»   » ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!

ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಹಾಗೆಲ್ಲ ಸುಮ್ಸುಮ್ನೆ ಗರಂ ಆಗಲ್ಲ. ಯಾವುದೇ ಸಂದರ್ಭವಾಗಲಿ, ಎಂಥ ಜಾಗವೇ ಇರಲಿ, ಸನ್ನಿವೇಶವನ್ನ ಕೂಲ್ ಆಗಿ ಹ್ಯಾಂಡಲ್ ಮಾಡುವ ಕಿಚ್ಚ ಸುದೀಪ್ ನಿನ್ನೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಸಿಡಿಮಿಡಿಗೊಂಡಿದ್ದರು.

ಕಿಚ್ಚನ ಕಿಚ್ಚಿಗೆ ಕಾರಣವಾಗಿದ್ದು ಟಿ.ಆರ್.ಪಿ ಕಾ ಮಾಮ್ಲ...ಯೂಟ್ಯೂಬ್ ಸ್ಟಾರ್...ಹುಚ್ಚ ವೆಂಕಟ್.! [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ವಾರದಲ್ಲಿ ಮನೆಯಲ್ಲಾದ ಕಿಚ್ಚಿನ ಕಥೆಯನ್ನ ಕೆದಕಿ ಮನೆಯಲ್ಲಿ ಶಾಂತಿ-ಸಮಾಧಾನ ತರುವ ಜವಾಬ್ದಾರಿ ಸುದೀಪ್ ರದ್ದು. ಈ ಕಾರ್ಯವನ್ನ ನಿಭಾಯಿಸುವಾಗಲೇ ತಾಳ್ಮೆ ಕಳೆದುಕೊಂಡು ಕೋಪೋದ್ರಿಕ್ತರಾದ ಹುಚ್ಚ ವೆಂಕಟ್ ವಿರುದ್ಧ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಗರಂ ಆದರು.

ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ವೇದಿಕೆಯಲ್ಲಿ ಸುದೀಪ್ ಗುಡುಗಿದರು. ಹುಚ್ಚ ವೆಂಕಟ್ ಮೇಲೆ ಹೌಹಾರಿದರು. ಏಕ್ದಂ ರವಿ ಮುರೂರು ಮೇಲೆ ಹಲ್ಲೆ ಮಾಡಿದ್ದಕ್ಕೆ 'ಬ್ಲೂ ಸ್ಟಾರ್' ವಿರುದ್ಧ ಕಿಚ್ಚ ಸುದೀಪ್ ಕೆಂಡಮಂಡಲವಾದರು. 'ಯೂಟ್ಯೂಬ್ ಸ್ಟಾರ್' ಗೆ ಮಾತಲ್ಲೇ ಬಿಸಿ ಮುಟ್ಟಿಸಿದರು. [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

ವೀಕ್ಷಕರ ನೆಚ್ಚಿನ ಹುಚ್ಚ ವೆಂಕಟ್ ಗೆ ಕಿಚ್ಚ ಸುದೀಪ್ ಏನು ಹೇಳಿದರು ಅಂತ ಅವರದ್ದೇ ಮಾತುಗಳಲ್ಲಿ ಓದಿ...ಕೆಳಗಿರುವ ಸ್ಲೈಡ್ ಗಳಲ್ಲಿ.....

ಮನುಷ್ಯರು ಹೀಗೆ ಮಾಡಲ್ಲ.!

''ಮನುಷ್ಯರು ಈ ತರಹ ಮಾಡೋಕೆ ಆಗಲ್ಲ. ನಿಮಗೆ ಒಂದು ಮಾತು ಹೇಳ್ತಿದ್ದೀನಿ ಹುಚ್ಚ ವೆಂಕಟ್ ಅವ್ರೇ. ನಗಾಡಿಕೊಂಡು ನಾವು ಯಾಕೆ ಇರ್ತೀವಿ ಅಂದ್ರೆ ನಮಗೆ ಆ ತಾಕತ್ತು ಇಲ್ಲ ಅಂತಲ್ಲ.'' - ಸುದೀಪ್ ['ಹುಚ್ಚ ವೆಂಕಟ್'ಗೆ ಬೆಂಡೆತ್ತಿ ಬ್ರೇಕ್ ಹಾಕಿದ ರವಿ ಮುರೂರು]

ಆರಾಮಾಗಿರಿ

''ರವಿ ಮುರೂರು ಅವ್ರೇ ಆರಾಮಾಗಿರಿ. ಆ ರಕ್ತ ವೇಸ್ಟ್ ಮಾಡ್ಬೇಡಿ. ನಿಮ್ಮದೇ ರಕ್ತ ಒಳಗಡೆ ಕುಡೀರಿ.'' - ಸುದೀಪ್

ಹುಚ್ಚ ವೆಂಕಟ್-ಸುದೀಪ್ ನಡುವಿನ ಸಂಭಾಷಣೆ

ಸುದೀಪ್ - ''ಮಿಸ್ಟರ್ ವೆಂಕಟ್''
ಹುಚ್ಚ ವೆಂಕಟ್ - ''ಹೇಳು ಸುದೀಪ್''
ಸುದೀಪ್ - ''ಹೇಳ್ತಾಯಿದ್ದೀನಿ ವೆಂಕಟ್ ಸರ್. ಕೈ ಎತ್ತಕ್ಕಿನ್ನ ಮುಂಚೆ ಸ್ವಲ್ಪ ಯೋಚನೆ ಮಾಡಿ.''
ಹುಚ್ಚ ವೆಂಕಟ್ - ''ನನಗೆ ಬೇಜಾರಾಗಿದ್ದೇನು ಗೊತ್ತಾ ಸುದೀಪ್. ನನಗೆ ಮಾತನಾಡುವುದಕ್ಕೆ ಅವಕಾಶ ಇದ್ಯಾ. ಒಂದ್ ಐದು ನಿಮಿಷ ಮಾತನಾಡಬಹುದಾ.?''

ಹೆಂಗ್ ಕೈ ಎತ್ತಿದ್ರಿ ನೀವು?

ಸುದೀಪ್ - ''ಮಾತು ಮಾತಾಡೋ ಹಾಗಿದ್ರೆ, ಮಾತಾಡ್ತೀನಿ ವೆಂಕಟ್ ಅವ್ರೇ ಕೈ ಹೆಂಗೆ ಎತ್ತಿದ್ರಿ ತಾವು. ಕೈ ಎತ್ತಕ್ಕೆ ಹೋಗ್ಬೇಡಿ.''
ಹುಚ್ಚ ವೆಂಕಟ್ - ''ಮಾನ ಮರ್ಯಾದೆ ಇದ್ಯಾ ಅಂದ ಅವ್ನು''
ಸುದೀಪ್ - ''ಮಾನ ಮರ್ಯಾದೆ ಅಲ್ಲ. ನಾನು ವೆಂಕಟ್ ಅವ್ರ ಹತ್ರ ಮಾತಾಡ್ಬೇಕಾದ್ರೆ, ವೆಂಕಟ್ ಹತ್ರ ಮಾತಾಡ್ತೀನಿ.''
ಹುಚ್ಚ ವೆಂಕಟ್ - ''ಈಗಲ್ಲ. ಟಾಸ್ಕ್ ನಡೆದಾಗ ಆಚೆಕಡೆ ಮಾನ ಮರ್ಯಾದೆ ಇದ್ಯಾ ಅಂತಂದು ಮ್ಯಾನ್ ಹ್ಯಾಂಡಲಿಂಗ್ ಮಾಡುವ ಹಾಗಿಲ್ಲ ಇಲ್ಲಿ ಅಂತ ಎಸ್ಕೇಪ್ ಆದ. ಈಗ ಕೊಟ್ಟೆ ಮಾರ್ಯಾದೆ ಏನು ಅಂತ. ಆಚೆ ಇನ್ನೂ ಐತೆ. ಇದು ಸ್ಯಾಂಪಲ್ ಇಲ್ಲಿ. ಹುಚ್ಚ ವೆಂಕಟ್ ಸೇನೆ ಹುಡುಗರು ಯಾರು ಅಂತ ಗೊತ್ತಾಗ್ಬೇಕು ಅಂದ್ರೆ ಆಚೆ ಹೋಗೋ, ಗೊತ್ತಾಗುತ್ತೆ. ನಾನು ಸ್ಟೇಷನ್ ಗೆ ಹೋಗೋಕೆ ರೆಡಿ ಸುದೀಪ್''

ಗುಡುಗಿದ ಸುದೀಪ್

''ನನ್ನ ಶೋ ಒಳಗೆ ನನ್ನ Contestants ನನ್ನ ಫ್ಯಾಮಿಲಿ ಇದ್ದ ಹಾಗೆ. ನನಗೆ ಏಕವಚನದಲ್ಲಿ ಕರೀರಿ. ನಾನು ಮಾತಾಡ್ತೀನಿ ಪರ್ವಾಗಿಲ್ಲ. ನಾನು ತಲೆ ಬಗ್ಗಿಸ್ತೀನಿ ನಿಮಗೆ. ನಾನ್ ಚಿಕ್ಕವನಾಗಲ್ಲ. ನನ್ನ Contestants ಬಗ್ಗೆ, ನನ್ನ ಕುಟುಂಬದವರ ಬಗ್ಗೆ ಏನಾದ್ರೂ ಮಾತಾಡಿದ್ರೆ, ಕೈ ಎತ್ತಿದ್ದು ಗೊತ್ತಾದ್ರೆ ಮಾತ್ರ ಅಲ್ಲಿರೋರಿಗೆ ಅಲ್ಲ ನಿಮಗೆ ನಮಗೂ..!!'' - ಸುದೀಪ್

ಫ್ಯಾಮಿಲಿ ತರಹ

''ಫ್ಯಾಮಿಲಿ ತರಹ ಅವತ್ತಿಂದ ಹಿಡಿದು ಇವತ್ತಿನ ವರೆಗೂ ಮಾತಾಡಿಸ್ತಾಯಿದ್ದೀನಿ ವೆಂಕಟ್ ಅವ್ರೇ, ಕೈ ಎತ್ತೋಕೆ ಹೋಗ್ಬೇಡಿ.'' - ಸುದೀಪ್ [ತಲೆ ಮೇಲೆ 'ಎಕ್ಕಡ' ಹೊತ್ತು ಶಿಕ್ಷೆ ಅನುಭವಿಸಿದ ಹುಚ್ಚ ವೆಂಕಟ್!]

'ಬಿಗ್ ಬಾಸ್' ಇದ್ದಾರೆ

''ಮಾತಾಡಿದ ಮಾತಿಗೆ ಮಿಕ್ಕಿದ ಟೈಮ್ ನಲ್ಲಿ ಬಿಗ್ ಬಾಸ್ ಇದ್ದಾರೆ. ಅವರು ನೋಡ್ಕೊತಾರೆ. ನೀವು ಯಾಕೆ ಕೈ ಎತ್ತುತ್ತೀರಾ?'' - ಸುದೀಪ್

ಬೇಕಾಗಿಲ್ಲ...!!!!

''ನಮ್ಮನ್ನೇಲಿ ಇರುವ ಹೆಣ್ಮಕ್ಕಳನ್ನ ನೋಡಿಕೊಳ್ಳುವುದಕ್ಕೆ ಹೊರಗಡೆ ಇರುವ ಗಂಡಸು ಬೇಕಾಗಿಲ್ಲ ನಮಗೆ'' - ಸುದೀಪ್

ರೆಸ್ಪೆಕ್ಟ್ ಕೊಡ್ಬೇಕು..

''ಫಸ್ಟ್ ನೀವು ಮಾತಾಡುವುದನ್ನ ಕೇಳಿ ನಾನು ಮಾತನಾಡಬೇಕಾದರೆ. ರೆಸ್ಪೆಕ್ಟ್ ಬೇಕಾದವರು ಮೊದಲು ರೆಸ್ಪೆಕ್ಟ್ ಕೊಡೋದನ್ನ ಕಲೀಬೇಕು'' - ಸುದೀಪ್

ಡಿಫರೆನ್ಸ್ ಏನು?

''ಇದುವರೆಗೂ ಈ ಶೋನಲ್ಲಿ ಒಬ್ಬರ ಮೇಲೆ ಒಬ್ಬರೂ ಕೈ ಮಾಡಿಲ್ಲ. ನಿಮ್ಮ ಮೇಲೆ ಗೌರವ ಇದೆ ನಮಗೆ. ನೀವು ಏನು ಕರೆದರೂ ಕರೆಸಿಕೊಳ್ಳುವುದಕ್ಕೆ ನಾವು ರೆಡಿ. ಯಾಕೆ.? ವ್ಯಕ್ತಿತ್ವದಿಂದ ವ್ಯಕ್ತಿತ್ವಕ್ಕೆ ಅದೊಂದೇ ಡಿಫರೆನ್ಸ್. ಅದು ಒಂದೇ ಡಿಫರೆನ್ಸ್'' - ಸುದೀಪ್

ಜೀವನ ನೋಡಿಕೊಳ್ಳಿ

''ನಿಮ್ಮ ಜೀವನ ನೀವು ನೋಡಿಕೊಳ್ಳಿ. ನಿಮಗೆ ಮರ್ಯಾದೆ ಕೊಡ್ತಾಯಿದ್ದೀವಿ ನಾನು ಇನ್ನೂ. ಅದ್ಹೆಂಗೆ ಹೊಡೆದ್ರೀ ನೀವು ಅವ್ರಿಗೆ'' - ಸುದೀಪ್

ನೀವು ಕಮ್ಮಿನಾ?

''ಮಾತು ಕಮ್ಮಿ ಆಡಿದ್ದೀರಾ ನೀವು. ಮಾತ್ ಎತ್ತಿದ್ರೆ ಎಕ್ಕಡ ಎಕ್ಕಡ ಅಂತೀರಾ. ಏನ್ ಎಕ್ಕಡ? ಅದು ಎಕ್ಕಡ ಕಾಲಲ್ಲಿ ಇರ್ಬೇಕು. ನಿಮಗೆ ಹಿಂಗೆ ಮಾತನಾಡಿದ್ರೆ ಆಗಲ್ಲ. ಬೇರೆಯವರು ಹಿಂಗೆಲ್ಲಾ ಕೂಗಿದ್ರೆ ಆಗಲ್ಲ. ನಾನು ಮಗು ತರಹ ಟ್ರೀಟ್ ಮಾಡ್ತಾಯಿದ್ದೀನಿ. ಒಂದು ಮಾತು ಹೇಳ್ತೀನಿ ವೆಂಕಟ್, ಗೌರವ ಸಂಪಾದಿಸಬೇಕು. ಕಿತ್ಕೊಳ್ಳೋಕೆ ಆಗಲ್ಲ. ಓಕೆ'' - ಸುದೀಪ್

ಲಿಮಿಟ್ ಇದೆ

''ಪ್ರತಿಯೊಂದಕ್ಕೂ ಒಂದು ಲಿಮಿಟ್ ಇದೆ. ಇಲ್ಲಿ ವೈಯಕ್ತಿಕವಾಗಿ ಹೇಳುವುದಕ್ಕೆ ಇಷ್ಟ ಪಡ್ತೀನಿ. ನಾವು ಯಾರನ್ನೂ ಬಲವಂತವಾಗಿ ಒಳಗೆ ಕರ್ಕೊಂಡು ಹೋಗಿ ಕೂರ್ಸಿಲ್ಲ. ನಿಮ್ಮ ಒಪ್ಪಿಗೆ ಮೇಲೆ. ನಿಮ್ಮ ಪ್ರೀತಿಯ ಮೇಲೆ. ನೀವು ಹೋಗ್ತೀನಿ ಅಂತ ಹೇಳಿದ್ದಕ್ಕೆ ಅಲ್ಲಿ ಕೂರ್ಸಿರೋದು. ಯಾರಾದರೂ ಒಬ್ಬರು ಹೇಳಿ, ನಿಮ್ಮ ಕತ್ತಿನ ಪಟ್ಟಿ ಹಿಡ್ಕೊಂಡು ನಾವು ಒಳಗೆ ಹಾಕಿದ್ದೀವಿ ಅಂತ. ಇಲ್ಲಾ ತಾನೆ?'' - ಸುದೀಪ್

ಇತಿಹಾಸ......

''ಪ್ರೀತಿ, ವಿಶ್ವಾಸ, ಗೌರವ ಇದೆಲ್ಲಾದನ್ನೂ ಸಂಪಾದಿಸ್ಕೊಬೇಕು ನಾವು. ಬಟ್ ಬಹಳ ನೊಂದುಕೊಂಡು ಇದನ್ನ ಹೇಳ್ಬೇಕಾಗುತ್ತೆ ನಾನು ಬಿಗ್ ಬಾಸ್ ಮನೆ ನಿಯಮ ಪ್ರಕಾರ, ಮೊದಲನೇ ಬಾರಿ ಬಿಗ್ ಬಾಸ್ ಇತಿಹಾಸದಲ್ಲಿ ಒಬ್ಬ ವ್ಯಕ್ತಿ ಕೈ ಮಾಡಿದಕ್ಕೆ ಯು ವಿಲ್ ಬಿ Evicted ಫ್ರಮ್ ದಿ ಹೌಸ್ ರೈಟ್ ಅವೇ. ನಿಮ್ಮನ್ನ ಮನೆಯಿಂದ ಈ ಕ್ಷಣವೇ ಹೊರಗೆ ಕಳುಹಿಸಬೇಕಾಗುತ್ತೆ'' - ಸುದೀಪ್ [ಬಿಗ್ ಬಾಸ್ ಮನೆಗೆ ಹುಚ್ಚ ವೆಂಕಟ್ ರೀ ಎಂಟ್ರಿ ಡೌಟ್]

ವಿಡಿಯೋ ನೋಡಿ

'ಬಿಗ್ ಬಾಸ್' ಮನೆಯಲ್ಲಿ ಕಿಚ್ಚನ ಕಿಚ್ಚಿನ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ.....

English summary
Kiccha Sudeep is annoyed with Huccha Venkat for beating up Singer Ravi Muroor. Watch the video for conversation between Sudeep and Huccha Venkat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada