»   » ಕುಚ್ಚಿಕ್ಕು ಗೆಳೆಯ ವಿಷ್ಣು ನೆನೆದು ಭಾವುಕರಾದ ಅಂಬರೀಶ್

ಕುಚ್ಚಿಕ್ಕು ಗೆಳೆಯ ವಿಷ್ಣು ನೆನೆದು ಭಾವುಕರಾದ ಅಂಬರೀಶ್

Posted By:
Subscribe to Filmibeat Kannada

ಮನೆಯಲ್ಲಿ ತುಂಟಾಟ ಮಾಡಿದ ಬಗ್ಗೆ, ಕಾಲೇಜು ದಿನಗಳಲ್ಲಿ ಕೀಟಲೆ ಮಾಡಿದ ಬಗ್ಗೆ, ಅಣ್ಣಾವ್ರರೊಂದಿಗೆ ನಕ್ಕು-ನಲಿದ ಕ್ಷಣಗಳನ್ನ ಮೆಲುಕು ಹಾಕುತ್ತಾ ಖುಷಿಯಿಂದ ಇದ್ದ ಅಂಬರೀಶ್ ಪುಟ್ಟ ಮಕ್ಕಳು ಹಾಡಿದ 'ಕುಚ್ಚಿಕ್ಕು....ಕುಚ್ಚಿಕ್ಕು....' ಹಾಡು ಕೇಳಿದ ಕೂಡಲೆ ಭಾವುಕರಾದರು.

'ಸಾಹಸಸಿಂಹ' ವಿಷ್ಣುವರ್ಧನ್ ಬಗ್ಗೆ ಮಾತನಾಡುವಾಗ ತಮ್ಮ 'ಸಾಧನೆಯ ಸೀಟ್'ನಲ್ಲಿ ಕೂರದೆ ಎದ್ದು ನಿಂತು ಆತ್ಮೀಯ ಗೆಳೆಯನಿಗೆ ಗೌರವ ಸಲ್ಲಿಸಿದರು. [ಪುಟ್ಟಣ್ಣ ಕಣಗಾಲ್-ಆರತಿ ಬಗ್ಗೆ ಅಂಬರೀಶ್ ಬಿಚ್ಚಿಟ್ಟ ಸತ್ಯ ಸಂಗತಿ]

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'ನಲ್ಲಿ 'ಹೃದಯವಂತ' ವಿಷ್ಣುವರ್ಧನ್ ಬಗ್ಗೆ ಅಂಬರೀಶ್ ತಮ್ಮ ಮನದಾಳ ಹಂಚಿಕೊಂಡರು. ಅದನ್ನೆಲ್ಲಾ ಅಂಬಿ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

ಮೊದಲ ಬಾರಿ ವಿಷ್ಣು ಭೇಟಿ ಆಗಿದ್ದು....

''ವಿಷ್ಣುನ ನಾನು ಮೊದಲ ಬಾರಿ ನೋಡಿದ್ದು ಪ್ರೀಮಿಯರ್ ಸ್ಟುಡಿಯೋದಲ್ಲಿ. ಅವನು ನನ್ನ ನೋಡಿದ ತಕ್ಷಣ ಮಾತಾಡ್ತಾ ಮಾತಾಡ್ತಾ, 'ನಿಮಗೆ ಶತ್ರುಘ್ನ ಸಿನ್ಹ ಅವರ ಡೈಲಾಗ್ ಗೊತ್ತಾ?' ಅಂತ ಕೇಳ್ದ. ನಾನು 'ಗೊತ್ತಿಲ್ಲ' ಅಂದೆ. ಅವಾಗಿನಿಂದ ನನ್ನ ಅವನ ಫ್ರೆಂಡ್ ಶಿಪ್ ಶುರುವಾಗಿದ್ದು. ನಾನು ಖಳನಾಯಕನಾದೆ. ಅವನು ಹೀರೋ ಆದ. ಆದ್ರೆ ಇಬ್ಬರಿಗೂ ಆ ಭೇದಭಾವ ಇರ್ಲಿಲ್ಲ'' - ಅಂಬರೀಶ್[ಜೀವಂತ ದಂತಕಥೆ ಅಂಬರೀಶ್ ರವರ 'ರೆಬೆಲ್' ಜೀವನದ ಸತ್ಯಕಥೆ]

ಉತ್ತರ-ದಕ್ಷಿಣ

''ಟೆಂಪರ್ಮೆಂಟ್ ನೋಡಿದ್ರೆ ನಾನು ಸೌತ್, ಅವನು ನಾರ್ತ್. ಅವನಿಗೆ ಎಷ್ಟು ಶ್ರದ್ಧೆ ಇದ್ಯೋ, ಅಷ್ಟು ಕೇರ್ ಲೆಸ್ ನಾನು. ಎಲ್ಲಾ ವಿಷಯದಲ್ಲೂ ಅಷ್ಟೆ. ಆದ್ರೂ, ಒಬ್ಬರನ್ನೊಬ್ಬರನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ವಿ'' - ಅಂಬರೀಶ್

ಸ್ವಾರ್ಥ ಇರ್ಲಿಲ್ಲ!

''ಸ್ವಾರ್ಥ ಅನ್ನೋದು ಬಿಟ್ಟುಬಿಟ್ರೆ ಫ್ರೆಂಡ್ ಶಿಪ್ ಅನ್ನೋದು ಶಾಶ್ವತವಾಗಿರುತ್ತೆ. ಐ ಮಿಸ್ ಹಿಮ್ ಸೋ ಮಚ್ ಅಂದ್ರೆ ಹೇಳೋಕೆ ಆಗಲ್ಲ'' - ಅಂಬರೀಶ್

ವಿಷ್ಣು ಫಂಕ್ಷನ್ ಅಂದ್ರೆ ಹೋಗೋದೇ ಇಲ್ಲ!

''ವಿಷ್ಣುವರ್ಧನ್ ಫಂಕ್ಷನ್ ಅಂದ್ರೆ ನಾನು ಹೋಗೋದೇ ಇಲ್ಲ. ಐ ಸ್ಟಿಲ್ ಹ್ಯಾವ್ ಹಿಮ್ ಇನ್ ಮೈ ಹಾರ್ಟ್. ಐ ಸ್ಟಿಲ್ ಥಿಂಕ್ ದತ್ ಹೀ ಈಸ್ ಅಲೈವ್. ಡಿಸ್ಟರ್ಬ್ ಆಗುತ್ತೆ ಅಂತ ವಿಷ್ಣುವರ್ಧನ್ ಫಂಕ್ಷನ್ ಗೆ ಹೋಗಲ್ಲ. ಅವನ ಹಾಡು ಬಂದ್ರೂ ನಾನು ಚೇಂಜ್ ಮಾಡ್ತೀನಿ. ಐ ಸ್ಟಿಲ್ ವಾಂಟ್ ದಿ ಸೇಮ್ ವಿಷ್ಣು'' - ಅಂಬರೀಶ್

ಇವತ್ತಿಗೂ ನೋವು ಇದೆ!

''ಅವನು ತುಂಬಾ ಸೆಲೆಕ್ಟೀವ್. ಅವನಿಗೆ ಇರುವಷ್ಟು ಸೆನ್ಸ್ ಆಫ್ ಹ್ಯೂಮರ್ ಯಾರಿಗೂ ಇಲ್ಲ. ಆದ್ರೆ ಎಲ್ಲರ ಜೊತೆ ಹಾಗಿರಲ್ಲ. ನನ್ನ ಇಮಿಟೇಟ್ ಚೆನ್ನಾಗಿ ಮಾಡ್ತಾನೆ. ತುಂಬಾ ತೊಂದರೆಗಳನ್ನ ಎದುರಿಸಿದ. ಇವತ್ತಿಗೂ ತುಂಬಾ ಪ್ರಾಬ್ಲಂ ಇದೆ. ಆ ನೋವು ನಮಗೆ ಇದ್ದೇ ಇದೆ. ಏನೇನೋ ಕನಸು ಕಟ್ಟಿದ್ದೆ'' - ಅಂಬರೀಶ್

ಭಾರತಿ ವಿಷ್ಣುವರ್ಧನ್ ಹೇಳಿದಿಷ್ಟು...

''ಅಂಬರೀಶ್ ಎಷ್ಟು ರೆಬೆಲ್ ಅಂತ ಎಲ್ಲರೂ ಹೇಳ್ತೀರೋ, ಅವರ ಹೃದಯ ಅಷ್ಟೇ ಮೃದು. ನಮ್ಮೆಜಮಾನರು-ಅವರು ಗಳಸ್ಯ ಕಂಠಸ್ಯ. ಅಂಬಿ ಜೊತೆ ನಮ್ಮೆಜಮಾನರು ಹೊರಗಡೆ ಹೋಗ್ತಾರೆ ಅಂದ್ರೆ ನನಗೆ ಭಯನೇ ಇರ್ತಿಲ್ಲಿಲ್ಲ. ತುಂಬಾ ಚೆನ್ನಾಗಿ ನೋಡಿಕೊಳ್ಳೋರು. ಅವರು ಒಂದು ಮಗು ತರಹ. ನಿಮಗೆ ಹುಷಾರಿಲ್ಲದೇ ಇರುವಾಗ ನಮ್ಮ ಕೀರ್ತಿ ತುಂಬಾ ಅತ್ತಿದ್ದಾಳೆ. ಚಿಕ್ಕವಯಸ್ಸಿಂದಲೂ ಅವಳಿಗೆ ನೀವು ತುಂಬಾ ಆತ್ಮೀಯರು. ಅವಳ ತಂದೆ ಸ್ಥಾನದಲ್ಲಿ ನಿಮ್ಮನ್ನ ನೋಡ್ತಾಳೆ'' - ಭಾರತಿ ವಿಷ್ಣುವರ್ಧನ್

English summary
Kannada Actor Ambareesh spoke about his close friend Kannada Actor Vishnuvardhan in Zee Kannada Channel's popular show Weekend With Ramesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada