For Quick Alerts
  ALLOW NOTIFICATIONS  
  For Daily Alerts

  ಕಣ್ಣೀರಿಟ್ಟು, ಕೈಮುಗಿದು, ಅಭಿಮಾನಿಗಳೇ 'ದೇವರು' ಎಂದು ಗದ್ಗದಿತರಾದ ಅಂಬಿ

  By Harshitha
  |

  ಎಷ್ಟೇ ಆಸ್ತಿ ಸಂಪಾದಿಸಿದರೂ, ಎಷ್ಟೇ ಖ್ಯಾತಿ ಗಳಿಸಿದರೂ, ಜನರ ಪ್ರೀತಿ ಮುಂದೆ ಎಲ್ಲವೂ ತೃಣ ಸಮಾನ ಅಂತ ಹೇಳ್ತಾ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಗದ್ಗದಿತರಾದವರು ರೆಬೆಲ್ ಸ್ಟಾರ್ ಅಂಬರೀಶ್.

  ಅನಾರೋಗ್ಯದಿಂದ ಬಳಲಿದ ಅಂಬರೀಶ್ ಬೇಗ ಹುಷಾರಾಗಲಿ ಎಂದು ಕರ್ನಾಟಕದ ಮೂಲೆ ಮೂಲೆಯಲ್ಲೂ ಅವರ ಅಭಿಮಾನಿಗಳು ಪ್ರಾರ್ಥಿಸಿದ ಪರಿ ಅಂಬರೀಶ್ ಮನಮುಟ್ಟಿದೆ. [ಜೀವಂತ ದಂತಕಥೆ ಅಂಬರೀಶ್ ರವರ 'ರೆಬೆಲ್' ಜೀವನದ ಸತ್ಯಕಥೆ]

  'ಅಭಿಮಾನಿಗಳ ಋಣ ಎಷ್ಟೇ ಜನ್ಮ ಎತ್ತಿ ಬಂದರೂ ತೀರಿಸುವುದಕ್ಕೆ ಸಾಧ್ಯವಿಲ್ಲ' ಎಂದು ಹೇಳುತ್ತಾ ಪತ್ನಿ ಸುಮಲತಾ ಅಂಬರೀಶ್ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟರು. ಮುಂದೆ ಓದಿ....

  'ನನ್ನ ಭಾಗ್ಯ'

  'ನನ್ನ ಭಾಗ್ಯ'

  ''ನಾನು ಹುಷಾರಿಲ್ಲದೇ ಇದ್ದಾಗ, ನನ್ನ ಹೆಂಡತಿ ನನ್ನ ಜೊತೆ ರಾಕ್ ಆಗಿ ನನ್ನ ಹಿಂದೆ ನಿಂತಿದ್ದಳು. ಹಾಗಾಗಿ ನಾನು ಬಂದೆ. ನನ್ನ ಆಸ್ತಿ ಏನು ಅಂತ ನಾನು ಜೀವ ಇದ್ದಾಗಲೇ ನೋಡಿಬಿಟ್ಟೆ. ಅದು ನನ್ನ ಲಕ್. ಅಂತಹ ಭಾಗ್ಯ ನನಗೆ ಸಿಕ್ತು'' - ಅಂಬರೀಶ್ [ಪುಟ್ಟಣ್ಣ ಕಣಗಾಲ್-ಆರತಿ ಬಗ್ಗೆ ಅಂಬರೀಶ್ ಬಿಚ್ಚಿಟ್ಟ ಸತ್ಯ ಸಂಗತಿ]

  ಋಣ ತೀರಿಸಲು ಅಸಾಧ್ಯ

  ಋಣ ತೀರಿಸಲು ಅಸಾಧ್ಯ

  ''ನನ್ನ ಲೈಫ್ ನಲ್ಲಿ ಅಂತಹ ಒಂದು ಸನ್ನಿವೇಶ ಬರುತ್ತೆ ಅಂತ ಯಾವತ್ತೂ ಎಕ್ಸ್ ಪೆಕ್ಟ್ ಮಾಡಿರ್ಲಿಲ್ಲ. ನಾನು ಬ್ಲಾಂಕ್ ಆಗಿದ್ದೆ. ಎಷ್ಟು ಜನ ಸ್ನೇಹಿತರು, ಅವರೆಲ್ಲರ ಕನ್ಸರ್ನ್ ನ ಒಂದು ಜನ್ಮದಲ್ಲಿ ತೀರಿಸುವುದಕ್ಕೆ ಸಾಧ್ಯ ಇಲ್ಲ. ಎಷ್ಟೇ ಜನ್ಮ ಎತ್ತಿ ಬಂದರೂ ಆ ಋಣ ತೀರಿಸುವುದಕ್ಕೆ ಸಾಧ್ಯ ಇಲ್ಲ'' - ಸುಮಲತಾ [ಕುಚ್ಚಿಕ್ಕು ಗೆಳೆಯ ವಿಷ್ಣು ನೆನೆದು ಭಾವುಕರಾದ ಅಂಬರೀಶ್]

  ದೇವರ ಬಳಿ ಪ್ರಾರ್ಥನೆ ಮಾಡಲೇ ಇಲ್ಲ!

  ದೇವರ ಬಳಿ ಪ್ರಾರ್ಥನೆ ಮಾಡಲೇ ಇಲ್ಲ!

  ''ನೀವು ನಂಬ್ತೀರೋ ಬಿಡ್ತೀರೋ, ಆ ಒಂದು ತಿಂಗಳು ಇವರು ಐಸಿಯುನಿಂದ ಹೊರಗಡೆ ಬರುವವರೆಗೂ ನಾನು Pray ಮಾಡಲೇ ಇಲ್ಲ. ಒಂದು ದೇವರಿಗೂ ನಾನು ಒಂದು ಹರಕೆ ಕೂಡ ಮಾಡಿಲ್ಲ. ಬೇಕಾದಷ್ಟು ಜನ ಬಂದು ನನಗೆ ಕುಂಕುಮ, ಪೂಜೆ ಮಾಡಿರುವ ಪ್ರಸಾದ ಕೊಡ್ತಾಯಿದ್ರು. ಅವರೆಲ್ಲರ ಆಶೀರ್ವಾದ ಇತ್ತು'' - ಸುಮಲತಾ

  ರಾಕ್ ಲೈನ್ ವೆಂಕಟೇಶ್ ಗೆ ಥ್ಯಾಂಕ್ಸ್

  ರಾಕ್ ಲೈನ್ ವೆಂಕಟೇಶ್ ಗೆ ಥ್ಯಾಂಕ್ಸ್

  ''ನನ್ನ ಜೊತೆ ರಾಕ್ ಅಂದ್ರೆ, ಹೆಸರಿಗೆ ತಕ್ಕ ಹಾಗೆ ರಾಕ್ ಲೈನ್ ನಮಗೆ ತುಂಬಾ ಸಪೋರ್ಟ್ ಮಾಡಿದ್ರು. ಅದಲ್ಲದೇ, ಬ್ಲೈಂಡ್ ಬಿಲೀಫ್ ಇತ್ತು ನನಗೆ. ನಾನು ದೇವರನ್ನ ಕೇಳುವುದು ನನಗೆ ಇಷ್ಟ ಇರ್ಲಿಲ್ಲ, ದೇವರೇ ನನಗೆ ಹೇಳ್ಬೇಕಿತ್ತು 'ಇವರಿಗೆ ಏನೂ ಆಗಲ್ಲ' ಅಂತ. ನನಗೆ ಸ್ಟ್ರಾಂಗ್ ಬಿಲೀಫ್ ಇತ್ತು ಅಂಬರೀಶ್ ಗೆ ದೇವರು ಯಾವತ್ತೂ ಕೆಟ್ಟದ್ದು ಮಾಡಲ್ಲ ಅನ್ನುವ ನಂಬಿಕೆ ಇತ್ತು'' -ಸುಮಲತಾ

  ಎಲ್ಲರಿಗೂ ಥ್ಯಾಂಕ್ಸ್

  ಎಲ್ಲರಿಗೂ ಥ್ಯಾಂಕ್ಸ್

  ''ನಮಗೋಸ್ಕರ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ನಾನು ಥ್ಯಾಂಕ್ಸ್ ಹೇಳಲೇಬೇಕು. ಪ್ರತಿ ದಿನ ನಾನು ನೆನಪಿಸಿಕೊಳ್ತೀನಿ. ನನಗೆ ಎಲ್ಲಾ ಅಭಿಮಾನಿಗಳು ದೇವರೇ'' - ಸುಮಲತಾ

  ರಾಕ್ ಲೈನ್ ವೆಂಕಟೇಶ್ ಹೇಳಿದಿಷ್ಟು...

  ರಾಕ್ ಲೈನ್ ವೆಂಕಟೇಶ್ ಹೇಳಿದಿಷ್ಟು...

  ''ಒಂದೊಂದು ದಿನವೂ ಸುಮಲತಾ ಅಷ್ಟು ಕಷ್ಟ ಪಡ್ತಿದ್ರು. ಹೊರಗಡೆ ಹೇಳಿಕೊಳ್ಳುವ ಹಾಗಿಲ್ಲ. ಜೊತೆಯಲ್ಲಿ ಇದ್ದವರಿಗೆ ಮಾತ್ರ ಅವರ ಕಷ್ಟ ಗೊತ್ತಾಗಿದ್ದು. ಅಂತಹ ಒಂದು ಧೈರ್ಯ ಇದ್ದದ್ದು ಬಹುಶಃ ಸುಮಲತಾ ಅವರಿಗೆ ಮಾತ್ರ. ಆಚೆ ಜನರ ಗಲಾಟೆ. ಇನ್ನೊಂದ್ಕಡೆ ಜವಾಬ್ದಾರಿ. ಕೆಲವೊಬ್ಬರು ಸಿಂಗಾಪುರಕ್ಕೆ ಕರ್ಕೊಂಡು ಹೋಗ್ಬೇಡಿ ಅಂತಾರೆ. ಕನ್ಫ್ಯೂಷನ್ ನಲ್ಲಿ ಯಾವ ತರಹ ನಿರ್ಧಾರ ಮಾಡ್ಬೇಕು? ಹೆಚ್ಚುಕಮ್ಮಿ ಆದ್ರೆ? ಹತ್ತರ ಇದ್ದು ನೋಡಿ, ತುಂಬಾ ಕಷ್ಟ ಆಯ್ತು. ಶೀ ಈಸ್ ರಿಯಲಿ ಗ್ರೇಟ್'' - ರಾಕ್ ಲೈನ್ ವೆಂಕಟೇಶ್

  ಅಭಿಮಾನಿಗಳಿಗೆ ಥ್ಯಾಂಕ್ಸ್

  ಅಭಿಮಾನಿಗಳಿಗೆ ಥ್ಯಾಂಕ್ಸ್

  ''ಎಲ್ಲರಿಗೂ ನಾನು ಥ್ಯಾಂಕ್ಸ್ ಹೇಳ್ಬೇಕು. ನನಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಥ್ಯಾಂಕ್ಯು ವೆರಿ ಮಚ್'' - ಅಂಬರೀಶ್

  ಕಣ್ಣೀರಿಟ್ಟ ಅಂಬರೀಶ್

  ಕಣ್ಣೀರಿಟ್ಟ ಅಂಬರೀಶ್

  ಅಭಿಮಾನಿಗಳ ಪ್ರೀತಿ ಕಂಡು ಅಂಬರೀಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದರು.

  English summary
  Kannada Actor Ambareesh took Zee Kannada Channel's popular show Weekend With Ramesh stage to thank all his fans who prayed for his fast recovery.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X