»   » ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?

ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಇಂದು ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ. ಅರ್ಜುನ್ ಅವರ ಈ ಯಶಸ್ಸಿಗೆ ಕಾರಣ ಹಲವರು. ಆದ್ರೆ, ಅವರೊಬ್ಬ ಸಂಗೀತ ನಿರ್ದೇಶಕನಾಗಬೇಕು ಎಂಬ ಬೀಜ ಬಿತ್ತಿದ್ದು ಮಾತ್ರ ಒಬ್ಬರು. ಯಾರವರು?[ಅನುಶ್ರೀ ಮೇಲೆ ಅರ್ಜುನ್ ಜನ್ಯಾ ಪತ್ನಿಗೆ ಕೋಪ ಇದ್ಯಾ?]

ಅರ್ಜುನ್ ಗೆ ಸಂಗೀತದ ಮೇಲೆ ಒಲವು ಮೂಡಲು ಕಾರಣವಾಗಿದ್ದನ್ನ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....

ಅಂದು 'ರೋಜಾ' ಸಿನಿಮಾ ಬರುತ್ತಿದ್ದರು

ಅರ್ಜುನ್ ಮತ್ತು ಅವರ ತಂದೆ ಅಶ್ವತ್ ಕುಮಾರ್ ಇಬ್ಬರು ಮಣಿರತ್ನಂ ನಿರ್ದೇಶನದ 'ರೋಜಾ' ಸಿನಿಮಾ ನೋಡಿ ಕಾರಿನಲ್ಲಿ ಬರುತ್ತಿದ್ದರಂತೆ. ಈ ವೇಳೆ ಅವರ ತಂದೆ 'ರೋಜಾ' ಚಿತ್ರದ ಸಂಗೀತ ನಿರ್ದೇಶಕರ ಬಗ್ಗೆ ಮೆಚ್ಚುಗೆ ಮಾತುಗಳನ್ನ ಹೇಳಿದ್ದರಂತೆ. ಅಂದು ಅವರ ಅಪ್ಪ ಹೇಳಿದ ಮಾತುಗಳು ಅರ್ಜುನ್ ಅವರ ಕಿವಿಯಲ್ಲಿ ಅಚ್ಚಳಿಯದ ಹಾಗೆ ಕೂತುಬಿಟ್ಟಿತಂತೆ.

'ರೋಜಾ' ಚಿತ್ರದ ಸಂಗೀತ ನಿರ್ದೇಶಕ ಯಾರು?

ಮಣಿರತ್ನಂ ನಿರ್ದೇಶನ ಮಾಡಿದ್ದ 'ರೋಜಾ' ಚಿತ್ರದ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್. ಇದು ರೆಹಮಾನ್ ಅವರ ಚೊಚ್ಚಲ ಸಂಗೀತ ನಿರ್ದೇಶನದ ಚಿತ್ರ.[ಓದುಗರು ಮೆಚ್ಚಿದ ಅರ್ಜುನ್ ಜನ್ಯಗೆ 'ಅತ್ಯುತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿ.!]

ಅರ್ಜುನ್ ಜನ್ಯ ಅವರ ಅಪ್ಪ ಹೇಳಿದ್ದೇನು?

''ಎ.ಆರ್ ರೆಹಮಾನ್....ಇವನ್ಯಾರು ಚಿಕ್ಕ ಹುಡುಗ, ಮಣಿರತ್ನಂ ಸಿನಿಮಾಗೆ ಮ್ಯೂಸಿಕ್ ಮಾಡಿದ್ದಾನೆ. ಎಷ್ಡು ಚೆನ್ನಾಗಿದೆ ಹಾಡುಗಳು. ಮಣಿರತ್ನಂ ಸಿನಿಮಾಗಳಿಗೆ ಇಷ್ಟು ದಿನ ಇಳಯರಾಜಾನೇ ಮ್ಯೂಸಿಕ್ ಮಾಡ್ತಿದ್ದು'' - ಅರ್ಜುನ ಜನ್ಯ

ಅಪ್ಪನ ಜೊತೆ ನೋಡಿದ ಕೊನೆಯ ಸಿನಿಮಾ 'ರೋಜಾ'

ಇದಾದ ಬಳಿಕ ಅರ್ಜುನ್ ಜನ್ಯ ಅವರ ತಂದೆ ಆಕ್ಸಿಡೆಂಟ್ ನಲ್ಲಿ ನಿಧನರಾಗುತ್ತಾರೆ. ಆದ್ರೆ, ಅಂದು ಸಿನಿಮಾ ನೋಡಿ ಬರುತ್ತಿದ್ದಾಗ ಎ.ಆರ್.ರೆಹಮಾನ್ ಬಗ್ಗೆ ಅವರ ಅಪ್ಪ ಹೇಳಿದ ಮಾತು ಮತ್ತೆ ಮತ್ತೆ ಅರ್ಜುನ್ ಜನ್ಯ ಅವರಿಗೆ ನೆನಪಾಗುತ್ತಲೇ ಇತ್ತಂತೆ.

ಕಾಡಿದ ಎ.ಆರ್ ರೆಹಮಾನ್

''ನಮ್ಮ ತಂದೆ ಹೇಳಿದಾಗನಿಂದ ಎ.ಆರ್.ರೆಹಮಾನ್ ತುಂಬಾ ಕಾಡುತ್ತಿದ್ದರು. ಅವರು ಹಾಡುಗಳು ಹೆಚ್ಚು ಕೇಳುವುದಕ್ಕೆ ಶುರು ಮಾಡಿದೆ. ಅವರ ಫೋಟೋ ನೋಡುತ್ತಲೇ ಇರುತ್ತಿದ್ದೇ. ಅವರ ಫೋಟೋ ನೋಡುತ್ತಿದ್ದಾಗಲೆಲ್ಲ ನಮ್ಮ ತಂದೆ ನೆನಪಾಗುತ್ತಿದ್ದರು. ಅವರು ಹಾಡು ಕೇಳಿ ಕೇಳಿ, ಅವರ ಫೋಟೋ ನೋಡಿ ನೋಡಿ ಆಗಲೇ ನಿರ್ಧಾರ ಮಾಡಿದ್ದು, ನಾನು ಎ.ಆರ್.ರೆಹಮಾನ್ ಅವರ ತರ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು. ನಮ್ಮ ತಂದೆಯಂತೆ ಹೆಸರು ಉಳಿಸಿಕೊಳ್ಳಬೇಕು ಎಂದು ಕನಸು ಕಂಡೆ''- ಅರ್ಜುನ್ ಜನ್ಯ

English summary
Weekend With Ramesh 3: Arjun janya Spoke About AR Rahman. He Explained How AR Rahman inspire to Arjun Janya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada