»   » ಉದಯ ಟಿವಿಯ ಬಂಪರ್ ಆಫರ್ : ಧಾರಾವಾಹಿ ನೋಡಿ ಚಿನ್ನ ಗೆಲ್ಲಿ

ಉದಯ ಟಿವಿಯ ಬಂಪರ್ ಆಫರ್ : ಧಾರಾವಾಹಿ ನೋಡಿ ಚಿನ್ನ ಗೆಲ್ಲಿ

Posted By:
Subscribe to Filmibeat Kannada

ಕನ್ನಡದ ಮನರಂಜನಾ ವಾಹಿನಿಯಾದ ಉದಯ ಟಿವಿ ಮಾರ್ಚ್ ತಿಂಗಳಲ್ಲಿ ವೀಕ್ಷಕರಿಗೆ ಚಿನ್ನದ ಮಳೆ ಸುರಿಸಲು ಸಿದ್ಧವಾಗಿದೆ. ಇಡೀ ಮಾರ್ಚ್ ತಿಂಗಳು ಉದಯ ಟಿವಿಯ ಧಾರಾವಾಹಿಗಳನ್ನು ವೀಕ್ಷಿಸುವ ಅದೃಷ್ಟಶಾಲಿಗಳಿಗೆ ಚಿನ್ನದ ಬಹುಮಾನ ದೊರಕಲಿದೆ.

ಪ್ರತೀ ಸೋಮವಾರದಿಂದ ಶುಕ್ರವಾರ, ಮಾರ್ಚ್ ಒಂದರಿಂದ ಮೂವತ್ತನೇ ತಾರೀಕಿನವರೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಅಂದಿನ ಕಂತನ್ನು ಆಧರಿಸಿದ ಒಂದು ಪ್ರಶ್ನೆಯನ್ನು ಕೇಳಲಾಗುತ್ತದೆ. ಸರಿಯಾದ ಉತ್ತರ ಕೊಡುವ ಐದು ಮಂದಿ ಅದೃಷ್ಟಶಾಲಿಗಳನ್ನು ನಿತ್ಯವೂ ಆರಿಸಲಾಗುತ್ತದೆ. ಪ್ರತಿ ವಿಜೇತರಿಗೂ ಮೂರು ಸಾವಿರ ರೂಪಾಯಿ ಬೆಲೆ ಬಾಳುವ ಚಿನ್ನದ ಗಿಫ್ಟ್ ವೋಚರ್ ದೊರೆಯಲಿದೆ.

Watch Udaya Tv serials and get a chance to win gold

ಜೋಜೋಲಾಲಿ, ಅವಳು, ಕಾವೇರಿ, ನಂದಿನಿ, ಜೀವನದಿ, ಮಾನಸ ಸರೋವರ, ದೊಡ್ಮನೆ ಸೊಸೆ ಮೊದಲಾದ ಸದಭಿರುಚಿಯ ಧಾರಾವಾಹಿಗಳು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಜನಮೆಚ್ಚುಗೆ ಗಳಿಸಿವೆ. ಜನರು ತಮ್ಮ ನೆಚ್ಚಿನ ಧಾರಾವಾಹಿಗಳನ್ನು ನೋಡುವ ಮೂಲಕ ಇದೀಗ ಚಿನ್ನವನ್ನು ಕೂಡ ಗೆಲ್ಲಬಹುದಾಗಿದೆ.

English summary
Watch Udaya Tv serials and get a chance to win gold.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada