»   » ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ

ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ

Posted By:
Subscribe to Filmibeat Kannada

ರಂಗಭೂಮಿ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ ನಂತರ ದೊಡ್ಡ ನಟನಾಗಬೇಕು ಎಂಬ ಕನಸು ಹೊತ್ತಿದ್ದ ಪ್ರಕಾಶ್ ರೈ ಅಂದು ಅವಕಾಶಕ್ಕಾಗಿ ಗಾಂಧಿನಗರದಲ್ಲಿ ಅಲೆದಾಡಿದ್ದು ಅಷ್ಟಿಷ್ಟಲ್ಲ. ಒಂದೇ ಒಂದು ಚಾನ್ಸ್ ಗಾಗಿ ಕಾಡಿ ಬೇಡಿದರೂ ಪ್ರಕಾಶ್ ರೈಗೆ ಒಲಿದು ಬರ್ತಿದ್ದದ್ದು ಸಣ್ಣ ಪುಟ್ಟ ಪಾತ್ರಗಳಷ್ಟೇ. ಉತ್ತಮ ಅವಕಾಶಗಳು ಸಿಗದೆ ಅಂದು ಪ್ರತಿಭಾವಂತ ಪ್ರಕಾಶ್ ರೈ ಅಂತರಾಳದಲ್ಲಿ ಹತಾಶೆಯ ಬೇಗುದಿ ಕುದಿಯುತ್ತಿತ್ತು.

ಅಂದಿನ ದಿನಗಳ ಬಗ್ಗೆ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಹೇಳಿದಿಷ್ಟು....

ಅಂದಿನ ದಿನಗಳ ಬಗ್ಗೆ ಪ್ರಕಾಶ್ ರೈ ಮಾತು

''ಯಾರನ್ನೂ ದೂರುವುದಕ್ಕೆ ಇಷ್ಟ ಪಡಲ್ಲ. ಆದ್ರೆ, ಒಳಗೆ ಹೋಗಲು ದಾರಿ ಇರಲಿಲ್ಲ. ಪ್ರತಿಭೆ ಇರುವುದು ಮುಖ್ಯ ಅಲ್ಲ. ಆದ್ರೆ ಅದನ್ನ ಗುರುತಿಸುವವರು ಮುಖ್ಯ'' - ಪ್ರಕಾಶ್ ರೈ, ನಟ [ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?]

ಹತಾಶೆ ಶುರು ಆಯ್ತು

''ಅಲೆಯುತ್ತಿದ್ದೆ ಗಾಂಧಿನಗರದಲ್ಲಿ. 'ಅಯ್ಯೋ ಪಾಪಾ..' ಅಂತ ಚಿಕ್ಕ ಪಾತ್ರಗಳನ್ನ ಕೊಡುತ್ತಿದ್ದರು. ಆದ್ರೆ, ಅದೆಲ್ಲ ನನಗಲ್ಲ ಅಂತ ಒಳಗೆ Frustration ಶುರು ಆಗೋದು'' - ಪ್ರಕಾಶ್ ರೈ, ನಟ [ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!]

ಯಾರೂ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ

''ವಯಸ್ಸಾಗುತ್ತಿದೆ... ದುಡಿಯಬೇಕು... ಏನು ಮಾಡಬೇಕು ಅಂತ ಗೊತ್ತಿಲ್ಲ. ನನಗೆ ಎಲ್ಲೂ ಏನೂ ಕಾಣಿಸುತ್ತಿರಲಿಲ್ಲ. ಪಾತ್ರಗಳು ಬರುತ್ತಿತ್ತು. ಆದ್ರೆ, ನನ್ನ ಹತಾಶೆಯನ್ನ ಹೇಳಿಕೊಂಡರೂ, ಅದನ್ನ ಅರ್ಥ ಮಾಡಿಕೊಳ್ಳುವವರು ಇರ್ಲಿಲ್ಲ'' - ಪ್ರಕಾಶ್ ರೈ, ನಟ [ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?]

ಬೆಳೆಸುವ ಪ್ರಯತ್ನ ಯಾರೂ ಮಾಡಲಿಲ್ಲ

''ಯಾರೂ ನನ್ನನ್ನ ತುಳಿಯಲಿಲ್ಲ. ಆದ್ರೆ, ಯಾರೂ ನನ್ನನ್ನ ಬೆಳೆಸುವ ಪ್ರಯತ್ನ ಮಾಡಲಿಲ್ಲ. ಪ್ರಾಯಶಃ ಇದೆಲ್ಲವೂ ಆಗಿದ್ರೆ, ಈಗಿರುವ ಪ್ರಕಾಶ್ ರೈ ನಿಮಗೆ ಸಿಗುತ್ತಿರಲಿಲ್ಲ'' - ಪ್ರಕಾಶ್ ರೈ, ನಟ

English summary
Multilingual Actor Prakash Rai revealed his struggling days in Sandalwood during 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada