»   » ವೀಕೆಂಡ್ ನಲ್ಲಿ ದುನಿಯಾ ವಿಜಯ್ ಕಣ್ಣೀರ ಕಥೆ ಅನಾವರಣ

ವೀಕೆಂಡ್ ನಲ್ಲಿ ದುನಿಯಾ ವಿಜಯ್ ಕಣ್ಣೀರ ಕಥೆ ಅನಾವರಣ

Posted By:
Subscribe to Filmibeat Kannada

ಇಂದು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ 'ಬ್ಲಾಕ್ ಕೋಬ್ರಾ', 'ಕರಿಚಿರತೆ' ದುನಿಯಾ ವಿಜಯ್ ಕೂಡ ಒಬ್ಬರು.

'ದುನಿಯಾ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಉಂಟುಮಾಡಿದ ದುನಿಯಾ ವಿಜಯ್, ಅದಕ್ಕೂ ಮುನ್ನ ತುತ್ತು ಅನ್ನ ತಿನ್ನುವುದಕ್ಕೂ ಪಟ್ಟಿರುವ ಕಷ್ಟ ಅನೇಕ ಮಂದಿಗೆ ಗೊತ್ತಿಲ್ಲ.

ಬಾಡಿ ಬಿಲ್ಡಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ದುನಿಯಾ ವಿಜಯ್, ದುಡ್ಡಿಲ್ಲದೆ ಒಂದ್ಕಾಲದಲ್ಲಿ ಬೈಕ್ ಮಾರಿದ್ದ ನಿದರ್ಶನ ಕೂಡ ಇದೆ. 'ಫೈಟ್ ಅಸಿಸ್ಟೆಂಟ್' ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದುನಿಯಾ ವಿಜಯ್, 'ಪಾಪಾ ಪಾಂಡು' ಮತ್ತು 'ಸಿಲ್ಲಿ ಲಲ್ಲಿ' ಧಾರಾವಾಹಿಗಳಲ್ಲಿ ಪರ್ಮ್ನೆಂಟ್ ಕಳ್ಳ ಪಾತ್ರ ನಿರ್ವಹಿಸಿದ್ರು ಅನ್ನೋದೆಲ್ಲಾ ನಿಮಗೆ ಗೊತ್ತಾ?[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

ದುನಿಯಾ ವಿಜಯ್ ರವರ 'ನಿಜ ಬದುಕಿನ ದುನಿಯಾ' ದರ್ಶನವಾಗಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. ಜೀ ಕನ್ನಡದಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್ ರವರ ಮನದಾಳವನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

ದುನಿಯಾ ವಿಜಯ್ ಕುರಿತು........

ನಿಜ ನಾಮ : ಬಿ.ಆರ್.ವಿಜಯ್ ಕುಮಾರ್
ಜನ್ಮ ದಿನಾಂಕ - ಜನವರಿ 20, 1974
ತಂದೆ-ತಾಯಿ - ರುದ್ರಪ್ಪ, ನಾರಾಯಣಮ್ಮ
ಪತ್ನಿ - ನಾಗರತ್ನ
ಮಕ್ಕಳು - ಮೋನಿಕಾ, ಮೋನಿಶ್ ಮತ್ತು ಸಾಮ್ರಾಟ್

ಬಾಲ್ಯದ ನೆನಪು

''ಬಾಲ್ಯದಲ್ಲಿ ಸ್ಕೂಲ್ ಗೆ ಹೋಗದೆ, ಅಮ್ಮ ದುಡ್ಡು ಕೊಡ್ಲಿಲ್ಲ ಅಂತ ನಮ್ಮ ಶೀಟ್ ಮನೆ ಮೇಲೆ ಕಲ್ಲು ಹೊಡೆಯುತ್ತಿದ್ದೆ. ಆಮೇಲೆ ನಂಜುಂಡೇಶ್ವರ ಟೆಂಟ್ ಇತ್ತು, ಅಲ್ಲಿ 50 ಪೈಸಾ ಕೊಟ್ಟು ಸೆಕೆಂಡ್ ಹಾಫ್ ಮೇಲೆ ಸಿನಿಮಾ ನೋಡ್ತಿದ್ದೆ. ಫುಲ್ ಸಿನಿಮಾ ನೋಡ್ಬೇಕಂದ್ರೆ 1 ರೂಪಾಯಿ ಕೊಡ್ಬೇಕಿತ್ತು. ಹಳ್ಳಿಯಲ್ಲಿ ಬೆಳೆದದ್ದು ನಾನು'' - ದುನಿಯಾ ವಿಜಯ್

ಸ್ಕೂಲ್ ಗೆ ಚಕ್ಕರ್

''ಸ್ಕೂಲ್ ಗೆ ತುಂಬಾ ಚಕ್ಕರ್ ಹೊಡೆಯುತ್ತಿದ್ದೆ ನಾನು. ಅದು ನಮ್ಮಪ್ಪಗೆ ಹೇಗೋ ಗೊತ್ತಾಯ್ತು. ನಮ್ಮ ಮನೆ ತುಂಬಾ ಚಿಕ್ಕದ್ದು. ಅಡುಗೆ ಮನೆಯಿಂದ ಹೊರಗೆ ಬರುತ್ತಿದ್ದ ಹಾಗೆ ನನ್ನ ಹಿಡ್ಕೊಂಡು ತಳ್ಳಿದ್ರು. ನಾನು ಹೊಸ್ತಿಲಿನ ಮೇಲೆ ಬಿದ್ದೆ. ಏಟು ಬಿದ್ದು ತಲೆಗೆ ಸ್ಟಿಚ್ ಹಾಕಿದ್ರು. ಅಪ್ಪ ಅಂದ್ರೆ ಭಯ'' - ದುನಿಯಾ ವಿಜಯ್

ಅಪ್ಪ ಅಂದ್ರೆ ಭಯ

''ಈಗಲೂ ಅಪ್ಪನ ಕಂಡರೆ ಭಯ. ಮನೆಗೆ ಬಂದ ತಕ್ಷಣ ಅಪ್ಪ ಎಲ್ಲಿ ಅಂತ ಕೇಳ್ತಾನೆ. ಯಾಕೆ ಹೇಳಿ...ಸ್ಮೋಕ್ ಮಾಡೋಕೆ'' - ನಾರಾಯಣಮ್ಮ (ದುನಿಯಾ ವಿಜಯ್ ತಾಯಿ)

ಚೂಡಿದಾರದ ಕಥೆ

''ಒಂದು ಚಾಲೆಂಜ್ ಮಾಡಿದ್ದೆ ಹುಡುಗರ ಹತ್ರ. ಕೆ.ಆರ್.ಎಸ್ ನಲ್ಲಿ ಸಂಜೆ ಚೂಡಿದಾರಾ ಹಾಕೊಂಡು ಹುಡುಗಿ ತರ ಆಡ್ತೀನಿ, ಯಾರೂ ನನ್ನ ಹುಡುಗ ಅಂತ ಕಂಡುಹಿಡಿಯಬಾರದು ಆ ತರ ಬಿಹೇವ್ ಮಾಡ್ತೀನಿ ಅಂತ ಚಾಲೆಂಜ್ ಮಾಡಿದೆ. ಹಾಗೇ, ಕೆ.ಆರ್.ಎಸ್ ಸುತ್ತುತ್ತಿದ್ದಾಗ ಪೊಲೀಸ್ ಬಂದು ಬೈದ್ರು'' - ದುನಿಯಾ ವಿಜಯ್

ಬೈಕ್ ಮಾರಿದ ಕಥೆ

''ಚಿಕ್ಕವಯಸ್ಸಿಂದಲೇ ಅಪ್ಪ ಯೋಗ ಹೇಳಿಕೊಡ್ತಿದ್ರು. ಅಲ್ಲಿಂದಲೇ ಬಾಡಿ ಬಿಲ್ಡಿಂಗ್ ನಲ್ಲಿ ನನಗೆ ಇಂಟ್ರೆಸ್ಟ್ ಬಂದಿದ್ದು. ಮಿಸ್ಟರ್ ಬೆಂಗಳೂರು, ಮಿಸ್ಟರ್ ಕರ್ನಾಟಕ ಕೂಡ ಆಗಿದ್ದೆ. ತುಂಬಾ ಕಷ್ಟದಲ್ಲಿದ್ವಿ ಆಗ. ದುಡ್ಡು ಇಲ್ಲ ಅಂತ ಬೈಕ್ ಮಾರಿದ್ದೆ. ಅದರಲ್ಲಿ ಬಂದ ಹಣದಿಂದ ಚಿಕನ್, ಡ್ರೈ ಪ್ರೂಟ್ಸ್ ತೆಗೆದುಕೊಳ್ತಿದ್ದೆ'' - ದುನಿಯಾ ವಿಜಯ್

ಭಾಗ್ಯದ ದೇವರು

''ನಮ್ಮ ಮಾಸ್ಟರ್ ಆಕ್ಷನ್ ಮೂರ್ತಿ ಅಂತ. ಅವರಿಂದ ಆಕ್ಷನ್ ಕಲಿತೆ. ನನ್ನ ಭಾಗ್ಯದ ದೇವರು ಅವರು. ಒಂದು ದಿನ ಕೂಡ ಅವರು ನನ್ನ ಬಳಿ ಫೀಸ್ ಕೇಳಿಲ್ಲ. ನನ್ನನ್ನ ಹುಲಿ ಮಾಡಿ ಬಿಟ್ಟವರು ಇವರು'' - ದುನಿಯಾ ವಿಜಯ್

ದೊಡ್ಡ ಹೀರೋ ಆಗ್ಬೇಕು

''ಸಣ್ಣ ಪಾತ್ರಗಳು ಸಿಕ್ಕಿದಾಗ ದೊಡ್ಡ ಹೀರೋ ಆಗ್ಬೇಕು ಅಂತ ಅಂದುಕೊಳ್ಳುತ್ತಿದ್ದೆ'' - ದುನಿಯಾ ವಿಜಯ್

ಕಷ್ಟದಲ್ಲೇ ಮದುವೆ

''ಕಷ್ಟ ಇತ್ತು. ಜೊತೆಗೆ ಒಬ್ಬರು ಅರ್ಥ ಮಾಡಿಕೊಳ್ಳುವವರು ಬೇಕು ಅಂತ ನನಗೆ ಅನಿಸ್ತಾ ಇತ್ತು. ಏಜ್ ಆಗ್ಬಿಡ್ತೀನಿ ಅಂತ ಭಯ ಬೇರೆ ಕಾಡ್ತಿತ್ತು. ಅದಕ್ಕೆ ಮದುವೆ ಆಗ್ಬಿಟ್ಟೆ.

ಛಲ ಬಿಡ್ಲಿಲ್ಲ

''ಇಬ್ಬರು ಹೆಣ್ಮಕ್ಕಳು ಹುಟ್ಟಿದ್ಮೇಲೆ ಹೀರೋ ಆಗಿದ್ದು. ಅದಕ್ಕೂ ಮುಂಚೆ ಸಣ್ಣ-ಪುಟ್ಟ ಪಾತ್ರಗಳನ್ನ ಮಾಡ್ತಿದ್ರು. ಅದಕ್ಕೆ ನಮಗೆ ಇಷ್ಟ ಆಗ್ತಿರ್ಲಿಲ್ಲ. ಬೇಡ ಅಂದ್ರೂ ಕೇಳ್ತಿರ್ಲಿಲ್ಲ. ಆದ್ರೂ ಛಲ ಬಿಡದೆ ಮಾಡಿದ್ರು. ಇವತ್ತು ಈ ಮಟ್ಟಕ್ಕೆ ಬೆಳೆಯುತ್ತಾರೆ ಅಂತ ನಾವು ಯಾರೂ ಅಂದುಕೊಂಡಿರಲಿಲ್ಲ'' - ನಾಗರತ್ನ (ದುನಿಯಾ ವಿಜಯ್ ಪತ್ನಿ)

ಕಷ್ಟ ಪಟ್ಟಿದ್ದಕ್ಕೂ ಸಾರ್ಥಕ

''ಸ್ಟಂಟ್ ಮಾಡಿ ಏಟು ಮಾಡಿಕೊಂಡು ಬಂದಾಗ ನಾನು ಎಷ್ಟೊಂದು ಬಾರಿ ಅತ್ತಿದ್ದೇನೆ. ಕೈ ಕಾಲು ಮುರಿದುಕೊಂಡು ಎಷ್ಟೊಂದು ಬಾರಿ ಊಟ ಮಾಡೋಕೆ ಆಗ್ತಿರ್ಲಿಲ್ಲ. ಅದೆಲ್ಲಾ ನೋಡಿ ತುಂಬಾ ಸಂಕಟ ಆಗುತ್ತೆ. ತುಂಬಾ ಕಷ್ಟ ಪಟ್ಟಿದ್ದಾರೆ. ಕಷ್ಟ ಪಟ್ಟಿದ್ದಕೂ ಸಾರ್ಥಕ'' - ನಾಗರತ್ನ (ದುನಿಯಾ ವಿಜಯ್ ಪತ್ನಿ)

ಎಲ್ರೂ ನಗ್ತಿದ್ರು!

''ದುನಿಯಾ' ಸಿನಿಮಾ ಶುರು ಆದಾಗ ಎಲ್ಲರೂ ನಗು. 'ಹೀರೋ ಇವನಾ' ಅಂತ ಎಲ್ಲರೂ ನಗ್ತಿದ್ರು. ಕ್ಯಾಮರಾಮೆನ್ ಸತ್ಯ ಹೆಗಡೆಗೆ ಹೇಳಿರ್ಲಿಲ್ಲ ನಾನೇ ಹೀರೋ ಅಂತ. ಕೊನೆಗೆ ಗೊತ್ತಾಗಿ ನಾನೇ ಅವರ ಬಳಿ ರಿಕ್ಷೆಸ್ಟ್ ಮಾಡಿಕೊಂಡಿದ್ದೆ. ''ದಯವಿಟ್ಟು ಬೇಡ ಅಂತ ಹೇಳ್ಬೇಡಿ ಸರ್'' ಅಂತ'' - ದುನಿಯಾ ವಿಜಯ್

ದುಡ್ಡಿಗಾಗಿ ಗಲಾಟೆ

''ಊರಲ್ಲಿ ತಾತನ ಜಾಗ ಮಾರಿದ್ವಿ. ಅದರಲ್ಲಿ ಬಂದ ದುಡ್ಡು ನನಗೆ ಕೊಡ್ಬೇಕು ಅಂತ ಅಪ್ಪನ ಹತ್ರ ಗಲಾಟೆ ಮಾಡಿದೆ. 'ಹಾಳಾಗಿ ಹೋಗ್ಲಿ ಕೊಟ್ಟುಬಿಡಿ' ಅಂತ ಅಮ್ಮ ಹೇಳಿದ್ರು. ನಿನ್ನ ಎರಡು ಹೆಣ್ಮಕ್ಕಳ ಹೆಣ ಸಮಾಧಿ ದಾಟಿಬಿಟ್ಟಿದ್ದೀನಿ ತಗೋ ಅಂತ ಹೇಳಿ ಅಪ್ಪ 16 ಲಕ್ಷ ಕೊಟ್ರು ನನಗೆ. ಅವರು ಹೇಳಿದ ಮಾತು ತೀರಿಸ್ತೀನಿ, ಬಿಡಲ್ಲ ನನ್ನ ಎರಡು ಹೆಣ್ಮಕ್ಕಳ ಸಮಾಧಿ ಸಮ ಈ ದುಡ್ಡು. ನನಗೆ ಸಾವು ಬಂದರೂ ಪರ್ವಾಗಿಲ್ಲ 'ದುನಿಯಾ' ಸಿನಿಮಾ ಬಿಡಲ್ಲ ಅಂತ ಮಾಡಿದ್ದು'' - ದುನಿಯಾ ವಿಜಯ್

ಥ್ಯಾಂಕ್ಸ್ ಟು ಜಯಣ್ಣ

''ತುಂಬಾ ಕಷ್ಟ ಪಟ್ಟು 'ದುನಿಯಾ' ಸಿನಿಮಾ ಮಾಡಿದ್ದು. ಸಿನಿಮಾ ಗಾಂಧಿನಗರಕ್ಕೆ ಹೋದಾಗ ತಗೋಬೇಡಿ ಅಂತ ಕೆಲವರು ಹಬ್ಬಿಸ್ಬಿಟ್ರು. ಆ ವಿಷಯಕ್ಕೆ ಜಯಣ್ಣ ಮತ್ತು ಭೋಗೇಂದ್ರಗೆ ಥ್ಯಾಂಕ್ಸ್ ಹೇಳ್ಬೇಕು. ನಮಗೆ ಹೆಲ್ಪ್ ಮಾಡಿ ರಿಲೀಸ್ ಮಾಡಿಕೊಟ್ಟರು'' - ದುನಿಯಾ ವಿಜಯ್

ರಜನಿಕಾಂತ್ ಭೇಟಿ ಆದ ಕ್ಷಣ

''ರಜನಿಕಾಂತ್ ಅಂದ್ರೆ ತುಂಬಾ ಇಷ್ಟ. ಅವರನ್ನ ನೋಡ್ಬೇಕು ಅಂತ ಚೆನ್ನೈಗೆ ಹೋಗಿ, ಅಲ್ಲಿನ ಹೋಟೆಲ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿ, ಅವರ ಮನೆಗೆ ಹೋಗಿ, ಅವರು ನನ್ನ ಓಡಿಸಿ....ಆಮೇಲೆ ನಾನು 'ದುನಿಯಾ' ಸಿನಿಮಾ ಮಾಡಿದಾಗ, ಅವರು ಚಿತ್ರವನ್ನ ನೋಡಲೇಬೇಕು ಅಂತ ಕೇಳಿಕೊಂಡು ನಂತರ ಮೀಟ್ ಮಾಡಿದೆ. ನನ್ನ ಜೀವನದಲ್ಲಿ ನಾನು ದೇವರನ್ನ ನೋಡಿದ್ದೇನೆ ಅಂದರೆ ಅದು ರಜನಿಕಾಂತ್'' - ದುನಿಯಾ ವಿಜಯ್

ಸಾಯುವವರೆಗೂ ಪತ್ನಿ ಜೊತೆ ಚೆನ್ನಾಗಿರ್ತೀನಿ

''ಎಲ್ಲರಿಗೂ ಗೊತ್ತು, ನನಗೂ ನನ್ನ ಹೆಂಡತಿಗೂ ಗಲಾಟೆ ಆಗಿತ್ತು. ಡೈವೋರ್ಸ್ ಗೆ ಅಪ್ಲೈ ಮಾಡಿದ್ದೆ. ಕೋರ್ಟ್ ಗೆ ಹೋಗಿದ್ವಿ. ಆಮೇಲೆ ಒಂದಾದ್ವಿ. ಒಂದೇ ಒಂದು ಕಾರಣ ಅಂದ್ರೆ ನನ್ನ ಮತ್ತು ಅವಳ ಮಧ್ಯೆ ಅಂಡರ್ ಸ್ಟಾಂಡಿಂಗ್ ಇರ್ಲಿಲ್ಲ. ನಾವಿಬ್ಬರು ದೂರ ಆಗಿದ್ದಕ್ಕೆ ವಿಷಯ ಗೊತ್ತಾಯ್ತು ನಾವು ಪ್ರೀತಿಯನ್ನ ಎಷ್ಟು ಕಳ್ಕೊಂಡಿದ್ದೀವಿ ಅಂತ. ಎರಡು ವರ್ಷ ಗ್ಯಾಪ್ ನಲ್ಲಿ ಕಳ್ಕೊಂಡಿದ್ದೆಲ್ಲಾ ಸಂಪಾದನೆ ಮಾಡಿಕೊಂಡ್ವಿ. ನಾನು ನನ್ನ ಹೆಂಡತಿಗೆ ಕೆಲವೊಂದನ್ನ ಕಲಿಸ್ಬೇಕಿತ್ತು. ಅದನ್ನ ಕಲಿಸುವುದಕ್ಕೆ ನಾನು ಎರಡು ವರ್ಷ ಗ್ಯಾಪ್ ಬಿಟ್ಟಿದ್ದೆ. ಕೋರ್ಟ್ ನ ತಂದು ಮುಂದೆ ಇಟ್ಟಿದ್ದೆ. ಅದಕ್ಕೆ ಯಾರು ಏನು ತಪ್ಪು ತಿಳಿದುಕೊಳ್ಳುವುದು ಬೇಡ. ನಾನು ನನ್ನ ಹೆಂಡತಿ ಸಾಯುವವರೆಗೂ ಚೆನ್ನಾಗಿರ್ತೀವಿ'' - ದುನಿಯಾ ವಿಜಯ್

ನನ್ನ ಕ್ಷಮಿಸಿ

''ಎಲ್ಲರ ಹಾಗೆ ನಾನು ಕೂಡ ಮನುಷ್ಯ. ಅರಿವಿಲ್ಲದೆ ನಾನು ಕೂಡ ಸುಮಾರು ತಪ್ಪು ಮಾಡಿದ್ದೇನೆ. ಎಲ್ಲವನ್ನ ನಿಮ್ಮ ಹೊಟ್ಟೆಯಲ್ಲಿ ಹಾಕೊಂಡ್ಬಿಡಿ. ನನ್ನ ಕಡೆಯಿಂದ ತಪ್ಪಾಗಿದ್ರೆ ದಯವಿಟ್ಟು ಕ್ಷಮಿಸಿ. ಇನ್ಮುಂದೆ ಅಂತಹ ತಪ್ಪುಗಳನ್ನ ಮಾಡದ ಹಾಗೆ ನೋಡಿಕೊಳ್ಳುತ್ತೇನೆ'' - ದುನಿಯಾ ವಿಜಯ್

English summary
Kannada Actor Duniya Vijay's life story was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada