»   » ಕಿಚ್ಚ ಸುದೀಪ್ ಬಗ್ಗೆ ಕನ್ನಡ ನಿರ್ದೇಶಕರ ಉವಾಚ

ಕಿಚ್ಚ ಸುದೀಪ್ ಬಗ್ಗೆ ಕನ್ನಡ ನಿರ್ದೇಶಕರ ಉವಾಚ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಹುತೇಕ ನಿರ್ದೇಶಕರಿಗೆ ಕಿಚ್ಚ ಸುದೀಪ್ ಎಂದರೆ ಬಹಳ ಇಷ್ಟ. ಮಾತ್ರವಲ್ಲದೇ, ಅವರು ಸೆಟ್ ನಲ್ಲಿ ಕೆಲಸ ಮಾಡುವ ಶೈಲಿ ಹಾಗೂ ಅವರ ತಾಳ್ಮೆ, ಗುಣ ಎಲ್ಲವೂ ಅವರೊಂದಿಗೆ ಕೆಲಸ ಮಾಡಿರುವ ನಿರ್ದೇಶಕರಿಗೆ ಅಚ್ಚುಮೆಚ್ಚು.

ಇನ್ನು ಕಿಚ್ಚ ಸುದೀಪ್ ಅವರು ಹೇಳುವ ಪ್ರಕಾರ ಅವರ ಸಿನಿ ಜೀವನದಲ್ಲಿ ಅವರಿಗೆ ಮೊದಲ ಗೆಳೆಯರು ಎಂದರೆ ಅದು ನಿರ್ದೇಶಕರು ಎನ್ನುತ್ತಾರೆ. ಮಾತ್ರವಲ್ಲದೇ ಎಲ್ಲಾ ನಿರ್ದೇಶಕರು ನನ್ನ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಎಂದು ಸುದೀಪ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನುಡಿದಿದ್ದಾರೆ.[ಮೇನಕಾ ಚಿತ್ರಮಂದಿರದಲ್ಲಿ ಸುದೀಪ್ ಗಳಗಳನೇ ಅತ್ತಿದ್ದೇಕೆ?]

ನಟ ಕಮ್ ನಿರ್ದೇಶಕ ಕಿಚ್ಚ ಸುದೀಪ್ ಅವರ ಬಗ್ಗೆ ಅವರ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿ, ಅವರಿಗೆ ನಿರ್ದೇಶನ ಮಾಡಿರುವ ಸ್ಯಾಂಡಲ್ ವುಡ್ ನ ಹಲವಾರು ನಿರ್ದೇಶಕರುಗಳು ಮುತ್ತಿನಂತಹ ಮಾತುಗಳನ್ನಾಡಿದ್ದಾರೆ. ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್‌ ಮಾಡಿ...

ನಿರ್ದೇಶಕ ಎಂ.ಎಸ್ ರಮೇಶ್

"ನನ್ನ ಎರಡನೇ ಸಿನಿಮಾ 'ಧಮ್' ನ ಹೀರೋ ನೀವು. ಎಲ್ಲಾ ಪಂಚಭೂತಗಳನ್ನು ಮೀರಿ ಎಲ್ಲವನ್ನು ಮೆಟ್ಟಿ ನಿಲ್ಲುವಂತಹ ಒಂದು ಪರ್ಸನಾಲಿಟಿ ನಿಮ್ಮಲ್ಲಿ ಇದೆ. ಹಾಗು ನೀವು ಮಾತಾಡೋ ಸ್ಟೈಲ್, ಡೈಲಾಗ್ ಎಲ್ಲವೂ ನನಗೆ ತುಂಬಾ ಇಷ್ಟ ಆಯ್ತು. ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಖುಷಿ ಪಡ್ತೀನಿ. ಎಂದು ನಿರ್ದೇಶಕ ಎಂ.ಎಸ್ ರಮೇಶ್ ಅವರು ವೀಕೆಂಡ್ ಟೆಂಟ್ ನಲ್ಲಿ ಮಾತಾಡಿದ್ದಾರೆ.['ಆಟೋಗ್ರಾಫ್'ನಲ್ಲಿ ಸುದೀಪ್ ತುಂಬಾ ಮಿಸ್ ಮಾಡಿಕೊಂಡಿದ್ದು ಯಾರನ್ನ.?]

ನಿರ್ದೇಶಕ ಮುಸ್ಸಂಜೆ ಮಹೇಶ್:

"ಒಬ್ಬ ನಿರ್ದೇಶಕನ ಕಲ್ಪನೆಗೆ ನೀವು ಯಾವತ್ತೂ ಹುಸಿ ಮಾಡಲ್ಲ. ಅದ್ಯಾಕಮ್ಮ, ಇದ್ಯಾಕಮ್ಮ ಅನ್ನೋ ಪ್ರಶ್ನೆಗಳನ್ನು ಹಾಕದೆ ಪ್ರತಿಯೊಂದನ್ನು ನಿರ್ದೇಶಕನಿಗೆ ಬಿಟ್ಟುಕೊಟ್ಟು, ಅವರಿಗೆ ಸಹಕಾರ ನೀಡೋ ಗುಣ ನಿಮ್ಮಲ್ಲಿದೆ". ಎಂದು 'ಮುಸ್ಸಂಜೆ ಮಾತು' ಚಿತ್ರದ ಖ್ಯಾತಿಯ ನಿರ್ದೇಶಕರು ಸುದೀಪ್ ಬಗ್ಗೆ ವೀಕೆಂಡ್ ಟೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.[ಸುದೀಪ್ ಜೀವನದ 'ಬೆಸ್ಟ್ ಫ್ರೆಂಡ್ಸ್' ಯಾರು ಅಂದ್ಕೊಂಡ್ರೀ.? 'ಇವರೇ'.!]

ನಿರ್ದೇಶಕ ಶಶಾಂಕ್

"ಪ್ರತಿಯೊಬ್ಬನು ಒಂದು ಪಾತ್ರವನ್ನು ನಿರ್ವಹಿಸಿದ ಮೇಲೆ ಅವರದೇ ಆದ ಒಂದು ಕನಸುಗಳು ಇರುತ್ತವೆ. ಆಮೇಲೆ ನಾವು ನಿರ್ದೇಶಕರು ಪ್ರತಿಯೊಂದು ಪಾತ್ರವನ್ನು ಒಂದು ಕಲ್ಪನೆಯ ರೂಪದಲ್ಲಿ ನೋಡಿರುತ್ತೇವೆ. ಆ ಕಲ್ಪನೆ ಸುದೀಪ್ ಅವರು ನಟನೆಯಲ್ಲಿ ಬರುತ್ತದೆ. ಅಲ್ಲದೆ ನಾವು ಕಲ್ಪನೆ ಮಾಡಿದ ಎಲ್ಲಾ ಪಾತ್ರಗಳು ಅವರ ನಟನೆಯಲ್ಲಿ ಕಾಣಿಸುತ್ತದೆ". ಎಂದು 'ಬಚ್ಚನ್' ಖ್ಯಾತಿಯ ನಿರ್ದೇಶಕರ ಮುತ್ತಿನಂತಹ ಮಾತು

ನಿರ್ದೇಶಕ ಎಸ್.ಮಹೇಂದ್ರ

"ಒಬ್ಬ ಕಲಾವಿದನಿಗೆ ಇರಬೇಕಾದ ಅಚ್ಚುಕಟ್ಟುತನ ಅದು ಸುದೀಪ್ ಅವರಲ್ಲಿ ಇದೆ, ಅದನ್ನು ನಾನು ನೋಡಿದ್ದೀನಿ. ವಿಷ್ಣು ಸರ್ ಅವರ ನಂತರದ ಸ್ಥಾನವನ್ನು ನೀವು ತುಂಬುತ್ತಾ ಇದ್ದೀರಿ ಅಂತ ನಾನು ಹೇಳೋಕೆ ಇಷ್ಟ ಪಡ್ತೀನಿ", ಎಂದು ನಿರ್ದೇಶಕ ಎಸ್ ಮಹೇಂದ್ರ ಅವರು ನುಡಿಯುತ್ತಾರೆ.

ನಿರ್ದೇಶಕ ಚಿ.ಗುರುದತ್

"ಯಾವುದೇ ವಿಷಯದಲ್ಲಿ ಸುದೀಪ್ ಅವರು ಪಕ್ಕಾ ಆಗಿರ್ತಾರೆ, ಡಬ್ ಮಾಡಿದ್ದು ಸರಿ ಇಲ್ಲ ಅಂದ್ರೆ, ಅಥವಾ ಅದರಲ್ಲಿ ಯಾವುದಾದ್ರೂ ಲೋಪ ಕಂಡಲ್ಲಿ ಅವರೇ ಥಿಯೇಟರ್ ಹಾಕಿಕೊಂಡು ರೀ-ಡಬ್ ಮಾಡ್ತಾರೆ. ಎಲ್ಲವನ್ನೂ ನೀಟಾಗಿ ಮ್ಯಾನೇಜ್ ಮಾಡ್ತಾರೆ".

ಚಿ.ಗುರುದತ್

"ಆಮೇಲೆ ಸುದೀಪ್ ಅವರ ತಾಳ್ಮೆ ನನಗೆ ತುಂಬಾ ಇಷ್ಟ. ಒಂದು ಸಾರಿ 'ಕಾಮಣ್ಣನ ಮಕ್ಕಳು' ಶೂಟಿಂಗ್ ಟೈಮ್ ನಲ್ಲಿ ನನಗೆ ಬೇರೆಲ್ಲೋ ಹೋಗ್ಬೇಕಾಗಿತ್ತು. ಆವಾಗ ನಾನು ಸುದೀಪ್ ಅವರಿಗೆ ಫೋನ್ ಮಾಡಿ ನಾನು ಬರೋದು ಲೇಟ್ ಆಗುತ್ತೆ ನೀವು ಲೇಟಾಗಿ ಬನ್ನಿ ಅಂದೆ. ಅದಕ್ಕೆ ಅವರು ಪರವಾಗಿಲ್ಲ ನೀವು ಆರಾಮವಾಗಿ ಬನ್ನಿ ನಾನು ಕಾಯ್ತೀನಿ ಅಂದ್ರು. ಅದು ಅವರಲ್ಲಿ ಇರೋ ತಾಳ್ಮೆಯ ಗುಣ ಎಲ್ಲರಿಗೂ ಇಷ್ಟವಾಗುತ್ತದೆ. ಎಂದು ಗುರುದತ್ ಹಂಚಿಕೊಂಡಿದ್ದಾರೆ.

ನಿರ್ದೇಶಕ ಪಿ.ಅಯ್ಯಪ್ಪ

"ನೀನು ಯಾವಾಗ್ಲೂ ಒಳ್ಳೆ ಪ್ರಿಪೇರ್ ಆಗಿ ಸೆಟ್ ಗೆ ಬರ್ತಾ ಇದ್ದೆ. ಇದು ಎಲ್ಲಾ ನಿರ್ದೇಶಕರಿಗೆ ಒಂದು ಪ್ಲಸ್ ಪಾಯಿಂಟ್. ಪ್ರತೀ ದಿನ ನನಗಿಂತ ಮುಂಚೆ ನೀನು ಸೆಟ್ ಗೆ ಬರ್ತಾ ಇದ್ದೆ. ನಾನು ಒಂದು ಬಾರಿ ಆದ್ರೂ ಬೀಟ್ ಮಾಡ್ಬೇಕು ಅಂತ ಅನ್ಕೊಂಡಿದ್ದೆ. ಆದರೆ ಅದು ಇದುವರೆಗೂ ಆಗ್ಲಿಲ್ಲ ಅನ್ನೋ ಬೇಜಾರು ನನಗೆ ಇದೆ". ಎಂದು 'ವರದನಾಯಕ' ಚಿತ್ರದ ನಿರ್ದೇಶಕ ಅಯ್ಯಪ್ಪ ಹೇಳುತ್ತಾರೆ.

ನಿರ್ದೇಶಕ ಯೋಗರಾಜ್ ಭಟ್

'ಇಂತಹ ದೊಡ್ಡ ಪ್ರತಿಭೆ ಇವತ್ತು ಈ ಕುರ್ಚಿಯಲ್ಲಿ ಬಂದು ಕೂತಿದೆ. ಇವತ್ತು ಈ ಕುರ್ಚಿಗೆ ಒಂದು ರೀತಿಯ ಕಳೆ ಬಂದಿದೆ. ಜೊತೆಗೆ ಅತೀ ತೂಕದ ವ್ಯಕ್ತಿ ಈ ಕುರ್ಚಿಯಲ್ಲಿ ಕುಳಿತಿದೆ ಎಂದರೆ ತುಂಬಾ ಖುಷಿ ಎನಿಸುತ್ತದೆ. ಎಂದು ನಿರ್ದೇಶಕ ಯೋಗರಾಜ್ ಭಟ್ ಅವರು ಕಿಚ್ಚ ಸುದೀಪ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

English summary
Sandalwood directors like Director Shashank, Director S Mahendar, Director Chi. Guru Dutt and Director Ayyappa Sharma Spoke about Kannada Actor, Director Kiccha Sudeep in Zee Kannada channel's popular show Weekend With Ramesh season2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada