»   » ನಟಿ ಸುಧಾರಾಣಿ ಮಾಡಿರುವ ಸಾಧನೆ ಬಗ್ಗೆ ನಿಮಗೆಷ್ಟು ಗೊತ್ತು?

ನಟಿ ಸುಧಾರಾಣಿ ಮಾಡಿರುವ ಸಾಧನೆ ಬಗ್ಗೆ ನಿಮಗೆಷ್ಟು ಗೊತ್ತು?

Posted By:
Subscribe to Filmibeat Kannada

ಅಣ್ಣಾವ್ರ ಮಗ ಶಿವರಾಜ್ ಕುಮಾರ್ 'ಹ್ಯಾಟ್ರಿಕ್ ಹೀರೋ' ಅಂತ ನಿಮಗೆಲ್ಲರಿಗೂ ಗೊತ್ತಿದೆ. ಆದ್ರೆ, ಅದೇ ಶಿವಣ್ಣನ ಜೊತೆಗೆ ಕನ್ನಡ ಚಿತ್ರರಂಗಕ್ಕೆ 'ನಾಯಕಿ' ಆಗಿ ಪರಿಚಯಗೊಂಡ ನಟಿ ಸುಧಾರಾಣಿ ಕೂಡ ಸತತ ಹಿಟ್ ಚಿತ್ರಗಳನ್ನೇ ನೀಡಿದವರು ಅನ್ನೋದು ನಿಮಗೆ ಗೊತ್ತಾ?

'ಆನಂದ್', 'ಮನ ಮೆಚ್ಚಿದ ಹುಡುಗಿ', 'ದೇವತಾ ಮನುಷ್ಯ', 'ರಣರಂಗ' ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೊಸತರಲ್ಲೇ 'ಲಕ್ಕಿ ಹೀರೋಯಿನ್' ಅಂತ ಹೆಸರುವಾಸಿ ಆದವರು ನಟಿ ಸುಧಾರಾಣಿ. [ಸುಧಾರಾಣಿ ವೈಯುಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಕಠೋರ ಸತ್ಯ!]

ಇಂತಿಪ್ಪ ಸುಧಾರಾಣಿ ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳನ್ನ ಯಶಸ್ವಿಯಾಗಿ ಪೂರೈಸಿದ್ದಾರೆ. ಯಾವುದೇ ವಿವಾದಗಳನ್ನ ಮೈ ಮೇಲೆ ಮೆತ್ತಿಕೊಳ್ಳದೆ, ನಾಯಕಿ ಆಗಿ, ಪೋಷಕ ನಟಿಯಾಗಿ, ಡಬ್ಬಿಂಗ್ ಕಲಾವಿದೆ ಆಗಿ ಸ್ಯಾಂಡಲ್ ವುಡ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ನಟಿ ಸುಧಾರಾಣಿ ಮಾಡಿರುವ ಸಾಧನೆ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ....

ನಟಿ ಸುಧಾರಾಣಿ ಕುರಿತು

ನಿಜ ನಾಮ - ಜಯಶ್ರೀ
ಜನ್ಮ ದಿನಾಂಕ - ಆಗಸ್ಟ್ 14, 1973
ತಂದೆ - ಗೋಪಾಲಕೃಷ್ಣ, ತಾಯಿ - ನಾಗಲಕ್ಷ್ಮಿ
ಸಹೋದರರು - ಅರುಣ್, ಮುರಳಿ
ಪತಿ - ಗೋವರ್ಧನ್
ಪುತ್ರಿ - ನಿಧಿ

ಬಾಲನಟಿ ಆಗಿದ್ದರು!

ಮೂರು ವರ್ಷದ ಮಗುವಾಗಿದ್ದಾಗಲೇ, 'ಕಿಲಾಡಿ ಕಿಟ್ಟು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ (ಬೇಬಿ ಜಯಶ್ರೀ) ಆಗಿ ಎಂಟ್ರಿಕೊಟ್ಟವರು ನಟಿ ಸುಧಾರಾಣಿ

15 ಚಿತ್ರಗಳಲ್ಲಿ ಬಾಲ ನಟಿ

'ರಂಗನಾಯಕಿ', 'ಕವಿರತ್ನ ಕಾಳಿದಾಸ', 'ಅನುಪಮ', 'ಕುಳ್ಳ ಕುಳ್ಳಿ' ಸೇರಿದಂತೆ ಒಟ್ಟು 15 ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಸಿದ್ದಾರೆ.

ಅಣ್ಣನ ತಂಡಕ್ಕೆ ತಂಗಿಯೇ ನಾಯಕಿ!

''ನಮ್ಮದು ಒಂದು ಸಣ್ಣ ಟ್ರೂಪ್ ಇತ್ತು 'ಅನ್ವೇಷಕರು' ಅಂತ. ಶಾರ್ಟ್ ಫಿಲ್ಮ್ಸ್ ಮಾಡಬೇಕು ಅಂತ ಒಂದು ಗೀಳು ಇತ್ತು. ಆಗ ಮತ್ತಿಕೆರೆಯಲ್ಲಿ ಒಂದು ಘಟನೆ ನಡೆದಿತ್ತು. ಬಸ್ ಹತ್ತುವಾಗ ಜನರ ನೂಕುನುಗ್ಗಲಲ್ಲಿ ಒಂದು ಮಗು ಸತ್ತು ಹೋಗಿತ್ತು'' - ಅರುಣ್, ಸುಧಾರಾಣಿ ಸಹೋದರ

ಆಗಲೇ ಚೆನ್ನಾಗಿ ಅಭಿನಯ ಮಾಡ್ತಿದ್ಳು!

''ಈ ಘಟನೆ ಇಟ್ಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದು ಶಾರ್ಟ್ ಮೂವಿ ಮಾಡಿದ್ವಿ. ಅದರಲ್ಲಿ ಮಗು ಪಾತ್ರದಲ್ಲಿ ಸುಧಾರಾಣಿ ಅಭಿನಯಿಸಿದ್ದಳು. ಆಗಲೇ ಚೆನ್ನಾಗಿ ಆಕ್ಟ್ ಮಾಡ್ತಿದ್ಳು. ಇವಳ ಅಭಿನಯ ನೋಡಿ ಅಲ್ಲಿದ್ದವರೆಲ್ಲಾ ಅಳೋಕೆ ಶುರುಮಾಡಿದ್ದರು'' - ಅರುಣ್, ಸುಧಾರಾಣಿ ಸಹೋದರ

ಚಿಕ್ಕವಯಸ್ಸಲ್ಲೇ ಮಾಡೆಲಿಂಗ್

''ಕ್ವಾಲಿಟಿ ಬಿಸ್ಕೆಟ್ಸ್' ಆಡ್ ಮಾಡಿದ್ದೆ ಚಿಕ್ಕವಯಸ್ಸಲ್ಲಿ. ಅದರ ಕ್ಯಾಮರಾಮೆನ್ ಮೂಲಕ 'ಕಿಲಾಡಿ ಕಿಟ್ಟು' ಚಿತ್ರಕ್ಕೆ ಬಾಲನಟಿ ಆಗಲು ಆಫರ್ ಬಂತು'' - ಸುಧಾರಾಣಿ

ಏಳನೇ ಕ್ಲಾಸಿಗೆ ಹೀರೋಯಿನ್!

ಅತ್ಯಂತ ಕಿರಿಯ ವಯಸ್ಸಿಗೆ 'ನಾಯಕಿ' ಪಟ್ಟ ಪಡೆದವರು ನಟಿ ಸುಧಾರಾಣಿ. 12 ನೇ ವಯಸ್ಸಿನಲ್ಲಿ, ಅಂದ್ರೆ ಇನ್ನೂ ಏಳನೇ ಕ್ಲಾಸ್ ಓದುತ್ತಿರುವಾಗಲೇ ನಾಯಕಿ ಆಗಿ 'ಆನಂದ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದರು.

103 ಚಿತ್ರಗಳಲ್ಲಿ ಅಭಿನಯ

103 ಚಿತ್ರಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ, ಗೌರವ ಪಾತ್ರಗಳಲ್ಲಿ ಸುಧಾರಾಣಿ ಅಭಿನಯಿಸಿದ್ದಾರೆ.

ಪಡೆದಿರುವ ಪ್ರಶಸ್ತಿಗಳು

'ಪಂಚಮವೇದ', 'ಮೈಸೂರು ಮಲ್ಲಿಗೆ' ಚಿತ್ರಗಳ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ.

'ಮೈಸೂರು ಮಲ್ಲಿಗೆ' ಹಾಗೂ 'ಸ್ಪರ್ಶ' ಚಿತ್ರಗಳ ಅಭಿನಯಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬೇರೆ ಭಾಷೆಗಳಲ್ಲೂ ಜನಪ್ರಿಯ

ತಮಿಳು, ತುಳು ಹಾಗೂ ಮಲೆಯಾಳಂ ಚಿತ್ರಗಳಲ್ಲೂ ಅಭಿನಯಿಸಿ ಜನಪ್ರಿಯತೆ ಪಡೆದಿದ್ದಾರೆ ನಟಿ ಸುಧಾರಾಣಿ

ಬಹುಮುಖ ಪ್ರತಿಭೆ

ಕೇವಲ ನಟಿಯಾಗಿ ಮಾತ್ರ ಅಲ್ಲ. ರೂಪದರ್ಶಿ ಆಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಸುಧಾರಾಣಿ ಗುರುತಿಸಿಕೊಂಡಿದ್ದಾರೆ.

English summary
Kannada Actress Sudha Rani's glorifying acting career was revealed in Zee Kannada Channel's popular show Weekend With Ramesh season 2. This article gives you an insight on Sudha Rani's Achievements.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada