»   » ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ಹೇಳಿದ್ದೇನು.?

ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ಹೇಳಿದ್ದೇನು.?

Posted By:
Subscribe to Filmibeat Kannada

ನಿಮಗೆಲ್ಲ ಗೊತ್ತಿರುವ ಹಾಗೆ, 2009 ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ನಟ ಪ್ರಕಾಶ್ ರೈ- ಪತ್ನಿ ಲಲಿತಾ ಕುಮಾರಿ ವಿಚ್ಛೇದನ ಪಡೆದು ಬೇರೆ ಬೇರೆ ಆದರು. ನಂತರ ಕೊರಿಯೋಗ್ರಫರ್ ಪೋನಿ ವರ್ಮಾ ರವರನ್ನ ಪ್ರಕಾಶ್ ರೈ ವಿವಾಹವಾದರು.

ಅಲ್ಲಿಗೆ, ಪ್ರಕಾಶ್ ರೈ ಜೀವನದಲ್ಲಿ ಲಲಿತಾ ಕುಮಾರಿ ರವರದ್ದು ಮುಗಿದ ಅಧ್ಯಾಯ ಅಂತ ಎಲ್ಲರೂ ಭಾವಿಸಿರಬಹುದು. ಆದ್ರೆ, ವಾಸ್ತವ ಅದಲ್ಲ. ವಿಚ್ಛೇದನದ ಬಳಿಕ ಪ್ರಕಾಶ್ ರೈ ಹಾಗೂ ಲಲಿತಾ ಕುಮಾರಿ ಒಳ್ಳೆಯ ಸ್ನೇಹಿತರಾಗಿದ್ದಾರೆ.[ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?]

ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ರವರಿಗೆ ಈಗಲೂ ಹೆಮ್ಮೆ ಇದೆ. ಅದಕ್ಕೆ ಸಾಕ್ಷಿ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಲಲಿತಾ ಕುಮಾರಿ ಆಡಿರುವ ಮಾತುಗಳು....

ಈ ತರಹ ಹೋಮ್ ವರ್ಕ್ ಮಾಡ್ತಾರಾ.?

''ಶೂಟಿಂಗ್ ಗೆ ಹೋಗುವ ಮುನ್ನ ಹೋಮ್ ವರ್ಕ್ ಮಾಡ್ತಿದ್ರಿ. ಬಾತ್ ರೂಂ ನಲ್ಲಿ ದಿಢೀರ್ ಅಂತ ಸದ್ದು ಮಾಡ್ತಿದ್ರಿ. ನಾವು ಭಯದಿಂದ ಓಡಿ ಬಂದು ಕೇಳಿದ್ರೆ, 'ಸಿನಿಮಾಗಾಗಿ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ' ಅಂತಿದ್ರಿ. ನಟಿಸುವುದಕ್ಕೆ ಈ ತರಹನೂ ಪ್ರ್ಯಾಕ್ಟೀಸ್ ಮಾಡ್ತಾರಾ ಅಂತ ಅನಿಸುತ್ತಿತ್ತು ಆವಾಗ'' - ಲಲಿತಾ ಕುಮಾರಿ, ಪ್ರಕಾಶ್ ರೈ ವಿಚ್ಛೇದಿತ ಪತ್ನಿ [ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!]

ನೀವು ಮಾತ್ರವೇ ಕಾರಣ

''ನೀವು ಈ ಮಟ್ಟಕ್ಕೆ ಬೆಳೆಯಲು ನೀವು ಮಾತ್ರವೇ ಕಾರಣ. ನೀವು ಚೆನ್ನೈಗೆ ಬಂದಾಗಿನಿಂದಲೂ ನನಗೆ ನೀವು ಗೊತ್ತು. ನೀವು ಎಷ್ಟು ಹೋಮ್ ವರ್ಕ್ ಮಾಡ್ತಿದ್ರಿ, ಎಷ್ಟು ಕಷ್ಟ ಪಟ್ಟಿದ್ದೀರಿ ಅಂತ ಎಲ್ಲಾ ಗೊತ್ತು'' - ಲಲಿತಾ ಕುಮಾರಿ, ಪ್ರಕಾಶ್ ರೈ ವಿಚ್ಛೇದಿತ ಪತ್ನಿ [ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?]

ನಿಮ್ಮ ಮೇಲೆ ನೀವು ಇಟ್ಟಿರುವ ನಂಬಿಕೆ ಕಾರಣ

''ಎಲ್ಲವನ್ನೂ ಚಾಲೆಂಜ್ ಆಗಿ ತೆಗೆದುಕೊಂಡು, 'ಈ ಸಿನಿಮಾಗೆ ಅವಾರ್ಡ್ ತೆಗೆದುಕೊಳ್ಳುತ್ತೇನೆ' ಅಂತ ಹೇಳಿ ಅದೇ ಸಿನಿಮಾಗೆ ಅವಾರ್ಡ್ ತೆಗೆದುಕೊಳ್ಳುತ್ತಿದ್ರಿ. ಇದಕ್ಕೆಲ್ಲ ಕಾರಣ ನೀವು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಮಾತ್ರ'' - ಲಲಿತಾ ಕುಮಾರಿ, ಪ್ರಕಾಶ್ ರೈ ವಿಚ್ಛೇದಿತ ಪತ್ನಿ

'ಆಸೈ' ಸಿನಿಮಾ ಬಿಡುಗಡೆ ಆದಾಗ...

''ನಿಮ್ಮ 'ಆಸೈ' ಸಿನಿಮಾ ಬಿಡುಗಡೆಯಾದಾಗ, ನನ್ನ ಗೆಳತಿ ವಾಣಿ ಫೋನ್ ಮಾಡಿ, ''ಆಸೈ ಸಿನಿಮಾ ನೋಡಿದೆ. ತುಂಬಾ ಭಯ ಆಯ್ತು. ನಿಜವಾಗಿಯೂ ನಿನ್ನ ಗಂಡ ಹಾಗೆಯೇ ಇದ್ದಾರಾ.? ಇಲ್ಲ ಪ್ರೀತಿಯಿಂದ ನೋಡಿಕೊಳ್ಳುತ್ತಾರಾ'' ಅಂತ ಕೇಳಿದ್ದರು. ಆಗ ನನಗೆ ನಗು ಬಂತು. ನಾನು ಹೇಳಿದೆ, ''ಅದು ಬೇರೆ.. ಇದು ಬೇರೆ'' - ಲಲಿತಾ ಕುಮಾರಿ, ಪ್ರಕಾಶ್ ರೈ ವಿಚ್ಛೇದಿತ ಪತ್ನಿ

ಸಂತಸದ ಕ್ಷಣಗಳ ಮೆಲುಕು

''ನಾನು ತುಂಬಾ ನೆನಪು ಮಾಡಿಕೊಂಡು ಎಲ್ಲರ ಹತ್ತಿರ ಹೇಳಿಕೊಂಡು ನಗುವ ವಿಷಯವೆಂದರೆ, ''ಮೊದಲ ಮಗು ಗಂಡೋ? ಹೆಣ್ಣೋ.? ಅಂತ ತಿಳಿದುಕೊಳ್ಳಲು ನೀವು ತುಂಬಾ ಆಸೆ ಪಟ್ಟಿದ್ರಿ. ಹೆರಿಗೆ ಮುನ್ನ ಸ್ಕ್ಯಾನ್ನಿಂಗ್ ಮಾಡುವಾಗ ಜೊತೆಯಲ್ಲಿಯೇ ಬಂದಿದ್ರಿ. ಎಷ್ಟೇ ಕೇಳಿದ್ರೂ, ಡಾಕ್ಟರ್ ಹೇಳಲೇ ಇಲ್ಲ. ಆದರೆ ಕೊನೆಯಲ್ಲಿ ಒಂದು ಸುಳಿವು ಕೊಟ್ರು. ಈ ಮಗು ಹುಟ್ಟಿದರೆ, ನಿಮ್ಮ ಮನೆಗೆ ಮಹಾಲಕ್ಷ್ಮಿ ಬರುತ್ತಾಳೆ ಅಂತ. ಕೂಡಲೆ ಕಾರು ತೆಗೆದುಕೊಂಡು ಬರುವಾಗ ನಡು ರಸ್ತೆಯಲ್ಲಿ ಕಾರ್ ನಿಲ್ಲಿಸಿ, ''ನನಗೆ ಹೆಣ್ಣು ಮಗು ಹುಟ್ಟಿದ್ದಾಳೆ'' ಅಂತ ಹೇಳಿ ದೊಡ್ಡ ಟ್ರಾಫಿಕ್ ಜಾಮ್ ಮಾಡಿಬಿಟ್ಟಿದ್ರಿ. ಈಗಲೂ ಇದನ್ನ ಹೇಳಿ ನನ್ನ ಫ್ರೆಂಡ್ಸ್ ಹತ್ತಿರ ನಗ್ತಾ ಇರ್ತೀನಿ'' - ಲಲಿತಾ ಕುಮಾರಿ, ಪ್ರಕಾಶ್ ರೈ ವಿಚ್ಛೇದಿತ ಪತ್ನಿ

ಮಗನನ್ನ ಕಳೆದುಕೊಂಡಾಗ...

''ಸೂರ್ಯನನ್ನ ನಾವು ಒಟ್ಟಿಗೆ ಕಳೆದುಕೊಂಡ್ವಿ. ಇಬ್ಬರಿಗೂ ಅವನನ್ನ ಕಳೆದುಕೊಂಡ ದುಃಖ ಹಾಗೆಯೇ ಇದೆ. ಆ ಸಮಯದಲ್ಲಿ ನಿಮ್ಮ ಶೂಟಿಂಗ್ ಎಲ್ಲ ಕ್ಯಾನ್ಸಲ್ ಮಾಡಿ ನನ್ನ ಜೊತೆ ಇದ್ರಿ. ನನ್ನಿಂದ ಸೂರ್ಯನ ಮರೆಯೋಕೆ ಆಗ್ತಿರ್ಲಿಲ್ಲ. ಆ ಸಮಯದಲ್ಲಿ ನೀವು ಕೊಟ್ಟಿರುವ ಆತ್ಮವಿಶ್ವಾಸ ನನ್ನನ್ನ ಶಾಂತವಾಗಿಸಿಬಿಟ್ಟಿತ್ತು'' - ಲಲಿತಾ ಕುಮಾರಿ, ಪ್ರಕಾಶ್ ರೈ ವಿಚ್ಛೇದಿತ ಪತ್ನಿ [ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ]

ಮಗನನ್ನ ಮರೆಯಲು ಆಗಲ್ಲ

''ಮಗ ಗಾಳಿಪಟ ಹಾರಿಸುತ್ತಿರುವಾಗ ತೀರಿಕೊಂಡ. ಅವನಿಲ್ಲ ಎನ್ನುವ ನೋವು ಮರೆಯಲು ಆಗಲ್ಲ'' - ಪ್ರಕಾಶ್ ರೈ, ನಟ

ವಿಚ್ಛೇದಿತ ಪತ್ನಿ ಬಗ್ಗೆ ಪ್ರಕಾಶ್ ರೈ ಹೇಳುವುದೇನು.?

''ನನಗೆ ಲಲಿತಾ ಈಗ ಒಳ್ಳೆಯ ಗೆಳತಿ. ಜೀವನದಲ್ಲಿ difference of opinion ಬರುತ್ತದೆ. ಸುಳ್ಳು ಹೇಳಿ ಬದುಕುವುದರಲ್ಲಿ ಅರ್ಥ ಇಲ್ಲ. ಹಾಗಂತ ನನ್ನ ತಾಯಿ ಹಾಗೂ ನನ್ನ ಮಕ್ಕಳು ಅವಳನ್ನ ಬಿಡಲಿಲ್ಲ. ಇದು ನಮ್ಮಿಬ್ಬರ ವೈಯುಕ್ತಿಕ ವಿಷಯ. ಜೊತೆಯಲ್ಲಿ ಇರಲು ಆಗಲ್ಲ ಎಂದ ತಕ್ಷಣ ಬೇರೆ ಆದ್ವಿ. ಈಗ ಒಳ್ಳೆಯ ಸ್ನೇಹಿತರು. ನಮ್ಮ ತಾಯಿಗೆ ಅವಳೇ ಸೊಸೆ'' - ಲಲಿತಾ ಕುಮಾರಿ, ಪ್ರಕಾಶ್ ರೈ ವಿಚ್ಛೇದಿತ ಪತ್ನಿ

English summary
Multilingual Actor Prakash Rai spoke about this EX Wife in 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada