»   » ಅರ್ಜುನ್ ಜನ್ಯ ನೋವಿನಲ್ಲಿ ಹುಟ್ಟಿತ್ತಂತೆ 'ಅಪ್ಪಾ ಐ ಲವ್ ಯೂ' ಹಾಡು!

ಅರ್ಜುನ್ ಜನ್ಯ ನೋವಿನಲ್ಲಿ ಹುಟ್ಟಿತ್ತಂತೆ 'ಅಪ್ಪಾ ಐ ಲವ್ ಯೂ' ಹಾಡು!

Posted By:
Subscribe to Filmibeat Kannada

'ಅಪ್ಪಾ ಐ ಲವ್ ಯೂ'......'ಚೌಕ' ಚಿತ್ರದ ಈ ಸೂಪರ್ ಹಿಟ್ ಹಾಡನ್ನ ಯಾರು ತಾನೆ ಮರೆಯೋಕೆ ಆಗುತ್ತೆ. ಈ ಹಾಡು ಕೇಳಿದ ಪ್ರತಿಯೊಬ್ಬರು ತಮ್ಮ ತಂದೆಯನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಅದೇಷ್ಟೋ ಜನ ತಮ್ಮ ತಂದೆಯನ್ನ ನೋಡಲು ಊರುಗಳಿಗೆ ಹೋಗಿದ್ದಾರೆ. ಇಂತಹ ಮನಮುಟ್ಟುವಂತಹ ಹಾಡಿನ ಹಿಂದೆ ಒಂದು ಹೃದಯಸ್ವರ್ಶಿಸುವ ಕಥೆಯಿದೆ.[ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?]

ಹೌದು, ಈ ಹಾಡಿಗೂ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೂ ಭಾವನಾತ್ಮಕ ಸಂಬಂಧ. ಈ ಹಾಡು ಹುಟ್ಟಿದ್ದು ಕೂಡ ಅಷ್ಟೇ ಭಾವನಾತ್ಮಕವಾಗಿಯೇ. ಅದು ಏನು ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಹೇಳಿಕೊಂಡಿದ್ದಾರೆ.

ಈ ಹಾಡು ಚಿತ್ರದಲ್ಲಿ ಇರಲಿಲ್ಲ!

'ಅಪ್ಪ ಐ ಲವ್ ಯೂ'.....ಹಾಡು 'ಚೌಕ' ಚಿತ್ರದಲ್ಲಿ ಇರಲಿಲ್ಲ. ಇದನ್ನ ಒಂದು ಬಿಟ್ ರೀತಿಯಲ್ಲಿ ಬಳಸಬೇಕಿತ್ತು ಅಷ್ಟೇ. ಆದ್ರೆ, ಅರ್ಜುನ್ ಜನ್ಯ ಅವರ ಎಮೋಷನ್ ಈ ಹಾಡನ್ನ ಪೂರ್ತಿ ಬಳಸುವಂತೆ ಮಾಡಿತು. ['ಲೋಕೇಶ್ ಕುಮಾರ್'ಗೆ ಅರ್ಜುನ್ ಎಂದು ಹೆಸರಿಟ್ಟಿದ್ದು ಒಬ್ಬ ಸಾಹಿತಿ!]

ಅಪ್ಪ ಸಾಂಗ್ ಹುಟ್ಟಲು ಅರ್ಜುನ್ ಕಾರಣ

ಅಪ್ಪ ಐ ಲವ್ ಯೂ ಸಾಂಗ್ ಹುಟ್ಟಲು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾರಣ. ಕೇವಲ ಬಿಟ್ ರೀತಿಯಲ್ಲಿದ್ದ ಹಾಡನ್ನ, ಪೂರ್ತಿ ಮಾಡಿಬಿಟ್ಟರಂತೆ. ಆಮೇಲೆ ನಿರ್ದೇಶಕರಿಗೆ ಹೇಳಿದರಂತೆ. ಸರ್, ಇಂತಹ ಅವಕಾಶ ಮತ್ತೆ ಸಿಗಲ್ಲ. ಈ ಹಾಡನ್ನ ಪೂರ್ತಿ ಬಳಸಿಕೊಳ್ಳೋಣ ಎಂದು. ಆಮೇಲೆ ಈ ಹಾಡು ಪೂರ್ತಿ ಹಾಡಾಯಿತ್ತಂತೆ.[ಅನುಶ್ರೀ ಮೇಲೆ ಅರ್ಜುನ್ ಜನ್ಯಾ ಪತ್ನಿಗೆ ಕೋಪ ಇದ್ಯಾ?]

ಅಪ್ಪನಿಗಾಗಿ ಲೆಟರ್ ಬರೆದ ಅರ್ಜುನ್ ಜನ್ಯ

ಈ ಹಾಡು ಪೂರ್ತಿ ಬರೆದ ನಂತರ ಅರ್ಜುನ್ ಜನ್ಯ ಅವರು ಅವರ ತಂದೆಯ ನೆನಪಲ್ಲಿ ಒಂದು ಪತ್ರ ಬರೆದರಂತೆ. ''ಅಪ್ಪ ನಿನಗಾಗಿ ಹಾಡು ಬರೆದು. ನೀನು ಇಲ್ಲ. ಆದ್ರೂ ನಿನಗೆ ಕೇಳಿಸಬೇಕು. ನನಗೆ ಗೊತ್ತು ನಿನು ಎಲ್ಲೋ ನಿಂತ್ಕೊಂಡು ಈ ಹಾಡು ಕೇಳ್ತಿದ್ದಿಯಾ? ಎಂದು ಅಪ್ಪನನ್ನ ನೆನಸಿಕೊಂಡರಂತೆ.[ನೀರಿಲ್ಲದ ಬಾವಿಗೆ ಅರ್ಜುನ್ ಜನ್ಯ ಬಿದ್ದಿದ್ಯಾಕೆ?]

ಪ್ರೇಕ್ಷಕರ ಮನಗೆದ್ದ ಹಾಡು

ವಿ.ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಅದಕ್ಕೆ ಅರ್ಜುನ್ ಜನ್ಯ ಅವರು ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾಶಿನಾಥ್ ಮತ್ತು ಮಾನ್ವಿತಾ ಹರೀಶ್ ಈ ಹಾಡಿನಲ್ಲಿ ಅಭಿನಯಿಸಿದ್ದರು. ಚೌಕ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ದ್ವಾರಕೀಶ್ ನಿರ್ಮಾಣ ಮಾಡಿದ್ದರು.

English summary
Weekend With Ramesh 3: Arjun Janya Spoke About 'Appa i Love You Pa' Song of Chowka Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada