For Quick Alerts
  ALLOW NOTIFICATIONS  
  For Daily Alerts

  ಮತ್ತೆ ಶುರುವಾಗಲಿದೆ ವೀಕೆಂಡ್ ವಿತ್ ರಮೇಶ್: ಇದು ಸೀಸನ್ 5!

  By Priya Dore
  |

  ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಬಂದಿವೆ. ಅವುಗಳಲ್ಲಿ ಕೆಲವೇ ಕೆಲವು ರಿಯಾಲಿಟಿ ಶೋಗಳು ಹಿಟ್‌ ಆಗಿವೆ. 'ಎದೆ ತುಂಬಿ ಹಾಡುವೆನು', 'ಸರಿಗಮಪ', 'ಕೋಟ್ಯಾಧಿಪತಿ', 'ವೀಕೆಂಡ್ ವಿತ್ ರಮೇಶ್‌' ರಿಯಾಲಿಟಿ ಶೋಗಳು ಇಂದಿಗೂ ಪ್ರೇಕ್ಷಕರ ನೆಚ್ಚಿನ ಶೋ.

  ಕಸ್ತೂರಿ ವಾಹಿನಿಯಲ್ಲಿ ಮೊದಲ ಬಾರಿಗೆ 'ಪ್ರೀತಿಯಿಂದ ರಮೇಶ್‌' ಎಂದು ಈ ಕಾರ್ಯಕ್ರಮ ಶುರುವಾಗಿತ್ತು. ಆಗಲೇ ಈ ರಿಯಾಲಿಟಿ ಶೋ ತುಂಬಾ ಹಿಟ್‌ ಆಗಿತ್ತು. ಇದೇ ರಿಯಾಲಿಟಿ ಶೋ ಬಳಿಕ 'ವೀಕೆಂಡ್ ವಿತ್ ರಮೇಶ್' ಎಂದು ಪ್ರಸಾರವಾಯಿತು.

  ಪುಟ್ಟಕ್ಕನ ಮನೆಗೆ ಕೋಪ ಮರೆತು ರಾಜೇಶ್ವರಿ ಬರುತ್ತಾಳಾ?ಪುಟ್ಟಕ್ಕನ ಮನೆಗೆ ಕೋಪ ಮರೆತು ರಾಜೇಶ್ವರಿ ಬರುತ್ತಾಳಾ?

  ಸಾಧಕರನ್ನು ಕರೆಸಿ ಕೆಂಪು ಖುರ್ಚಿಯಲ್ಲಿ ಕೂರಿಸಿ ಅವರ ಬದುಕಿನ ಏಳು-ಬೀಳು, ನೋವು-ನಲಿವು, ಕಷ್ಟ-ಸುಖದ ಬಗ್ಗೆ ಮೆಲುಕು ಹಾಕಿ. ಸಾಧನೆಯ ಹಾದಿಯಲ್ಲಿ ನಡೆದ ಘಟನೆಗಳನ್ನು ಪ್ರೇಕ್ಷಕರ ಎದುರು ಮನ ಬಿಚ್ಚಿ ಮಾತನಾಡುತ್ತಿದ್ದರು.

  ಪ್ರೇಕ್ಷಕರ ಮೆಚ್ಚಿದ ಶೋ!

  ಪ್ರೇಕ್ಷಕರ ಮೆಚ್ಚಿದ ಶೋ!

  ಸಾಧಕರ ಸಾಧನೆಯ ಹಾದಿ ಬಗ್ಗೆ ಪ್ರೇಕ್ಷಕರ ಮುಂದಿಟ್ಟು, ಯುವ ಸಮೂಹಕ್ಕೆ ಸ್ಫೂರ್ತಿ ತುಂಬುತ್ತಿದ್ದ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್'. ಎವರ್ ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ಅವರ ನಡೆಸಿಕೊಡುತ್ತಿದ್ದ ಎಲ್ಲರ ನೆಚ್ಚಿನ ಶೋ ಅಂದರೆ ಅದು 'ವೀಕೆಂಡ್ ವಿತ್ ರಮೇಶ್'. ಈ ಕಾರ್ಯಕ್ರಮವನ್ನು ನೋಡಲು ಎಲ್ಲರೂ ತುಂಬಾ ಕಾತುರದಿಂದ ಕಾಯುತ್ತಿದ್ದರು. ಪ್ರತೀ ಎಪಿಸೋಡ್ ಕೂಡ ರೆಡ್ ಸೀಟ್ ಮೇಲೆ ಯಾವ ಸಾಧಕ- ಸಾಧಕಿ ಈ ವಾರ ಕೂರುತ್ತಾರೆ ಅನ್ನೋ ಕುತೂಹಲದಿಂದ ಕೂಡಿರುತ್ತಿತ್ತು. ಇಷ್ಟು ಫೇಮಸ್ ಆಗಿದ್ದ ಶೋ ಕಳೆದೆರಡು ವರ್ಷದಿಂದ ತೆರೆಮೇಲೆ ಕಾಣದೆ ಜನ ಬೇಸರ ಪಟ್ಟುಕೊಂಡಿದ್ದರು. ಆದರೆ ಇದೀಗ ಹಾಗಲ್ಲ. 'ವೀಕೆಂಡ್ ವಿತ್ ರಮೇಶ್ ಸೀಸನ್ 5' ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

  ಮತ್ತೆ ಬರಲಿದೆ ವೀಕೆಂಡ್ ವಿತ್ ರಮೇಶ್!

  ಮತ್ತೆ ಬರಲಿದೆ ವೀಕೆಂಡ್ ವಿತ್ ರಮೇಶ್!

  ಈ ಬಗ್ಗೆ ಸ್ವತಃ ಝೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರೇ ಹೇಳಿದ್ದಾರೆ. 'ವೀಕೆಂಡ್ ವಿತ್ ರಮೇಶ್ ಸೀಸನ್ 5' ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಆದರೆ ಈ ಎಪಿಸೋಡ್‌ಗಳನ್ನು ನೋಡದೇ ಇರಲು ಆಗೋದಿಲ್ಲ ಎಂದಿದ್ದಾರೆ. 'ವೀಕೆಂಡ್ ವಿತ್ ರಮೇಶ್ ಸೀಸನ್ 5' ಕಾರ್ಯಕ್ರಮವನ್ನು ಕೆಲವೇ ದಿನಗಳಲ್ಲೇ ಬರಲಿದೆ. ಝೀ-5 ಆಪ್ ಮೂಲಕ 'ವೀಕೆಂಡ್ ವಿತ್ ರಮೇಶ್ ಸೀಸನ್ 5' ನೋಡಬಹುದು ಎಂದು ಹೇಳಲಾಗಿದೆ. ಇನ್ನು ಈ ಬಾರಿಯ 'ವೀಕೆಂಡ್ ವಿತ್ ರಮೇಶ್ ಸೀಸನ್ 5' ನಲ್ಲಿ ಯಾರು ಯಾರು ಭಾಗವಹಿಸುತ್ತಾರೆ ಅನ್ನೋ ಕುತೂಹಲವೂ ಶುರುವಾಗಿದ್ದು, ಹುಣಸೂರು ಅವರ ಈ ಬಾರಿಯ ಕಾರ್ಯಕ್ರಮ ಕೊಂಚ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.

  5ನೇ ಸೀಸನ್ ಪ್ರಸಾರ!

  5ನೇ ಸೀಸನ್ ಪ್ರಸಾರ!

  ಇನ್ನು ಕಳೆದ ಸೀಸನ್ 2019ರಲ್ಲಿ ನಡೆಸಿಕೊಡಲಾಗಿತ್ತು. ಸೀಸನ್ 4ರಲ್ಲಿ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಗಮಿಸಿದ್ದರು. ಬಳಿಕ ಇನ್ ಫೋಸಿಸ್ ಸ್ಥಾಪಿಸಿದ ನಾರಾಯಣ ಮೂರ್ತಿ ದಂಪತಿ ಆಗಮಿಸಿದ್ದರು. ತದ ನಂತರ ಶ್ರೀಮುರಳಿ, ವಿನಯಾ ಪ್ರಸಾದ್, ಟೈಗರ್ ಅಶೋಕ್ ಕುಮಾರ್, ಶಂಕರ್ ಬಿದರಿ ಸೇರಿದಂತೆ ಇನ್ನೂ ಕೆಲ ಸಾಧಕರು ರೆಡ್ ಸೀಟ್ ಅನ್ನು ಅಲಂಕರಿಸಿದ್ದರು. ಈ ಎಪಿಸೋಡ್‌ಗಳು ಕೂಡ ವೀಕ್ಷಕರ ಗಮನ ಸೆಳೆದಿದ್ದವು. ಕೊರೊನಾ ಸಂಕಷ್ಟ ಕಾಲದಲ್ಲಿ ಈ ಸೀಸನ್ ಅನ್ನು ಮರು ಪ್ರಸಾರ ಮಾಡಲಾಗಿತ್ತು.

  ರಮೇಶ್‌ ಅರವಿಂದ್ ನಿರೂಪಣೆ!

  ರಮೇಶ್‌ ಅರವಿಂದ್ ನಿರೂಪಣೆ!

  'ವೀಕೆಂಡ್ ವಿತ್ ರಮೇಶ್‌' ಕಾರ್ಯಕ್ರಮವನ್ನು ಎವರ್ ಗ್ರೀನ್‌ ಸ್ಟಾರ್‌ ರಮೇಶ್‌ ಅರವಿಂದ್‌ ಅವರು ನಡೆಸಿಕೊಡುತ್ತಿದ್ದರು. ರಮೇಶ್‌ ಅವರ ಕನ್ನಡ ಭಾಷೆಯ ಮೇಲಿನ ಹಿಡಿತ, ಅವರು ಹೋಸ್ಟ್‌ ಮಾಡುವ ರೀತಿ ಎಲ್ಲವೂ ಸೂಪರ್.‌ ಈಗ ಮತ್ತೆ ಕಿರುತೆರೆಗೆ ಬರಲಿದ್ದು, ಸಾಧಕರ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸಲಿದ್ದಾರೆ.

  English summary
  Weekend With Ramesh New Seanos 5 Will Start Soon, Know More
  Sunday, August 7, 2022, 8:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X