»   » ಪ್ರಥಮ್ 'ದೇವ್ರಾಣೆ' ಇರೋದೇ ಹೀಗೆ.. 'ಚಾಲೆಂಜ್' ಮಾಡ್ತೀವಿ..!

ಪ್ರಥಮ್ 'ದೇವ್ರಾಣೆ' ಇರೋದೇ ಹೀಗೆ.. 'ಚಾಲೆಂಜ್' ಮಾಡ್ತೀವಿ..!

Posted By:
Subscribe to Filmibeat Kannada

'ಒಳ್ಳೆ ಹುಡುಗ' ಪ್ರಥಮ್ ಯಾವ ಲೆವೆಲ್ ಗೆ ಪಾಪ್ಯುಲರ್ ಅಗಿದ್ದಾರೆ ಅಂದ್ರೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೂಡ, ''ನೀವು ಖಂಡಿಸಿದರೂ, ನಾನು ನಿಮ್ಮನ್ನ ಪ್ರೀತಿಸ್ತೀನಿ'' ಅಂತ ಹೇಳಿದ್ದಾರೆ. ಅಷ್ಟೇ ಇಲ್ಲ, ಕರ್ನಾಟಕದ ಯಾವ ಮೂಲೆಗೂ ಹೋದರೂ ಪ್ರಥಮ್ ಹವಾ ಜೋರಾಗೇ ಇದೆ.

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಮಾತಲ್ಲೇ ಮಹಡಿ ಮನೆ ಕಟ್ಟಿ, ಇಷ್ಟವಿಲ್ಲದ ವಿರುದ್ಧ ಖಂಡಿಸಿ, ಕಿರಿಕಿರಿ ಆದರೆ 'ಕಿರಿಕ್' ಮಾಡಿಕೊಂಡಿರುವ ಪ್ರಥಮ್ ನಿಜಜೀವನದಲ್ಲೂ ಹೀಗೆನಾ.? ಎಂಬ ಅನುಮಾನ ಅನೇಕರಿಗೆ ಕಾಡಬಹುದು.[ಪ್ರಥಮ್ ಬಗ್ಗೆ ಶಿವರಾಜ್ ಕುಮಾರ್ ಏನು ಹೇಳಿದ್ದಾರೆ ಗೊತ್ತಾ.?]

ಅಷ್ಟಕ್ಕೂ, ''ಹೊರಗಡೆ ಪ್ರಪಂಚದಲ್ಲಿ ಪ್ರಥಮ್ ಹೀಗೆ ಇಲ್ಲ. ಇಲ್ಲಿ ಮಾತ್ರ ಹೀಗೆ ಆಡುತ್ತಾನೆ. ಡ್ರಾಮಾ ಮಾಡ್ತಿದ್ದಾನೆ'' ಅಂತ ಖುದ್ದು 'ಬಿಗ್ ಬಾಸ್' ಸ್ಪರ್ಧಿಗಳೇ ಆರೋಪ ಮಾಡಿದ್ರು. ಆದ್ರೀಗ, ಅವರೆಲ್ಲರ ಆರೋಪಕ್ಕೆ ನೇರ 'ಚಾಲೆಂಜ್' ಮಾಡುವ ವಿಡಿಯೋನ ನಾವು ನಿಮಗೆ ತೋರಿಸ್ತೀವಿ... ನೋಡಿ...

'ದೇವ್ರಾಣೆ' ಪ್ರಥಮ್ ಇರೋದೇ ಹೀಗೆ...

'ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಹೇಗೆ ಇದ್ದಾರೋ... ಹೇಗೆ ನಡೆದುಕೊಳ್ಳುತ್ತಾರೋ... ಹೊರ ಪ್ರಪಂಚದಲ್ಲೂ ಸೇಮ್ ಟು ಸೇಮ್ ಹಾಗೇ.!['ಬಿಗ್ ಬಾಸ್' ಗೆದ್ರೆ ಕನ್ನಡಿಗರಿಗಾಗಿ ಪ್ರಥಮ್ ಏನ್ ಮಾಡ್ಬಹುದು.?]

ಸಾಕ್ಷಿ ಇದೆ.!

ಪ್ರಥಮ್ ನಡವಳಿಕೆ ಇರೋದೇ ಹಾಗೆ ಅಂತ ನಾವು ಹೇಳುವುದಕ್ಕೆ ಕಾರಣ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಚಾಲೆಂಜ್' ಶೋ.!

ಎರಡು ವರ್ಷಗಳ ಹಿಂದಿನ ಶೋ...

2014 ರಲ್ಲಿ... ಅಂದ್ರೆ ಎರಡು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ 'ಚಾಲೆಂಜ್' ಎಂಬ ರಿಯಾಲಿಟಿ ಶೋ ಪ್ರಸಾರವಾಗಿತ್ತು. ಅದರಲ್ಲಿ ಪ್ರಥಮ್ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ರು.

ಅಲ್ಲಿನ ಕಾನ್ಸೆಪ್ಟ್

''ಎದ್ದಿದ್ರೆ ಕಾಸು.. ಮಲಗಿದ್ರೆ ಲಾಸು.. ಚಾಲೆಂಜ್ ಗೆದ್ದೋನೇ ಇಲ್ಲಿ ಬಾಸು'' ಎಂಬ ಕಾನ್ಸೆಪ್ಟ್ ನಲ್ಲಿ ಪ್ರಸಾರವಾದ ಈ ಶೋನಲ್ಲಿ ಪ್ರಥಮ್ ಪಾಲ್ಗೊಂಡಿದ್ದರು.

ಅಲ್ಲೂ ಮಾತಿನ ಮಲ್ಲ.!

'ಚಾಲೆಂಜ್' ಕಾರ್ಯಕ್ರಮದಲ್ಲೂ ಪ್ರಥಮ್ ಕೊಟ್ಟಿರುವ ಮನರಂಜನೆ ಅಷ್ಟಿಷ್ಟಲ್ಲ. ಕ್ಯಾಮರಾ ಮುಂದೆ ನಿಂತು ತಮ್ಮ ಸಿಗ್ನೇಚರ್ ಸ್ಟೈಲ್.. ಮ್ಯಾನರಿಸಂ.. ನಲ್ಲಿ ಪ್ರಥಮ್ ಬಿಡುವ ಮಾತಿನ ಬಾಣಕ್ಕೆ ಇತರೆ ಸ್ಪರ್ಧಿಗಳೇ ಹೊರಳಾಡಿ ನಕ್ಕಿದ್ದರು.

ಕನ್ನಡ ಪ್ರೀತಿಸಬೇಕು

''ನಾರಾಯಣಗೌಡ್ರು ನಾದಿನಿ ಮಗ, ವಾಟಾಳ್ ನಾಗರಾಜ್ ವಾರಗಿತ್ತಿ ಮಗ.. ಕನ್ನಡ ಪ್ರೀತಿಸಬೇಕು'' ಅಂತ 'ಚಾಲೆಂಜ್' ಶೋನಲ್ಲೂ ಪ್ರಥಮ್ ಕನ್ನಡ ಪ್ರೇಮ ಮೆರೆದಿದ್ದರು.

ರಾಜೇಶ್ 'ಮಾವ'

ಅಂದು 'ಚಾಲೆಂಜ್' ಶೋನ ಹೋಸ್ಟ್ ಮಾಡಿದವರು ನಟ ರಾಜೇಶ್. ಅವರಿಗೇ ಆಗಲೇ ಪ್ರಥಮ್ 'ಮಾವ' ಅಂದಿದ್ದಾರೆ ಅಂದ್ರೆ ನೀವೇ ಊಹಿಸಿ....

ವಿಡಿಯೋ ನೋಡಿ...

'ಚಾಲೆಂಜ್' ರಿಯಾಲಿಟಿ ಶೋನಲ್ಲಿ ಪ್ರಥಮ್ ನಡವಳಿಕೆ ಹೇಗಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ ಮಿಸ್ ಮಾಡದೇ ಈ ವಿಡಿಯೋ ನೋಡಿ... ಲಿಂಕ್ ಇಲ್ಲಿದೆ...

ಸುದೀಪ್ ಕೂಡ ತಮ್ಮ ಅನುಭವ ಹೇಳಿದ್ರು.!

ಮೊಟ್ಟ ಮೊದಲ ಬಾರಿಗೆ ಪ್ರಥಮ್ ರನ್ನ ಭೇಟಿ ಮಾಡಿದ ಸುದೀಪ್ ರವರ ಅನುಭವ ಹೇಗಿತ್ತು ಎಂಬುದು 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲೇ ಪ್ರಸಾರ ಆಗಿದೆ. ಹೀಗಿರುವಾಗ ಪ್ರಥಮ್ ಡ್ರಾಮಾ ಮಾಡ್ತಿದ್ದಾರಾ.? ನೀವೇ ನಿರ್ಧರಿಸಿ... [ಸುದೀಪ್ ಮತ್ತು ಪ್ರಥಮ್ ಮೊದಲ ಭೇಟಿಯ ರೋಚಕ ಕಥೆ!]

ಫಿನಾಲೆ ತಲುಪಿರುವ ಪ್ರಥಮ್

'ಚಾಲೆಂಜ್' ಶೋ ನಿಂದ ಅಷ್ಟಾಗಿ ಜನಪ್ರಿಯತೆ ಪಡೆಯದ ಪ್ರಥಮ್, 'ಬಿಗ್ ಬಾಸ್' ಕಾರ್ಯಕ್ರಮದಿಂದ ನಿರೀಕ್ಷೆಗೂ ಮೀರಿ ಜನರಿಗೆ ಹತ್ತಿರವಾಗಿದ್ದಾರೆ. ಹಾಗೇ, 'ಬಿಗ್ ಬಾಸ್ ಕನ್ನಡ-4' ಫಿನಾಲೆ ಹಂತ ತಲುಪಿದ್ದಾರೆ. ಪ್ರಥಮ್ ರವರನ್ನ ಗೆಲ್ಲಿಸುವುದು, ಬಿಡುವುದು... ನಿಮ್ಮ ಕೈಯಲ್ಲೇ ಇದೆ.['ಬಿಗ್ ಬಾಸ್' ಫೈನಲ್ ತಲುಪಿದ ಪ್ರಥಮ್ ಕಣ್ಣಲ್ಲಿ ನೀರು.! ಯಾಕೆ.?]

English summary
Before entering 'Bigg Boss' show, 'Olle Huduga' Pratham had taken part in Zee Kannada Channel's 'Challenge' reality show. Watch video..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada