For Quick Alerts
  ALLOW NOTIFICATIONS  
  For Daily Alerts

  ವೀಕೆಂಡ್ ನಲ್ಲಿ ಬಹಿರಂಗಗೊಂಡ ರಾಜೇಶ್ ಕೃಷ್ಣನ್ ಕೆಲವು ಸತ್ಯಗಳು

  By Suneetha
  |

  ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಮೆಲೋಡಿ ಕಿಂಗ್ ಅಂತಾನೇ ಖ್ಯಾತಿ ಗಳಿಸಿರುವ ಹಾಡುಗಾರ ರಾಜೇಶ್ ಕೃಷ್ಣನ್ ಅವರು 1991ರಲ್ಲಿ ಈ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು, ಇದೀಗ 2016ರಲ್ಲಿ 25 ವರ್ಷ ಪೂರೈಸಿ 'ಸಿಲ್ವರ್ ಜ್ಯುಬಿಲಿ'ಯನ್ನು ಆಚರಿಸಿಕೊಳ್ಳುತ್ತಿದ್ದಾರೆ.

  ಕನ್ನಡದಲ್ಲಿ ಸುಮಾರು 3,500 ಹಾಡುಗಳನ್ನು ಹಾಡಿದ್ದು, 500 ಹಾಡು ತೆಲುಗು, 250 ಕ್ಕೂ ಹೆಚ್ಚು ಹಾಡುಗಳನ್ನು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಹಾಡಿದ್ದಾರೆ. ಜೊತೆಗೆ ಇವರು 15 ಬೇರೆ ಬೇರೆ ಭಾಷೆಗಳಲ್ಲಿ ಭಕ್ತಿ ಗೀತೆಗಳು, ಕಮರ್ಷಿಯಲ್ ಗೀತೆಗಳು ಹಾಗೂ ಭಾವಗೀತೆಗಳ ಜೊತೆಗೆ ಸಾಕಷ್ಟು ಆಲ್ಬಂಗಳಿಗೂ ರಾಜೇಶ್ ಕೃಷ್ಣನ್ ಹಾಡಿದ್ದಾರೆ.

  ಇವಿಷ್ಟೆ ಅಲ್ಲದೇ, 'ಅಮೃತಧಾರೆ', 'ನೂರು ಜನ್ಮಕೂ', 'ಪ್ಯಾರಿಸ್ ಪ್ರಣಯ', 'ನನ್ನ ಪ್ರೀತಿಯ ಹುಡುಗಿ', ಮುಂತಾದ ಪ್ರಾಜೆಕ್ಟ್ ಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ದುಡಿದಿದ್ದಾರೆ. ತೆಲುಗು ಇಂಡಸ್ಟ್ರಿಯ ನಂದಿ ಆವಾರ್ಡ್, ಫಿಲಂ ಫೇರ್ ಆವಾರ್ಡ್, ಕರ್ನಾಟಕ ಸ್ಟೇಟ್ ಆವಾರ್ಡ್, ಕೀಮಾ, ಸೈಮಾ, ಆರ್ಯಭಟ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.[ಪತ್ನಿಯ ಪುರುಷತ್ವದ ಆರೋಪ,ರಾಜೇಶ್ ಕೃಷ್ಣನ್ ತಿರುಗೇಟು]

  ಜೀವನದಲ್ಲಿ ತಾಳ್ಮೆ ಮತ್ತು ಸಹನೆಯನ್ನು ಮೈಗೂಡಿಸಿಕೊಂಡು ಸಾಧನೆಯ ತುತ್ತ ತುದಿಗೇರಿರುವ ರಾಜೇಶ್ ಕೃಷ್ಣನ್ ಅವರ ವೃತ್ತಿ ಜೀವನ ಸಾವಕಾಶವಾಗಿ ಮತ್ತು ಸುಂದರವಾಗಿ ಸಾಗುತ್ತಿದ್ದರೆ, ವೈಯಕ್ತಿಕ ಜೀವನ ಮಾತ್ರ ಚೆನ್ನಾಗಿಲ್ವಂತೆ.

  ಇನ್ನು ಇವರ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವಾರು ವಿಷಯಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗಗೊಂಡಿದ್ದು, ಏನು ಆ ಸತ್ಯ ಕಥೆ ಎಂಬುದನ್ನು ಅವರೇ ಹೇಳಿದ್ದಾರೆ ಓದಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ರಾಜೇಶ್ ಕೃಷ್ಣನ್ ಬಗ್ಗೆ ಸಣ್ಣ ವಿವರ

  ರಾಜೇಶ್ ಕೃಷ್ಣನ್ ಬಗ್ಗೆ ಸಣ್ಣ ವಿವರ

  ನಿಜ ಹೆಸರು: ರಾಜೇಶ್ವರ ಸಾಯಿ ಸುಬ್ರಮಣ್ಯ ನಾಗರಾಜ ಕೃಷ್ಣಮೂರ್ತಿ
  ಹುಟ್ಟಿದ ದಿನಾಂಕ: ಜೂನ್ 3, 1973
  ತಂದೆ : ಕೃಷ್ಣನ್
  ತಾಯಿ : ಮೀರಾ
  ತಂಗಿ : ಸುಜಾತಾ

  12 ವರ್ಷ ಆದ ಮೇಲೆ ಹುಟ್ಟಿದ ರಾಜೇಶ್ ಕೃಷ್ಣನ್

  12 ವರ್ಷ ಆದ ಮೇಲೆ ಹುಟ್ಟಿದ ರಾಜೇಶ್ ಕೃಷ್ಣನ್

  'ನಾನು 12 ವರ್ಷ ಆದ ಮೇಲೆ ಹುಟ್ಟಿದೆ. ಹೆಣ್ಣು ಹುಟ್ಟಿದ್ರೆ ರಾಜೇಶ್ವರಿ ಅಂತ ಹೆಸರಿಡಬೇಕು ಅಂತಿದ್ರು, ಅಲ್ಲಿ ರಾಜೇಶ್ ಬಂತು. ಸಾಯಿ ಬರಲು ಕಾರಣ ಶಿರಡಿ ಸಾಯಿ ಬಾಬರ ದೊಡ್ಡ ಭಕ್ತ ನಮ್ಮ ಅಪ್ಪ. ಸುಬ್ರಮಣ್ಯೇಶ್ವರ ನನ್ನ ಇಷ್ಟ ದೇವರು ಮತ್ತು ತಾಯಿಯ ಇಷ್ಟ ದೇವರು. ನಾಗರಾಜ ಬರಲು ಕಾರಣ ನಾನು 12 ವರ್ಷ ಬಿಟ್ಟು ಹುಟ್ಟಿದ್ದು, ಅದು ಹರಕೆ ಏನೋ ಇತ್ತಂತೆ. ಕೃಷ್ಣಮೂರ್ತಿ ನನ್ನ ತಂದೆಯ ಹೆಸರು. ಸೋ ಎಲ್ಲಾ ದೇವರ ಹರಕೆ ನನ್ನ ಹೆಸರಲ್ಲಿದೆ' -ರಾಜೇಶ್ ಕೃಷ್ಣನ್.

   ಅಮ್ಮನ ನೆನೆಸಿಕೊಂಡರೆ ಯಾವ ಹಾಡು ನೆನಪಿಗೆ ಬರುತ್ತೆ

  ಅಮ್ಮನ ನೆನೆಸಿಕೊಂಡರೆ ಯಾವ ಹಾಡು ನೆನಪಿಗೆ ಬರುತ್ತೆ

  'ದೇವರಿಗೊಂದು ಕಾಗದ ಬರೆದು ಭೂಮಿಗೆ ಕರೀಬೇಕು, ದೇವರು ಓದೋ ಭಾಷೆಯ ಕಲಿಸೋ ತಾಯಿಯ ಪಡಿಬೇಕು'.

  ಹುಟ್ಟಿದ ತಕ್ಷಣ ಸದ್ದು ಮಾಡದ ರಾಜೇಶ್ ಕೃಷ್ಣನ್

  ಹುಟ್ಟಿದ ತಕ್ಷಣ ಸದ್ದು ಮಾಡದ ರಾಜೇಶ್ ಕೃಷ್ಣನ್

  'ಮಗು ಹುಟ್ಟಿದ ತಕ್ಷಣ, ಶಬ್ದಾನೇ ಇಲ್ಲ, ಅಳು ಇಲ್ಲ ತುಂಬಾ ಭಯ ಆಯ್ತು. ಆಮೇಲೆ ಡಾಕ್ಟರ್ ಹತ್ತಿರ ನನ್ ಮಗೂನಾ ತೋರಿಸಿ ತೋರಿಸಿ ಅಂತ ತುಂಬಾ ಹಟ ಮಾಡಿದೆ. ಆವಾಗ ಅವರು ಅಮ್ಮಾ ಚಿಂತೆ ಬೇಡ. ಮಗು ಚೆನ್ನಾಗಿದ್ದಾನೆ. ತುಂಬಾ ಚೆನ್ನಾಗಿದ್ದಾನೆ. 'ಗೋಲ್ಡನ್ ಬೇಬಿ' ಅವನು ಅಂತಂದ್ರು. ಆವಾಗ ನೋಡಿ ಆದ ಮೇಲೆ ನನಗೆ ತುಂಬಾ ಸಂತೋಷ ಆಯ್ತು'- ತಾಯಿ ಮೀರಾ.

  ಹಾಡುವ ಪ್ರತಿಭೆ ಇದೆ ಅಂತ ಯಾವಾಗ ಗೊತ್ತಾಯ್ತು?

  ಹಾಡುವ ಪ್ರತಿಭೆ ಇದೆ ಅಂತ ಯಾವಾಗ ಗೊತ್ತಾಯ್ತು?

  'ಸುಮಾರು 5 ವರ್ಷ ಇರುವಾಗ ಗೊತ್ತಾಯ್ತು. 5 ವರ್ಷ ಇರುವಾಗ ಇವಳು (ತಾಯಿ) ಹಾಡುತ್ತಿರುವಾಗ, ನಾನು ತಬಲ ನುಡಿಸುತ್ತೇನೆ ಎಂದ' - ತಂದೆ ಕೃಷ್ಣಮೂರ್ತಿ.

  ಮೊದಲ ಗುರು ಅಮ್ಮ

  ಮೊದಲ ಗುರು ಅಮ್ಮ

  'ನನ್ನ ಮೊದಲ ಗುರು ಅಮ್ಮ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ, ಆಲ್ ಇಂಡಿಯಾ ರೇಡಿಯೋ ಆರ್ಟಿಸ್ಟ್. ಮತ್ತೆ ಕರ್ನಾಟಕದ ಹಲವಾರು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅವರಿಗೆ ನಾನು ತಂಬೂರಿ ನುಡಿಸುತ್ತಿದೆ. ಸುಮಾರು 3 ಘಂಟೆ ತಂಬೂರಿ ನುಡಿಸಿದ್ದಕ್ಕೆ ನನಗೆ ಅಮ್ಮ ಪಾಕೆಟ್ ಮನಿ ಕೊಡುತ್ತಿದ್ದರು. ಮುಂಜಾನೆ 4 ಘಂಟೆಯಿಂದ 7 ಘಂಟೆ ವರೆಗೂ ತಂಬೂರಿ ಹಿಡಿದುಕೊಂಡು ನಾನು ಅಮ್ಮನಂತೆ ಅದೇ ಆಕಾರ ಮತ್ತು ಶೈಲಿಗಳನ್ನು ಫಾಲೋ ಮಾಡ್ತಾ ಬಂದೆ. ನಾನು ಒಬ್ಬ ಸಂಗೀತಗಾರ ಆಗಿ ಹೇಳುವುದೇನೆಂದರೆ, ನನ್ನ ಅಮ್ಮ ನನಗೆ ಪಿ.ಸುಶೀಲಾ ಇದ್ದ ಹಾಗೆ'.- ರಾಜೇಶ್.

  ನಿಮ್ಮ ತಂಗಿ ಬಗ್ಗೆ ಹೇಳಿ

  ನಿಮ್ಮ ತಂಗಿ ಬಗ್ಗೆ ಹೇಳಿ

  'ನನಗೆ ಪ್ರತೀ ಜನ್ಮದಲ್ಲೂ ಅವಳೇ ತಂಗಿಯಾಗಿ ಹುಟ್ಟಿ ಬರಬೇಕು. ನನಗೆ ಅವಳು ತಂಗಿ ಮಾತ್ರ ಅಲ್ಲ ಬೆಸ್ಟ್ ಫ್ರೆಂಡ್ ಕೂಡ. ನನಗೆ ಪ್ರತೀ ಜಾಗದಲ್ಲೂ ಅವಳು ಸಪೋರ್ಟ್ ಮಾಡಿದ್ದಾಳೆ. ನಾನು ಅವಳನ್ನು ನಿಜವಾಗ್ಲೂ ತುಂಬಾ ಲವ್ ಮಾಡ್ತೀನಿ.

  ಸ್ಕೂಲ್ ಲೈಫ್

  ಸ್ಕೂಲ್ ಲೈಫ್

  ಓದಿದ್ದು ಸೈಂಟ್ ಜೋಸ್ ಸ್ಕೂಲ್. 1983ರಲ್ಲಿ ಪ್ರಾಥಮಿಕ ಶಾಲೆ. 1986 ರಲ್ಲಿ ಹೈಸ್ಕೂಲ್ ಗೆ ಸೇರಿದ್ದು. ಮಿಡ್ಲ್ ಸ್ಕೂಲ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆವಾಗ ಫಸ್ಟ್ ರ್ಯಾಂಕ್ ಎಲ್ಲಾ ಬರ್ತಾ ಇತ್ತು. ಒಂದು ವೇಳೆ ಬಂದಿಲ್ಲಾಂದ್ರೆ ತುಂಬಾ ಆಳ್ತಾ ಇದ್ದೆ. ವಿನ್ಸಂಟ್ ಸರ್ ಬಯೋಲಾಜಿ ಟೀಚರ್, ನನ್ನ ಫೇವರೆಟ್ ಟೀಚರ್. ಇವರ ತಂಗಿ ಸಲೀನಾ ಸಾಧುಕೋಕಿಲ ಅವರನ್ನು ಮದುವೆಯಾಗಿದ್ದಾರೆ. ಕಾಲೇಜ್ ದಿನಗಳಲ್ಲಿ ಶಿವಾಜಿ ನಗರದ ಹತ್ತಿರ ಒಂದು ಅರ್ಕೆಸ್ಟ್ರಾ ಶುರು ಮಾಡಿದ್ದು. ಅದೂ ಹುಡುಗಿಯರ ಸ್ವರದಲ್ಲಿ ಹಾಡುತ್ತಿದ್ದೆ. ಹಿಂದಿಯಲ್ಲಿ ನಾನೇ ಕಂಪೋಸ್ ಮಾಡಿ 'ಧಡಕನ್' ಎಂಬ ಆಲ್ಬಂ ಮಾಡಿದ್ದು. ಮೊದಲು 'ಗೌರಿ ಗಣೇಶ' ಎಂಬ ಸಿನಿಮಾಕ್ಕೆ ಹಾಡಿದ್ದು. ನಂತರ ನಾನು ರಾಜೇಶ್ ರಾಮನಾಥ್ ಇಬ್ಬರು ಹಂಸಲೇಖ ಗರಡಿಯಲ್ಲಿ ಪಳಗಿದ್ದು. -ರಾಜೇಶ್.

  ಎಸ್.ಪಿ.ಬಿ ನನ್ನ ಆರಾಧ್ಯ ದೇವರು

  ಎಸ್.ಪಿ.ಬಿ ನನ್ನ ಆರಾಧ್ಯ ದೇವರು

  'ನನ್ನ ಆರಾಧ್ಯ ದೇವರು ಎಸ್.ಪಿ.ಬಿ ಸರ್ ನಾನು ಇವಾಗ ಈ ಜಾಗದಲ್ಲಿ ಇದ್ದೀನಿ ಅಂದ್ರೆ ಅದಕ್ಕೆ ಕಾರಣ ಅವರೇ. ಮನೆಯಲ್ಲಿ ಇರುವ ಎರಡು ಹುಲಿಯ ಗೊಂಬೆಗಳಿಗೆ ದೊಡ್ಡ ಗೊಂಬೆಗೆ ಎಸ್.ಪಿ.ಬಿ ಅಂತ ಹೆಸರಿಟ್ಟು ಚಿಕ್ಕ ಗೊಂಬೆಗೆ ರಾಜೇಶ್ ಅಂತ ಹೆಸರಿಟ್ಟಿದ್ದೆ.

  ಹೊಸ ಪ್ರಯೋಗಗಳಿಗೆ ಮತ್ತೊಂದು ಹೆಸರು ರಾಜೇಶ್ ಕೃಷ್ಣನ್

  ಹೊಸ ಪ್ರಯೋಗಗಳಿಗೆ ಮತ್ತೊಂದು ಹೆಸರು ರಾಜೇಶ್ ಕೃಷ್ಣನ್

  ಹೊಸ ಪ್ರಯೋಗಗಳಿಗೆ ಮತ್ತೊಂದು ಹೆಸರು ರಾಜೇಶ್ ಕೃಷ್ಣನ್ ಅಂತ ಸ್ಯಾಂಡಲ್ ವುಡ್ ಅನೇಕ ಸಂಗೀತ ಮಾಂತ್ರಿಕರಾದ ಹಂಸಲೇಖ, ರಾಜೇಶ್ ರಾಮನಾಥ್, ಅರ್ಜುನ್ ಜನ್ಯಾ, ಮನೋಹರ್ ಮುಂತಾದವರು ತಿಳಿಸಿದ್ದಾರೆ.

  ಕ್ಷಮೆ ಕೇಳ್ತೀನಿ.

  ಕ್ಷಮೆ ಕೇಳ್ತೀನಿ.

  ಕೆಲವೊಂದು ಬಾರಿ ನನ್ನ ಪರ್ಸನಲ್ ಸಮಸ್ಯೆಯಿಂದ ಕೆಲವೊಂದು ಹಾಡುಗಳನ್ನು ಹಾಡಲಾಗಲಿಲ್ಲ ಅದಕ್ಕೆ ನನಗೆ ತುಂಬಾ ದುಃಖ ಇದೆ. ನನ್ನನ್ನು ನಂಬಿದ್ದವರಿಗೆ ನನ್ನಿಂದ ಬೇಜಾರಾಗಿದ್ರೆ ಅದಕ್ಕೆ ಸಾರಿ ಕೇಳ್ತೀನಿ.

  ನಿಮ್ಮ ಜೀವನ ಹೇಗಿದೆ ಅನ್ನಿಸ್ತಿದೆ

  ನಿಮ್ಮ ಜೀವನ ಹೇಗಿದೆ ಅನ್ನಿಸ್ತಿದೆ

  ಪ್ರೊಫೆಶನಲಿ ಚೆನ್ನಾಗಿದೆ, ಪರ್ಸನಲಿ ನಾಟ್ ಓಕೆ. ನನ್ನ ಸಂಗೀತ ನನ್ನನ್ನು ಕಾಪಾಡುತ್ತಿದೆ. ನನ್ನನ್ನು ಇಲ್ಲಿಯವರೆಗೆ ಬೆಳೆಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.

  English summary
  Kannada Playback singer Rajesh Krishnan's life story was revealed in Zee Kannada Channel's popular show Weekend With Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X