»   » ಕೂದಲು ಕಟ್ ಮಾಡಿದ್ದಕ್ಕೆ ಲಿಫ್ಟ್ ಒಡೆದು ಹಾಕಿದ್ದ ರವಿಶಂಕರ್!

ಕೂದಲು ಕಟ್ ಮಾಡಿದ್ದಕ್ಕೆ ಲಿಫ್ಟ್ ಒಡೆದು ಹಾಕಿದ್ದ ರವಿಶಂಕರ್!

Posted By:
Subscribe to Filmibeat Kannada

2009ರಲ್ಲಿ ತಮಿಳಿನಲ್ಲಿ ತೆರೆಕಂಡ ವಿಜಯ್ ಅಭಿನಯದ 'ವೇಟೈಕಾರನ್' ಚಿತ್ರದಲ್ಲಿ ನಟ ರವಿಶಂಕರ್ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಆ ಚಿತ್ರಕ್ಕೆ ರವಿಶಂಕರ್ ಉದ್ದ ಕೂದಲು ಬಿಟ್ಟಿದ್ರು.

ವಿಭಿನ್ನ ಹೇರ್ ಸ್ಟೈಲ್ ಮತ್ತು ಮ್ಯಾನರಿಸಂ ನಿಂದಲೇ ಗುರುತಿಸಿಕೊಂಡಿದ್ದ ರವಿಶಂಕರ್ ರನ್ನ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಶಂಕರೇಗೌಡ 'ಕೆಂಪೇಗೌಡ' ಚಿತ್ರದ ವಿಲನ್ 'ಆರ್ಮುಗಂ' ಪಾತ್ರಕ್ಕೆ ಆಯ್ಕೆ ಮಾಡಿದರು.

ರವಿಶಂಕರ್ 'ಆರ್ಮುಗಂ' ಆಗ್ಬೇಕು ಅಂದ್ರೆ ತಮ್ಮ ಉದ್ದ ಕೂದಲನ್ನ ಕಟ್ ಮಾಡ್ಬೇಕಿತ್ತು. ಇದಕ್ಕೆ ರವಿಶಂಕರ್ ಒಪ್ಪಿಕೊಂಡಿರಲಿಲ್ಲ. ಹೀಗಾಗಿ, ಉಪಾಯ ಮಾಡಿದ ನಿರ್ಮಾಪಕ ಶಂಕರೇಗೌಡ, ರವಿಶಂಕರ್ ರವರಿಗೆ ಚೆನ್ನಾಗಿ ಹೆಡ್ ಮಸಾಜ್ ಮಾಡಿಸಿ, ನಿದ್ದೆ ಬರುವ ಹಾಗೆ ಮಾಡಿ, ಕೂದಲನ್ನ ಕಟ್ ಮಾಡಿಸಿದ್ರಂತೆ. [ಖಡಕ್ ಖಳ ನಟ ರವಿಶಂಕರ್ ಗೆ ಅವಮಾನ ಮಾಡಿದವರು ಯಾರು?]

ನಂತರ ಎಚ್ಚರಗೊಂಡ ರವಿಶಂಕರ್ ಅಂದು ಮಾಡಿದ ರಾದ್ಧಾಂತ ಅಷ್ಟಿಷ್ಟಲ್ಲ. ಆ ಘಟನೆ ಬಗ್ಗೆ ಶಂಕರೇಗೌಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ.....

'ಕೆಂಪೇಗೌಡ' ಚಿತ್ರಕ್ಕೆ ರವಿಶಂಕರ್ ಆಯ್ಕೆ ಆಗಿದ್ದು....

''ತಮಿಳು ಸಿನಿಮಾ 'ವೇಟೈಕಾರನ್' ಚಿತ್ರದಲ್ಲಿ ಉದ್ದ ಕೂದಲು ಬಿಟ್ಟುಕೊಂಡಿದ್ದ ಪಾತ್ರ ಚೆನ್ನಾಗಿತ್ತು. ಅದನ್ನ ನೋಡಿ, ಅವರೇ ನಮ್ಮ ಸಿನಿಮಾದ ವಿಲನ್ ಪಾತ್ರಕ್ಕೆ ಸೂಕ್ತ ಅಂತ ನಾನು ಮತ್ತು ಸುದೀಪ್ ನಿರ್ಧಾರ ಮಾಡಿದ್ವಿ'' - ಶಂಕರೇಗೌಡ, ನಿರ್ಮಾಪಕ [ನಟ ರವಿಶಂಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿಗಳು!]

'ಕೆಂಪೇಗೌಡ'ಗೆ ಜೈ!

''ರವಿಶಂಕರ್ ಜೊತೆ ಮಾತನಾಡಿದ್ವಿ. ಈ ತರಹ ಪಾತ್ರದ ಇದೆ 'ಕೆಂಪೇಗೌಡ' ಸಿನಿಮಾದಲ್ಲಿ ಅಂತ. 'ಆಯ್ತು ಮಾಡ್ತೀನಿ' ಅಂತ ಒಪ್ಪಿಕೊಂಡರು'' - ಶಂಕರೇಗೌಡ, ನಿರ್ಮಾಪಕ

ಕೂದಲು ಫುಲ್ ಶಾರ್ಟ್ ಮಾಡಿಸಿದ್ವಿ!

''ಅವರ ಕೂದಲು ಉದ್ದ ಇತ್ತು. 'ಕಟ್ ಮಾಡಬೇಕು' ಅಂದಾಗ ಸ್ವಲ್ಪ ಮಾಡೋಕೆ ಹೇಳಿದರು. ಆಗ ಅವರಿಗೆ ಚೆನ್ನಾಗಿ ಹೆಡ್ ಮಸಾಜ್ ಮಾಡಿಸಿ, ನಿದ್ದೆ ಮಾಡಿಸಿ, ಅವರು ಕೂದಲನ್ನ ಪೂರ್ತಿ ಶಾರ್ಟ್ ಆಗಿ ಕಟ್ ಮಾಡಿಸಿಬಿಟ್ವಿ'' - ಶಂಕರೇಗೌಡ, ನಿರ್ಮಾಪಕ

ಲಿಫ್ಟ್ ಒಡೆದು ಹಾಕಿದ್ರು!

''ಅದನ್ನ ನೋಡಿ, ರವಿಶಂಕರ್ ಫುಲ್ ಶಾಕ್ ಆಗಿ 'ಸಿನಿಮಾ ಬೇಡ, ಏನೂ ಬೇಡ' ಅಂತ ಲಿಫ್ಟ್ ಎಲ್ಲಾ ಒಡೆದು ಹಾಕಿ ಹೊರಡುವುದಕ್ಕೆ ರೆಡಿ ಆಗಿದ್ದರು'' - ಶಂಕರೇಗೌಡ, ನಿರ್ಮಾಪಕ

ಫೋಟೋಶೂಟ್ ಮಾಡಿದ್ವಿ!

''ಆಮೇಲೆ ಅವರಿಗೆ ಸಮಾಧಾನ ಮಾಡಿ ಫೋಟೋಶೂಟ್ ಮಾಡಿದ್ಮೇಲೆ, 'ಚೆನ್ನಾಗಿ ಕಾಣ್ತಿದ್ದೇನೆ' ಅಂತ ಒಪ್ಪಿಕೊಂಡರು'' - ಶಂಕರೇಗೌಡ, ನಿರ್ಮಾಪಕ

ರೆಕಾರ್ಡಿಂಗ್ ತುಂಬಾ ಕಷ್ಟ!

''ಅವರ ಜೊತೆ ಎರಡು ಹಾಡು ರೆಕಾರ್ಡ್ ಮಾಡುವುದಕ್ಕೆ ನನಗೆ ಒಳ್ಳೆ ಅವಕಾಶ ಸಿಕ್ತು. ಆದ್ರೆ ರೆಕಾರ್ಡ್ ಮಾಡುವುದು ಮಾತ್ರ ತುಂಬಾ ಕಷ್ಟ. ಅವರು ಸುಮ್ನೆ ಮಾತಾಡಿದ್ರೆ, ಅಷ್ಟು ಜೋರಾಗಿ ಕೇಳುತ್ತೆ. ಮೈಕ್ ಗಿಂತ ಹಿಂದೆ ಹೋಗಿ ಅಂತ ಹೇಳ್ತಿದ್ದೆ. ಅಂತಹ ವಾಯ್ಸ್ ಅವರದ್ದು'' - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

ಸೂಪರ್ ಹಿಟ್

''ಕೆಂಪೇಗೌಡ' ಸಿನಿಮಾ ಸೂಪರ್ ಹಿಟ್ ಆಯ್ತು. ಎಲ್ಲರಿಗೂ ಸಖತ್ ಖುಷಿ ಆಯ್ತು'' - ನಂದಕಿಶೋರ್, ನಿರ್ದೇಶಕ

ಹ್ಯಾಟ್ಸ್ ಆಫ್

''ಹ್ಯಾಟ್ಸ್ ಆಫ್ ಟು ಕಿಚ್ಚ ಸುದೀಪ್ ಮತ್ತು ಶಂಕರೇಗೌಡ. ತಮಿಳಿನಲ್ಲಿ ಪ್ರಕಾಶ್ ರಾಜ್ ಆ ಪಾತ್ರ ಮಾಡಿದ್ದರು. ಅಂತಹ ದೊಡ್ಡ ಕ್ಯಾರೆಕ್ಟರ್ ನ ನನಗೆ ಕೊಟ್ಟರು'' - ರವಿಶಂಕರ್

ಜೆ.ಕೆ ಅದೃಷ್ಟ

''ನನ್ನ ಅದೃಷ್ಟ ಇವರ ಜೊತೆ ಆಕ್ಟ್ ಮಾಡಿದ್ದು. 'ಕೆಂಪೇಗೌಡ' ಸಿನಿಮಾದಲ್ಲಿ ಇವರ ಪಕ್ಕ ನಿಂತುಕೊಳ್ಳಬೇಕು ಅಷ್ಟೆ. ನನಗೆ ಹೆಚ್ಚು ಡೈಲಾಗ್ ಇಲ್ಲ. ಜನ ಇವರನ್ನ ನೋಡಿ, ನೋಡಿ ಇವರ ಪಕ್ಕ ನಿಂತಿದ್ದ ನನ್ನನ್ನೂ ಗುರುತಿಸಿದ್ದಾರೆ'' - ಜೆ.ಕೆ, ನಟ

ನಿಜವಾದ ಯಶಸ್ಸು 'ಕೆಂಪೇಗೌಡ' ಚಿತ್ರದಿಂದ

''ಅದೃಷ್ಟಕ್ಕೆ 'ಕೆಂಪೇಗೌಡ' ಸಿನಿಮಾ ಅವಕಾಶ ಸಿಕ್ತು. ನನಗೆ ನಿಜವಾದ ಯಶಸ್ಸು ಸಿಕ್ಕಿದ್ದು 'ಕೆಂಪೇಗೌಡ' ಚಿತ್ರದಲ್ಲಿ. ಒಂದು ಯಶಸ್ಸಿಗೆ 25 ವರ್ಷ ಕಾದಿದ್ದೇನೆ. ಜೈ ಕರ್ನಾಟಕ...ಜೈ ಭುವನೇಶ್ವರಿ'' - ರವಿಶಂಕರ್

English summary
Kannada Actor cum Dubbing Artist Ravishankar spoke about the making of Kannada Movie 'Kempegowda' in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada