»   » ಗಾಯಕ ರಘು ದೀಕ್ಷಿತ್ ಗೆ ಸಲಾಂ ಹೊಡೆದ ಬಾಲಿವುಡ್ ದಿಗ್ಗಜರು!

ಗಾಯಕ ರಘು ದೀಕ್ಷಿತ್ ಗೆ ಸಲಾಂ ಹೊಡೆದ ಬಾಲಿವುಡ್ ದಿಗ್ಗಜರು!

Posted By:
Subscribe to Filmibeat Kannada

ಚಾಲೆಂಜ್ ಮಾಡಿದ ಕಾರಣಕ್ಕಾಗಿ ಗಿಟಾರ್ ಹಿಡಿದು ಹಾಡಲು ಶುರು ಮಾಡಿದ ರಘು ದೀಕ್ಷಿತ್, ತಮ್ಮದೇ ಬ್ಯಾಂಡ್ ಮೂಲಕ ಸಂಗೀತ ಕ್ಷೇತ್ರದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದೇ ಒಂದು ಅಚ್ಚರಿಯ ಕಥೆ.

ಅಸಲಿಗೆ ರಘು ದೀಕ್ಷಿತ್ ಅದೃಷ್ಟ ಖುಲಾಯಿಸಿದ್ದೇ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಭೇಟಿ ಆದ ಬಳಿಕ.

ಒಂದು ವಿಡಿಯೋ ಆಲ್ಬಂ ರೆಕಾರ್ಡ್ ಮಾಡಿ, ಬಿಡುಗಡೆ ಮಾಡಲು ಹರಸಾಹಸ ಪಡುತ್ತಿದ್ದ ರಘು ದೀಕ್ಷಿತ್ ಗೆ ಸುವರ್ಣಾವಕಾಶ ನೀಡಿದವರು ವಿಶಾಲ್ ಮತ್ತು ಶೇಖರ್. [ರಘು ದೀಕ್ಷಿತ್ ವೃತ್ತಿ ಬದುಕಿನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳು!]

ತಮ್ಮದೇ ರೆಕಾರ್ಡ್ ಲೇಬಲ್ ಹುಟ್ಟು ಹಾಕಿ, ಆ ಮೂಲಕ ರಘು ದೀಕ್ಷಿತ್ ಎಂಬ ಪ್ರತಿಭೆಯನ್ನ ಭಾರತದಾದ್ಯಂತ ಪರಿಚಯ ಮಾಡಿಕೊಟ್ಟವರು ಬಾಲಿವುಡ್ ಸಂಗೀತ ನಿರ್ದೇಶಕರಾದ ವಿಶಾಲ್-ಶೇಖರ್.

'ರಘು ದೀಕ್ಷಿತ್' ಎಂಬ ಆಲ್ಬಂ ಪ್ರಚಾರಕ್ಕಾಗಿ ಬಾಲಿವುಡ್ ನಟರಾದ ಶಾರುಖ್ ಖಾನ್, ಪ್ರಿಯಾಂಕಾ ಛೋಪ್ರಾ, ಸಂಜಯ್ ದತ್, ಶಂಕರ್ ಮಹಾದೇವನ್, ಕರಣ್ ಜೋಹರ್ ಮುಂತಾದವರು ಗಾಯಕ ರಘು ದೀಕ್ಷಿತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ['ಗಂಡಸ್ತನ ಇದ್ರೆ ಗಿಟಾರ್ ನುಡಿಸು' - ರಘು ದೀಕ್ಷಿತ್ ಬದುಕು ಬದಲಿಸಿದ ಚಾಲೆಂಜ್]

ಆ ವಿಡಿಯೋ ಕ್ಲಿಪ್ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರಸಾರವಾಯ್ತು. ರಘು ದೀಕ್ಷಿತ್ ಬಗ್ಗೆ ಯಾರ್ಯಾರು, ಏನೇನು ಹೇಳಿದ್ದಾರೆ ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

ಸಂಜಯ್ ದತ್

''ನಾನು ವಿಶಾಲ್ ಅಂಡ್ ಶೇಖರ್ ಸ್ಟುಡಿಯೋದಲ್ಲಿದ್ದೆ. ಒಂದು ಹಾಡು ರೆಕಾರ್ಡ್ ಗೋಸ್ಕರ. ಆಗ ಶೇಖರ್ ಹೇಳಿದರು, ಇವರು ತುಂಬಾ ದೊಡ್ಡ ಸಂಗೀತಗಾರ, ದಕ್ಷಿಣ ಭಾರತದಿಂದ ಬಂದವರು ಅಂತ. ನಾನು ಅವರು ಮ್ಯೂಸಿಕ್ ಕೇಳ್ದೆ. ಅವರ ಸಂಗೀತ, ಧ್ವನಿ ನನಗೆ ತುಂಬಾ ಇಷ್ಟ ಆಯ್ತು. ನಾನು ಅವರ ಬಿಗ್ ಫ್ಯಾನ್'' - ಸಂಜಯ್ ದತ್ [ಗಾಯಕ ರಘು ದೀಕ್ಷಿತ್ - ನಾಟ್ಯ 'ಮಯೂರಿ' ಲವ್ ಸ್ಟೋರಿ ಬಹಿರಂಗ]

ಶಾರುಖ್ ಖಾನ್

''After a long time, i have heard some one like Raghu Dixit. I think he has got a big voice'' ಎಂದಿದ್ದಾರೆ ಶಾರುಖ್ ಖಾನ್ [ಗಾಯಕ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ?]

ಪ್ರಿಯಾಂಕ ಛೋಷ್ರಾ

''Its very fresh sound. Its not something that we have heard at all. Extremely energetic'' - ಪ್ರಿಯಾಂಕ ಛೋಪ್ರಾ

ವಿಶಾಲ್ ದದ್ಲಾನಿ

''ಹಾಯ್ ರಘು, ನನಗೆ ತುಂಬಾ ಹೆಮ್ಮೆ ನಿನ್ನ ಜೊತೆ ಕೆಲಸ ಮಾಡುವುದಕ್ಕೆ'' - ವಿಶಾಲ್ ದದ್ಲಾನಿ

ಶಂಕರ್ ಮಹಾದೇವನ್

''ಅವರ ಧ್ವನಿ ಕೇಳಿದಾಗ ತುಂಬಾ ಇಂಪಾಗಿದೆ ಅನಿಸ್ತು''

ಕರಣ್ ಜೋಹರ್

''ಅವರ ಪ್ರತಿಯೊಂದು ಹಾಡಿನಲ್ಲೂ ಜೀವ ಇದೆ''

ಫರ್ಹಾನ್ ಅಖ್ತರ್

''ಅವರ ಪ್ರತಿಯೊಂದು ಹಾಡು ಎಂಟರ್ ಟೇನಿಂಗ್ ಆಗಿದೆ''

ವಿಜಯ್ ಪ್ರಕಾಶ್

''ಕನ್ನಡ ಅನ್ನೋ ಬಾವುಟ ಹಿಡ್ಕೊಂಡು ಇಡೀ ವಿಶ್ವದಲ್ಲಿ ತಲುಪಿಸುತ್ತಿದ್ದಾನೆ ಅನ್ನೋದು ತುಂಬಾ ಹೆಮ್ಮೆ'' - ವಿಜಯ್ ಪ್ರಕಾಶ್

English summary
Bollywood Actor Shahrukh Khan, Sanjay Dutt, Actress Priyanka Chopra have spoken about Dancer turned Musician Raghu Dixit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada