ್ಸಿನ ಅಂತರ ಮೀರಿ ಹುಟ್ಟುವ ಪ್ರೀತಿಯೇ ಚಿತ್ರದ ಕಥಾಹಂದರ.

ಈ ಚಿತ್ರದಲ್ಲಿ ಸುದೀಪ್, ಪ್ರಕಾಶ್ ರಾಜ್ ಹಾಗೂ ರವಿ ಶಂಕರ್ ಅತಿಥಿ ನಟರಾಗಿ ಕಾಣಿಸಿಕೊಂಡಿರುವುದು ವಿಶೇಷ. ಚಿತ್ರದ ಹಾಡುಗಳನ್ನು ಸ್ವತಃ ರವಿಚಂದ್ರನ್ ಅವರೇ ರಚಿಸಿದ್ದಾರೆ.

ವಯಸ್ಕ ನಾಯಕ ಹಾಗೂ ಹದಿಹರೆಯದ 19ರ ಪೋರಿ ನಡುವೆ ವಾಸ್ತವದಲ್ಲಿ ಹುಟ್ಟಲಾಗದ ಪ್ರೇಮವನ್ನು ತೆರೆಯ ಮೇಲೆ ಅದ್ಭುತವಾಗಿ ಚಿತ್ರಿಸಿರುವ ಪ್ರೇಮಕಾವ್ಯ "ಅಪೂರ್ವ". ಈ ಚಲನಚಿತ್ರ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಇದೇ ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಥಿಯೇಟರ್ ನಲ್ಲಿ 'ಅಪೂರ್ವ' ಚಿತ್ರವನ್ನ ನೀವು ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡಿಕೊಳ್ಳಬೇಡಿ.

English summary
Watch Kannada Movie 'Apoorva' in Udaya TV on Sunday (10th September) at 6 pm

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada