»   » ಎಸ್.ಪಿ.ಬಿ ಮಾಡಿರುವ ದಾಖಲೆಗಳು ಅಬ್ಬಬ್ಬಾ.! ಒಂದಾ..ಎರಡಾ.!!?

ಎಸ್.ಪಿ.ಬಿ ಮಾಡಿರುವ ದಾಖಲೆಗಳು ಅಬ್ಬಬ್ಬಾ.! ಒಂದಾ..ಎರಡಾ.!!?

Posted By:
Subscribe to Filmibeat Kannada

''ಸಿನಿ ಜೀವನದಲ್ಲಿ 50 ವರ್ಷ ಪೂರೈಸಿರುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಸಾಧನೆಯನ್ನ ಯಾವ ಕವಿಯೂ ವರ್ಣಿಸಲು ಸಾಧ್ಯವಿಲ್ಲ. ಯಾವ ಕಲಾವಿದನ ಕುಂಚವೂ ಬಣ್ಣಿಸಲು ಸಾಧ್ಯವಿಲ್ಲ'' - ಹೀಗಂತ ಹೇಳಿದವರು ಮತ್ಯಾರು ಅಲ್ಲ, ಕನ್ನಡ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್.

ಜೀ ಕನ್ನಡ ವಾಹಿನಿಯಲ್ಲಿ ತಾವು ನಿರೂಪಣೆ ಮಾಡುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಬಗ್ಗೆ ನಟ ರಮೇಶ್ ಅರವಿಂದ್ ನೀಡಿದ ಇಂಟ್ರೊಡಕ್ಷನ್ ಇದು. [ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಡಾ.ರಾಜ್ ಕ್ಷಮೆ ಕೇಳಿದ ಗುಟ್ಟು ರಟ್ಟಾಯ್ತು!]

ಸಂಗೀತ ಲೋಕದಲ್ಲಿ ದಾಖಲೆಗಳ ಸರಮಾಲೆ ಕಟ್ಟಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಸಾಧನೆಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಕುರಿತು...

ಪೂರ್ಣ ಹೆಸರು - ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ
ಜನ್ಮ ದಿನಾಂಕ - ಜೂನ್ 4, 1946
ಹುಟ್ಟೂರು - ಕೊನೇಟಮ್ಮಪೇಟಾ, ಆಂಧ್ರ ಪ್ರದೇಶ
ತಂದೆ - ಎಸ್.ಪಿ.ಸಾಂಬಮೂರ್ತಿ (ಹರಿಕಥಾ ವಿದ್ವಾಂಸ) ತಾಯಿ - ಶಕುಂತಲಮ್ಮ
ಪತ್ನಿ - ಸಾವಿತ್ರಿ
ಪುತ್ರಿ - ಪಲ್ಲವಿ
ಪುತ್ರ - ಚರಣ್

[ಭಾರತದ ಹೆಮ್ಮೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಆಗಿತ್ತು ಮಹಾ ಮೋಸ!]

40,000 ಹಾಡುಗಳು.!

ಗಾಯಕರಾಗಿ ಸರಿಸುಮಾರು ನಲವತ್ತು ಸಾವಿರ ಹಾಡುಗಳನ್ನ ಹಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಒರಿಯಾ, ಬೆಂಗಾಲಿ, ಮರಾಠಿ, ಪಂಜಾಬಿ ಸೇರಿದಂತೆ ಹದಿನೈದು ಭಾಷೆಗಳಲ್ಲಿ ಹಾಡಿದ್ದಾರೆ.[ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಕೈ ಕೊಟ್ಟ ಹುಡುಗಿ ಯಾರು?]

ಚಿತ್ರ ಗೀತೆ ಮಾತ್ರ ಅಲ್ಲ!

ಚಿತ್ರ ಗೀತೆಗಳ ಜೊತೆಗೆ ದೇವರ ನಾಮ, ಆಲ್ಬಂ, ಭಾವ ಗೀತೆ, ಕರ್ನಾಟಿಕ್ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗೀತೆಗಳನ್ನ ಹಾಡಿದ್ದಾರೆ.[ಮಕ್ಕಳು ಏನ್ ಓದ್ತಿದ್ದಾರೆ ಅನ್ನೋದೇ ಎಸ್.ಪಿ.ಬಿಗೆ ಗೊತ್ತಿರಲಿಲ್ಲ!]

ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು!

ಗಾಯನದ ಜೊತೆಗೆ ಸಂಗೀತ ನಿರ್ದೇಶಕರು, ನಟರು ಜೊತೆಗೆ ಡಬ್ಬಿಂಗ್ ಕಲಾವಿದರು ಹಾಗೂ ನಿರ್ಮಾಪಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ!

ಪ್ರಶಸ್ತಿಗಳ ಪಟ್ಟಿ!

ಪದ್ಮಶ್ರೀ, ಪದ್ಮಭೂಷಣ, ಆರು ರಾಷ್ಟ್ರ ಪ್ರಶಸ್ತಿಗಳು, ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯ ಸರ್ಕಾರಗಳಿಂದ ಒಟ್ಟು ಇಪತ್ಮೂರು ರಾಜ್ಯ ಪ್ರಶಸ್ತಿಗಳು ಬಂದಿವೆ.

ನಾಲ್ಕು ಡಾಕ್ಟರೇಟ್!

ಪ್ರತ್ಯೇಕ ವಿಶ್ವವಿದ್ಯಾನಿಲಯಗಳಿಂದ ನಾಲ್ಕು ಡಾಕ್ಟರೇಟ್ ಸಿಕ್ಕಿದೆ. ಕನ್ನಡ ನಾಡಿನ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವ ಗಾನ ಯೋಗಿ ಗೌರವ, ಆಂಧ್ರ ವಿಶ್ವವಿದ್ಯಾನಿಲಯದಿಂದ ಕಲಾ ಪ್ರಪೂರ್ಣ ಗೌರವ, ಮಂತ್ರಾಲಯದ ಆಸ್ಥಾನ ವಿದ್ವಾನ್ ಗೌರವ, ತಮಿಳುನಾಡಿನ ಕಲೈಮಾಮಣಿ ಗೌರವ, ಸಾಂಸ್ಕೃತಿಕ ಕಲಾ ಸಿರಿ ಗೌರವ, ಲತಾ ಮಂಗೇಶ್ಕರ್ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿಗಳು ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಲಭಿಸಿವೆ.

ರೆಕಾರ್ಡ್ ಗಳ ಪಟ್ಟಿ

ಒಂದೇ ದಿನದಲ್ಲಿ ಕನ್ನಡದಲ್ಲಿ 17 ಹಾಡುಗಳು, ಒಂದೇ ದಿನದಲ್ಲಿ ತೆಲುಗು ಹಾಗೂ ತಮಿಳಿನಲ್ಲಿ 19 ಹಾಡುಗಳು, ಒಂದೇ ದಿನದಲ್ಲಿ ಹಿಂದಿಯಲ್ಲಿ 16 ಹಾಡುಗಳು ರೆಕಾರ್ಡ್ ಮಾಡಿದ ಪ್ಲೇ ಬ್ಯಾಕ್ ಸಿಂಗರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ.

ಕಿರುತೆರೆಯಲ್ಲೂ ದಾಖಲೆ

ಕಿರುತೆರೆ ಶೋಗಳ ಸಾರಥಿಯಾಗಿ ಸಾವಿರಾರು ಎಪಿಸೋಡುಗಳು, ಲೆಕ್ಕಕ್ಕೆ ಸಿಗದ ಸ್ಟೇಜ್ ಪರ್ಫಾಮೆನ್ಸ್ ಮಾಡಿರುವ ಸಾಧನೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಸಲ್ಲಬೇಕು.

ಕನ್ನಡ ಗೊತ್ತಿರ್ಲಿಲ್ಲ!

''ನನಗೆ ಎಮೋಷನಲ್ ಆಗ್ತಿದೆ. ಎಲ್ಲಿಂದ ಬಂದವನು ನಾನು. ನನಗೆ ಕನ್ನಡ ಗೊತ್ತಿರ್ಲಿಲ್ಲ. ಮೊದಲು 'ನಕ್ಕರೆ ಅದೇ ಸ್ವರ್ಗ' ಸಿನಿಮಾಗೆ ಹಾಡುವಾಗ ಸಂಗೀತ ನಿರ್ದೇಶಕ ರಂಗರಾಯರಿಗೆ ಹೇಳಿದೆ, 'ನನಗೆ ಕನ್ನಡ ಗೊತ್ತಿಲ್ಲ' ಅಂತ. 'ಹೇಳಿಕೊಡ್ತೀವಿ' ಅಂದಿದ್ದರು. ಅಲ್ಲಿಂದ ಜೀವನದಲ್ಲಿ ಇಷ್ಟು ದೂರ ಬರ್ತೀನಿ ಅಂತ ಎಂದೂ ಅಂದುಕೊಂಡಿರಲಿಲ್ಲ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಗುರುಗಳು ಯಾರು?

''ನಾನು ಯಾವ ಗುರು ಹತ್ತಿರ ಹೋಗಿ ಸಂಗೀತ ಕಲಿಯಲಿಲ್ಲ. ಹಾಡುವವರು ಎಲ್ಲರೂ ನನ್ನ ಗುರುಗಳೇ'' ಎಸ್.ಪಿ.ಬಾಲಸುಬ್ರಹ್ಮಣ್ಯಂ

English summary
Multilingual Singer S.P.Balasubrahmanyam has recieved many awards and has done multiple records in his 50 years long Carrer. This article gives you an insight on S.P.Balasubrahmanyam's Achievements.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada