»   » ವಾರಾಂತ್ಯದಲ್ಲಿ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಕಾಲೇಜ್ ಕುಮಾರ್'!

ವಾರಾಂತ್ಯದಲ್ಲಿ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಕಾಲೇಜ್ ಕುಮಾರ್'!

Posted By:
Subscribe to Filmibeat Kannada

ಇದೇ ಶನಿವಾರ (ಜನವರಿ 27) ಸಂಜೆ 6 ಗಂಟೆಗೆ ಸೂಪರ್ ಹಿಟ್ ಕನ್ನಡ ಸಿನಿಮಾ 'ಕಾಲೇಜ್ ಕುಮಾರ್' ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

ವಿಕ್ಕಿ ವರುಣ್ ಹೀರೋ ಆಗಿ ಹಾಗೂ 'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತ ಹೆಗಡೆ ಹೀರೋಯಿನ್ ಆಗಿ ಅಭಿನಯಿಸಿರುವ 'ಕಾಲೇಜ್ ಕುಮಾರ್' ಚಿತ್ರವು 2017ರಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಸಂಪೂರ್ಣ ಹೊಸತನದಿಂದ ಕೂಡಿದ್ದ ಈ ಚಿತ್ರವನ್ನ ಕನ್ನಡ ಸಿನಿ ಪ್ರೇಕ್ಷಕರು ಒಪ್ಪಿಕೊಂಡು, ಅಪ್ಪಿಕೊಂಡಿದ್ದರು. ಜೊತೆಗೆ, ವಿಮರ್ಶಕರಿಂದಲೂ ಪ್ರಶಂಸೆ ಪಡೆದಿತ್ತು.

ಚಿತ್ರದಲ್ಲಿ ಶಿವು (ರವಿಶಂಕರ್) ದೊಡ್ಡ ಹುದ್ದೆ ಪಡೆಯಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ ಆತನ ಶಾಲಾ ಗೆಳೆಯನಿಗೆ ಒಂದು ಕಂಪೆನಿಯಲ್ಲಿ ಆಡಿಟರ್ ಕೆಲಸ ಸಿಕ್ಕರೆ, ಶಿವುಗೆ ಅದೇ ಕಂಪೆನಿಯಲ್ಲಿ ಕ್ಲರ್ಕ್ ಕೆಲಸವಷ್ಟೆ ಸಿಗುತ್ತದೆ. ಹೀಗಾಗಿ ಇಬ್ಬರೂ ಒಬ್ಬರನ್ನೊಬ್ಬರು ದ್ವೇಷಿಸಲು ಆರಂಭಿಸುತ್ತಾರೆ. ಅಲ್ಲದೆ ರವಿಶಂಕರ್ (ಶಿವು) ತನ್ನ ಮಗ ವಿಕ್ಕಿ ವರುಣ್‍ ನ (ಕುಮಾರ್) ಗೆಳೆಯನಂತೆ ದೊಡ್ಡ ಆಡಿಟರ್ ಮಾಡುವ ಆಸೆ ಹೊಂದಿರುತ್ತಾರೆ. ಆದರೆ ಮಗ ಕಾಲೇಜಿನಲ್ಲಿ ಅದಕ್ಕೆ ತದ್ವಿರುದ್ಧವಾಗಿ ಬೆಳೆಯುತ್ತಾನೆ. ಕೊನೆಯಲ್ಲಿ ಮಗ ಕುಮಾರ ತಂದೆಯ ಆಸೆಯನ್ನು ಈಡೇರಿಸುತ್ತಾನಾ? ಇಲ್ಲವಾ..? ಎಂಬುದು ಈ ಚಿತ್ರದ ಕಥಾ ಹಂದರ.

ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

Watch Kannada Movie 'College Kumar' in Udaya TV on Jan 27th, 6 pm

ಚಿತ್ರದಲ್ಲಿ ತಂದೆಯ ಪಾತ್ರವನ್ನು ನಿರ್ವಹಿಸಿರುವ ರವಿಶಂಕರ್ ತಮ್ಮ ಅಮೋಘ ನಟನೆಯ ಮೂಲಕ ಇಡೀ ಚಿತ್ರವನ್ನು ಆಕ್ರಮಿಸಿಕೊಂಡಿದ್ದಾರೆ. 'ಕೆಂಡಸಂಪಿಗೆ' ನಂತರ ಮತ್ತೆ ದೊಡ್ಡ ಪರದೆಗೆ ಮರಳಿರುವ ವಿಕ್ಕಿ ವರುಣ್ ಈ ಚಿತ್ರದಲ್ಲಿ ತಮ್ಮ ಅಭಿನಯವನ್ನು ಮತ್ತಷ್ಟು ಸುಧಾರಿಸಿಕೊಂಡಿದ್ದಾರೆ. ಇನ್ನೂ ನಿರ್ದೇಶಕ ಸಂತು ಸಾಮಾನ್ಯವಾದ ಕಥೆಗೆ ಅತ್ಯುತ್ತಮವಾದ ಚಿತ್ರಕಥೆಯನ್ನು ಸಿದ್ದಪಡಿಸಿದ್ದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರೆ, ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳೂ ಮನಮುಟ್ಟುವಂತಿದೆ.

ಒಟ್ಟಿನಲ್ಲಿ ಕಳೆದ ವರ್ಷ ಬಿಡುಗಡೆಯಾಗಿ ಅತ್ಯುತ್ತಮ ಕೌಟುಂಬಿಕ ಚಿತ್ರವಾಗಿ ಕನ್ನಡ ಸಿನಿ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದ್ದ 'ಕಾಲೇಜ್ ಕುಮಾರ' ಇದೇ ಶನಿವಾರ (27.01.2018) ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

English summary
Watch Kannada Movie 'College Kumar' in Udaya TV on Jan 27th, 6 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada