For Quick Alerts
  ALLOW NOTIFICATIONS  
  For Daily Alerts

  ಇಂದಿನಿಂದ ವೀಕೆಂಡ್ ವಿತ್ ರಮೇಶ್ ಶುರು, ಕನ್ನಡದ ಕೋಟ್ಯಧಿಪತಿ ಮೊದಲ ಪ್ರಶ್ನೆ

  |

  ಕನ್ನಡ ಕಿರುತೆರೆಯ ನಿರೀಕ್ಷೆಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಇಂದು ರಾತ್ರಿ 9.30ಕ್ಕೆ ಮೊದಲ ಸಂಚಿಕೆ ಪ್ರಸಾರವಾಗುತ್ತಿದೆ. ಎಂದಿನಂತೆ ನಟ ರಮೇಶ್ ಅರವಿಂದ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

  ಹೊಸ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸಿದ್ದಾರೆ. ಈಗಾಗಲೇ ಪ್ರೋಮೋಗಳು ಪ್ರಸಾರವಾಗಿದ್ದು, ವೀರೇಂದ್ರ ಹೆಗ್ಗಡೆ ಕುರಿತು ಹಲವು ಸೆಲೆಬ್ರಿಟಿಗಳು, ಸ್ಮಾಮಿಜೀಗಳು ವೀಕೆಂಡ್ ಟೆಂಟ್ ನಲ್ಲಿ ಮಾತನಾಡಿದ್ದಾರೆ.

  'ವೀಕೆಂಡ್ ವಿತ್ ರಮೇಶ್ 4' ಮೊದಲ ಪ್ರೊಮೋದಲ್ಲೇ ಬೌಂಡರಿ ಬಾರಿಸಿದ ಜೀ

  ಮತ್ತೊಂದೆಡೆ ಕಿರುತೆರೆಯ ಇನ್ನೊಂದು ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿ ಸೀಸನ್ 4 ಆರಂಭವಾಗುತ್ತಿದ್ದು, ಇಂದು ಪ್ರೇಕ್ಷಕರಿಗೆ ಮೊದಲ ಪ್ರಶ್ನೆ ಕೇಳಲಾಗುತ್ತೆ. ಇಂದು ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕನ್ನಡದ ಕೋಟ್ಯಧಿಪತಿಯ ಮೊದಲ ಪ್ರಶ್ನೆಯನ್ನ ಕೇಳಲಾಗುತ್ತೆ. ಇದಕ್ಕೆ ಸರಿಯಾದ ಉತ್ತರವನ್ನ ಎಸ್ ಎಂ ಎಸ್ ಮೂಲಕ ನೀಡಬೇಕಾಗಿದೆ.

  ಕನ್ನಡದ ಕೋಟ್ಯಧಿಪತಿ 4ರ ಮೊದಲ ಪ್ರಶ್ನೆ ಮಿಸ್ ಮಾಡಿಕೊಳ್ಳಬೇಡಿ

  ವಿಶೇಷ ಅಂದ್ರೆ ಇಷ್ಟು ದಿನ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ಕೋಟ್ಯಧಿಪತಿ, ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡ ವಾಹಿನಿಲ್ಲಿ ಟೆಲಿಕಾಸ್ಟ್ ಆಗ್ತಿದೆ. ಮೊದಲೆರಡು ಆವೃತ್ತಿಯಲ್ಲಿ ನಿರೂಪಣೆ ಮಾಡಿದ್ದ ಪುನೀತ್ ರಾಜ್ ಕುಮಾರ್, ಮೂರನೆ ಆವೃತ್ತಿಯಲ್ಲಿ ನಿರೂಪಣೆ ಮಾಡಿರಲಿಲ್ಲ. ಅವರ ಬದಲು ರಮೇಶ್ ಅರವಿಂದ್ ಆಂಕರಿಂಗ್ ಮಾಡಿದ್ದರು.

  ಇದೀಗ, ಪವರ್ ಸ್ಟಾರ್ ಪುನೀತ್ ಕನ್ನಡದ ಕೋಟ್ಯಧಿಪತಿ 4ರಲ್ಲಿ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಸದ್ಯಕ್ಕೆ ಈ ಶೋ ಯಾವಾಗ ಆರಂಭ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ, ಅತಿ ಶೀಘ್ರದಲ್ಲೇ ಮೂಡಿಬರಲಿದೆ ಎಂಬ ಪ್ರೋಮೋ ಪ್ರಸಾರವಾಗ್ತಿದೆ.

  English summary
  Zee kannada popular tv talk show weekend with ramesh season 4 officially starts from today at 9.30 pm. and also kannadada kotyadhipathi 4 first question to be asked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X