»   » 'ಬಾಹುಬಲಿ'ನ ಕಟ್ಟಪ್ಪ ಕೊಂದಿದ್ದು ಯಾಕೆ? ರವಿಶಂಕರ್ ಬಾಯ್ಬಿಟ್ಟ ಸತ್ಯ?

'ಬಾಹುಬಲಿ'ನ ಕಟ್ಟಪ್ಪ ಕೊಂದಿದ್ದು ಯಾಕೆ? ರವಿಶಂಕರ್ ಬಾಯ್ಬಿಟ್ಟ ಸತ್ಯ?

Posted By:
Subscribe to Filmibeat Kannada

ಕಳೆದ ವರ್ಷ ಬಿಡುಗಡೆ ಆಗಿ ದಾಖಲೆಗಳ ಸರಮಾಲೆ ಸೃಷ್ಟಿಸಿದ ತೆಲುಗು ಸಿನಿಮಾ 'ಬಾಹುಬಲಿ' ಮೊದಲ ಪಾರ್ಟ್ ನೋಡಿದವರೆಲ್ಲರ ತಲೆಯಲ್ಲಿ ಕೊರೆಯುತ್ತಿರುವುದು ಒಂದೇ ಪ್ರಶ್ನೆ! 'ಬಾಹುಬಲಿ'ಯನ್ನ ಕಟ್ಟಪ್ಪ ಯಾಕೆ ಕೊಂದ? ಅಂತ.

'ಬಾಹುಬಲಿ' ಮೊದಲ ಪಾರ್ಟ್ ನ ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕರ ತಲೆಯಲ್ಲಿ ಹೆಬ್ಬಾವು ಬಿಟ್ಟ ನಿರ್ದೇಶಕ ಎಸ್.ಎಸ್.ರಾಜಮೌಳಿ, 'ಬಾಹುಬಲಿ' ಸೆಕೆಂಡ್ ಪಾರ್ಟ್ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ['ಬಾಹುಬಲಿ'ಯನ್ನ ಕಟ್ಟಪ್ಪ ಯಾಕೆ ಕೊಂದ? ಉಪ್ಪಿ ಬಿಚ್ಚಿಟ್ಟ ರಹಸ್ಯ]

ಬಾಹುಬಲಿಗೆ ಅತ್ಯಾಪ್ತರಾಗಿದ್ದ ಕಟ್ಟಪ್ಪ, ಬಾಹುಬಲಿಯನ್ನು ಕೊಲ್ಲೋದು ಯಾಕೆ ಎನ್ನುವ ಬಗ್ಗೆ ಸಿನಿಮಾ ನೋಡಿದವರು ಸಿಕ್ಕಾಪಟ್ಟೆ ಚರ್ಚೆ ಮಾಡಿದ್ದರು. ಈ ಬಗ್ಗೆ ಅನೇಕ ಜೋಕ್ ಗಳೂ ಹುಟ್ಟಿಕೊಂಡವು. [ನಟ ರವಿಶಂಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿಗಳು!]

ಏನೇ ಆದರೂ, 'ಬಾಹುಬಲಿ' ಚಿತ್ರತಂಡ ಮಾತ್ರ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಬಗ್ಗೆ ಇದುವರೆಗೂ ತುಟಿಕ್ ಪಿಟಿಕ್ ಅಂದಿಲ್ಲ. ಹೀಗಿರುವಾಗ, ಕಟ್ಟಪ್ಪ (ಸತ್ಯರಾಜ್) ಗೆ ತೆಲುಗಿನಲ್ಲಿ ಡಬ್ಬಿಂಗ್ ಮಾಡಿರುವ ನಟ ರವಿಶಂಕರ್ 'ಬಾಹುಬಲಿ' ಕೊಂದ ರಹಸ್ಯವನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟರು. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ.....

ರಮೇಶ್ ಅರವಿಂದ್ ಒತ್ತಾಯದ ಮೇರೆಗೆ ಬಾಯ್ಬಿಟ್ಟ ರವಿಶಂಕರ್!

'ವೀಕೆಂಡ್ ವಿತ್ ರಮೇಶ್ ರವಿಶಂಕರ್ ವಿಶೇಷ' ಕಾರ್ಯಕ್ರಮದ ಕೊನೆಯ ಹಂತದಲ್ಲಿ ನಟ ರವಿಶಂಕರ್ ಗೆ ರಮೇಶ್ ಅರವಿಂದ್ 'ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ದು ಯಾಕೆ' ಅಂತ ಪ್ರಶ್ನೆ ಮಾಡಿದರು. ಹೇಗಿದ್ದರೂ, ರವಿಶಂಕರ್ 'ಬಾಹುಬಲಿ ಪಾರ್ಟ್ 2' ಚಿತ್ರದ ಡಬ್ಬಿಂಗ್ ಮುಗಿಸಿದ್ದಾಗಿದೆ. ಹೀಗಾಗಿ ರವಿಶಂಕರ್ ಗೆ ಕಥೆ ಗೊತ್ತಿದೆ ಎಂಬ ನಂಬಿಕೆ ಮೇಲೆ ರಮೇಶ್ ಅರವಿಂದ್ ಪ್ರಶ್ನೆ ಮಾಡಿದರು. [ಖಡಕ್ ಖಳ ನಟ ರವಿಶಂಕರ್ ಗೆ ಅವಮಾನ ಮಾಡಿದವರು ಯಾರು?]

ರಘು ದೀಕ್ಷಿತ್ ಕೂಡ ಬೇಡಿಕೆ ಇಟ್ಟಿದ್ದರು!

ಒಂದ್ವೇಳೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ರವಿಶಂಕರ್ ಬಂದ್ರೆ, ಈ ಪ್ರಶ್ನೆ ಕೇಳಲೇಬೇಕು ಅಂತ ರಘು ದೀಕ್ಷಿತ್ ಕೂಡ ರಮೇಶ್ ಬಳಿ ಬೇಡಿಕೆ ಇಟ್ಟಿದ್ರಂತೆ. [ಕೂದಲು ಕಟ್ ಮಾಡಿದ್ದಕ್ಕೆ ಲಿಫ್ಟ್ ಒಡೆದು ಹಾಕಿದ್ದ ರವಿಶಂಕರ್!]

ರವಿಶಂಕರ್ ಏನಂದ್ರು?

''ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ಅನ್ನೋದು ಬಿಲಿಯನ್ ಡಾಲರ್ ಪ್ರಶ್ನೆ. ಇದನ್ನ ಸಿನಿಮಾ ರಿಲೀಸ್ ಆಗುವವರೆಗೂ ಯಾರ ಬಳಿಯೂ ಹೇಳಬಾರದು ಅಂತ ರಾಜಮೌಳಿ ಹೇಳಿದ್ದಾರೆ'' ಅಂತ ರವಿಶಂಕರ್ ಹೇಳಿದರು. ಆದ್ರೂ, ರಮೇಶ್ ಅರವಿಂದ್ ರವರ ಮೇಲಿನ ಅಭಿಮಾನದಿಂದ 'ಬಾಹುಬಲಿ ಪಾರ್ಟ್-2' ಕಥೆಯನ್ನ ರವಿಶಂಕರ್ ಲೀಕ್ ಮಾಡಿದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಕ್ಸ್ ಕ್ಲೂಸಿವ್!

''ವೀಕೆಂಡ್ ವಿತ್ ರಮೇಶ್ ನಲ್ಲಿ ರಮೇಶ್ ಗಾಗಿ ಎಕ್ಸ್ ಕ್ಲೂಸಿವ್ ಆಗಿ ಹೇಳುತ್ತಿದ್ದೇನೆ'' ಅಂತ ರವಿಶಂಕರ್ 'ಬಾಹುಬಲಿ' ಚಿತ್ರದ ಕಥೆ ಹೇಳಲು ಶುರು ಮಾಡಿದರು. ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

ಕಾಡಲ್ಲಿ ಬಾಹುಬಲಿ-ಕಟ್ಟಪ್ಪ!

''ಫಸ್ಟ್ ಹಾಫ್ ನಲ್ಲಿ ಪ್ರಭಾಸ್ ಚಿಕ್ಕವನಾಗಿದ್ದ ಸಮಯದಲ್ಲಿ, ಕಟ್ಟಪ್ಪ ಮತ್ತು ಬಾಹುಬಲಿ ಕಾಡಿಗೆ ಹೋಗಿರ್ತಾರೆ. ಆ ಶಾಟ್ ಗಳನ್ನ ಜಪಾನ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ'' - ರವಿಶಂಕರ್

ಒಂದು ಎಣ್ಣೆ!

''ಜಪಾನ್ ನಲ್ಲೇ ಯಾಕೆ ಅಂದ್ರೆ ಅಲ್ಲಿ ಒಂದು ಎಣ್ಣೆ ಇರುತ್ತಂತೆ. 'ನವರತ್ನ ಎಣ್ಣೆ' ತರಹ ಒಂದು ಎಣ್ಣೆ. ಆ ಎಣ್ಣೆ ತೆಗೆದುಕೊಂಡು ಬಂದ್ರೆ, ಕಾಲಕೇಯ ರಾಜನನ್ನ (ವಿಲನ್) ಫಿನಿಸ್ ಮಾಡಬಹುದು ಅಂತ ಅವರಿಬ್ಬರ ಪ್ಲಾನ್'' - ರವಿಶಂಕರ್

ಮಾಹಿಶ್ಮತಿ ರಾಜ್ಯ ಉಳಿಸಿಕೊಳ್ಳಲು!

''ಆ ಎಣ್ಣೆಯನ್ನ ಜೋಪಾನವಾಗಿ ತಂದ್ರೆ, 'ಮಾಹಿಶ್ಮತಿ' ರಾಜ್ಯವನ್ನು ಉಳಿಸಿಕೊಳ್ಳಬಹುದು ಅಂತ ಕಟ್ಟಪ್ಪ-ಬಾಹುಬಲಿ ಹೋಗಿರ್ತಾರೆ. ಅಲ್ಲಿಂದ ಬರೋವಾಗ, ಆ ಎಣ್ಣೆ ಕಟ್ಟಪ್ಪ (ಸತ್ಯರಾಜ್) ತಲೆ ಮೇಲೆ ಬಿದ್ದು ಕೂದಲು ಹೊರಟು ಹೋಗುತ್ತೆ. ಅದಕ್ಕಾಗಿ ಅವನಿಗೆ ಸೇಡು. ಕರೆಕ್ಟ್ ಸಮಯಕ್ಕಾಗಿ ಕಾಯ್ತಿದ್ದ, ಬಾಹುಬಲಿಯನ್ನ ಕೊಂದು ಬಿಟ್ಟ'' ಅಂತ ನಗೆಬಾಂಬ್ ಸಿಡಿಸಿದರು ನಟ ರವಿಶಂಕರ್.

ಬಾಹುಬಲಿ ಕೊಂದ ರಹಸ್ಯ ತೆರೆ ಮೇಲೆ ನೋಡಿ....

ನಟ ರವಿಶಂಕರ್ ರವರ ಜೋಕ್ ಕೇಳಿ ನಗೆಗಡಲಲ್ಲಿ ತೇಲಿದ ನಟ ರಮೇಶ್ ಅರವಿಂದ್, ''ಇದು ರವಿಶಂಕರ್ ರವರ ವರ್ಷನ್, ರಾಜಮೌಳಿ ವರ್ಷನ್ ಏನು ಅನ್ನೋದನ್ನ ನೀವು ಸಿನಿಮಾದಲ್ಲಿ ನೋಡಿ'' ಅಂತ ಹೇಳಿದರು.

English summary
Kannada Actor cum Dubbing Artist Ravishankar gave a hilarious explanation on 'Why Kattappa Killed Baahubali' during his chat in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada