»   » ಸುಧಾರಾಣಿ ವೈಯುಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಕಠೋರ ಸತ್ಯ!

ಸುಧಾರಾಣಿ ವೈಯುಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಕಠೋರ ಸತ್ಯ!

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಕನ್ನಡ ಚಿತ್ರರಂಗದ Non-Controversial ನಟಿ' ಅಂತಲೇ ಖ್ಯಾತಿ ಪಡೆದಿರುವ ನಟಿ ಸುಧಾರಾಣಿ ಅಭಿನಯಿಸಿರುವ ಚಿತ್ರಗಳನ್ನ ನೀವೆಲ್ಲಾ ನೋಡಿದ್ದೀರಾ. ಆದ್ರೆ, ವೈಯುಕ್ತಿಕ ಜೀವನದಲ್ಲಿ ಆಕೆ ಅನುಭವಿಸಿರುವ ಯಾತನೆ ಮಾತ್ರ ಯಾರಿಗೂ ಗೊತ್ತಿಲ್ಲ!

  ಬಣ್ಣದ ಬದುಕಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ Anesthesia Specialist ಡಾ.ಸಂಜಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟಿ ಸುಧಾರಾಣಿ, ಬೆಟ್ಟದಷ್ಟು ಕನಸು ಹೊತ್ತು ಸೀದಾ ಅಮೇರಿಕಾಗೆ ಫ್ಲೈಟ್ ಹತ್ತಿದ್ರು. ಆದ್ರೆ, ಆ ಕನಸ್ಸೆಲ್ಲಾ ನುಚ್ಚು ನೂರಾಗಲು ತುಂಬಾ ಸಮಯ ಹಿಡಿಯಲಿಲ್ಲ.

  ನಟಿ ಸುಧಾರಾಣಿಗೆ ಪತಿ ಡಾ.ಸಂಜಯ್ ರಿಂದಲೇ ಜೀವ ಬೆದರಿಕೆ ಇತ್ತು ಅಂದ್ರೆ ನೀವು ನಂಬಲೇಬೇಕು. ಕೈಯಲ್ಲಿ ದುಡ್ಡು ಇಲ್ಲದೆ, ತಿನ್ನಲು ಏನೂ ಇಲ್ಲದೆ, ಬೇರೆಯವರ ಮನೆಯಲ್ಲಿ ಉಳಿದುಕೊಂಡಿದ್ದ ನಟಿ ಸುಧಾರಾಣಿ, ಅಮೇರಿಕಾದಿಂದ ಜೀವಂತವಾಗಿ ಭಾರತಕ್ಕೆ ವಾಪಸ್ ಆಗಿದ್ದೇ ಒಂದು ಕಠೋರ ಅಧ್ಯಾಯ.

  ಆರು ವರ್ಷ ಅಮೇರಿಕಾದಲ್ಲಿ ಸಂಕಷ್ಟ ಅನುಭವಿಸಿದ ನಟಿ ಸುಧಾರಾಣಿ, ಪತಿ ಡಾ.ಸಂಜಯ್ ಗೆ ವಿಚ್ಛೇದನ ನೀಡಿ ಭಾರತಕ್ಕೆ ಮರಳಿದರು. [ಕನ್ನಡ ನಟಿ ಸುಧಾರಾಣಿ ಪತಿ ಬೇರಾರೂ ಅಲ್ಲ, 'ಇವರೇ'.!]

  ಆ ಕಠೋರ ಅಧ್ಯಾಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗವಾಯ್ತು. ನಟಿ ಸುಧಾರಾಣಿ ವೈಯುಕ್ತಿಕ ಬದುಕಿನ ಬಗ್ಗೆ, ಅವರ ಅಮೇರಿಕಾದ ಗೆಳತಿ ಆಲ್ಬೇರ್ಟಾ, ಸಹೋದರ ಅರುಣ್ ಬಿಚ್ಚಿಟ್ಟ ಸತ್ಯ ಇಲ್ಲಿದೆ. ಮುಂದೆ ಓದಿ.....

  ಜೀವನದ ಪಾಠ ಕಲಿತದ್ದು ಅಮೇರಿಕಾದಲ್ಲಿ!

  ''ಅಮೇರಿಕಾದಲ್ಲಿ ನಾನು ಆರು ವರ್ಷ ಇದ್ದೆ. ಅಲ್ಲಿಗೆ ಹೋದ ಮೇಲೇನೇ ನಾನು ಜೀವನದ ನಿಜವಾದ ಪಾಠ ಕಲಿತದ್ದು'' - ಸುಧಾರಾಣಿ

  ಜೀವಂತವಾಗಿ ವಾಪಸ್ ನೋಡುವ ನಂಬಿಕೆ ಇರಲಿಲ್ಲ!

  ''ನಿಜ ಹೇಳ್ಬೇಕಂದ್ರೆ, ಇವಳನ್ನ ನಾನು ಮತ್ತೆ ಇಲ್ಲಿ ಜೀವಂತವಾಗಿ ವಾಪಸ್ ನೋಡ್ತೀವಿ ಅನ್ನೋ ನಂಬಿಕೆ ನಮಗೆ ಇರಲಿಲ್ಲ'' - ಅರುಣ್, ಸುಧಾರಾಣಿ ಸಹೋದರ

  ಅವಿದ್ಯಾವಂತರು ಅಲ್ಲ!

  ''ನಮಗೆ ಬಹಳ ಹತ್ತಿರವಾಗಿದ್ದವರ ಕಡೆಯಿಂದಲೇ ಈ ಸಂಬಂಧ ಬಂದಿದ್ದು. ಕೂಲಂಕುಶವಾಗಿ ಎಲ್ಲವನ್ನೂ ವಿಚಾರಿಸಿದ್ವಿ. ಅವರು ಅವಿದ್ಯಾವಂತರೂ ಅಲ್ಲ'' - ಅರುಣ್, ಸುಧಾರಾಣಿ ಸಹೋದರ

  ಸುಧಾರಾಣಿಗೆ ಇತ್ತು ಬೆದರಿಕೆ!

  ''ಕೆಮಿಕಲ್ ನ ಇಂಜೆಕ್ಟ್ ಮಾಡ್ತೀನಿ ಅಂತ ಅವರು ಬೆದರಿಕೆ ಹಾಕಿದ್ದರು ಸುಧಾಗೆ. ಆ ಕೆಮಿಕಲ್ ಹೇಗೆ ಅಂದ್ರೆ, ಸತ್ತ ನಂತರ ಬಾಡಿಯಲ್ಲಿ ಅದು ಇರುವುದು ಗೊತ್ತೇ ಆಗಲ್ಲ. ಏನೇ ತನಿಖೆ ಮಾಡಿದ್ರೂ ಗೊತ್ತಾಗಲ್ಲ. He was very brilliant but all for wrong reasons'' - ಅರುಣ್, ಸುಧಾರಾಣಿ ಸಹೋದರ

  ಪಾಸ್ ಪೋರ್ಟ್ ಕಿತ್ತುಕೊಂಡಿದ್ದರು!

  ''ಅವಳ ಪಾಸ್ ಪೋರ್ಟ್ ಕಿತ್ಕೊಂಡು ಬಿಟ್ಟಿದ್ದರು. ಆ ಪಾಸ್ ಪೋರ್ಟ್ ಗೋಸ್ಕರ ಇಲ್ಲಿಂದ ಹರಸಾಹಸ ಮಾಡಿ, ಪೋಲೀಸರನ್ನ ಕರ್ಕೊಂಡು, ಅವರ ಮೂಲಕ ಮನೆಗೆ ಹೋಗಿ ಅವಳ ಪಾರ್ಸ್ ಪೋರ್ಟ್ ಕೊಡಿಸುವಂತಹ ಸಾಹಸ ಮಾಡಬೇಕಾಯ್ತು'' - ಅರುಣ್, ಸುಧಾರಾಣಿ ಸಹೋದರ

  ಅಪ್ಪಾಜಿ-ಅಂಬರೀಶ್ ಗೆ ಥ್ಯಾಂಕ್ಸ್!

  ''ಆ ಒಂದು ಟೈಮ್ ನಲ್ಲಿ ಅಪ್ಪಾಜಿ, ಪಾರ್ವತಮ್ಮ, ಅಂಬರೀಶ್ ರವರನ್ನ ಜ್ಞಾಪಿಸಿಕೊಳ್ಳಬೇಕು. ಯಾಕಂದ್ರೆ, ಇಲ್ಲಿಂದ ಅಲ್ಲಿಗೆ ಸುಮಾರು ಕಾಂಟ್ಯಾಕ್ಟ್ ಗಳನ್ನ establish ಮಾಡಿ ಅವರ ಮೂಲಕ ಇವಳಿಗೆ ಅಲ್ಲಿ ಒಂದು ನೆಲ ಸಿಕ್ತು'' - ಅರುಣ್, ಸುಧಾರಾಣಿ ಸಹೋದರ

  ಅರಗಿಣಿಯನ್ನ ಹದ್ದು ಕುಕ್ಕಿದ ಹಾಗೆ!

  ''ಇಲ್ಲಿಂದ ಹೋದ ಹುಡುಗಿ ಅಲ್ಲಿ, ಅಷ್ಟು ಪ್ರೊಟೆಕ್ಷನ್ ನಲ್ಲಿ ಇರುವ ಹಾಗಾಯ್ತು. ಅರಗಿಣಿಯಾಗಿ ಸಾಕಿದ್ವಿ ಅವಳನ್ನ. ಅಂಥದ್ರಲ್ಲಿ ಒಂದು ಹದ್ದು ಬಂದು ಕುಕ್ಕಿ ಸಾಯಿಸೋಕೆ ನೋಡಿದಾಗ ಊಹಿಸಿಕೊಳ್ಳಿ ಹೇಗಿರುತ್ತೆ ನಮ್ಮ ಪರಿಸ್ಥಿತಿ'' - ಅರುಣ್, ಸುಧಾರಾಣಿ ಸಹೋದರ

  ಹತ್ತು ಜನ್ಮಕ್ಕೆ ಆಗುವಷ್ಟು ಕಷ್ಟ!

  ''ನನಗೆ ಅಲ್ಲಿಯವರೆಗೂ ಕಷ್ಟ ಅಂದ್ರೇನು ಅನ್ನೋದು ಗೊತ್ತಿರ್ಲಿಲ್ಲ. ದೇವರು ನನಗೆ ಅದನ್ನ ಕಲಿಸಿದ. ಬೇಕಾದಷ್ಟು Struggle ಮಾಡಿದ್ದೀನಿ ಅಲ್ಲಿ. ಹತ್ತು ಜನ್ಮಕ್ಕೆ ಆಗೋವಷ್ಟು ಕಷ್ಟ ಅನುಭವಿಸಿದ್ದೀನಿ ಅಲ್ಲಿ. ತುಂಬಾ ಪಾಠ ಕಲಿತಿದ್ದೇನೆ'' - ಸುಧಾರಾಣಿ

  ಬೇರೆಯವರ ಮನೆಯಲ್ಲಿ ಇದ್ದೆ!

  ''ದುಡ್ಡು ಇರ್ಲಿಲ್ಲ, ತಿನ್ನೋಕೆ ಏನೂ ಇರ್ಲಿಲ್ಲ. ಎಷ್ಟೋ ಬಾರಿ ತಿನ್ನೋಕೆ ಏನೂ ಇಲ್ಲದೆ ಹಾಗೇ ಇರ್ತಿದ್ದೆ. I have stayed in other people's house. ತುಂಬಾ ಕಷ್ಟ ಆಗಿದೆ. ಯು.ಎಸ್ ಅಂದ್ರೆ ತುಂಬಾ ಹೇಟ್ ಮಾಡ್ತಿದ್ದೆ. But it made me a better person'' - ಸುಧಾರಾಣಿ

  ಮೊದಲ ಬಾರಿ ಏಕಾಂಗಿ

  ''ಅಮೇರಿಕಾದಲ್ಲಿ ನನಗೆ ಒಳ್ಳೆ ಗೆಳತಿ ಆಗಿದ್ದವರು ಆಲ್ಬೇರ್ಟಾ. ಅಮೇರಿಕಾದಲ್ಲಿ ನನ್ನ ತಾಯಿ ತರಹ ನೋಡಿಕೊಂಡವರು ಅವರೇ. ಯಾಕಂದ್ರೆ, ನಾನು ಅಮೇರಿಕಾ ಫ್ಲೈಟ್ ಹತ್ತಿದಾಗ್ಲಿಂದಲೇ, for the first time in my life, I was Alone'' - ಸುಧಾರಾಣಿ

  ಸುಧಾರಾಣಿ ಬಗ್ಗೆ ಆಲ್ಬೇರ್ಟಾ ಮಾತು

  ''ಹಾಯ್, ಜಯಶ್ರೀ ನಾನು ಆಲ್ಬೇರ್ಟಾ, ಮೊದಲಿಗೆ ಶುಭಾಶಯಗಳು ನೀನು ಸಿನಿಮಾ ರಂಗದಲ್ಲಿ 30 ವರ್ಷ ಪೂರೈಸಿದ್ದೀಯಾ. ಅದೊಂದು ದೊಡ್ಡ ಸಾಧನೆಯೇ ಸರಿ'' - ಆಲ್ಬೇರ್ಟಾ, ಸುಧಾರಾಣಿ ಅಮೇರಿಕಾ ಗೆಳತಿ

  ನಟಿ ಅನ್ನೋದು ಗೊತ್ತಿರ್ಲಿಲ್ಲ!

  ''20 ವರ್ಷಗಳ ಹಿಂದೆ ನಾನು ಜಯಶ್ರೀಯನ್ನ ಭೇಟಿ ಆಗಿದ್ದು. ಆಗ ಅವಳು ನಟಿ ಅನ್ನೋದು ನನಗೆ ಗೊತ್ತಿರಲಿಲ್ಲ. ತುಂಬಾ ಮೃದು ಸ್ವಭಾವ ಅವರದ್ದು'' - ಆಲ್ಬೇರ್ಟಾ, ಸುಧಾರಾಣಿ ಅಮೇರಿಕಾ ಗೆಳತಿ

  ಚೆನ್ನಾಗಿ ಅಡುಗೆ ಮಾಡ್ತಿದ್ರು!

  ''ಅವಳು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಅಡುಗೆ ಮಾಡುವುದನ್ನ ನನಗೂ ಹೇಳಿಕೊಟ್ಟಿದ್ದಳು'' - ಆಲ್ಬೇರ್ಟಾ, ಸುಧಾರಾಣಿ ಅಮೇರಿಕಾ ಗೆಳತಿ

  ಕೇವಲ ನಟಿ ಅಲ್ಲ!

  ''ನಾನು ಕೇವಲ ನಟಿ ಅಲ್ಲ. ಏನೇ ಕಷ್ಟ ಬಂದರೂ, ಅದನ್ನ ಫೇಸ್ ಮಾಡಬೇಕು ಎಂಬ ಛಲ ಬಂತು ನನಗೆ. I became very independent. ಅದಕ್ಕೆ ನಾನು ನನ್ನ ಮಗಳಿಗೂ ಅಷ್ಟೆ independent ಆಗಿರುವುದಕ್ಕೆ ಕಲಿಸಿದ್ದೇನೆ'' - ಸುಧಾರಾಣಿ

  ಕೆಲವೊಂದನ್ನ ಹೇಳಿಕೊಳ್ಳಲು ಇಷ್ಟ ಇಲ್ಲ!

  ''ಕೆಲವೊಂದೆಲ್ಲಾ ಹೇಳಿಕೊಳ್ಳುವುದಕ್ಕೆ ಇಷ್ಟ ಇಲ್ಲ. ಯಾಕಂದ್ರೆ, ಅದು Past. I want to keep it bury'' - ಸುಧಾರಾಣಿ

  ಸಂಬಂಧ ಸರಿ ಹೋಗುತ್ತಿಲ್ಲ ಅಂದ್ರೆ....

  ''ಯಾವುದೇ ಸಂಬಂಧ ಆಗಲಿ, ಅದು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ ಅಂತಾದ್ರೆ, ಅದರಿಂದ ತೊಂದರೆಯಾಗುತ್ತಿದೆ ಅಂತಾದ್ರೆ, ಅದನ್ನ ಅಲ್ಲಿಗೆ ನಿಲ್ಲಿಸುವುದು ಬೆಟರ್'' - ಸುಧಾರಾಣಿ

  ಮಗಳನ್ನ ಬಾವಿಗೆ ತಳ್ಳಿಬಿಡ್ತೀವಿ....!

  ''ನಮ್ಮ ಅಳಿಯ ಫಾರಿನ್ ನಲ್ಲಿ ಇದ್ದು ಬಿಟ್ಟರೆ, ಅಲ್ಲಿಗೆ ಮಗಳನ್ನ ಕಳುಹಿಸಿಬಿಡೋಣ ಅಂತ ಎಲ್ಲರೂ ಆಸೆ ಪಡ್ತಾರೆ. ಆದ್ರೆ, ಆ ಹುಡುಗ ಯಾರು-ಏನು ಅಂತ ಫಿಲ್ಟರ್ ಮಾಡದೆ ಇದ್ದರೆ, ಮಗಳನ್ನ ಬಾವಿಗೆ ತಳ್ಳಿಬಿಡ್ತೀವಿ. ಆಮೇಲೆ ಅಲ್ಲಿಂದ ಹಗ್ಗ ಹಾಕಿ ಎತ್ತೋಕೆ ಕಷ್ಟ ಪಡುತ್ತೇವೆ. ಹಾಗೆ, ಅರುಣ್ ತುಂಬಾ ಕಷ್ಟ ಪಟ್ಟಿದ್ದ'' - ಭಾರ್ಗವ, ನಿರ್ದೇಶಕ

  ಸುಧಾರಾಣಿಯನ್ನ ಅಪ್ರೀಶಿಯೇಟ್ ಮಾಡ್ಬೇಕು!

  ''ಎಲ್ಲದಕ್ಕೂ ಸುಧಾರಾಣಿಯನ್ನ ಅಪ್ರೀಶಿಯೇಟ್ ಮಾಡಬೇಕು. She was brave enough. ಪತಿವ್ರತೆ, ಸಾಧು ಪಾತ್ರಗಳನ್ನ ಮಾಡುತ್ತಿದ್ದ ಸುಧಾರಾಣಿಗೆ ಆ Extra ordinary mental courage ಹೇಗೆ ಬಂತೋ, ಅದಕ್ಕೆ ಅಪ್ರೀಶಿಯೇಟ್ ಮಾಡಬೇಕು. ಅದಕ್ಕೆ ಎಲ್ಲರೂ ಚಪ್ಪಾಳೆ ಕೊಡಬೇಕು ಒಂದು ಬಾರಿ'' - ಭಾರ್ಗವ, ನಿರ್ದೇಶಕ

  English summary
  Kannada Actress Sudha Rani's struggling life in USA was revealed in Zee Kannada Channel's popular show Weekend With Ramesh season 2.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more