»   » ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಶರಣ್ 'ಸತ್ಯ ಹರಿಶ್ಚಂದ್ರ'

ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಶರಣ್ 'ಸತ್ಯ ಹರಿಶ್ಚಂದ್ರ'

Posted By:
Subscribe to Filmibeat Kannada

'ಸತ್ಯ ಹರಿಶ್ಚಂದ್ರ'... ಕಳೆದ ವರ್ಷ ಅಕ್ಟೋಬರ್ 20 ರಂದು ಬಿಡುಗಡೆಯಾದ ಚಿತ್ರ. ನಟ ಶರಣ್, ಸಂಚಿತಾ ಪಡುಕೋಣೆ ಮತ್ತು ಭಾವನಾ ರಾವ್ ನಟಿಸಿರುವ ಈ ಚಲನಚಿತ್ರವನ್ನು ಕೆ.ಮಂಜು ಬ್ಯಾನರ್ ಅಡಿಯಲ್ಲಿ ದಯಾಳ್ ಆಕ್ಷನ್ ಕಟ್ ಹೇಳಿದ್ದರು.

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಹಾಸ್ಯಭರಿತ 'ಸತ್ಯಹರಿಶ್ಚಂದ್ರ' ಇದೇ ಭಾನುವಾರ (11.02.2018) ಸಂಜೆ 6ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಸುಳ್ಳನ್ನೇ ತನ್ನ ಜೀವನದ ಕಸುಬಾಗಿ ಇಟ್ಟುಕೊಂಡು ಅದರಿಂದಲೇ ತನ್ನ ಜೀವನೋಪಾಯ ಮಾಡುತ್ತಿರುವ ಶರಣ್, ಆ ಸುಳ್ಳಿನಿಂದ ಹೇಗೆ ತೊಂದರೆಯಲ್ಲಿ ಸಿಲುಕಿ ಕೊಳ್ಳುತ್ತಾನೆ? ಹಾಗೆ ಹುಡುಗಿಯನ್ನು ಗೆಲ್ಲಲು ಹೇಗೆ ಹೋರಾಟ ಮಾಡುತ್ತಾನೆ ಎಂಬುದೇ ಈ ಚಿತ್ರದ ಕಥೆ.

Watch Kannada Movie 'Satya Harishchandra' in Udaya TV on Feb 11th, 6 pm

ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ. ದಯಾಳ್ ಹಾಸ್ಯಭರಿತ ಕಥೆಯನ್ನು ಬರೆದಿದ್ದಾರೆ. ಹಾಗೆ ಶರಣ್ ಚಿತ್ರದ ಉದ್ದಗಲಕ್ಕೂ ತಮ್ಮ ನಟನೆ ಮತ್ತು ಸಂಭಾಷಣೆಯನ್ನು ಹೇಳುತ್ತಾ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಇನ್ನು ಭಾವನಾ ಮತ್ತು ಸಂಚಿತಾ ತಮ್ಮ ನೈಜವಾದ ಅಭಿನಯದಿಂದ ಎಲ್ಲರ ಮನಸೆಳೆಯುತ್ತಾರೆ.

ಒಟ್ಟಾರೆ 'ಸತ್ಯ ಹರಿಶ್ಚಂದ್ರ' ಆಕ್ಷನ್ ಮತ್ತು ಹಾಸ್ಯಮಯವಾಗಿದ್ದು ಎಲ್ಲರನ್ನು ರಂಜಿಸುವುದು ಖಂಡಿತ. ಕನ್ನಡದ ಟೆಲಿವಿಷನ್ ನಲ್ಲಿ ಪ್ರಪ್ರಥಮ ಬಾರಿಗೆ 'ಸತ್ಯಹರಿಶ್ಚಂದ್ರ' ಉದಯ ಟಿವಿಯಲ್ಲಿ ಇದೇ ಭಾನುವಾರ (11.02.2018) ಸಂಜೆ 6ಕ್ಕೆ ಪ್ರಸಾರವಾಗಲಿದೆ.

English summary
Watch Kannada Movie 'Satya Harishchandra' in Udaya TV on Feb 11th, 6 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada