For Quick Alerts
  ALLOW NOTIFICATIONS  
  For Daily Alerts

  ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಡಾ.ರಾಜ್ ಕ್ಷಮೆ ಕೇಳಿದ ಗುಟ್ಟು ರಟ್ಟಾಯ್ತು!

  By Harshitha
  |

  ಕನ್ನಡ ಚಿತ್ರರಂಗದ ಪಾಲಿಗೆ ಮರೆಯದ ಮಾಣಿಕ್ಯ...ಚಿತ್ರರಸಿಕರ ಪಾಲಿಗೆ ಅನರ್ಘ್ಯ ರತ್ನ...ಕೋಟಿ ಕೋಟಿ ಮನೆ ಮನಗಳಲ್ಲಿ ಆರಾಧಿಸಲ್ಪಡುವ ಅಭಿಮಾನಿಗಳ ದೈವ ಡಾ.ರಾಜ್ ಕುಮಾರ್.

  ಇಂತಿಪ್ಪ ಡಾ.ರಾಜ್ ಕುಮಾರ್ ಒಂದು ದಿನ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರಿಗೆ ಕ್ಷಮೆ ಯಾಚಿಸಿದ್ರಂತೆ. ''ನಾನು ಏನೋ ಹಾಡಿದ್ದೀನಿ. ನೀವು ಹಾಡಿದ ರೀತಿಯಲ್ಲಿ ಇಲ್ಲ. ದಯವಿಟ್ಟು ಕ್ಷಮಿಸಿ'' ಅಂತ ವರನಟ ಡಾ.ರಾಜ್ ಕುಮಾರ್ ಹೇಳಿದ್ದರಂತೆ.

  ಈ ಪ್ರಸಂಗವನ್ನ ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಿಚ್ಚಿಟ್ಟಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ.

  ಗಾಯನದಲ್ಲಿ ಜನಪ್ರಿಯತೆ ಗಳಿಸಿದ ನಟ ಸಾರ್ವಭೌಮ ಡಾ.ರಾಜ್ ಕ್ಷಮೆ ಕೇಳಿದ್ದು ಯಾಕೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

  ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಗ್ಗೆ ಶಿವಣ್ಣ ಮಾತು

  ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಗ್ಗೆ ಶಿವಣ್ಣ ಮಾತು

  ''ನಾನು ಅವರ ಬಗ್ಗೆ ಮಾತನಾಡಬೇಕು ಅಂದ್ರೆ ತುಂಬಾ ಚಿಕ್ಕವನಾಗ್ತೀನಿ. ಯಾಕಂದ್ರೆ, ಇಂಡಿಯಾದಲ್ಲಿ ಒನ್ ಆಫ್ ದಿ ಬೆಸ್ಟ್ ಸಿಂಗರ್ ಅಂದ್ರೆ ಎಸ್.ಪಿ.ಬಿ. ಅಷ್ಟು ವಂಡರ್ ಫುಲ್ ಸಿಂಗರ್'' - ಶಿವರಾಜ್ ಕುಮಾರ್, ನಟ

  ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಗ್ಗೆ ರಾಘಣ್ಣ ಮಾತು

  ಎಸ್.ಪಿ.ಬಾಲಸುಬ್ರಹ್ಮಣ್ಯಂ ಬಗ್ಗೆ ರಾಘಣ್ಣ ಮಾತು

  ''ನಮ್ಮ ಜೀವಮಾನದಲ್ಲಿ ಅಷ್ಟು ಸಾಂಗ್ ಕೇಳೇ ಇಲ್ಲ. ಅಷ್ಟು ಹಾಡುಗಳನ್ನ ಹಾಡಿದ್ದಾರೆ ಅವರು'' - ರಾಘವೇಂದ್ರ ರಾಜ್ ಕುಮಾರ್, ನಟ, ನಿರ್ಮಾಪಕ

  ಫ್ಲ್ಯಾಶ್ ಬ್ಯಾಕ್ ಗೆ ತೆರಳಿದ ರಾಘಣ್ಣ

  ಫ್ಲ್ಯಾಶ್ ಬ್ಯಾಕ್ ಗೆ ತೆರಳಿದ ರಾಘಣ್ಣ

  ''ಒಂದು ಇನ್ಸಿಡೆಂಟ್ ನಾನು ಹೇಳಲೇಬೇಕು. ನಾನು ಒಂದಿನ ಆಕಾಶ್ ಆಡಿಯೋಗೆ ಹೋಗಿದ್ದೆ. ಅವತ್ತು ಅವರು ಯಾವುದೋ ರೆಕಾರ್ಡಿಂಗ್ ನಲ್ಲಿ ಬಿಜಿಯಿದ್ದರು. ನನ್ನ ನೋಡಿದ ತಕ್ಷಣ ಅವರು ರೆಕಾರ್ಡಿಂಗ್ ನ ಅರ್ಧಕ್ಕೆ ನಿಲ್ಲಿಸಿ ನನ್ನ ಹತ್ತಿರ ಬಂದರು'' - ರಾಘವೇಂದ್ರ ರಾಜ್ ಕುಮಾರ್, ನಟ, ನಿರ್ಮಾಪಕ

  ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಟ್ಟ ಬೇಡಿಕೆ!

  ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಟ್ಟ ಬೇಡಿಕೆ!

  ''ನನ್ನ ಹತ್ತಿರ ಬಂದು ಒಂದು ಫೇವರ್ ಆಗ್ಬೇಕು ನಿಮ್ಮಿಂದ ಅಂದರು. ನಾನು ಏನು ಅಂತ ಕೇಳಿದ್ದಕ್ಕೆ, ನಿಮ್ಮ ತಂದೆಯವರು ನನಗೆ ಒಂದು ಹಾಡು ಹಾಡಬೇಕು ಅಂತ ಕೇಳಿದರು. ನಾನು ಹೋಗಿ ಅಪ್ಪನ ಹತ್ತಿರ ಹೇಳಿದೆ'' - ರಾಘವೇಂದ್ರ ರಾಜ್ ಕುಮಾರ್, ನಟ, ನಿರ್ಮಾಪಕ

  ಡಾ.ರಾಜ್ ಪ್ರತಿಕ್ರಿಯೆ ಹೇಗಿತ್ತು?

  ಡಾ.ರಾಜ್ ಪ್ರತಿಕ್ರಿಯೆ ಹೇಗಿತ್ತು?

  ''ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನೀವು ಹಾಡಬೇಕಂತೆ ಅಂತ ಅಪ್ಪನ ಹತ್ತಿರ ಹೋಗಿ ಹೇಳಿದೆ. ನಾನು ಹೇಳಿದ್ದನ್ನ ಕೇಳಿ 'ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ' ಅಂತ ಕೇಳಿದ ಹಾಗೆ ಆಯ್ತು ಅಂದರು ಅಪ್ಪಾಜಿ'' - ರಾಘವೇಂದ್ರ ರಾಜ್ ಕುಮಾರ್, ನಟ, ನಿರ್ಮಾಪಕ

  ಡಾ.ರಾಜ್ ಗೆ ಸಿಕ್ಕ ಸೌಭಾಗ್ಯ

  ಡಾ.ರಾಜ್ ಗೆ ಸಿಕ್ಕ ಸೌಭಾಗ್ಯ

  ''ಆ ಮನುಷ್ಯನಿಗೆ ನಾನು ಹಾಡಬೇಕಾ. ನನ್ನ ಸೌಭಾಗ್ಯ ಅದು. ಒಪ್ಪಿಕೊಳ್ಳಿ ಅಂದ್ರು ಅಪ್ಪಾಜಿ'' - ರಾಘವೇಂದ್ರ ರಾಜ್ ಕುಮಾರ್, ನಟ, ನಿರ್ಮಾಪಕ

  ಸಿಂಗರ್ಸ್ ಗೆ ಆರ್ಟಿಸ್ಟ್ ಹಾಡಿದ್ದು ಅಪರೂಪ!

  ಸಿಂಗರ್ಸ್ ಗೆ ಆರ್ಟಿಸ್ಟ್ ಹಾಡಿದ್ದು ಅಪರೂಪ!

  ''ಸಾಮಾನ್ಯವಾಗಿ ಸಿಂಗರ್ಸ್ ಆರ್ಟಿಸ್ಟ್ ಗೆ ಹಾಡುತ್ತಾರೆ. ಆದ್ರೆ, ಸಿಂಗರ್ ಗೆ ಆರ್ಟಿಸ್ಟ್ ಹಾಡಿದ್ದು ಅಪರೂಪ. ಅದರಲ್ಲೂ ಅಪ್ಪಾಜಿ ನಿಮಗೆ ಹಾಡಿರುವುದು ನನಗೆ ಬಹಳ ಸಂತೋಷ. 'ದೀಪಾವಳಿ...' ಹಾಡು'' - ಶಿವರಾಜ್ ಕುಮಾರ್, ನಟ

  ಅಷ್ಟಕ್ಕೂ ಆಗಿದ್ದೇನು?

  ಅಷ್ಟಕ್ಕೂ ಆಗಿದ್ದೇನು?

  ''ಮುದ್ದಿನ ಮಾವ' ಸಿನಿಮಾದಲ್ಲಿ ಶಶಿ ಕುಮಾರ್ ಹೀರೋ. ನಾನೇ ಮ್ಯೂಸಿಕ್ ಡೈರೆಕ್ಷನ್ ಮಾಡ್ದೆ. ನನಗೆ ಅದರಲ್ಲಿ ಎರಡು ಹಾಡುಗಳು ಇವೆ. ಶಶಿಕುಮಾರ್ ರವರ ಎಲ್ಲಾ ಸಿನಿಮಾಗಳಿಗೂ ನಾನೇ ಹಾಡು ಹಾಡಿದ್ದೆ. ಶಶಿ ಕುಮಾರ್ ಅವರಿಗೆ ರಾಜೇಶ್ ಅಥವಾ ಬೇರೆ ಯಾರಾದರೂ ಹಾಡಲಿ, ನನ್ನ ಹಾಡಿಗೆ ನಾನೇ ಹಾಡಿಕೊಳ್ಳುತ್ತೇನೆ ಎಂದೆ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  ಶಶಿಕುಮಾರ್ ಒಪ್ಪಿಕೊಳ್ಳಲಿಲ್ಲ!

  ಶಶಿಕುಮಾರ್ ಒಪ್ಪಿಕೊಳ್ಳಲಿಲ್ಲ!

  ''ಆದರೆ ಅದಕ್ಕೆ ಶಶಿಕುಮಾರ್ ಒಪ್ಪಿಕೊಳ್ಳಲೇ ಇಲ್ಲ. ಶಶಿಕುಮಾರ್ ಗೆ ನಾನು ಹಾಡಿದರೆ ನನಗೆ ಬೇರೆಯವರು ಹಾಡಬೇಕಿತ್ತು. ಆಗ ಹೊಳೆದದ್ದು, ಬೆಸ್ಟ್ ಅಂದ್ರೆ ಅಣ್ಣಾವ್ರೇ ಹಾಡಬೇಕು ಅಂತ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  ಕ್ಷಮೆ ಕೇಳಿದ ಅಪ್ಪಾಜಿ!

  ಕ್ಷಮೆ ಕೇಳಿದ ಅಪ್ಪಾಜಿ!

  ''ಆಮೇಲೆ ಅಪ್ಪಾಜಿ ಜೊತೆ ಮಾತನಾಡಿದ್ವಿ, ಅವರು ಒಪ್ಪಿಕೊಂಡರು. ಹಾಡಿದ ಮೇಲೆ ಅವರು ನನಗೆ ಫೋನ್ ಮಾಡಿ, ''ನಾನು ಏನೋ ಹಾಡಿದ್ದೀನಿ. ನೀವು ಹಾಡಿದ ರೀತಿಯಲ್ಲಿ ಇಲ್ಲ. ಏನಾದರೂ ತಪ್ಪುಗಳು ಇದ್ದರೆ ದಯವಿಟ್ಟು ಕ್ಷಮಿಸಿರಿ'' ಎಂದರು ಅವರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  ಬೇರೆ ಯಾರಿಗೂ ಅಪ್ಪಾಜಿ ಹಾಡಿಲ್ಲ!

  ಬೇರೆ ಯಾರಿಗೂ ಅಪ್ಪಾಜಿ ಹಾಡಿಲ್ಲ!

  ''ನನಗೆ ಗೊತ್ತಿರುವ ಹಾಗೆ, ಅವರ ಜೀವನದಲ್ಲಿ ಅವರು ಬೇರೆ ಯಾರಿಗೂ ಹಾಡಿಲ್ಲ. ನನಗೆ ಮಾತ್ರ ಅವರು ಹಾಡಿರುವುದು. ಅದಕ್ಕೆ ಕಾರಣ ಶಶಿಕುಮಾರ್'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  ಎಸ್.ಪಿ.ಬಿ ಬಗ್ಗೆ ಶಶಿಕುಮಾರ್ ಏನಂತಾರೆ?

  ಎಸ್.ಪಿ.ಬಿ ಬಗ್ಗೆ ಶಶಿಕುಮಾರ್ ಏನಂತಾರೆ?

  ''ಅವರ ಅಭಿನಯ ಮತ್ತು ಗಾಯನದ ಮುಂದೆ ನಾವು ಏನೇನೂ ಅಲ್ಲ'' - ಶಶಿಕುಮಾರ್

  ಒಂದೇ ರಾತ್ರಿಯಲ್ಲಿ ಶೂಟಿಂಗ್!

  ಒಂದೇ ರಾತ್ರಿಯಲ್ಲಿ ಶೂಟಿಂಗ್!

  ''ದೀಪಾವಳಿ ಹಾಡನ್ನ ಒಂದೇ ರಾತ್ರಿಯಲ್ಲಿ ಶೂಟ್ ಮಾಡಿರುವುದು'' - ಶಶಿಕುಮಾರ್.

  ದೊಡ್ಡಣ್ಣ ಏನು ಮಾಡಿದ್ರು?

  ದೊಡ್ಡಣ್ಣ ಏನು ಮಾಡಿದ್ರು?

  ''ಆ ಸಿನಿಮಾದಲ್ಲಿ ನನ್ನನ್ನ ದೊಡ್ಡಣ್ಣ ಅವರು ಒದೆಯಬೇಕು. ಅವರು ಅದನ್ನ ಮಾಡೋಕೆ ಒಪ್ಪಿಕೊಳ್ಳಲೇ ಇಲ್ಲ. ಆಮೇಲೆ ಒಂದೇ ಟೇಕ್ ನಲ್ಲಿ ಮುಗಿಸಿದರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  ಎಸ್.ಪಿ.ಬಿ ಬಗ್ಗೆ ಸಾಯಿ ಪ್ರಕಾಶ್ ಕಾಮೆಂಟ್!

  ಎಸ್.ಪಿ.ಬಿ ಬಗ್ಗೆ ಸಾಯಿ ಪ್ರಕಾಶ್ ಕಾಮೆಂಟ್!

  ''ಕಷ್ಟದಲ್ಲಿ ಯಾರೇ ಇದ್ದರೂ, ಅವರಿಗೆ ಕೈಚಾಚುವ ಗುಣವನ್ನ ಬಾಲು ಅವರಲ್ಲಿ ನಾನು ನೋಡಿದ್ದೀನಿ. 1970 ಇಸವಿಯಿಂದ ನನಗೆ ಬಾಲು ಪರಿಚಯ'' - ಓಂ ಸಾಯಿ ಪ್ರಕಾಶ್

  ಶಶಿಕುಮಾರ್ ಗೆ ಆಕ್ಸಿಡೆಂಟ್ ಆದಾಗ?

  ಶಶಿಕುಮಾರ್ ಗೆ ಆಕ್ಸಿಡೆಂಟ್ ಆದಾಗ?

  ''ಶಶಿಕುಮಾರ್ ಗೆ ಆಕ್ಸಿಡೆಂಟ್ ಆದಾಗ ನನಗೆ ಶಾಕ್ ಆಗಿತ್ತು. ನಾನು ದೇವರಲ್ಲಿ ಬೇಡಿಕೊಂಡೆ ಅವರ ಮುಖ ಹಾಗು ಕಾಲಿಗೆ ಏನೂ ಆಗಬಾರದು ಅಂತ. ದೇವರ ದಯೆ ಏನೂ ಆಗ್ಲಿಲ್ಲ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

  English summary
  Multilingual Singer S.P.Balasubrahmanyam revelead in Zee Kannada Channel's popular show Weekend With Ramesh that Kannada Veteran Actor Dr.Rajkumar had apologized him over singing a song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X