»   » ಪೇಚಿಗೆ ಸಿಲುಕಿಸಿದ ''ಯಶ'ಸ್ವಿ ವಿನಾಯಕ''ನ ದರ್ಶನ ಇದೇ ಭಾನುವಾರ.!

ಪೇಚಿಗೆ ಸಿಲುಕಿಸಿದ ''ಯಶ'ಸ್ವಿ ವಿನಾಯಕ''ನ ದರ್ಶನ ಇದೇ ಭಾನುವಾರ.!

Posted By:
Subscribe to Filmibeat Kannada

'55ನೇ ಬೆಂಗಳೂರು ಗಣೇಶೋತ್ಸವ'ದ ಅಂಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆದ ರಾಕಿಂಗ್ ಸ್ಟಾರ್ ಯಶ್ ಜತೆಗೆ ಆಚರಿಸುವ ವಿನೂತನ ಕಾರ್ಯಕ್ರಮ 'ಯಶಸ್ ವಿನಾಯಕ' ಸೆಪ್ಟೆಂಬರ್ 17 ರಂದು ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ರಾಧಿಕಾ ಪಂಡಿತ್ ಎದುರಲ್ಲೇ ಯಶ್ ಗೆ ಗೂಗ್ಲಿ ಹಾಕಿದ ಅಭಿಮಾನಿ.!

ಕಾರ್ಯಕ್ರಮದ ನಿರೂಪಕ ರಿಯಾಲಿಟಿ ಸ್ಟಾರ್ ಅಕುಲ್ ಬಾಲಾಜಿ ಗಣೇಶನಿಗೆ ಮಂಗಳಾರತಿ ಮುಗಿಸಿ, ಒಂದು ಡಾನ್ಸ್ ಮಾಡಿ ನೆರೆದ ಪ್ರೇಕ್ಷಕರ ಗಮನ ಸೆಳೆದರೆ, ಗಣೇಶೋತ್ಸವದ ಕೇಂದ್ರಬಿಂದು ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಡ್ಯಾನ್ಸ್ ಮೂಲಕ ವೇದಿಕೆಗೆ ಆಗಮಿಸಿ ಕಾರ್ಯಕ್ರಮದುದ್ದಕ್ಕೂ ಅಭಿಮಾನಿಗಳನ್ನು ರಂಜಿಸಿದರು. ಮುಂದೆ ಓದಿರಿ....

ಯಶ್ ಹಾಗೂ ವಿನಾಯಕನ ನಡುವೆ ಇರುವ ಸಂಬಂಧ

ಗಣೇಶೋತ್ಸವದಲ್ಲಿ ಯಶ್ ಹಾಗೂ ವಿನಾಯಕನ ನಡುವೆ ಇರುವ ಸಂಬಂಧದ ಗುಟ್ಟನ್ನು ಬಿಚ್ಚಿಟ್ಟರು. ಆರ್ಕೇಸ್ಟ್ರಾ ದಿನಗಳನ್ನು ಮೆಲಕು ಹಾಕುವುದರೊಂದಿಗೆ, ಹಲವು ತಮಾಷೆಯ ಪ್ರಸಂಗಗಳನ್ನು ನೆನೆದು ತಾವೂ ನಕ್ಕು ಅಭಿಮಾನಿಗಳನ್ನು ನಗಿಸಿದರು.

ಪೇಚಾಟಕ್ಕೆ ಸಿಲುಕಿದ ಯಶ್

ಅಮ್ಮನ ಮುದ್ದಿನ ಮಗನಿಗೆ ಅಮ್ಮನ ಕೈರುಚಿಯನ್ನು ಕಂಡುಹಿಡಿಯುವ ಪರೀಕ್ಷೆ ಒಂದೆಡೆಯಾದರೆ, ಪತ್ನಿ ರಾಧಿಕಾ ರವರಿಂದಲೇ ಅನಿರೀಕ್ಷಿತವಾದ ಪ್ರಶ್ನೆಗೆ ಉತ್ತರಿಸುವ ಪೇಚಾಟಕ್ಕೆ ಸಿಲುಕಿದರು ಯಶ್.

ಯಶ್ ಆರ್ಕೇಸ್ಟ್ರಾ

ಇದರ ಮಧ್ಯೆ ಗಮನ ಸೆಳೆದ ಇನ್ನೊಂದು ವಿಷಯವೆಂದರೆ ಯಶ್ ಆರ್ಕೇಸ್ಟ್ರಾ. ಹೆಸರಾಂತ ಗಾಯಕರಾದ ಟಿಪ್ಪು ಮತ್ತು ಸಂಗೀತಾ ತಮ್ಮ ತಂಡದೊಂದಿಗೆ ಯಶ್ ಸಿನಿಮಾಗಳ ಹಲವು ಜನಪ್ರಿಯ ಹಾಡುಗಳನ್ನು ಹಾಡಿದರು. ನಡುವೆ ಯಶ್ ಕೂಡ ಅವರನ್ನು ಸೇರಿಕೊಂಡು ಹೆಜ್ಜೆ ಹಾಕಿದರು.

ಚಿಕ್ಕಣ್ಣ ಕಾಮಿಡಿ

'ಯಶಸ್ ವಿನಾಯಕ' ಕಾರ್ಯಕ್ರಮಕ್ಕೆ ಹಾಸ್ಯನಟ ಚಿಕ್ಕಣ್ಣ ಆಗಮಿಸಿದ್ದು ಇನ್ನೊಂದು ಆಕರ್ಷಣೆಯಾಯಿತು. ಯಶ್ ಹಾಗೂ ಚಿಕ್ಕಣ್ಣ ಅವರ ಡಾನ್ಸ್ ನಿಂದ ಜನ ಹರ್ಷಿತರಾದರು. ದಿಶಾ ಮದನ್, ಶಾನ್ವಿ ಶ್ರೀವಾಸ್ತವ, ನಭಾ ನಟೇಶ್, ಸ್ನೇಹಾ ಆಚಾರ್ಯ, 'ಪುಟ್ಟಗೌರಿ ಮದುವೆ'ಯ ಗೌರಿ, ಮಹೇಶ ಮತ್ತಿತರರಿಂದ ನೃತ್ಯ ಪ್ರದರ್ಶನ ಕೂಡ ಇರುವ 'ಯಶಸ್ ವಿನಾಯಕ' ಕಾರ್ಯಕ್ರಮವನ್ನ ತಪ್ಪದೇ ವೀಕ್ಷಿಸಿ....

English summary
Watch 'Yashas Vinayaka' program in Colors Kannada Channel on September 17th at 6 PM

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada