For Quick Alerts
  ALLOW NOTIFICATIONS  
  For Daily Alerts

  ಶಂಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ ಬಿಚ್ಚಿಟ್ಟ ಅನಂತ್ ನಾಗ್

  By Suneetha
  |

  ನಾಗ್ ಸಹೋದರರಾದ ಅನಂತ್ ನಾಗ್ ಮತ್ತು ಶಂಕರ್ ನಾಗ್ ಅವರು ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಗಳು ಅಪಾರ. ರಂಗಭೂಮಿಯಿಂದ ನಟನಾ ಕ್ಷೇತ್ರಕ್ಕೆ ಬಂದ ಇಬ್ಬರು ಸಹೋದರರು ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡರು.

  ಶಂಕರ್ ನಾಗ್ ಅವರನ್ನು ಬಹಳ ಹಚ್ಚಿಕೊಂಡಿದ್ದ ಅನಂತ್ ನಾಗ್ ಅವರಿಗೆ ತಮ್ಮ ಪ್ರೀತಿಯ ಸಹೋದರ ಶಂಕರ್ ನಾಗ್ ಅವರ ಅಕಾಲಿಕ ಮರಣದ ಮುನ್ಸೂಚನೆ ಮೊದಲೇ ಸಿಕ್ಕಿತ್ತೇ. ಗೊತ್ತಿಲ್ಲ. ಆದರೆ ಶಂಕರ್ ನಾಗ್ ಅವರ ಸಾವಿನಿಂದ ಅನಂತ್ ಅವರು ಬಹಳ ಕಂಗೆಟ್ಟಿದ್ದರು.[ಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗ]

  ಬದುಕಿದ್ದ ಅಲ್ಪ ಸಮಯದಲ್ಲೇ ತುಂಬಾ ಸಾಧನೆ ಮಾಡಿ ಎಲ್ಲರ ಮನಸ್ಸಿನಲ್ಲಿ ಉಳಿದು ಹೋದ ಶಂಕರ್ ನಾಗ್ ಅವರನ್ನು ಬೇಗ ಕರೆದುಕೊಂಡು ಹೋದ ದೇವರಿಗೆ ಅನಂತ್ ನಾಗ್ ಹಿಡಿ ಶಾಪ ಹಾಕಿದ್ದಾರೆ.[ಮುಂಬೈನ ಮುಜುಗರದ ಶಾಲಾ ದಿನಗಳ ಬಗ್ಗೆ ಅನಂತ್ ಹೀಗಂದ್ರು?]

  ಇನ್ನು 'ಆಟೋ ರಾಜ' ಶಂಕರ್ ನಾಗ್ ಅವರ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯ ಕಥೆಯನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅನಂತ್ ಅವರು ಬಿಚ್ಚಿಟ್ಟಿದ್ದಾರೆ. ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  'ನಾ ನಿನ್ನ ಬಿಡಲಾರೆ' ಲಕ್ಷ್ಮಿ ಮಾತು

  'ನಾ ನಿನ್ನ ಬಿಡಲಾರೆ' ಲಕ್ಷ್ಮಿ ಮಾತು

  'ಅನಂತ್ ನಾಗ್ ಅವರ ಹತ್ರ ಮಾತ್ರ ನಮಸ್ಕಾರ, ಹೇಗಿದ್ದೀರಿ, ಹಾಯ್, ಗುಡ್ ಮಾರ್ನಿಂಗ್ ಅಂತ ಹೇಳೋ ಅಭ್ಯಾಸ ಇಲ್ಲ. ನಿಮಗೆ ಖಂಡಿತ ನೆನಪಿರಬೇಕು, 'ನಾ ನಿನ್ನ ಬಿಡಲಾರೆ' ಶೂಟಿಂಗ್ ದಿನ ನಾನು ನಿಮ್ಮನ್ನು ನೋಡಲು ಕಾಯುತ್ತಿದ್ದೆ. ಯಾಕೆಂದರೆ ನಿಮ್ಮ 'ನಿಶಾಂತ್' ಸಿನಿಮಾ ನೋಡಿಬಿಟ್ಟು ನಿಮ್ಮ ದೊಡ್ಡ ಫ್ಯಾನ್‌ ಆಗಿಬಿಟ್ಟೆ ಅಂತ ಹೇಳಿದಾಗ, ಅನಂತ್ ಅವರು ಸುಮ್ಮನೆ ನನ್ನ ಮುಖವನ್ನು ಹಾಗೆ ನೋಡ್ತಾ ನಿಂತಿದ್ರು. - ನಟಿ ಲಕ್ಷ್ಮಿ

  ಕೆಮಿಸ್ಟ್ರಿ ವರ್ಕೌಟ್ ಆಗುತ್ತಿತ್ತು

  ಕೆಮಿಸ್ಟ್ರಿ ವರ್ಕೌಟ್ ಆಗುತ್ತಿತ್ತು

  'ಏನಪ್ಪಾ ಇವರು ನಾನು ಇಷ್ಟು ಮಾತಾಡಿದ್ರು, ಮಾತೇ ಆಡ್ತಾ ಇಲ್ಲ. ಅಂತ ಯೋಚನೆ ಮಾಡ್ತಾ ಇದ್ದೆ. ಆಮೇಲೆ ಅವರನ್ನೇ ಕೇಳಿದಾಗ, ಅವರು ಹೇಳಿದ್ರು 'ನಾನು ತುಂಬಾ ಎಕ್ಸೈಟ್ ಆಗಿದ್ದೇನೆ ಲಕ್ಷ್ಮಿ(ಜ್ಯೂಲಿ) ಅವರು ಬರ್ತಾ ಇದ್ದಾರೆ ಅವರ ಜೊತೆ ಫಸ್ಟ್ ನೈಟ್ ಸಾಂಗ್ ಶೂಟ್ ಬೇರೆ ಮಾಡ್ತಾ ಇದ್ದೀನಿ ಅಂತ ಅನಂತ್ ಅವರು ಹೇಳಿದ್ರು. ನಮ್ಮಿಬ್ಬರ ಕೆಮಿಸ್ಟ್ರಿ ಎಲ್ಲಾ ಸಿನಿಮಾಗಳಲ್ಲೂ ಚೆನ್ನಾಗಿ ವರ್ಕ್‌ ಆಗ್ತಾ ಇತ್ತು. ನಾವು ಯಾವುದೇ ಸೀನ್ ಗೂ ರೆಡಿ ಅಂತ ಆಗುತ್ತಿರಲಿಲ್ಲ. ಸೀನ್ ಇದಂತೆ ಅಂದಾಗ ಅವರು, ಅವರ ಪಾಡಿಗೆ ಮಾಡ್ತಾ ಇದ್ರು. ನಾನು ನನ್ನ ಪಾತ್ರವನ್ನು ನನ್ನ ಪಾಡಿಗೆ ಮಾಡುತ್ತಿದೆ. - ಲಕ್ಷ್ಮಿ

  ಸೆಟ್ ಗೆ ರಾಜ್ ಭೇಟಿ

  ಸೆಟ್ ಗೆ ರಾಜ್ ಭೇಟಿ

  ಇನ್ನು 'ನಾ ನಿನ್ನ ಬಿಡಲಾರೆ' ಶೂಟಿಂಗ್ ಸಂದರ್ಭದಲ್ಲಿ ಒಂದಿನಾ ಸೆಟ್ ಗೆ ರಾಜ್ ಕುಮಾರ್ ಅವರು ಬಂದಿದ್ರು, ನಬ್ಬಿಬ್ಬರದು ಶಾಟ್ ಆಗ್ತಿದೆ. ಅವರು ಬಂದು ನಿತ್ಕೊಂಡು ನಮ್ಮ ಶೂಟಿಂಗ್ ನೋಡ್ತಾ ಇದ್ದಾರೆ. ನನಗೆ ಅವರನ್ನು ಅಲ್ಲಿ ನೋಡಿ ಹೆದರಿ ಮೈಯೆಲ್ಲಾ ಬೆವರು ಬರೋಕೆ ಶುರು ಆಗಿತ್ತು. ಆಗ ನಾನು ನೀವು ಯಾಕೆ ಇಲ್ಲಿ ಬರೋಕೆ ಹೋದ್ರಿ ಅಂತ ಹೇಳಿದಾಗ ಅವರು ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ, ಇಬ್ಬರೂ ತುಂಬಾ ಚೆನ್ನಾಗಿ ಆಕ್ಟ್ ಮಾಡ್ತಾ ಇದ್ದೀರಾ ಅಂತ ಹೇಳಿದ್ರು ಆ ಮಹಾನುಭವರು.- ಲಕ್ಷ್ಮಿ

  ಲಕ್ಷ್ಮಿ ಜೊತೆ 25 ಚಿತ್ರಗಳು

  ಲಕ್ಷ್ಮಿ ಜೊತೆ 25 ಚಿತ್ರಗಳು

  ಮೊದಲ ದಿವಸ ಶೂಟಿಂಗ್ ಗೆ ಹೋದಾಗ ಪರಿಚಯ ಆಯ್ತು. ಅವರು ತುಂಬಾ ನ್ಯಾಚುರಲ್ ಆಕ್ಟರ್ ಹಾಗಾಗಿ ಅವರಿಗೆ ನಾನು ಮ್ಯಾಚ್ ಆಗಬೇಕೆಂದು ಮನಸ್ಸಲ್ಲಿ ಇತ್ತು. ಲಕ್ಷ್ಮಿ ಅವರು ನನಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದರು. ನಾನು ಅದನ್ನು ಅಳವಡಿಸಿಕೊಳ್ಳುತ್ತಿದ್ದೆ. ಹಾಗಾಗಿ ನಮ್ಮಿಬ್ಬರ ನಟನೆಯಲ್ಲಿ ಒಳ್ಳೆ ಹೊಂದಾಣಿಕೆ ಇತ್ತು. - ಅನಂತ್.

  ಮನ್ ದೀಪ್ ರೈ

  ಮನ್ ದೀಪ್ ರೈ

  ಅನಂತ್ ಮತ್ತು ಶಂಕರ್ ಅವರ ನಡುವೆ ತುಂಬಾ ಡಿಫರೆನ್ಸ್ ಇತ್ತು. ಶಂಕರ್ ಏನಾದ್ರೂ ಕೆಲಸ ಶುರು ಮಾಡಿದರೆ, ಅನಂತ್ ಅವರು ಅದನ್ನು ಪೂರ್ತಿ ಮಾಡ್ತಾ ಇದ್ರು. ಎಲ್ಲಾ ತಮ್ಮಂದಿರು ಅಣ್ಣನಿಗೆ ಎದುರುತ್ತರ ಕೊಟ್ಟರೆ, ಶಂಕರ್ ಅವರು ಯಾವತ್ತೂ ಅನಂತ್ ಅವರಿಗೆ ತಿರುಗಿ ಮಾತಾಡಿಲ್ಲ. ಅವರಿಬ್ಬರು ಅಣ್ಣ-ತಮ್ಮನಿಗಿಂತ ಹೆಚ್ಚಾಗಿ ಅಪ್ಪ-ಮಗನ ಥರ ಇದ್ದರು. ಶಂಕರ್ ಅವರು ಅನಂತ್ ಅವರಿಗೆ ತುಂಬಾ ಹೆದರುತ್ತಿದ್ದರು. 'ಮಿಂಚಿನ ಓಟ' ಚಿತ್ರಕ್ಕೆ ಶಂಕರ್ ಡೈರೆಕ್ಷನ್ ಆದ್ರೆ, ಅನಂತ್ ಪ್ರೊಡ್ಯೂಸರ್. ಹೀಗಿತ್ತು ಅವರ ನಡುವಿನ ಸಂಬಂಧ. -ಬಾಲ್ಯದ ಗೆಳೆಯ ಮನ್ ದೀಪ್ ರೈ.

  ಶಂಕರ್ ನಾಗ್ ಬಗ್ಗೆ

  ಶಂಕರ್ ನಾಗ್ ಬಗ್ಗೆ

  ಅವನ ಬಗ್ಗೆ ಇಡೀ ಕರ್ನಾಟಕಕ್ಕೇ ಗೊತ್ತು. ಅವನೂ ಚಿಕ್ಕಂದಿನಿಂದಲೇ ನನ್ನ ಜೊತೆಯಲ್ಲೇ ಮುಂಬೈನಲ್ಲಿ ಬೆಳೆದ. ಒಂದು ರೀತಿಯಲ್ಲಿ ಅವನಿಗೆ ನಾನು ಅಣ್ಣ, ಮತ್ತೊಂದು ರೀತಿಯಲ್ಲಿ ಅವನಿಗೆ ಸಾಕು ತಂದೆಯಾದೆ. ಅವನಿಗೆ ನನ್ನ ಮೇಲಿದ್ದ ಪ್ರೀತಿ-ಗೌರವ ಅದು ಬೇರೆ. ಆಮೇಲೆ ನಾನೂ ಸಿನಿಮಾಗೆ ಬಂದೆ, ಅವನೂ ಸಿನಿಮಾಗೆ ಬಂದ ಅದೆಲ್ಲಾ ಆಯ್ತು. ಸಿನಿಮಾ ರಂಗಕ್ಕೆ ಬಂದ ಕೇವಲ 12 ವರ್ಷದಲ್ಲಿ ಎಷ್ಟೊಂದು ಸಾಧನೆ ಮಾಡಿದ. ಅವನ ಮೊದಲ ಚಿತ್ರ ' 'ಒಂದಾನೊಂದು ಕಾಲದಲ್ಲಿ' ಲ್ಲಿಯೇ ಅವನಿಗೆ ಬೆಸ್ಟ್ ಆಕ್ಟರ್ ಆವಾರ್ಡ್ ಬಂತು. -ಅನಂತ್ [ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?]

  ನಿರ್ದೇಶನದ ಹುಚ್ಚಿತ್ತು

  ನಿರ್ದೇಶನದ ಹುಚ್ಚಿತ್ತು

  ಅವನಿಗೆ ಸಿನಿಮಾ ನಿರ್ದೇಶನ ಮಾಡುವ ಹುಚ್ಚಿತ್ತು. ಆಮೇಲೆ ನಿರ್ದೇಶನ ಆಯ್ತು, ಆಮೇಲೆ ಸಿನಿಮಾ ಮಾಡಿದ್ವಿ. ಆಮೇಲೆ 'ಮಾಲ್ಗುಡಿ ಡೇಸ್' ಮಾಡಿದ್ವಿ. ಎಲ್ಲವೂ ಚೆನ್ನಾಗಿತ್ತು. ಹಾಗೆ ಒಂದೊಂದು ಯಶಸ್ಸು ನೋಡ್ತಾ ಇರಬೇಕಾದ್ರೆ 'ಸ್ವರ್ಗಕ್ಕೆ ಕಿಚ್ಚಿಟ್ಟ ಹಾಗೆ' ಅಂತಾರಲ್ಲಾ ಹಾಗೆ ಹಠಾತ್ತನೆ ಭಗವಂತ ಅವನನ್ನು ಕರೆದುಕೊಂಡು ಹೋಗಿಬಿಟ್ಟ. ಬಹಳ ಅನಪೇಕ್ಷಣೀಯ, ಯಾರೂ ಅಪೇಕ್ಷೆನೇ ಮಾಡಿರಲಿಲ್ಲ. ಮಾತ್ರವಲ್ಲ ಏನೋ ದೇವರು ಅವನಿಗೆ ಆಯುಷ್ಯ ಕೊಟ್ಟಿದ್ದೇ ಅಷ್ಟೇ ಅನ್ಸುತ್ತೆ. ಜೀವನದಲ್ಲಿ ಪ್ರತಿಯೊಂದು ಪೂರ್ವ ನಿರ್ಧರಿತಗೊಂಡಿರುತ್ತದೆ. ನಾವು ಬರೀ ನಿಮಿತ್ತ ಮಾತ್ರ.- ಅನಂತ್

  ಸಾಧನೆ ಮಾಡಬೇಕೆಂಬ ಚಡಪಡಿಕೆ

  ಸಾಧನೆ ಮಾಡಬೇಕೆಂಬ ಚಡಪಡಿಕೆ

  ಎರಡು ವರ್ಷದ ಮುಂದೆ 'ಮಾಲ್ಗುಡಿ ಡೇಸ್' ಆಯ್ತು, 87-88 ಆಗುತ್ತಿದ್ದಂತೆ ಅವನಿಗೆ ಒಂದು ಚಡಪಡಿಕೆ ಶುರು ಆಗಿ ಬಿಟ್ಟಿತ್ತು. ಇದು ಮಾಡ್ಬೇಕು, ಅದು ಮಾಡ್ಬೇಕು, ಈ ಪ್ರಾಜೆಕ್ಟ್, ಆ ಪ್ರಾಜೆಕ್ಟ್ ಅಂತ ಅದೇ ರೀತಿ ನಾವು ಅವಸರ ಅವಸರದಲ್ಲಿ ಸಂಕೇತ್ ಸ್ಟುಡಿಯೋ ಕೂಡ ಮಾಡಿದ್ವಿ. ಆ ಸಂದರ್ಭದಲ್ಲಿ ನಾವು ಹಣಕಾಸಿನಲ್ಲೂ ಸ್ವಲ್ಪ ಪ್ರಬಲರಾಗಿದ್ವಿ.

  35ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಶಂಕರ್

  35ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಶಂಕರ್

  ಆ ಪ್ರಾಜೆಕ್ಟ್, ಈ ಪ್ರಾಜೆಕ್ಟ್ ಅಂತ ಸ್ಪೀಡ್ ಆಗಿ ಹೋಗುತ್ತಿದ್ದಾಗ ನಾನು ಹೇಳ್ತಿದ್ದೆ 'ನಾವಿಬ್ಬರು ಇದ್ದಾಗ ನಮಗೆ ಸಾಲ ಕೋಡೋಕೆ ತುಂಬಾ ಜನ ಇರ್ತಾರೆ. ಸಹಿ ಹಾಕಿದ ಕೂಡಲೇ ಸಾಲ ಕೊಡ್ತಾರೆ. ಆದರೆ ಇಬ್ಬರಲ್ಲಿ ಒಬ್ಬರು ಇಲ್ಲಾಂದ್ರೆ, ಒಬ್ಬನು ಹೋದವನು ಬಚಾವ್ ಇದ್ದವನು ಅನುಭವಿಸ್ತಾನೆ' ಯಾವ ಕ್ಷಣದಲ್ಲಿ ಆ ಮಾತನ್ನು ಅಂದೆನೋ, ಭಗವಂತ ಅವನನ್ನು 35ನೇ ವಯಸ್ಸಿಗೆ ಕರ್ಕೊಂಡು ಹೋಗ್ಬಿಟ್ಟ. -ಅನಂತ್

  ಶಂಕರ್ ತೀರಿಕೊಂಡು 25 ವರ್ಷ ಆಗಿದೆ

  ಶಂಕರ್ ತೀರಿಕೊಂಡು 25 ವರ್ಷ ಆಗಿದೆ

  ಈಗ ನನಗೆ 67 ವರ್ಷ ಆದ ಸಂದರ್ಭದಲ್ಲಿ ಅವನು ಹೋಗಿ 25 ವರ್ಷ ಆಗಿದೆ. ಅವನು ಇದ್ದಿದ್ದರೆ ಈಗ 60 ವರ್ಷ ಆಗ್ತಾ ಇತ್ತು. ಎಲ್ಲಾ ವಿಧಿ, ಎಲ್ಲಾ ದೈವೇಚ್ಛೆ. ಆದರೂ ಅವನು ಹೋದ ಸಂದರ್ಭದಲ್ಲಿ, 'ಅವನು ಹೋಗಿದ್ದಾನೆ, ಅವನನ್ನು ಕರ್ಕೊಂಡು ಹೋಗಿದ್ದಾನೆ' ಅನ್ನೋ ನೋವು ಅನುಭವಿಸೋದಕ್ಕೂ ಸಮಯ ಇಲ್ಲ. ಬೆಟ್ಟದಷ್ಟು ಸಮಸ್ಯೆಗಳು ಹುಟ್ಟಿಕೊಂಡವು. ಆಮೇಲೆ ನಾವು ಹೇಳಿದಂತೆ ಕಷ್ಟಕಾಲದಲ್ಲಿ ಆದವನೇ ನಿಜವಾದ ಸ್ನೇಹಿತ ಅಂದಹಾಗೆ ನನಗೆ ಕಷ್ಟಕಾಲ ಬಂದಾಗ ಒಂಟಿಯಾಗಿದ್ದೆ. 'ಒಬ್ಬಂಟಿಯಾಗಿ' ಯಾರ ಹತ್ರ ಹೇಳಿಕೊಳ್ಳುವಂತಹ ಸ್ಥಿತಿ ಇಲ್ಲ. ಆ ಸಂದರ್ಭದಲ್ಲಿ ನನಗೆ ಗಟ್ಟಿಯಾಗಿ ಬೆನ್ನುಲುಬಾಗಿ ನಿಂತವಳು ನನ್ನ ಪತ್ನಿ ಗಾಯತ್ರಿ.

  ಸುಧಾರಿಸಿಕೊಳ್ಳಲು 10 ವರ್ಷ ಬೇಕಾಯ್ತು

  ಸುಧಾರಿಸಿಕೊಳ್ಳಲು 10 ವರ್ಷ ಬೇಕಾಯ್ತು

  ಇಷ್ಟೆಲ್ಲಾ ಸಮಸ್ಯೆಗಳಿಂದ ಸುಧಾರಿಸಿಕೊಳ್ಳಲು 10 ವರ್ಷ ಬೇಕಾಯ್ತು. ಒಂದು ಕಡೆ ಅವನು ಹೋದನು, ಇನ್ನೊಂದು ಕಡೆ ಹೀಗಾಯ್ತಲ್ಲ. ಎಲ್ಲೋ ಒಂದೊಂದು ಬಾರಿ ಅನ್ನುತ್ತೆ. ಇದೇನು ದೇವರು ನನಗೆ ಶಿಕ್ಷಿಸೋದಕ್ಕೆ, ನನಗೆ ದಂಡಿಸೋದಕ್ಕೆ ಈ ರೀತಿ ಅವನನ್ನು ಕರ್ಕೊಂಡು ಹೋಗಿ ಬಿಟ್ನಾ ಅಂತ ಅನಿಸಿದೆ. ಭಗವಂತ ಎಲ್ಲರಿಗೂ ಭಗವಂತನೆ, ಆದ್ರೆ ಅವನನ್ನು ಅಷ್ಟು ಬೇಗ ಎಳ್ಕೊಂಡು ಹೋಗಿದ್ದಿಕ್ಕೆ ನಾನು ಮಾತ್ರ ಆ ಭಗವಂತನನ್ನು ಕ್ಷಮಿಸೋದಿಲ್ಲ.

  ದಾವಣಗೆರೆಯಲ್ಲಿ ನಡೆದಿದ್ದೇನು?

  ದಾವಣಗೆರೆಯಲ್ಲಿ ನಡೆದಿದ್ದೇನು?

  ನನ್ನ ಅಪ್ಪ-ಅಮ್ಮ ದಾವಣಗೆರೆಯಲ್ಲಿದ್ದು, ನಾನು ಬೆಂಗಳೂರಿನಲ್ಲಿ ಒಬ್ನೆ ಇದ್ದೆ. ಅವತ್ತಿನ ದಿವಸ ಅಲ್ಲಿ ಹೋದಾಗ ಡಾ.ನಾಗಪ್ರಕಾಶ್ ಅಂತ ಅವರು ಸಿನಿಮಾ ನಿರ್ಮಾಪಕರು ಹಾಗೂ ದಾವಣಗೆರೆಯಲ್ಲಿ ಬಹಳ ದೊಡ್ಡ ಡಾಕ್ಟರ್. ಅವರು ನನಗೆ ಪೋನ್ ಮಾಡಿದ್ರು ನಾನು ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅಲ್ಲಿ ಹೋದಾಗ ಅವರು ಹೀಗಾಗಿದೆ ಬಾ ನಾವು ಹೋಗೋಣ ಅಂದ್ರು. ಆಮೇಲೆ ನಾವು ಅಲ್ಲಿಗೆ ಒಟ್ಟಿಗೆ ಸ್ಪಾಟ್ ಗೆ ಹೋಗಿದ್ವಿ. ಅದು ನಮಗೆ ದೊಡ್ಡ ಶಾಕ್. ಆ ಶಾಕ್ ನಿಂದ ಹೊರಗೆ ಬರೋಕೆ ನನಗೆ 3-4 ತಿಂಗಳೇ ಬೇಕಾಯ್ತು.- ಸಿಹಿಕಹಿ ಚಂದ್ರು

  ಶಂಕರ್ ಗೆ ಎಲ್ಲದರಲ್ಲೂ ಅವಸರ

  ಶಂಕರ್ ಗೆ ಎಲ್ಲದರಲ್ಲೂ ಅವಸರ

  ಅನಂತ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಂದು ಸೆಟ್ಲ್ ಆದಾಗ ಅಲ್ಲಿಗೆ ಶಂಕರ್ ನಾಗ್ ಬಂದ್ರು. ಕನ್ನಡ ಚಿತ್ರರಂಗಕ್ಕೆ ಏನಾದ್ರೂ ಒಂದು ಮಾಡಲೇಬೇಕು ಅಂತ ಅವರು ಹಪಹಪಿಸ್ತಾ ಇದ್ರು. ಸುಮ್ನೆ ಕೂತಿರಬಾರದು, ಟೆಕ್ನಿಕಲ್ ಅಡ್ವಾನ್ಸ್ ಮೆಂಟ್ ಬೇಕು ಅಂತ ಶಂಕರ್ ತುಂಬಾ ಹೇಳ್ತಾ ಇದ್ರು. ಶಂಕರ್ ಅವರು ತುಂಬಾ ಫಾಸ್ಟ್, ಎಲ್ಲದರಲ್ಲೂ ಅವರಿಗೆ ಅವಸರ. ಶೂಟಿಂಗ್ 6 ಘಂಟೆಗೆ ಮುಗಿದರೆ, 7 ಘಂಟೆಗೆ ಫೋನ್ ಮಾಡೋರು. ಕಾರಿನಲ್ಲಿ ಹೋಗುವಾಗ ಎಲ್ಲಾ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಯಾಕೆ ಇಷ್ಟು ಫಾಸ್ಟ್ ಆಗಿ ಹೋಗ್ತೀರಾ ಅಂದ್ರೆ, ಇಲ್ಲ ಬೇರೆ ಕೆಲಸ ಇದೆ ಅಂತ ಯಾವಾಗ್ಲೂ ಓಡಾಡುತ್ತಿದ್ದರು. - ದೊರೈ ಭಗವಾನ್

  ಒಳ್ಳೆತನ ದುರುಪಯೋಗ ಪಡಿಸಿಕೊಂಡರು

  ಒಳ್ಳೆತನ ದುರುಪಯೋಗ ಪಡಿಸಿಕೊಂಡರು

  ಎಲ್ಲದರಲ್ಲಿ ಅವಸರ ಅವನಿಗೆ, ಒಂದೊಂದು ಬಾರಿ ಕೆಲವೊಂದು ಘಟನೆಗಳು ನಡೆಯೋದಕ್ಕೆ ಶುರು ಆಯ್ತು. ಡ್ರೈವ್ ಮಾಡೋವಾಗ, ಎಮ್ಮೆಗೆ ಗುದ್ದಿದೆ ಹಾಗೆ ಹೀಗೆ ಅಂತ. ಒಂದು ಬಾರಿ ಕರೆಂಟ್ ಇಲ್ಲ ಅಂತ ಬಿಸಿನೀರು ಕಾಯಿಸಲು ಹೋಗಿ ಮುಖದ ಮೇಲೆಲ್ಲಾ ಚೆಲ್ಲಿಕೊಂಡು ಸುಟ್ಟುಕೊಂಡ.ಆವಾಗ ನಾನು ಅವನಿಗೆ ಹೇಳುತ್ತಿದ್ದೆ ನಿಧಾನಿಸು, ನಿಧಾನಿಸು ಅಂತ. ಒಟ್ಟೊಟ್ಟಿಗೆ ಮೂರ್ನಾಲ್ಕು ಸಿನಿಮಾ ಮಾಡಿದ. ಮಾಡಿದ ಸಿನಿಮಾ ಎಲ್ಲಾ ಹಿಟ್ ಆಯ್ತು. ಇದನ್ನು ನೋಡಿದವರು ಇವನ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಂಡರು. ಅವನಿಗೆ ರೆಸ್ಟ್ ಕೊಡದೇ ಒಂದು ಶಿಫ್ಟ್, ಎರಡು ಶಿಫ್ಟ್ ಅಂತ ದುಡಿಸಿಕೊಂಡರು.

  ಸಿಟ್ಟು ಮಾಡಿಕೊಂಡಿದ್ದ ಶಂಕರ್

  ಸಿಟ್ಟು ಮಾಡಿಕೊಂಡಿದ್ದ ಶಂಕರ್

  ಇಂತಹ ಪರಿಸ್ಥಿತಿಯಲ್ಲಿ ಒಂದು ದಿನ ನಮ್ಮ ಮನೆಗೆ ಬಂದ. ನನಗೆ ಗೊತ್ತಿತ್ತು ಏನೋ ಕೇಳೋಕೆ ಅಂತ. ಹಿಂದೊಮ್ಮೆ ಹಾಗೆ ಆಗಿತ್ತು. ನನ್ನ ಮೇಲೆ ತುಂಬಾ ಸಿಟ್ಟು ಮಾಡಿಕೊಂಡಿದ್ದ 'ಏನು ನೀನು ನನ್ನನ್ನು ಮುಂದಕ್ಕೆ ಹೋಗೋಕೆ ಬಿಡೋದಿಲ್ಲ, ಅಂದ ಅದಕ್ಕೆ ನಾನು ಯಾಕೆ ಇಷ್ಟೆಲ್ಲಾ, ಒದ್ದಾಡೋದು, ಇನ್ನು ಎಷ್ಟು ಕಡೆ ಸಹಿ ಮಾಡಬೇಕು ನಾನು, ಎಷ್ಟೂಂತ ಸಾಲ ಮಾಡೋಣ. ಬೇಡ ನಾವು ಒಂದೊಂದಾಗಿ ಮುಂದೆ ಹೋಗೋಣ ಅಂದೆ. ಅಷ್ಟರಲ್ಲಿ ಅವನಿಗೆ ಕಾಲ್ ಬಂತು ಶೂಟಿಂಗ್ ಗೆ. ಆಗ ನಾನು ನೀನು ಈಗ ಎಲ್ಲೂ ಹೋಗೋದು ಬೇಡ ಇಲ್ಲೇ ಇರು, ಇವತ್ತು ಇಲ್ಲೇ ಮಲ್ಕೊ ಅಂತ ಮಲಗಿಸಿ ಅವನನ್ನು ಏಳೋಕ್ಕೆ ಬಿಟ್ಟಿಲ್ಲ. ಒಂದೂವರೆ ದಿನ ಮಲಗಿದ್ದ, ಯಾರು ಫೋನ್ ಮಾಡಿದ್ರೂ ಅವನು ಇಲ್ಲ ಅಂತ ಹೇಳಿದ್ದೆ. - ಅನಂತ್

  ಅವಸರ ಅಪಘಾತಕ್ಕೆ ಕಾರಣವಾಯಿತೇ?

  ಅವಸರ ಅಪಘಾತಕ್ಕೆ ಕಾರಣವಾಯಿತೇ?

  ಎಲ್ಲದರಲ್ಲೂ ಅವಸರ ಮಾಡುತ್ತಿದ್ದ ಅವನು. ಅವತ್ತು ನಡೆದಿದ್ದು ಹಾಗೆ. ಶೂಟಿಂಗ್ ಮುಗಿಸಿ ದಾವಣಗೆರೆಯಲ್ಲಿ ಯಾರದೋ ಕೈಯಲ್ಲಿ ಸಾಲ ಪಡೆದುಕೊಂಡು ನಂತರ ಧಾರಾವಾಡಕ್ಕೆ ಕಾರಲ್ಲಿ ಹೋಗ್ತಾ ಇದ್ದ. ಆಗ್ಲೇ ಈ ಘಟನೆ ನಡೆದಿದ್ದು, ಆಗಬಾರದ್ದು ಆಗಿದ್ದು. ಬಿಟ್ಟು ಹೋಗಿಬಿಟ್ಟ. - ಅನಂತ್.

  English summary
  Kannada Actor Anant Nag Spoke about his Brother Kannada Actor Shankar Nag in Zee Kannada Channel's popular show Weekend With Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X