»   » ಗಾಯಕ ರಘು ದೀಕ್ಷಿತ್ - ನಾಟ್ಯ 'ಮಯೂರಿ' ಲವ್ ಸ್ಟೋರಿ ಬಹಿರಂಗ

ಗಾಯಕ ರಘು ದೀಕ್ಷಿತ್ - ನಾಟ್ಯ 'ಮಯೂರಿ' ಲವ್ ಸ್ಟೋರಿ ಬಹಿರಂಗ

Posted By:
Subscribe to Filmibeat Kannada

ಸಂಗೀತ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಕೀರ್ತಿ ಪತಾಕೆ ಹಾರಿಸಿರುವ ಗಾಯಕ ರಘು ದೀಕ್ಷಿತ್ ರವರದ್ದು ಲವ್ ಮ್ಯಾರೇಜ್. ರೋಮ್ಯಾಂಟಿಕ್ ಗೀತೆಗಳನ್ನ ಸೊಗಸಾಗಿ ಹಾಡುವ ರಘು ದೀಕ್ಷಿತ್ ಮನ ಮಿಡಿದಿದ್ದು ಪ್ರತಿಭಾವಂತ ನೃತ್ಯ ಕಲಾವಿದೆ ಮಯೂರಿಗಾಗಿ.

ರಘು ದೀಕ್ಷಿತ್ ರನ್ನ ಮೊಟ್ಟ ಮೊದಲ ಬಾರಿಗೆ ನೋಡಿದಾಗ ಮಾತನಾಡುವುದಕ್ಕೆ ಹಿಂಜರಿಯುತ್ತಿದ್ದ ಮಯೂರಿ ನಂತರ ಮನಸೋತಿದ್ದೇ ಇಂಟ್ರೆಸ್ಟಿಂಗ್ ಕಥೆ. [ಗಿಟಾರ್ ಹಿಡಿದು ಬೆತ್ತಲಾಗಿದ್ರಾ ಗಾಯಕ ರಘು ದೀಕ್ಷಿತ್?]

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ - ಮಯೂರಿ ಲವ್ ಸ್ಟೋರಿ ಬಹಿರಂಗವಾಯ್ತು.

ಅದನ್ನ ರಘು ದೀಕ್ಷಿತ್ - ಮಯೂರಿ ಮಾತುಗಳಲ್ಲೇ ಓದಿ ಕೆಳಗಿರುವ ಸ್ಲೈಡ್ ಗಳಲ್ಲಿ....

ರಘು ದೀಕ್ಷಿತ್ - ಮಯೂರಿ ಮೊಟ್ಟ ಮೊದಲ ಭೇಟಿ

''ಒಂದು ವಿಡಿಯೋ ಕಂಪೋಸ್ ಮಾಡುವಾಗ ಸ್ಟುಡಿಯೋದಲ್ಲಿ ಮಯೂರಿ ಅಂಡ್ ಟೀಮ್ ಫೋಟೋಶೂಟ್ ಮಾಡುತ್ತಿದ್ದರು. ಎಲ್ಲೂ ತುಂಬಾ ಚೆನ್ನಾಗಿದ್ದರು. ಅವರನ್ನೆಲ್ಲಾ ನಾನು ನೋಡ್ತಾಯಿದ್ದೆ. ನಾನು ನೋಡ್ತಾಯಿದ್ದದ್ದನ್ನ ಮಯೂರಿ ನೋಡಿಬಿಟ್ಟಳು. ನನ್ನ ಇಮೇಜ್ ಅಲ್ಲಿ ಹಾಳಾಯ್ತು'' - ರಘು ದೀಕ್ಷಿತ್ [ಗಾಯಕ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ?]

ಮಯೂರಿ ಕೈಕುಲುಕಲಿಲ್ಲ!

''ಮಯೂರಿ ಅಕ್ಕ ಮಾಧುರಿ ನನಗೆ ಪರಿಚಯ. ಮಾಧುರಿ ನನ್ನ ಮಯೂರಿಗೆ ಇಂಟ್ರೊಡ್ಯೂಸ್ ಮಾಡಿ ಕೊಟ್ಟಳು. ಮಯೂರಿ ಶೇಕ್ ಹ್ಯಾಂಡ್ ಮಾಡಲಿಲ್ಲ'' - ರಘು ದೀಕ್ಷಿತ್ ['ಗಂಡಸ್ತನ ಇದ್ರೆ ಗಿಟಾರ್ ನುಡಿಸು' - ರಘು ದೀಕ್ಷಿತ್ ಬದುಕು ಬದಲಿಸಿದ ಚಾಲೆಂಜ್]

ಮಯೂರಿ ಮಾತನಾಡಿದ್ದು....

''ಒಂದು ವಾರ ಆದ್ಮೇಲೆ ಆಫೀಸ್ ಗೆ ಮಯೂರಿ ಫೋನ್ ಮಾಡಿದ್ಲು. ಪರ್ಫಾಮೆನ್ಸ್ ಗಾಗಿ ಯಾವುದಾದರೂ ಈವೆಂಟ್ ಕಂಪನಿ ಪರಿಚಯ ಮಾಡಿಕೊಡಿ ಅಂತ ಕೇಳಿದರು. ನಾನು ಕೆಲವೊಂದನ್ನ ಪರಿಚಯ ಮಾಡಿಕೊಟ್ಟೆ'' - ರಘು ದೀಕ್ಷಿತ್ [ರಘು ದೀಕ್ಷಿತ್ ವೃತ್ತಿ ಬದುಕಿನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳು!]

ಅಪ್ಪ-ಅಮ್ಮ ಕ್ಲೋಸ್ ಆದರು

''ಒಂದು ಕಲ್ಚರಲ್ ಈವೆಂಟ್ ನಲ್ಲಿ ಮಯೂರಿ ತಂದೆ-ತಾಯಿ ಭೇಟಿ ಮಾಡಿದೆ. ನನಗೆ ಬಹಳ ಬೇಗ ಅವರು ಕ್ಲೋಸ್ ಆಗಿಬಿಟ್ಟರು. ಆದ್ರೆ ಮಯೂರಿ ಮಾತ್ರ ನನ್ನ ಜೊತೆ ಮಾತನಾಡುತ್ತಲೇ ಇರಲಿಲ್ಲ'' - ಮಯೂರಿ

ಪ್ರತಿದಿನ ಫೋನ್ ಶುರುವಾಗಿದ್ದು...

''ಅವರ ಮನೆಯಲ್ಲಿ ನನ್ನ ಹೊಗಳುವುದನ್ನ ನೋಡಿ ನನ್ನ ಜೊತೆ ಮಾತನಾಡಲು ಶುರುಮಾಡಿದಳು. ಅಲ್ಲಿಂದ ಇಬ್ಬರೂ ದಿನಾ ಮಾತನಾಡೋಕೆ ಶುರು ಮಾಡಿದ್ವಿ'' - ಮಯೂರಿ

ಸಕ್ಸಸ್ ಗೆ ರಘು ಕಾರಣ

''ನನ್ನ ಕೆರಿಯರ್ ನಲ್ಲಿ ಸಕ್ಸಸ್ ಕಾರಣ ರಘು ಮತ್ತೆ ನನ್ನ ಅಪ್ಪ-ಅಮ್ಮ'' - ಮಯೂರಿ

ಮಯೂರಿಗೆ ಇರುವ ಒಂದೇ ಕೊರಗು

''ಇದುವರೆಗೂ ಒಂದು ಸೀರೆ ಕೊಡಿಸು, ಚೇನ್ ಕೊಡಿಸು ಅಂತ ಕೇಳೇ ಇಲ್ಲ. ನನ್ನ ಜೊತೆ ಸ್ವಲ್ಪ ಟೈಮ್ ಸ್ಪೆಂಡ್ ಮಾಡು ಅನ್ನೋದು ಒಂದೇ ಅವಳು ಕೊರಗು'' - ಮಯೂರಿ

ಪತ್ನಿಗಾಗಿ ರಘು ದೀಕ್ಷಿತ್ ಹಾಡು

''ನನಗೆ ನಿದ್ದೆ ಬರಸೋಕೆ ಅಂತ ಒಂದು ಲಲಬಿ ಕಂಪೋಸ್ ಮಾಡಿದ್ದಾರೆ'' - ಮಯೂರಿ

English summary
Bharatanatyam Dancer turned Music Director, Singer Raghu Dixit's love story was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada