»   » ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಕೈ ಕೊಟ್ಟ ಹುಡುಗಿ ಯಾರು?

ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಕೈ ಕೊಟ್ಟ ಹುಡುಗಿ ಯಾರು?

Posted By:
Subscribe to Filmibeat Kannada

ಬರೋಬ್ಬರಿ 50 ವರ್ಷಗಳ ವೃತ್ತಿ ಜೀವನದಲ್ಲಿ ಸಾವಿರಾರು ಯುಗಳ ಗೀತೆಗಳನ್ನ ಹಾಡಿರುವ ಖ್ಯಾತಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂರದ್ದು.

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಅಂತಹ ಸುಮಧುರ ಗೀತೆಗಳನ್ನ ಹಾಡಿ ಅದೆಷ್ಟೋ ಹುಡುಗರು ತಮ್ಮ ಮನದಾಳದಲ್ಲಿರುವ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾರೆ. ಆದ್ರೆ, ಪಾಪ...ಖುದ್ದು ಎಸ್.ಪಿ.ಬಿ ಅವರಿಗೆ ಆ ಅದೃಷ್ಟ ಖುಲಾಯಿಸಲಿಲ್ಲ. [ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಡಾ.ರಾಜ್ ಕ್ಷಮೆ ಕೇಳಿದ ಗುಟ್ಟು ರಟ್ಟಾಯ್ತು!]

ಕಾಲೇಜು ದಿನಗಳಲ್ಲಿ ತಮ್ಮ ಲವ್ ಫೇಲ್ಯೂರ್ ಆದ ಬಗ್ಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದರು. ಮುಂದೆ ಓದಿ.....

ಸ್ಕೂಲ್ ನಲ್ಲಿ 'ಅಕ್ಕ' ಅಂತ ಕರೆಯಬೇಕಿತ್ತು!

''ನಾನು ಕಾಳಹಸ್ತಿಗೆ ಹೋಗಿದ್ದಾಗ ಅಲ್ಲಿ ಕೋ-ಎಡ್ಜುಕೇಷನ್ ಇತ್ತು. ಇಡೀ ಸ್ಕೂಲ್ ನಲ್ಲಿ ನಾನೇ ಚಿಕ್ಕವನು. ಹಾಗೇ ನಾನೇ ಕುಳ್ಳ. ಎಲ್ಲರನ್ನ ನಾನು ಅಕ್ಕ-ಅಕ್ಕ ಅಂತಲೇ ಕರೀಬೇಕಾಗಿತ್ತು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ [ಭಾರತದ ಹೆಮ್ಮೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಆಗಿತ್ತು ಮಹಾ ಮೋಸ!]

ಪಿಯುಸಿನಲ್ಲಿ....

''ಪಿಯುಸಿ ಮಾಡುವಾಗ ಅಲ್ಲಿ ಕೋ-ಎಡ್ಜುಕೇಷನ್ ಇರ್ಲಿಲ್ಲ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಒಬ್ಬಳೇ ಹುಡುಗಿ!

''ಎಂಜಿನಿಯರ್ ಫಸ್ಟ್ ಇಯರ್ ಓದುವಾಗ ಒಬ್ಬಳೇ ಹುಡುಗಿ ಇದ್ದಳು. I was in love with her but unfortunately she was in love with someone else. Wat can i do?'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ದೇವಾನಂದ್ ಸ್ಟೈಲ್

''ಸಿನಿಮಾ ಹಾಲ್ ಗೆ ಹೋದರೆ, ದೇವಾನಂದ್ ಸ್ಟೈಲ್ ನಲ್ಲಿ ಹೇರ್ ಸ್ಟೈಲ್ ಮಾಡಿಕೊಂಡು ಹೋಗ್ತಿದ್ದೆ. ಆದರೂ ಒಬ್ಬರೂ ನನ್ನನ್ನ ನೋಡ್ತಿರ್ಲಿಲ್ಲ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಲವ್ ಫೇಲ್ಯೂರ್!

''ಏನು ಮಾಡೋದು..?! ಆ ಕಾಲದಲ್ಲಿ ಲವ್ ಸಕ್ಸಸ್ ಆಗ್ಲಿಲ್ಲ. Even now i get love letters. What shall i do? ಕಲ್ಲಿದ್ದರೆ ನಾಯಿ ಇರೋದಿಲ್ಲ. ನಾಯಿ ಕಂಡರೆ ಕಲ್ಲು ಕೈಯಲ್ಲಿ ಇರೋದಿಲ್ಲ. ಆ ದಿನಗಳಲ್ಲಿ ನಾಯಿ ಇತ್ತು ಕಲ್ಲು ಇರ್ಲಿಲ್ಲ. ಈ ದಿನಗಳಲ್ಲಿ ಕಲ್ಲು ಇದೆ ನಾಯಿಲ್ಲ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಪ್ರೀತಿಸಿ ಮದುವೆ ಆದ ಎಸ್.ಪಿ.ಬಿ

''ನನ್ನದು ಲವ್ ಮ್ಯಾರೇಜ್. ನಾನು ಅವರ ಮನೆಯಲ್ಲಿ ರೂಮ್ ತೆಗೆದುಕೊಂಡು ಬಾಡಿಗೆ ಇದ್ದೆ, ಮದ್ರಾಸ್ ನಲ್ಲಿ. ಮನೆಯಲ್ಲಿ ಹೇಳಿದಾಗ ಗೋತ್ರ ಹೊಂದಾಣಿಕೆ ಆಗಲ್ಲ ಅಂತ ಹೇಳಿದ್ರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಮದುವೆ ಆಗಲು ದುಡ್ಡು ಇಲ್ಲ!

''ನಂತರ ನಾವೇ ಮದುವೆ ಆಗಲು ನಿರ್ಧರಿಸಿದ್ವಿ. ಆ ಸಮಯದಲ್ಲಿ ನನ್ನ ಹತ್ತಿರ ಬರೀ 15 ರೂಪಾಯಿ ಇತ್ತು. ನನ್ನ ಸ್ನೇಹಿತರೆಲ್ಲರ ನನಗೆ ಸಹಾಯ ಮಾಡಿದ್ರು. ಸಿಂಹಾಚಲಂನಲ್ಲಿ ಮದುವೆ ಆಯ್ತು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಎರಡು ವರ್ಷ ಕಷ್ಟ!

''ಮೊದಲ ಎರಡು ವರ್ಷ ತುಂಬಾ ಕಷ್ಟ ಆಯ್ತು. ಯಾರೂ ನಮಗೆ ಸಹಾಯ ಮಾಡ್ಲಿಲ್ಲ. ಮೊದಲ ಮಗು ಆದ್ಮೇಲೆ ಫ್ಯಾಮಿಲಿಯಲ್ಲಿ ಎಲ್ಲರೂ ಒಪ್ಪಿಕೊಳ್ಳುವುದಕ್ಕೆ ಶುರುಮಾಡಿದರು. ನಂತರ ಎಲ್ಲವೂ ಸರಿ ಹೋಯ್ತು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹೆಂಡತಿ ಸಪೋರ್ಟ್...

''ನನ್ನ ಹೆಂಡತಿಗೆ ತುಂಬಾ ಚಿಕ್ಕವಯಸ್ಸು ಮದುವೆ ಆದಾಗ. ನನಗೆ ತುಂಬಾ ಸಪೋರ್ಟ್ ಮಾಡಿದಳು. ಇಡೀ ಕುಟುಂಬವನ್ನ ಮ್ಯಾನೇಜ್ ಮಾಡಿದಳು. ಅವಳು ತುಂಬಾ ಕಷ್ಟ ಪಟ್ಟಿದ್ದಾರೆ. ನಮ್ಮ ನಡುವೆ ಕೂಡ ತುಂಬಾ ಜಗಳ ಆಗಿತ್ತು. ಎಲ್ಲವನ್ನೂ ಮೀರಿ ನಾನು ಇಷ್ಟು ಸಾಧಿಸುವುದಕ್ಕೆ ಕಾರಣ ನನ್ನ ಫ್ಯಾಮಿಲಿ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಪತ್ನಿಗೆ ಸಂಕೋಚ

''ಪತ್ನಿ ಸಾವಿತ್ರಿಗೆ ತುಂಬಾ ಸಂಕೋಚ. ಕ್ಯಾಮರಾ ಮುಂದೆ ಬರುವುದಿಲ್ಲ. ಹೀಗಾಗಿ ಮಾತನಾಡಿಲ್ಲ. ಇಲ್ಲಾಂದ್ರೆ, ಖಂಡಿತ ಕಾರ್ಯಕ್ರಮಕ್ಕೆ ಬರುತ್ತಿದ್ದಳು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

English summary
Multilingual Singer S.P.Balasubrahmanyam's love story was revealed in Zee Kannada Channel's popular show Weekend With Ramesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada