»   » ಪ್ರೋಮೋ: ಸಂತೋಷ್ ಹೆಗ್ಡೆ ಮಾತು ಕೇಳಿ ತಲೆ ತಿರುಗಿ ಬಿದ್ದೀರಿ ಜೋಕೆ.!

ಪ್ರೋಮೋ: ಸಂತೋಷ್ ಹೆಗ್ಡೆ ಮಾತು ಕೇಳಿ ತಲೆ ತಿರುಗಿ ಬಿದ್ದೀರಿ ಜೋಕೆ.!

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾಗವಹಿಸಿದ್ದಾರೆ.

ಸಮಾಜದ ಕೊಳಕು ವ್ಯವಸ್ಥೆಯನ್ನ ಬದಲಾಯಿಸವಲ್ಲಿ, ಭ್ರಷ್ಟಚಾರವನ್ನ ತೊಳೆಯುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ ಸಂತೋಷ್ ಹೆಗ್ಡೆ ರವರ ಯಶೋಗಾಥೆ ಈ 'ವೀಕೆಂಡ್'ನಲ್ಲಿ ಪ್ರಸಾರ ಆಗಲಿದೆ.[ಈ 'ವೀಕೆಂಡ್' ವಿಶೇಷ: ಸಾಧಕರ ಸೀಟ್ ನಲ್ಲಿ ಸಂತೋಷ್ ಹೆಗ್ಡೆ.!]

ಭಾರತದಲ್ಲಿ ಅತಿ ಹೆಚ್ಚು ಸುದ್ದಿ ಮಾಡಿ, ಕುಖ್ಯಾತಿ ಪಡೆದ ಕೆಲ ಹಗರಣಗಳ ಕುರಿತು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಮಾತನಾಡಿದ್ದಾರೆ. ಮುಂದೆ ಓದಿರಿ...

ತಲೆ ತಿರುಗಿ ಬಿದ್ದೀರಿ ಜೋಕೆ

''ಜೀಪ್ ಹಗರಣದಲ್ಲಿ 52 ಲಕ್ಷ ನಷ್ಟವಾಗಿದೆ. ಬೋಫೋರ್ಸ್ ಹಗರಣದಲ್ಲಿ 64 ಕೋಟಿ, ಕಾಮನ್ ವೆಲ್ತ್ ಗೇಮ್ಸ್ ಹಗರಣದಲ್ಲಿ ಬರೋಬ್ಬರಿ 70 ಸಾವಿರ ಕೋಟಿ, 2 ಜಿ ಹಗರಣದಲ್ಲಿ 1 ಲಕ್ಷ 76 ಸಾವಿರ ಕೋಟಿ, ಕಲ್ಲಿದ್ದಲು ಹಗರಣದಲ್ಲಿ 1 ಲಕ್ಷ 86 ಸಾವಿರ ಕೋಟಿ ರೂಪಾಯಿ ನಷ್ಟ ಆಗಿದೆ'' ಅಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. ಇದನ್ನ ಕೇಳಿದ್ಮೇಲೆ, ಹಗಲಿರುಳು ಬೆವರು ಹರಿಸಿ ಕಷ್ಟಪಟ್ಟು ದುಡಿದು.. ತೆರೆಗೆ ಕಟ್ಟುವ ಭಾರತೀಯರೇ... ತಲೆ ತಿರುಗಿ ಬಿದ್ದೀರಿ... ಜೋಕೆ.!

ಎಂತಹ ಸಮಾಜದಲ್ಲಿ ನಾವಿದ್ದೇವೆ.!

''ಹಿಂದೆ ತಪ್ಪು ಮಾಡಿದವರನ್ನು ಸಮಾಜ ದೂರ ಇಡುತ್ತಿತ್ತು. ಆದರೆ ಈಗ, ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಜಾಮೀನು ತೆಗೆದುಕೊಂಡು ವಾಪಸ್ ಬಂದವರಿಗೆ ಹಾರ ಹಾಕುವ ಸಮಾಜದಲ್ಲಿ ನಾವಿದ್ದೇವೆ'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರೋಮೋ ನೋಡಿ...

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಭಾಗವಹಿಸಿರುವ ಸಂಚಿಕೆಯ ಪ್ರೋಮೋ ಬಿಡುಗಡೆ ಆಗಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

ತಪ್ಪದೇ ವೀಕ್ಷಿಸಿ....

ಭಾನುವಾರದ (ಮೇ 14) 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಮಿಸ್ ಮಾಡ್ಬೇಡಿ. ಯಾಕಂದ್ರೆ, ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದ.. 'ಲೋಕಾಯುಕ್ತ' ಅಂದ್ರೆ ಇಡೀ ಕರ್ನಾಟಕ ನೆನಪಿಸಿಕೊಳ್ಳುವ ಸಂತೋಷ್ ಹೆಗ್ಡೆ ಈ ಭಾನುವಾರ ಸಾಧಕರ ಸೀಟ್ ನಲ್ಲಿರುತ್ತಾರೆ.

English summary
Former Judge of Supreme Court of India, Lokayuktha for Karnataka (2006-2011) Santhosh Hegde has taken part in Zee Kannada Channel's popular show Weekend with Ramesh-3. Watch promo here..

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X