»   » ಇಂದು 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ 'ಆರ್ಮುಗಂ' ರವಿಶಂಕರ್ ಆರ್ಭಟ.!

ಇಂದು 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ 'ಆರ್ಮುಗಂ' ರವಿಶಂಕರ್ ಆರ್ಭಟ.!

Posted By:
Subscribe to Filmibeat Kannada

ಶನಿವಾರ-ಭಾನುವಾರ ರಾತ್ರಿ 9 ಗಂಟೆ ಆಯ್ತು ಅಂದ್ರೆ ಸಾಕು...ಕರುನಾಡಿನ ಜನತೆ ತಪ್ಪದೆ ಟಿವಿ ಮುಂದೆ ಬಂದು ಕೂರುತ್ತಾರೆ. ಎಷ್ಟೇ ದಣಿದಿದ್ದರೂ, 'ಜೀ ಕನ್ನಡ' ವಾಹಿನಿ ಟ್ಯೂನ್ ಮಾಡುತ್ತಾರೆ. ಯಾಕಂದ್ರೆ, 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿನ ಮುದ್ದು ಮಕ್ಕಳ ಕಲರವ ಹಾಗಿರುತ್ತೆ.!

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನಿಂದ ಜೀ ಕನ್ನಡ ವಾಹಿನಿ ಟಿ.ಆರ್.ಪಿಯಲ್ಲಿ 'ಕಿಂಗ್' ಆಗ್ಬಿಟ್ಟಿದೆ. ವಾರದಿಂದ ವಾರಕ್ಕೆ 'ಡ್ರಾಮಾ ಜ್ಯೂನಿಯರ್ಸ್' ನೋಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಭಾವಂತ ಪುಟಾಣಿಗಳ 'ಡ್ರಾಮಾ' ನೋಡಿ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. [ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

ಅಂದ್ಹಾಗೆ, 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ನಟ ರವಿಶಂಕರ್ ವಿಶೇಷ ಅತಿಥಿಯಾಗಿ ಭಾಗವಹಿಸಿರುವುದು ಈ ವಾರದ ಸ್ಪೆಷಾಲಿಟಿ.

watch-promo-ravishankar-special-guest-in-zee-kannada-s-drama-juniors

ರವಿಶಂಕರ್ ರವರ ಫೇಮಸ್ 'ಆರ್ಮುಗಂ ಕೋಟೆ' ಡೈಲಾಗ್ ಹೊಡೆದು ಸೆಲೆಕ್ಟ್ ಆಗಿದ್ದ 'ಪುಟಾಣಿ ಪಂಟ' ನಿಹಾಲ್ ಸಾಗರ್ ವಿಷ್ಣು, ಈ ವಾರ ರವಿಶಂಕರ್ ಜೊತೆ ನಡೆಸಿರುವ ಜುಗಲ್ಬಂದಿ ಸೂಪರ್ ಆಗಿದೆ. ಆ ವಿಡಿಯೋ ನೋಡ್ಕೊಂಡ್ ಬನ್ನಿ...

ಇನ್ನೂ ಇಡೀ 'ಡ್ರಾಮಾ ಜ್ಯೂನಿಯರ್ಸ್' ವೇದಿಕೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನ 'ರಸಗುಲ್ಲ' ಅಚಿಂತ್ಯ, ರೇ(ಲೇ)ವತಿ ಹಾಗೂ 'ಚಿನಕುರಳಿ ಪಟಾಕಿ' ನಿಹಾಲ್ ಸಾಗರ್ ವಿಷ್ಣು ಮಾಡಿರುವ 'ಡ್ರಾಮಾ' ಝಲಕ್ ಇಲ್ಲಿದೆ ನೋಡಿ.....

ಇಂದಿನ 'ಡ್ರಾಮಾ ಜ್ಯೂನಿಯರ್ಸ್' ಸಂಚಿಕೆ ಮಿಸ್ ಮಾಡದೆ ನೋಡ್ತೀರಾ ತಾನೇ.?

English summary
Kannada Actor Ravishankar has taken part as Special Guest in Popular Kannada Channel Zee Kannada's 'Drama Juniors' reality show. Watch the promo here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada