»   » ಪ್ರಕಾಶ್ ರೈ 2ನೇ ಲವ್ ಸ್ಟೋರಿ ಬಿಚ್ಚಿಟ್ಟ ಪೋನಿ ವರ್ಮಾ

ಪ್ರಕಾಶ್ ರೈ 2ನೇ ಲವ್ ಸ್ಟೋರಿ ಬಿಚ್ಚಿಟ್ಟ ಪೋನಿ ವರ್ಮಾ

Posted By:
Subscribe to Filmibeat Kannada

ಎಲ್ಲರಿಗೂ ಗೊತ್ತಿರುವ ನಟ ಪ್ರಕಾಶ್ ರೈ ಅವರಿಗೆ ಎರಡನೇ ವಿವಾಹವಾಗಿದೆ. 2009 ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ - ನಟ ಪ್ರಕಾಶ್ ರೈ ಮತ್ತು ಪತ್ನಿ ಲಲಿತಾ ಕುಮಾರಿ ವಿಚ್ಛೇದನ ಪಡೆದು ಬೇರೆ ಬೇರೆ ಆದರು.

ಆ ನಂತರ ಕೊರಿಯೋಗ್ರಫರ್ ಪೋನಿ ವರ್ಮಾ ರವರನ್ನ ಪ್ರಕಾಶ್ ರೈ ವಿವಾಹವಾದರು. ಅಂದ್ಹಾಗೆ, ಪೋನಿ ವರ್ಮಾ ಹಾಗೂ ಪ್ರಕಾಶ್ ರೈ ಅವರ ಮಧ್ಯೆ ಒಂದು ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇದೆ. ಪ್ರಕಾಶ್ ರೈ ಅವರು, ಲವ್ ಪ್ರಪೋಸ್ ಮಾಡಿದ್ದ ಸ್ಟೈಲ್, ಆ ನಂತರ ಅವರಿಬ್ಬರ ಲೈಫ್ ಹೇಗಿದೆ ಎಂಬುದನ್ನ ಸ್ವತಃ ಪೋನಿ ವರ್ಮಾ ಅವರೇ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಪ್ರಕಾಶ್ ರೈ ಅವರನ್ನ ಮೊದಲು ನೋಡಿದ್ದು!

''ನಾನು ಪೂರಿ ಜಗನ್ನಾಥ್ ಅವರ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಅವರು ನಿರ್ದೇಶನ ಮಾಡಿರುವ ಸಿನಿಮಾಗಳ ಡಿವಿಡಿಯನ್ನ ನೋಡಲು ಕೊಟ್ಟರು. ಅದರಲ್ಲಿ ನಾನು ನಿಮ್ಮನ್ನ ನೋಡಿದೆ. ನಾನು ಪೂರಿ ಅವರನ್ನ ಕೇಳಿದೆ ಯಾರದು ಅಂತ. ಅವರು ರವಿತೇಜಾ ಎಂದರು. ನಾನು ಕೇಳ್ದೆ ಅವರಲ್ಲ, ಮುದುಕನ ಪಾತ್ರ ಮಾಡಿರೋದು ಯಾರು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು. ಆಗ ನಾಗ್ ಅವರು ನಿಮ್ಮ ಬಗ್ಗೆ ಹೇಳಿದರು. ದಕ್ಷಿಣ ಭಾರತದ ಪ್ರಸಿದ್ಧ ನಟ ಅಂತ.'' - ಪೋನಿ ವರ್ಮಾ, ಪ್ರಕಾಶ್ ರೈ ಪತ್ನಿ[ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ]

'ನೀವು ಸ್ಟೈಲ್ ಆಗಿದ್ರಿ'

''ಒಮ್ಮೆ ನೀವು ಸೆಟ್ ನಲ್ಲಿ ತುಂಬಾ ಸ್ಟೈಲ್ ಆಗಿ ನಡೆದುಕೊಂಡು ಹೋಗ್ತಾ ಇದ್ರಿ. ನನ್ನ ಅಸಿಸ್ಟಂಟ್ ಹೇಳೀದ್ರು, ಮೇಡಂ ನೀವು ನೋಡಿದ ಆ ಮುದಕನ ಪಾತ್ರ ಮಾಡಿದವರು ಇವರೇ ಎಂದು. ನನಗೆ ಆಶ್ಚರ್ಯವಾಯಿತು. ನಾನು ಆಗ ಅನ್ಕೊಂಡೆ ನೀವು ಅಷ್ಟು ಓಲ್ಡ್ ಅಲ್ಲ, ಯಂಗ್ ಆಗಿದಿರಾ ಅಂತ''. -ಪೋನಿ ವರ್ಮಾ, ಪ್ರಕಾಶ್ ರೈ ಪತ್ನಿ[ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?]

ನಿಮ್ಮ ಮೇಲೆ ಒಲವು ಮೂಡಿತು

''ನಾನು ನಮ್ಮೊಂದಿಗೆ ಮಾತನಾಡಿದಾಗ ಗೊತ್ತಾಯ್ತು. ನೀವು ಬಹಳ ಹಾಸ್ಯ ಮನೋಭಾವವುಳ್ಳವರು ಎಂದು. ನೀವು ತುಂಬಾ ವಿಭಿನ್ನ. ನನ್ನ ಹೃದಯದಲ್ಲಿ ನಿಮ್ಮ ಮೇಲೆ ಒಂದು ಬಗೆಯ ಒಲವು ಮೂಡಿತು. ''ಬಹಳಷ್ಟು ಮಂದಿಗೆ ತಿಳಿದಿಲ್ಲ. ನೀವು ತುಂಬಾ ರೊಮ್ಯಾಂಟಿಕ್ ಮನುಷ್ಯ. ಪ್ರತಿ ಹುಡುಗಿಯು ಬಯಸುವಂತಹ ಹೃದಯವಂತಿಕೆ ನಿಮ್ಮಲ್ಲಿದೆ''. - ಪೋನಿ ವರ್ಮಾ, ಪ್ರಕಾಶ್ ರೈ ಪತ್ನಿ[ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ಹೇಳಿದ್ದೇನು.?]

ನೀವು ಪ್ರಪೋಸ್ ಮಾಡಿದ ಆ ಕ್ಷಣ

''ನೀವು ಪ್ರಪೋಸ್ ಮಾಡಿದ್ದು ನಂಗೆ ಒಂದು ಕನಸಿನ ಹಾಗೆ ಇತ್ತು. ನಾವು ಆಸ್ಟ್ರಿಯಾದಲ್ಲಿ ಶೂಟಿಂಗ್ ಮಾಡ್ತಾ ಇದ್ವಿ. ನೀವೂ ನನಗಿಂತ ಮೊದಲೇ ವೆನ್ನೀಸ್ ಗೆ ಹೊರಟು ಹೋದ್ರಿ. ನನ್ನ ಶೂಟಿಂಗ್ ಮುಗಿದ ಮೇಲೆ ನೀವು ನಿಮ್ಮವರಿಗೆ ನನ್ನನ್ನೂ ಅಲ್ಲಿಗೆ ಕರೆತರಲು ಹೇಳಿದ್ರಿ, ನಾನು ನದಿಯಲ್ಲಿ ಬಂದು ನಿಮ್ಮನ್ನು ನೋಡಿದೆ.- ಪೋನಿ ವರ್ಮಾ, ಪ್ರಕಾಶ್ ರೈ ಪತ್ನಿ

ನನ್ನ ಜೀವನದಲ್ಲೇ ಮರೆಯಲಾಗದಂತಹ ಕ್ಷಣ

''ನಿಮ್ಮ ಕೈಯಲ್ಲಿ ಗುಲಾಬಿ ಹಿಡಿದು ನಿಂತಿದ್ರಿ. ನಾನು ಹೆಜ್ಜೆ ಇಟ್ಟ ತಕ್ಷಣವೇ ನೀವು ಪ್ರಪೋಸ್ ಮಾಡಿದ್ರಿ. ನಾನು ಅಂನ್ಕೊಂಡೆ ಬೇರೆ ರೀತಿ ಪ್ರಪೋಸ್ ಮಾಡಿದ್ರೆ ಇಲ್ಲ ಅಂತ ಹೇಳಬಹುದಿತ್ತು ಅಂತ. ನನಗೆ ಇಲ್ಲ ಎಂದು ಹೇಳುವುದಕ್ಕೆ ಮನಸ್ಸೇ ಬರಲಿಲ್ಲ. ನೀವೂ ಅಷ್ಟೂ ಚೆನ್ನಾಗಿ ಪ್ರಪೋಸ್ ಮಾಡಿದ್ರಿ. ನನಗಾಗಿಯೇ ಒಂದು ಸಿಂಡ್ರೆಲ್ಲಾ ಕಥೆ ಮಾಡಿದ ಹಾಗೆ ಇತ್ತು. ಅದು ನನ್ನ ಜೀವನದಲ್ಲೇ ಮರೆಯಲಾಗದಂತಹ ಕ್ಷಣ.'' - ಪೋನಿ ವರ್ಮಾ, ಪ್ರಕಾಶ್ ರೈ ಪತ್ನಿ[ನಟ ಪ್ರಕಾಶ್ ರೈ ಜೀವನಕ್ಕೆ ಹೊಸ ತಿರುವು ನೀಡಿದ ಅದೃಷ್ಟಲಕ್ಷ್ಮಿ ಇವರೇ.!]

ಸ್ನೇಹಿತೆಯಂತೆ ಇದ್ದಿನಿ

''ನಾವು ಮದುವೆಯಾಗಿ 7 ವರ್ಷವಾಯ್ತು. ಒಂದು ದಿನವೂ ಕೂಡ ನಾನು ನಿಮ್ಮ ಹೆಂಡತಿಯಾಗಿ ನಡೆದುಕೊಂಡಿಲ್ಲ. ನಾನು ಈಗಲು ಪ್ರತಿದಿನ ನಿಮ್ಮ ಸ್ನೇಹಿತೆಯಾಗಿ, ಪ್ರೇಯಸಿಯಾಗಿ ಇದ್ದೇನೆ. ನಮಗೆ ಒಂದು ಸುಂದರವಾದ ಮಗುವಿದೆ. ವೇದಾಂತ್ ನಮ್ಮಿಬ್ಬರಿಗೂ ಕನ್ನಡಿಯಂತಿರುವ ಜೀವ ಅದು.''- ಪೋನಿ ವರ್ಮಾ, ಪ್ರಕಾಶ್ ರೈ ಪತ್ನಿ[ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?]

ಮಗನಿಗೆ ನೀವೇ ತಾಯಿ

''ಅವನ ವಿಷ್ಯದಲ್ಲಿ ನೀವು ಮಾಂತ್ರಿಕನಂತೆ ಇರುತ್ತಿರಿ. ಕೆಲವೊಮ್ಮೆ ನೀವೆ ಅದರ ತಾಯಿ ಅವನನ್ನು 9 ತಿಂಗಳು ಗರ್ಭದಲ್ಲಿ ಇಟ್ಟುಕೊಂಡಿದ್ಲು ನೀವೇ ಏನೋ ನಾನಲ್ಲ ಅನಿಸುತ್ತದೆ.''

- ಪೋನಿ ವರ್ಮಾ, ಪ್ರಕಾಶ್ ರೈ ಪತ್ನಿ[ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!]

ನೀವು ನನಗೆ ತುಂಬಾ ಮುಖ್ಯ

''ನಿಮ್ಮ ರೀತಿಯ ಗುಣವುಳ್ಳವರು ಸಿಗುವುದು ಬಹಳ ಅಪರೂಪ, ನೀವು ನನ್ನ ಬದುಕಿನಲ್ಲಿರುವುದು ನನ್ನ ಅದೃಷ್ಟ. ನನ್ನ ಕೊನೆಯ ಉಸಿರು ಇರುವವರೆಗೂ ಬೆಳಿಗ್ಗೆ ಎದ್ದಾಗ ನಿಮ್ಮನ್ನೇ ನಾನು ನೋಡ್ಬೇಕು. ನೀವು ನನಗೆ ತುಂಬಾ ಮುಖ್ಯ.'' - ಪೋನಿ ವರ್ಮಾ, ಪ್ರಕಾಶ್ ರೈ ಪತ್ನಿ

English summary
Multilingual Actor Prakash Rai spoke about his 2nd Wife Pony Verma Love Story in 'Weekend With Ramesh-3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada