»   » 'ಬಿಗ್ ಬಾಸ್' ಗೆಲ್ಲಲು ಸ್ಪರ್ಧಿಗಳಿಗೆ ಅಕುಲ್ ಬಾಲಾಜಿ ನೀಡಿರುವ ಟಿಪ್ಸ್ ಇದು...

'ಬಿಗ್ ಬಾಸ್' ಗೆಲ್ಲಲು ಸ್ಪರ್ಧಿಗಳಿಗೆ ಅಕುಲ್ ಬಾಲಾಜಿ ನೀಡಿರುವ ಟಿಪ್ಸ್ ಇದು...

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಲು ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ. ಯಾರ್ಯಾರು 'ದೊಡ್ಮನೆ' ಒಳಗೆ ಕಾಲಿಡ್ತಾರೋ, ಗೊತ್ತಿಲ್ಲ. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳಾಗಿ ಎಂಟ್ರಿಕೊಡುವವರಿಗೆ ಅಕುಲ್ ಬಾಲಾಜಿ ಕೆಲ ಟಿಪ್ಸ್ ನೀಡಿದ್ದಾರೆ.

ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-2' ಕಾರ್ಯಕ್ರಮದ ವಿಜೇತ ಅಕುಲ್ ಬಾಲಾಜಿ. ಪಟಪಟ ಅಂತ ಮಾತನಾಡುವ ಅಕುಲ್ ಬಾಲಾಜಿ, ಜನರಿಗೆ ಮನರಂಜನೆ ನೀಡಿ 'ಬಿಗ್ ಬಾಸ್' ಕಿರೀಟವನ್ನ ಮುಡಿಗೇರಿಸಿಕೊಂಡವರು. ಇಂತಿಪ್ಪ ಅಕುಲ್ ಬಾಲಾಜಿ, ಈಗ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಟಿಪ್ಸ್ ಕೊಟ್ಟಿದ್ದಾರೆ.

Watch video: Akul Balaji gives tips to Bigg Boss Kannada 5 Contestants

''ಹೆಚ್ಚು ದಿನ ಇರುವೆ ಎಂಬ ಭರವಸೆಯಿಂದ ಹೆಚ್ಚು ಬಟ್ಟೆಗಳನ್ನು ತೆಗೆದುಕೊಂಡು ಹೋಗಿ, ನಿಮ್ಮನ್ನ ನೀವು ಕರ್ಕೊಂಡು ಹೋಗಿ, ಮನರಂಜನೆಗಾಗಿ ಒಳ್ಳೆ ಕಥೆಗಳನ್ನು ತೆಗೆದುಕೊಂಡು ಹೋಗಿ, ನೆನಪುಗಳನ್ನು ಹೊತ್ತುಕೊಂಡು ಹೋಗಿ...'' ಎಂದು ಸ್ಪರ್ಧಿಗಳಿಗೆ ತಿಳಿಸಿರುವ ಅಕುಲ್ ''ನಿಯತ್ತಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ'' ಅಂತಲೂ ಸ್ಪರ್ಧಿಗಳಿಗೆ ಸಲಹೆ ನೀಡಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳಿಗೆ ಅಕುಲ್ ಬಾಲಾಜಿ ನೀಡಿರುವ ಟಿಪ್ಸ್ ಈ ವಿಡಿಯೋದಲ್ಲಿದೆ. ನೋಡಿರಿ...

English summary
Watch video: Akul Balaji gives tips to Bigg Boss Kannada 5 Contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada