»   » ಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗ

ಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗ

Posted By:
Subscribe to Filmibeat Kannada

ದಿನದಿಂದ ದಿನಕ್ಕೆ ಜ್ಞಾನವನ್ನು ಹೆಚ್ಚಿಸುವಂತಹ ದೊಡ್ಡ ಸಾಧಕ, ನಮ್ಮ ದೇಶದ ಅತೀ ಶ್ರೇಷ್ಠವಾದ ನಟರಲ್ಲಿ ಒಬ್ಬರಾದ, ಎವರ್ ಗ್ರೀನ್ ನಟ ಅನಂತ್ ನಾಗ್ ಅವರು 1973 ರಲ್ಲಿ 'ಸಂಕಲ್ಪ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾದರು.

ಸುಮಾರು 43 ವರ್ಷಗಳಿಂದ ಇವತ್ತಿಗೂ ಸಕ್ರೀಯರಾಗಿರುವ ಹಿರಿಯ ಯುವ ನಟ, ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಸುಮಾರು 253ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.[ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.!]

ಇವರ ಸಿನಿ ಬದುಕಿನ 4 ಚಿತ್ರಗಳಾದ 'ಮಿಂಚಿನ ಓಟ', 'ಹೊಸ ನೀರು' 'ಅವಸ್ಥೆ', 'ಗಂಗವ್ವ ಗಂಗಾಮಯಿ' ಈ ನಾಲ್ಕು ಚಿತ್ರಗಳ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರದ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ. ಹಾಗೂ 'ನಾ ನಿನ್ನ ಬಿಡಲಾರೆ', 'ಹೆಂಡ್ತಿಗೆ ಹೇಳ್ಬೇಡಿ', 'ಪರ', ಹಾಗೂ 'ಗೌರಿ ಗಣೇಶ' ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಲಭಿಸಿದೆ.[ನಟ ಅನಂತ್ ನಾಗ್ ಅಭಿಮಾನಿಗಳಲ್ಲಿ 'ಕ್ಷಮೆ' ಯಾಚಿಸಿದ್ದು, ಯಾಕೆ?]

ಅನಂತ್ ನಾಗ್ ಅವರ ಜೀವಮಾನ ಸಾಧನೆಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ಲಭಿಸಿದೆ. ಹಾಗು ಇವರು ಬರೆದ 'ನನ್ನ ತಮ್ಮ ಶಂಕರ' ಎಂಬ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಇವರ ಬಾಲ್ಯ ಹೇಗಿತ್ತು? ಹಾಗೂ ಅವರ ಕಷ್ಟದ ಜೀವನಗಳು ವೀಕೆಂಡ್ ನಲ್ಲಿ ಬಹಿರಂಗವಾಗಿದೆ. ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ..

ಅನಂತ್ ಅವರ ಬಗ್ಗೆ

ನಿಜ ನಾಮಧೇಯ: ಶ್ರೀ ಅನಂತ್ ನಾಗರ ಕಟ್ಟೆ
ಹುಟ್ಟಿದ್ದು: ಸೆಪ್ಟೆಂಬರ್ 4, 1948ನೇ ಇಸವಿಯಲ್ಲಿ
ಸ್ಥಳ: ಮುಂಬೈನ ಚೌಪಾಟಿ
ತಂದೆ: ಸದಾನಂದ ನಾಗರಕಟ್ಟೆ,
ತಾಯಿ: ಆನಂದಿ
ಅಕ್ಕ: ಶ್ಯಾಮಾಲಾ
ತಮ್ಮ: ನಟ ಶಂಕರ್ ನಾಗ್
ಹೆಂಡತಿ: ಖ್ಯಾತ ನಟಿ ಗಾಯತ್ರಿ
ಮಗಳು: ಅದಿತಿ

ಅನಂತ್ ನಾಗರ ಕಟ್ಟೆ ಹೆಸರು ಅನಂತ್ ನಾಗ್ ಆಗಲು ಕಾರಣ

ಮೊದಲು ಇದ್ದಿದ್ದು ಅನಂತ್ ನಾಗರಕಟ್ಟೆ ಅಂತಾನೇ. ಆದರೆ ಹಿಂದಿ ಸಿನಿಮಾ ಮಾಡಿದಾಗ ಶ್ಯಾಮ್ ಬೆನಗಲ್ ಅವರು ಹೆಸರು ಸ್ವಲ್ಪ ಉದ್ದ ಆಗುತ್ತೆ ಅಂತ ಶಾರ್ಟ್ ಮಾಡುವ ಅಂದ್ರು. ಹಾಗೆ ಕನ್ನಡದಲ್ಲಿ ಸಿನಿಮಾ ಮಾಡುವಾಗ ನಾಗರಕಟ್ಟೆ ಅಂತಾನೇ ಇರಲಿ. ಹಿಂದಿಯಲ್ಲಿ ಅನಂತ್ ನಾಗ್ ಅಂತ ಇರಲಿ ಎಂದು ನಿರ್ಧಾರ ಮಾಡಿದ್ವಿ. -ಅನಂತ್.

ಸಂಸ್ಕೃತ ಪಂಡಿತ ಅನಂತ್

ಭಗವದ್ಗೀತೆಯಲ್ಲಿ 10 ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮ ವಿಭೂತಿ ಬಗ್ಗೆ ಹೇಳುವಾಗ 'ನಾಗಾನಂ ಮನಂತೋಸ್ಮಿ, ಶಂಕರಾಚ್ಸ್ಮಿನ್ ರುದ್ರಾಣಂ' ಆ ಆಧಾರದ ಮೇಲೆ ಅನಂತ್ ನಾಗ್ ಅಂತ ಬದಲಾಯಿಸಬಹುದು ಅಂತ ನಾನು ಅವರಿಗೆ ಹೇಳಿದೆ. - ಅನಂತ್ ನಾಗ್

ಅನಂತ್ ನಾಗ್ ಬಾಲ್ಯ

ನನ್ನ ಬಾಲ್ಯ ಸುಮಾರು 12 ವರ್ಷಗಳವರೆಗೆ, ಮೊದಲ 6 ವರ್ಷ ಕಾಸರಗೋಡು ಹತ್ತಿರ ಕಾಂಚನಗಡದ ಆನಂದಾಶ್ರಮದಲ್ಲಿ ಕಳೆಯಿತು. ಆ ನಂತರ ನಮ್ಮ ತಂದೆಯವರು ಅಲ್ಲಿಂದ ವರ್ಗಾವಣೆ ಆಗಿ ಚಿತ್ರಾಪುರ ಮಠ ಶಿರಾರಿ, ಉತ್ತರಕನ್ನಡ ಜಿಲ್ಲೆಯಲ್ಲಿದೆ. ಅಲ್ಲಿ ಮಠಕ್ಕೆ ಹೋದಾಗ, ಗಣಪತಿ ಸ್ತೋತ್ರ, ಶೀರ್ಷಾ, ರುದ್ರ, ಭಗವದ್ಗೀತೆ ಈ ತರ ಇರುವ ವಾತಾವರಣದಲ್ಲಿ ಬೆಳೆದೆ.

ಸಂಸ್ಕಾರವಂತ ವಾತಾವರಣದಲ್ಲಿ ಬೆಳೆದ ಅನಂತ್

ಹಾಗೆ ಬಾಲ್ಯದಲ್ಲಿ ನಾವು ಯಾವ ವಾತಾವರಣದಲ್ಲಿ ಬೆಳೆಯುತ್ತೇವೆಯೋ ಆ ಸಂಸ್ಕಾರವನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳುತ್ತೇವೆ ಅದು ಈಗಲೂ ನನ್ನಲ್ಲಿ ಉಳಿದುಕೊಂಡಿದೆ. - ಅನಂತ್.

ಅನಂತ್ ಹುಟ್ಟಿನ ಬಗ್ಗೆ

ಬಾಂಬೆಯ ಗಿರ್ ಗಾಂವ್ ಏರಿಯಾದಲ್ಲಿರುವ ಅಜೆಂಕ್ಯಾ ಆಸ್ಪತ್ರೆಯಲ್ಲಿ ಅನಂತ್ ಹುಟ್ಟಿದ್ರು. ಅಮ್ಮ ಆನಂದಿ ಅವರ ಮನಸ್ಸಲ್ಲಿ ಅನಂತ್ ನಾಗ್ ಅವರು ಹುಟ್ಟುವಾಗಲೇ ಕನಸಿನಲ್ಲಿ ಅನಂತ ರೂಪ, ಅನಂತ ರೂಪ ಎಂದು ಬರ್ತಾ ಇತ್ತಂತೆ ಅದಕ್ಕೆ ಆಸ್ಪತ್ರೆಯಲ್ಲಿ ಇರುವಾಗಲೇ ಅನಂತ್ ಅಂತ ಹೆಸರಿಡಬೇಕು ಎಂದು ನಿರ್ಧರಿಸಿದ್ದರಂತೆ.

ಅಪ್ಪನ ಬಗ್ಗೆ

ಮೊದಲ 12 ವರ್ಷಕ್ಕೆ ಹೋಲಿಸಿದರೆ, ನಂತರದ 12 ವರ್ಷಕ್ಕೆ ಹೋಲಿಸಿದರೆ, ಬಾಲ್ಯ ಒಂದು ರೀತಿ ಸ್ವರ್ಗೀಯವಾಗಿತ್ತು. ಆಫ್ ಕೋರ್ಸ್ ತಂದೆಯವರು ಸ್ವಲ್ಪ ಸ್ಟ್ರಿಕ್ಟ್ ಆಗಿದ್ದರು. ಆಶ್ರಮದಲ್ಲಿ ಆ ರೀತಿ ಸ್ಟ್ರಿಕ್ಟ್ ನೆಸ್ ಇರ್ಲಿಲ್ಲಾ. ಅಲ್ಲಿ ನಾನು 6 ವರ್ಷದವನಾಗಿದ್ದೆ ಅಷ್ಟೆ.- ಅನಂತ್

ಮಠಕ್ಕೆ ಬಂದ ಮೇಲೆ..

ಮಠಕ್ಕೆ ಬಂದ ಮೇಲೆ ಬೆಳಗ್ಗೆ ಬೇಗ ಎದ್ದು ಶಂಕರಾಚಾರ್ಯರ ಸಾಧನ ಪಂಚಾಂಗ ಬಾಯಿಪಾಠ ಮಾಡಬೇಕು ಅಂತ ಹೇಳೋರು. ಆ ನಂತರ ಶಾಲೆಗೆ ಹೋಗೋದು. ಶಾಲೆಗೆ ಹೋಗಿ ಬಂದ ಮೇಲೆ ಸಂಜೆ ಬೇರೆ ಮಕ್ಕಳು ಗೋಲಿ, ಕಬಡ್ಡಿ, ಅಂತ ಆಟ ಆಡೋಕೆ ಹೋದರೆ ನನಗೆ ಆ ತರ ಆಟಗಳಿಗೆ ಆಸ್ಪದ ಇರಲಿಲ್ಲ. ಆ ಸಂದರ್ಭದಲ್ಲಿ ಇನ್ನೊಬ್ಬ ಗುರು ಬಂದು ಮಂತ್ರ ಪುಷ್ಪಾಂಜಲಿ, ಗಣಪತಿ ಸ್ತೋತ್ರ, ಅಥವಾ ರುದ್ರ ಮುಂತಾದ ಬಗ್ಗೆ ಟ್ರೈನಿಂಗ್ ಕೊಡುತ್ತಿದ್ದರು.- ಅನಂತ್

ಭಗವದ್ಗೀತೆಯಲ್ಲಿ ಪಂಡಿತ

ಅಷ್ಟೆಲ್ಲಾ ಆಗುವಾಗ ಸುಮಾರು 8.30 ಯಿಂದ 9 ಘಂಟೆ ಆಗುತ್ತಿತ್ತು ಅಷ್ಟರಲ್ಲಿ ನಾನು ಊಟ ಮಾಡಿ ಮಲಗಬೇಕು ಅನ್ನುವಷ್ಟರಲ್ಲಿ ಅವರು ಮತ್ತೆ ಇಲ್ಲಾ ನೀನು ಭಗವದ್ಗೀತೆ ಕಲಿಯಬೇಕು ಅಂತ ಹೇಳುತ್ತಿದ್ದರು. 12ನೇ, 15ನೇ, 16ನೇ ಅಧ್ಯಾಯ ಹೀಗೆ ಹೇಳಿಕೊಡುತ್ತಿದ್ದರು. ಅದು ಸರಿಯಾಗಿ ಬಾಯಿ ಪಾಠ ಆಗುವವರೆಗೂ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು. ತಪ್ಪಿದರೆ, ಕಾಲಿಗೆ ಜಿಗುಟುತ್ತಿದ್ದರು.

ಆ ದಿನಗಳು..

ಅನಂತ್ ಅವರ ತಂದೆಯವರಿಗೆ ಅನಂತ್ ಅವರನ್ನು ಮಠದ ಸ್ವಾಮೀಜಿಯನ್ನಾಗಿ ಮಾಡಬೇಕೆಂಬ ಆಸೆ ಇತ್ತು. 8ನೇ ವರ್ಷದಲ್ಲಿ ಮಾಡುವಂತಹ ಉಪನಯನ ಸಂಸ್ಕಾರವು ಅನಂತ್ ನಿಗೆ ಶ್ರೀಗುರುಗಳ ಸನ್ನಿಧಿಯಲ್ಲಿ ನೆರವೇರಿತು. ಶಾಲೆಯಿಂದ ಬಂದ ನಂತರ ಮಠದ ಗುರುಗಳ ಜೊತೆಗೆ ಸಂಧ್ಯಾವಂದನೆ ಮಾಡುತ್ತಿದ್ದರು.

ಚೂಟಿ ಹುಡುಗ ಅನಂತ್

ತುಂಬಾ ಚೂಟಿ ಹುಡುಗನಾಗಿದ್ದ ಅನಂತ್ ಅವರು ಎಲ್ಲಾ ಮಂತ್ರಗಳನ್ನು ಬೇಗ ಬೇಗ ಕಲಿಯುತ್ತಿದ್ದರೂ ಕೂಡ ಅವರಿಗೆ ಮಂತ್ರಗಳಿಗಿಂತ ಜಾಸ್ತಿ ಹೊರಗಡೆ ಮಕ್ಕಳ ಜೊತೆಗಿನ ಆಟ-ಪಾಠದಲ್ಲಿ ಹೆಚ್ಚಿನ ಆಸಕ್ತಿ-ಒಲವು ಇತ್ತು. ಅನ್ನಾವರದಲ್ಲಿ ಅವರಿಗೆ ತುಂಬಾ ಅಚ್ಚುಮೆಚ್ಚಿನ ಸ್ಥಾನ ಅಂದ್ರೆ ರಾಮತೀರ್ಥ. ಅಲ್ಲಿ ಬೀಳುವ ಜಲಧಾರೆಗೆ ತಲೆ ಒಡ್ಡಿ ನಿಲ್ಲುವುದು ಅಂದರೆ ಅವರಿಗೆ ತುಂಬಾ ಇಷ್ಟ. ಒಂದು ಬಾರಿ ಬೇರೆ ಮಕ್ಕಳೊಂದಿಗೆ ಸೇರಿ ಟೆಂಟ್ ಸಿನಿಮಾ ಒಂದನ್ನು ಕಿಂಡಿಯ ಸಂದಿಗಳಲ್ಲಿ ನೋಡಿ ಖುಷಿ ಪಟ್ಟಿದ್ದರು. ಅದು ಮನೆ ಮಂದಿಗೆ ಗೊತ್ತಾಗಿ ದೊಡ್ಡ ಗದ್ದಲ ಆಗಿತ್ತು. -ಶಾಸ್ತ್ರಿಗಳು.

ಅನಂತ್ ಅವರ ಇನ್ನೊಂದು ಮುಖ

ಅನಂತ್ ಅವರ ಒಂದು ಮುಖವನ್ನು ನಾವು ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ ಅವರ ಇನ್ನೊಂದು ಮುಖ ಅಂದ್ರೆ ಅವರು ತುಂಬಾ ಸಂಸ್ಕಾರವಂತರು ಅವರಲ್ಲಿ ಧಾರ್ಮಿಕ ಶ್ರದ್ಧೆ ತುಂಬಾ ಇದೆ. ಸಂಸ್ಕೃತದಲ್ಲಿ ಅವರದು ಎತ್ತಿದ ಕೈ. ಅವರು ಮಠಕ್ಕೆ ತಬಲಾ ನುಡಿಸಲು ಬರುತ್ತಿದ್ದರು. 'ದೇವರ ಕಣ್ಣು' ಚಿತ್ರದಲ್ಲಿ ಅನಂತ್ ಅವರೇ ತಬಲಾ ನುಡಿಸಿದ್ದಾರೆ.

ತಬಲಾ ನುಡಿಸುವಲ್ಲಿ ಅನಂತ್ ಎತ್ತಿದ ಕೈ

ಬೇರೆ ಬೇರೆ ಕಡೆಯಿಂದ ಪ್ರವಚನಕ್ಕೆ ಬರುತ್ತಿದ್ದ ಪಂಡಿತರ ಕೈಯಲ್ಲಿ ಇರುತ್ತಿದ್ದ ತಬಲಾ ನೋಡಿ ನನಗೂ ಅದನ್ನು ಬಾರಿಸುವುದನ್ನು ಕಲಿಯಬೇಕು ಅನ್ನೋ ಆಸೆ ಇತ್ತು. ಆನಂತರ ಆನಂದಾಶ್ರಮದಲ್ಲಿ ಸ್ವಲ್ಪ ಸ್ವಲ್ಪ ತಬಲಾ ಕಲಿತೆ. ಬರ್ತಾ ಬರ್ತಾ ಅದು ಹೇಗೋ ತನ್ನಿಂತಾನೇ ಬಂದು ಬಿಡ್ತು ಆ ಕಲೆ. - ಅನಂತ್

ಮಿಮಿಕ್ರಿ ಮಾಡುತ್ತಿದ್ದ ಅನಂತ್

ನನಗೆ ಎಲ್ಲಾದ್ರೂ ಯಾರದಾದ್ರೂ ಸ್ವಲ್ಪ ವಿಚಿತ್ರ ಅಥವಾ ವಿಲಕ್ಷಣವಾದ ಮುಖ ನೋಡಿದ್ರೆ, ಅಥವಾ ಅವರ ನಡೆ-ನುಡಿ ನೋಡಿದ್ರೆ ಅದನ್ನು ಮಿಮಿಕ್ರಿ ಮಾಡುವಂತಹ ವಿಚಿತ್ರ ರೋಗ ಅಂಟಿಕೊಂಡು ಬಿಡ್ತು. ಆದರೆ ನನ್ನ ತಂದೆ-ತಾಯಿಗಳು ತಡೆಯುತ್ತಿದ್ದರು. ಎಲ್ಲರ ಮುಂದೆ ನಾನು ಅವರ ಹಾಗೆ ಮಾಡುತ್ತಿದೆ. ಅದು ಇರುಸು ಮುರುಸಿಗೆ ಕಾರಣವಾಗುತ್ತಿತ್ತು. ಅದಕ್ಕೆ ಅಪ್ಪ-ಅಮ್ಮ ಬೈಯುತ್ತಿದ್ದರು.- ಅನಂತ್

ಸ್ವರ್ಗೀಯ ದಿನಗಳು

ಹೊನ್ನಾವರದಲ್ಲಿ ಸ್ವರ್ಗೀಯ ದಿನಗಳು ಯಾಕೆಂದರೆ ತಂದೆ ಶಿರಾಲಿ ಮಠದಲ್ಲಿ ಇರ್ತಾ ಇದ್ರು. ಆವಾಗ ಅಪ್ಪ ಹತ್ತಿರ ಇಲ್ಲಾ ಅಂದರೆ ನಮಗೆ ಫುಲ್ ಫ್ರೀಡಂ ಅಲ್ವಾ. ನಾನು ನನ್ನ ಗೆಳೆಯ ಅರುಣ್ ಎಲ್ಲಾ ತುಂಬಾ ಎಂಜಾಯ್ ಮಾಡುತ್ತಿದ್ದೆವು. - ಅನಂತ್

English summary
Kannada Actor Anant Nag's life story was revealed in Zee Kannada Channel's popular show 'Weekend With Ramesh'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada