For Quick Alerts
  ALLOW NOTIFICATIONS  
  For Daily Alerts

  'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮ ಈ ವಾರವೇ ಕೊನೆಯಂತೆ.! ಹೌದಾ.?

  By ಫಿಲ್ಮಿಬೀಟ್ ಕನ್ನಡ ಪ್ರತಿನಿಧಿ
  |

  ''ಕಿರುತೆರೆಯಲ್ಲಿ ಯದ್ವಾತದ್ವಾ ಜನಪ್ರಿಯತೆ ಗಳಿಸಿರುವ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಈ ವಾರವೇ ಕೊನೆಯಾಗಲಿದೆಯೆ.?'' - ಇಂತಹದ್ದೊಂದು ಪ್ರಶ್ನೆ ವೀಕ್ಷಕರ ತಲೆಯಲ್ಲಿ ಮೂಡಿದೆ.

  ಸಾಧಕರ ಸೀಟ್ ಮೇಲೆ ಅರ್ಹ ವ್ಯಕ್ತಿಗಳನ್ನು ಕೂರಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ವಾದ-ವಿವಾದ-ವಾಕ್ಸಮರದ ಕೇಂದ್ರ ಬಿಂದು ಆಗಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ.[ಸಾಧಕರ ಸೀಟ್ ಮೇಲೆ ಕಾಶೀನಾಥ್, ಸಂತೋಷ್ ಹೆಗ್ಡೆ ನೋಡಿ ವೀಕ್ಷಕರು ಫುಲ್ ಖುಷ್]

  ಹೀಗಿರುವಾಗಲೇ, 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಕ್ಕೆ ಶುಭಂ ಹಾಡಲು ಜೀ ಕನ್ನಡ ವಾಹಿನಿ ಚಿಂತನೆ ನಡೆಸಿದ್ಯಾ.? ಈ ಪ್ರಶ್ನೆ ಮೂಡಲು ಒಂದು ಬಲವಾದ ಕಾರಣ ಇದೆ. ಅದೇನಪ್ಪಾ ಅಂದ್ರೆ....

  ಮುಂದಿನ ಶನಿವಾರ 'ವೀಕೆಂಡ್' ನಲ್ಲಿ ರಮೇಶ್ ಹಾಜರ್ ಅಗಲ್ಲ.!

  ಮುಂದಿನ ಶನಿವಾರ 'ವೀಕೆಂಡ್' ನಲ್ಲಿ ರಮೇಶ್ ಹಾಜರ್ ಅಗಲ್ಲ.!

  ಮುಂದಿನ ಶನಿವಾರ ಹಾಗೂ ಭಾನುವಾರ... ಅಂದ್ರೆ, ಮೇ 27 ಹಾಗೂ 28 ರಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಪ್ರಸಾರ ಆಗುತ್ತಿಲ್ಲ. 'ವೀಕೆಂಡ್' ನಲ್ಲಿ ನಟ ರಮೇಶ್ ಅರವಿಂದ್ ನಿಮ್ಮ ಮನೆಗೆ ಬರುವುದಿಲ್ಲ. ಯಾಕಂದ್ರೆ...

  'ದೊಡ್ಮನೆ ಹುಡ್ಗ' ಬರ್ತಿದ್ದಾನೆ.!

  'ದೊಡ್ಮನೆ ಹುಡ್ಗ' ಬರ್ತಿದ್ದಾನೆ.!

  ಮೇ 28 ರಂದು ಭಾನುವಾರ ರಾತ್ರಿ 7.30ಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಸಿನಿಮಾ ಪ್ರಪ್ರಥಮ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಹೀಗಾಗಿ ಅಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಜಾಗವಿಲ್ಲ. [ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಬ್ಲಾಕ್ ಬಸ್ಟರ್ ಸಿನಿಮಾ 'ದೊಡ್ಮನೆ ಹುಡ್ಗ']

  ಈ ವಾರವೇ 'ವೀಕೆಂಡ್' ಮುಕ್ತಾಯ.?

  ಈ ವಾರವೇ 'ವೀಕೆಂಡ್' ಮುಕ್ತಾಯ.?

  ಮೇ 28 ರಂದು 'ದೊಡ್ಮನೆ ಹುಡ್ಗ' ಪ್ರಸಾರದ ಕುರಿತು ಜೀ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದ ಬೆನ್ನಲ್ಲೇ, ''ಈ ವಾರವೇ 'ವೀಕೆಂಡ್ ವಿತ್ ರಮೇಶ್-3' ಮುಕ್ತಾಯ'' ಎಂಬ ಊಹಾಪೋಹ ಶುರು ಆಗಿದೆ.

  ಸತ್ಯ ಅದಲ್ಲ.!

  ಸತ್ಯ ಅದಲ್ಲ.!

  'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮ ಸದ್ಯಕ್ಕೆ ಮುಕ್ತಾಯ ಆಗಲ್ಲ ಎಂದು ಜೀ ಕನ್ನಡ ವಾಹಿನಿಯ ಮೂಲಗಳು 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿವೆ.

  ಮುಂದಿನ ವಾರ ಪ್ರಸಾರ ಆಗಲ್ಲ ಅಷ್ಟೇ.!

  ಮುಂದಿನ ವಾರ ಪ್ರಸಾರ ಆಗಲ್ಲ ಅಷ್ಟೇ.!

  ಮೇ 27 ರಂದು ಶನಿವಾರ ಸಂಜೆ ಅರ್ಜುನ್ ಜನ್ಯ ರವರ ಮ್ಯೂಸಿಕಲ್ ನೈಟ್ ಪ್ರಸಾರ ಆಗಲಿದ್ದು, ಮೇ 28 ರಂದು ಭಾನುವಾರ ಸಂಜೆ 'ದೊಡ್ಮನೆ ಹುಡ್ಗ' ಪ್ರಸಾರ ಆಗುವುದರಿಂದ... ಮುಂದಿನ ವಾರ ಮಾತ್ರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಪ್ರಸಾರ ಆಗಲ್ಲ ಅಷ್ಟೇ. ಜೂನ್ ತಿಂಗಳಿನಿಂದ ಯಥಾಪ್ರಕಾರ, 'ವೀಕೆಂಡ್'ನಲ್ಲಿ ರಮೇಶ್ ನಿಮ್ಮನೆಗೆ ಬರ್ತಾರೆ.

  ಈ ವಾರದ ಅತಿಥಿ ಯಾರು.?

  ಈ ವಾರದ ಅತಿಥಿ ಯಾರು.?

  ಸಾಧಕರ ಸೀಟ್ ಮೇಲೆ ಕಾಶೀನಾಥ್ ಹಾಗೂ ಸಂತೋಷ್ ಹೆಗ್ಡೆ ಆಸೀನರಾದ ಬಳಿಕ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಮುಂದಿನ ಅತಿಥಿ ಬಗ್ಗೆ ಜೀ ವಾಹಿನಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಈ ವಾರ ಅತಿಥಿ ಬಗ್ಗೆ ಇನ್ನೂ ಸಸ್ಪೆನ್ಸ್ ಇದೆ.

  English summary
  Zee Kannada Channel sources have confirmed that 'Weekend With Ramesh-3' will not end this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X