»   » ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?

ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?

Posted By:
Subscribe to Filmibeat Kannada

ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಸಾಧಕರನ್ನ 'ಸಾಧಕರ ಸೀಟ್' ಮೇಲೆ ಕೂರಿಸಿ, ಸಾಧಕರ ಜೀವನವನ್ನ ಅವರ ಮುಂದೆಯೇ ಅನಾವರಣಗೊಳಿಸುವ ವಿಶಿಷ್ಟ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'.

ಈಗಾಗಲೇ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಎರಡು ಆವೃತ್ತಿಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಸೇರಿದಂತೆ ಹಲವು ಗಣ್ಯರು ಮಾಡಿರುವ ಸಾಧನೆಯನ್ನ ನೀವೆಲ್ಲ ಕಣ್ತುಂಬಿಕೊಂಡಿದ್ದೀರಾ.[ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!]

ಈಗ ಇದೇ ಸಾಧಕರ ಪಟ್ಟಿಗೆ 'ವೀಕೆಂಡ್ ವಿತ್ ರಮೇಶ್-3' ಶೋನಲ್ಲಿ ನೂತನವಾಗಿ ಸೇರ್ಪಡೆ ಆಗಿರುವವರು ನಟ ಪ್ರಕಾಶ್ ರೈ (ಪ್ರಕಾಶ್ ರಾಜ್). ಕನ್ನಡ, ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟನಾಗಿರುವ ಪ್ರಕಾಶ್ ರೈ ರವರ ಸಾಧನೆಯ ಪಟ್ಟಿ ಇಲ್ಲಿದೆ. ಓದಿರಿ....

ಪ್ರಕಾಶ್ ರೈ ಕುರಿತು....

ಹುಟ್ಟಿದ್ದು - ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆ
ಜನ್ಮ ದಿನಾಂಕ - 1965, ಮಾರ್ಚ್ 26
ತಂದೆ - ಮಂಜುನಾಥ ರೈ
ತಾಯಿ - ಸ್ವರ್ಣಲತಾ ರೈ
ಸಹೋದರಿ - ಆಶಾ
ಸಹೋದರ - ಪ್ರಸಾದ್ ರೈ
ಪತ್ನಿ - ಪೋನಿ ವರ್ಮಾ
ಮಕ್ಕಳು - ಮೇಘನಾ, ಪೂಜಾ, ಸಿದ್ದಾರ್ಥ, ವೇದಾಂತ್

ಪ್ರಕಾಶ್ ರೈ ಸಾಧನೆಯ ಪಯಣ

ನಟ ಪ್ರಕಾಶ್ ರೈ ರಂಗಭೂಮಿ ಕಲಾವಿದರು. 2000 ಕ್ಕೂ ಹೆಚ್ಚಿನ ಬೀದಿ ನಾಟಕ ಮಾಡಿದ್ದಾರೆ. 66 ಕನ್ನಡ ಚಿತ್ರಗಳು, 129 ತಮಿಳು ಚಿತ್ರಗಳು, 149 ತೆಲುಗು ಚಿತ್ರಗಳು, 8 ಮಲಯಾಳಂ, 17 ಹಿಂದಿ, 2 ಇಂಗ್ಲೀಷ್ ಸೇರಿದಂತೆ ಒಟ್ಟು 371 ಸಿನಿಮಾಗಳಲ್ಲಿ ಪ್ರಕಾಶ್ ರೈ ಅಭಿನಯಿಸಿದ್ದಾರೆ.

ಪ್ರಕಾಶ್ ರೈ ಪಡೆದಿರುವ ಪ್ರಶಸ್ತಿಗಳು

'ಇರುವರ್' ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟ, 'ಅಂತಃಪುರಂ', 'ದಯಾ', 'ಕಾಂಚಿವರಂ' ಚಿತ್ರಕ್ಕೆ ಅತ್ಯುತ್ತಮ ನಟ ಹಾಗೂ ಕನ್ನಡದ 'ಪುಟ್ಟಕ್ಕನ ಹೈವೇ' ಚಿತ್ರಕ್ಕಾಗಿ ಅತ್ಯುತ್ತಮ ಪ್ರಾದೇಶಿಕ ಚಿತ್ರದ ನಿರ್ಮಾಪಕ ಪ್ರಶಸ್ತಿ ಸೇರಿದಂತೆ ಒಟ್ಟು 5 ರಾಷ್ಟ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ ಪ್ರಕಾಶ್ ರೈ. ಇವೆಲ್ಲದರ ಜೊತೆಗೆ ನಾಲ್ಕು ತಮಿಳುನಾಡು ರಾಜ್ಯ ಪ್ರಶಸ್ತಿ, ಒಂದು ನಂದಿ ಪ್ರಶಸ್ತಿ, ಹಲವು ಫಿಲ್ಮ್ ಫೇರ್ ಹಾಗೂ ಸೈಮಾ ಅವಾರ್ಡ್ ಪಡೆದಿದ್ದಾರೆ.

ಚಿತ್ರರಂಗದಲ್ಲಿ ಪ್ರಕಾಶ್ ರೈ

ಇಲ್ಲಿಯವರೆಗೂ 20 ಚಿತ್ರಗಳನ್ನ ಪ್ರಕಾಶ್ ರೈ ನಿರ್ಮಾಣ ಮಾಡಿದ್ರೆ, 4 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೇ, 11 ಪ್ರತಿಷ್ಟಿತ ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

English summary
Multilingual Actor Prakash Rai has received many awards in his Acting Career. This article gives you an insight on Prakash Rai's Achievements.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X