»   » ಭಾರತದ ಹೆಮ್ಮೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಆಗಿತ್ತು ಮಹಾ ಮೋಸ!

ಭಾರತದ ಹೆಮ್ಮೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಆಗಿತ್ತು ಮಹಾ ಮೋಸ!

Posted By:
Subscribe to Filmibeat Kannada

ಪ್ರತಿಭೆ ಹಾಗು ಶ್ರಮಕ್ಕೆ ತಕ್ಕ ಹಾಗೆ ಪುರಸ್ಕಾರ ಲಭಿಸಿದರೆ ಮಾತ್ರ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿದಂತೆ! ಈ ಮಾತನ್ನ ನೀವು ಒಪ್ತೀರಾ?

ಇಷ್ಟ ಪಟ್ಟು, ಕಷ್ಟ ಪಟ್ಟು ಒಂದು ಅತ್ತ್ಯುತ್ತಮ ಉತ್ಪನ್ನ ತಯಾರಿಸಿದ ಮೇಲೆ ಅದಕ್ಕೆ ಸಂಬಂಧವೇ ಇಲ್ಲದ ಬೇರೊಬ್ಬರು ಬಂದು ಪ್ರಶಸ್ತಿ ಸ್ವೀಕರಿಸುವುದು ಮೋಸ ಅಲ್ಲವೇ?

ಭಾರತದ ಹೆಮ್ಮೆಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರಿಗೆ ಆಗಿದ್ದು ಇದೇ. ತಾವು ಸಂಗೀತ ಸಂಯೋಜಿಸಿದ ಹಾಡಿಗೆ ಎರಡು ಪ್ರಶಸ್ತಿಗಳು ಲಭಿಸಿದರೂ, ಅವಾರ್ಡ್ ಗಳನ್ನ ಸ್ವೀಕರಿಸಿದ್ದು ಮಾತ್ರ ಬಾಲಿವುಡ್ ಮ್ಯೂಸಿಕ್ ಡೈರೆಕ್ಟರ್ಸ್.! [ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಡಾ.ರಾಜ್ ಕ್ಷಮೆ ಕೇಳಿದ ಗುಟ್ಟು ರಟ್ಟಾಯ್ತು!]

ತಮ್ಮ ವೃತ್ತಿ ಬದುಕಿನಲ್ಲಾದ ಈ ಘಟನೆಯನ್ನ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಮುಂದೆ ಓದಿ.....

ಮೊದಲು ಸಂಗೀತ ನಿರ್ದೇಶನ ಮಾಡಿದ ಚಿತ್ರ

''1975 ನಲ್ಲಿ ತೆಲುಗಿನಲ್ಲಿ 'ಕನ್ಯಾ ಕುಮಾರಿ' ಚಿತ್ರಕ್ಕೆ ಮೊದಲು ಸಂಗೀತ ನಿರ್ದೇಶನ ಮಾಡಿದ್ದು, ದಾಸರಿ ನಾರಾಯಣ ರಾವ್ ಅವರು ನನಗೆ ಮೊದಲು ಸಂಗೀತ ನಿರ್ದೇಶಕನಾಗಿ ಬ್ರೇಕ್ ನೀಡಿದ್ದು. ನಂತರ ಕನ್ನಡ, ತಮಿಳು, ಹಿಂದಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೀನಿ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹಿಂದಿಯಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?

''ಯು.ಎಸ್.ಎ. ನಲ್ಲಿ ಕಾನ್ಸರ್ಟ್ ಮಾಡಿ ವಾಪಸ್ ಬರುವಾಗ ನನಗೆ ಫೋನ್ ಬಂತು. 'ಮರೋ ಚರಿತ್ರ' ಹಿಂದಿಯಲ್ಲಿ ರೀಮೇಕ್ ಆಗ್ತಿದೆ. 'ಏಕ್ ದುಜೆ ಕೇ ಲಿಯೇ' ಅಂತ. ಕಮಲ್ ಹಾಸನ್ ಆಕ್ಟ್ ಮಾಡ್ತಿದ್ದಾರೆ. ಕೆ.ಬಾಲಚಂದರ್ ನಿರ್ದೇಶನ ಮಾಡುತ್ತಿದ್ದಾರೆ ಅಂತ ಹೇಳಿದ್ರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಬಾಲು ಬೇಡ!

''ಸಂಗೀತ ನಿರ್ದೇಶಕರಾದ ಲಕ್ಷ್ಮೀಕಾಂತ್ ಪ್ಯಾರೇಲಾಲ್, ನನ್ನ ಹಾಕಿಕೊಳ್ಳುವುದಕ್ಕೆ ಹಿಂದು-ಮುಂದು ನೋಡ್ತಿದ್ರು. 'ಏಕ್ ದುಜೆ ಕೇ ಲಿಯೇ' ಖಂಡಿತ ಒಳ್ಳೆ ಸಿನಿಮಾ ಆಗುತ್ತೆ. ಹೀಗಾಗಿ ಬಾಂಬೆ ಗಾಯಕರನ್ನೇ ಉಪಯೋಗಿಸಿಕೊಳ್ಳೋಣ ಅನ್ನೋದು ಅವರ ಬಯಕೆ ಆಗಿತ್ತು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಬಾಲು ಇಲ್ಲ ಅಂದ್ರೆ ನಿರ್ದೇಶನ ಮಾಡಲ್ಲ!

''ಕೆ.ಬಾಲಚಂದರ್ ಅವರು ಹೇಳಿದ್ರಂತೆ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಲ್ಲ ಅಂದ್ರೆ ನಾನು ಈ ಚಿತ್ರವನ್ನ ನಿರ್ದೇಶನ ಮಾಡಲ್ಲ ಅಂತ. ಲಕ್ಷ್ಮೀಕಾಂತ್ ಪ್ಯಾರೇಲಾಲ್ ಜೊತೆ ತುಂಬಾ ವಾದ ಮಾಡಿ ಬಾಲುನೇ ಹಾಡಬೇಕು ಅಂತ ಪಟ್ಟು ಹಿಡಿದಿದ್ದರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಬಾಲುನೇ ಯಾಕೆ?

''ಸಿನಿಮಾದಲ್ಲಿ ಹೀರೋ ಕ್ಯಾರೆಕ್ಟರ್ ದಕ್ಷಿಣ ಭಾರತದ ಹುಡುಗ. ಹಿಂದಿ ಸರಿಯಾಗಿ ಬರಲ್ಲ. ಅದಕ್ಕೆ ಬಾಲುನೇ ಹಾಡಬೇಕು ಅಂತ ಕೆ.ಬಾಲಚಂದರ್ ಹೇಳಿದ್ದರು. ನಂತರ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಒಪ್ಪಿಕೊಂಡರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಫೇವರಿಟ್ ಪ್ಲೇ ಬ್ಯಾಕ್ ಸಿಂಗರ್ ಯಾರು?

''ಸಿನಿಮಾ ಮುಗಿದ ನಂತರ ಪ್ರೆಸ್ ನವರು ಲಕ್ಷ್ಮೀಕಾಂತ್ ಪ್ಯಾರೇಲಾಲ್ ಗೆ ಪ್ರಶ್ನೆ ಕೇಳಿದರು. ನಿಮ್ಮ ಫೇವರಿಟ್ ಪ್ಲೇ ಬ್ಯಾಕ್ ಸಿಂಗರ್ ಯಾರು ಅಂತ. ಅವರು ನನ್ನ ಹೆಸರು ಹೇಳಿದರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಮೋಸ ಆಗಿದ್ದು ಯಾವಾಗ?

''ನಾಚೇ ಮಯೂರಿ' ಅಂತ ಒಂದು ಹಿಂದಿ ಸಿನಿಮಾ. ಅದಕ್ಕೆ ಲಕ್ಷ್ಮಿಕಾಂತ್ ಪ್ಯಾರೇಲಾಲ್ ಸಂಗೀತ ನೀಡಿದ್ದರು. ಅದೇ ಚಿತ್ರದ ತೆಲುಗು ರೀಮೇಕ್ ಗೆ ನಾನು ಸಂಗೀತ ನೀಡಿದ್ದೆ. ಟೈಟಲ್ ಸಾಂಗ್ ಗೆ ಮಾತ್ರ ನಾನೇ ಸಂಗೀತ ಕಂಪೋಸ್ ಮಾಡಿದ್ದೆ. ಜಾನಕಿ ಅವರು ಹಾಡು ಹಾಡಿದ್ದರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಎರಡು ಪ್ರಶಸ್ತಿ ಬಂತು

''ಆ ಹಾಡಿಗೆ ಬೆಸ್ಟ್ ಕ್ಲಾಸಿಕಲ್ ಕಂಪೋಸಿಷನ್ ಅವಾರ್ಡ್ ಬಂತು. 'ಸುರ್ ಸಿಂಗಾರ್' ಹಾಗೂ 'ಮಿಯಾ ಥಾನ್ ಸೇನ್' ಕಡೆಯಿಂದ. ಇದರಲ್ಲಿ ಗಾಯಕರಿಗೆ ಹಾಗೂ ಸಂಗೀತ ನಿರ್ದೇಶಕರಿಗೆ ಅವಾರ್ಡ್ ಕೊಡುತ್ತಾರೆ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಜಾನಕಿಗೆ ಪ್ರಶಸ್ತಿ ಸಿಕ್ತು!

''ಹೀಗಾಗಿ ಜಾನಕಿ ಅವರಿಗೆ 'ಸುರ್ ಸಿಂಗಾರ್' ಮತ್ತು 'ಮಿಯಾ ಥಾನ್ ಸೇನ್' ಅವಾರ್ಡ್ ಲಭಿಸ್ತು. ಸಂಗೀತ ನಿರ್ದೇಶನದ ಅವಾರ್ಡ್ ಪಡೆಯುವುದಕ್ಕೆ ಲಕ್ಷ್ಮಿಕಾಂತ್ ಪ್ಯಾರೇಲಾಲ್ ಹೋಗಿದ್ದರು. ಯಾಕಂದ್ರೆ, ತೆರೆಮೇಲೆ ಆ ಹಾಡಿಗೆ ನಾನೇ ಕಂಪೋಸರ್ ಅಂತ ಹೆಸರು ಹಾಕಿರಲಿಲ್ಲ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ವಿವಾದ ಮಾಡಲು ಇಷ್ಟ ಇರ್ಲಿಲ್ಲ!

''ನನಗೆ ಅದರ ಬಗ್ಗೆ ತುಂಬಾ ಹೆಮ್ಮೆ ಅನಿಸ್ತು. ಆದ್ರೆ, ಜಾನಕಿ ಅವರಿಗೆ ತುಂಬಾ ಸಿಟ್ಟು ಬಂತು. ನನಗೆ ವಿವಾದ ಮಾಡುವುದಕ್ಕೆ ಇಷ್ಟ ಇರ್ಲಿಲ್ಲ. ಅದು ಅವರ ಸಂಸ್ಕಾರ ಅಂದುಕೊಂಡು ಸುಮ್ಮನಾದೆ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

ಅವರು ಹೇಳಲೇ ಇಲ್ಲ!

''ಅವರು ಹೇಳ್ಬೇಕಿತ್ತು ಈ ಹಾಡನ್ನ ನಾವು ಕಂಪೋಸ್ ಮಾಡಿಲ್ಲ ಅಂತ. ಆದ್ರೆ ಅವರು ಬಾಯ್ಬಿಡಲಿಲ್ಲ. ಆದರೂ ಪರ್ವಾಗಿಲ್ಲ, ಅವರು ನನಗೆ ಮೆಂಟರ್ಸ್ ಬಾಂಬೆಯಲ್ಲಿ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

English summary
Multilingual Singer S.P.Balasubrahmanyam's life story was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada